ಪೋಸ್ಟ್‌ಗಳು

Degeneration ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕುದುರೆಯಲ್ಲ

ಇಮೇಜ್
ಮೂಲ - ನ್ಯಾಟಲೀ ಶಪೇರೋ (ಅಮೆರಿಕಾ ಸಂಸ್ಥಾನ) ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ನನಗೆ ಇಷ್ಟವಾಗುವುದು  ಸರಾಸರಿ  ಇಪ್ಪತ್ತೈದು ವರ್ಷಗಳ ಕಾಲ  ಬಾಳಿ ಬದುಕುವ ಸಾಕಿದ ಕುದುರೆಯಲ್ಲ; ನನಗಿಷ್ಟವಾಗುವುದು  ಒಂದೇ ದಿನ ಬದುಕುವ ಹುಳು. ಅದರಲ್ಲೂ ಒಂದು ದುರ್ದಿನದಲ್ಲಿ  ಬದುಕುವ ಹುಳು. ಎಲ್ಲೋ ರೈಲೊಂದು ಹಳಿ ತಪ್ಪಿದ ದಿವಸ, ಕೆರೆನೀರು ರಾಸಾಯನಿಕಗಳಿಂದ ಕಲುಷಿತವಾದ ದಿವಸ,   ಅಪರಾಧ ಮುಚ್ಚಿಟ್ಟದ್ದನ್ನು ನ್ಯಾಯಪಾಲಕ ಒಪ್ಪಿಕೊಂಡ ದಿವಸ,  ಬೇರೇನೂ ಕುರಿತು ಜನರಿಗೆ ಯೋಚಿಸಲೇ ಆಗದಂಥ ದಿವಸ, ಆ ಯಃಕಶ್ಚಿತ್ ಹುಳುವನ್ನು ಯಾರೂ ಕ್ಯಾರೇ ಎನ್ನದ ದಿವಸ.  ಹುಳುವಿನ ಮನೋವ್ಯಾಪಾರ ನನಗೆ ಗೊತ್ತಿಲ್ಲವೇ  ಕೊಳೆತು ನಾರುವ ಕಾಲದಲ್ಲಿ, ಪಾಪದಲ್ಲಿ ಸಂಭವಿಸಿದ ನನಗೆ? ಎಲ್ಲರೂ ಎಷ್ಟು ವ್ಯಸ್ತರೆಂದರೆ ನನ್ನನ್ನು ಕೊಲ್ಲಲೂ ಯಾರಿಗೂ ಪುರುಸೊತ್ತಿಲ್ಲ.  ವಸ್ತುಸ್ಥಿತಿ ಹೀಗಿದ್ದರೂ ಹೆಚ್ಚದು ನನ್ನ ಆಯಸ್ಸು.  ನಾನು ಬದುಕುವುದು ಕುದುರೆಗಳೊಂದಿಗೆ ಅಲ್ಲ, ನನ್ನ ವಾಸ ನಾಯಿಯೊಂದಿಗೆ, ಮುಸ್ಸಂಜೆ ಕಣ್ಣುಕಾಣದ ನಾಯಿ, ಕಾಲಿಗೆ ದೆಬ್ಬೆ ಕಟ್ಟಿಕೊಂಡು ಕುಂಟುವ ನಾಯಿ,  ಯಾವುದೇ ಪ್ರತಿಮೆ ಕಂಡಾಗ ಕಾಲೆತ್ತುವ ನಾಯಿ.  ಹುಳುವಿಗೆ ಒಮ್ಮೆ ಅರ್ಥವಾಗುವಂತಿದ್ದರೆ ನನ್ನ ಭಾಷೆ  ಅವಳಿಗೆ ನಾನು ತಿಳಿಸಿ ಹೇಳಬಹುದಾಗಿತ್ತು ಭಯ ಪಡದಿರ...