ಪೋಸ್ಟ್‌ಗಳು

crow ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಆಂಟಿ ಕಾಗೆ

ಇಮೇಜ್
 ಆಂಟಿ ಕಾಗೆ ಸಿ. ಪಿ. ರವಿಕುಮಾರ್ ಕಾಗಕ್ಕ ಕಾಗಕ್ಕ, ಏನು ತಿನ್ನುತ್ತಿರುವೆ ಕಾಣುತ್ತಿಲ್ಲವೇ, ಕೆಂಪಿರುವೆ. ಕೆಂಪಿರುವೆ ತಿನ್ನುತ್ತಿರುವೆ ಏತಕ್ಕೆ? ಮೈಯಲ್ಲಿ ಹುಷಾರಿಲ್ಲ ಅದಕ್ಕೇ. ಕೆಂಪಿರುವೆ ಏನು ನಿನಗೆ ಔಷಧವೆ?  ನಮಗೆ "ಆಂಟ್" ಇ ಬಯಾಟಿಕ್ ಇದುವೆ. ಏನೋ ತುಂಬಾ ರಹಸ್ಯಮಯವಾಗಿದೆಯಲ್ಲ! ರಹಸ್ಯ: ಇರುವೆಯಲ್ಲಿರುವ ಫಾರ್ಮಿಕ್ ಆಮ್ಲ. ಏನಾಗುತ್ತದೆ ಆಮ್ಲ ಸೇರಿದರೆ ಹೊಟ್ಟೆಯೊಳಗೆ? ಕ್ರಿಮಿ ನಾಶವಾಗಿ ನನಗೆ ಪುನಃ ಚೇತರಿಕೆ. ಕಾಗಕ್ಕ "ಆಂಟಿ" ಅನ್ನಬಹುದೇ ನಿನಗೆ? ನಿನ್ನ ಜೋಕಿಗೆ ನಗು ಬರಲಿಲ್ಲ ನನಗೆ. (ಚಿತ್ರ ಮತ್ತು ಮಾಹಿತಿ ಎರಡೂ ಫೇಸ್ಬುಕ್ ಕೃಪೆ. ಇದನ್ನು ಪುಟ್ಟ ಮಕ್ಕಳಿಗೆ ಹೇಳಿಕೊಡಬಹುದು. ಐದು ನಿಮಿಷದ ನಾಟಕ ಕೂಡಾ ಮಾಡಬಹುದು.)

ಹಿಮದ ಕಣ

ಇಮೇಜ್
 ಮೂಲ: ರಾಬರ್ಟ್ ಫ್ರಾಸ್ಟ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಕಾಲಿಂದ ಕೆದರಿ ಕೆಳಗೆ ಬೀಳಿಸಿದಾಗ ನನ್ನ ಮೇಲೆ ಕಾಗೆಯೊಂದು ಹೆಮ್ಲಾಕ್ ಮರದ ಮೇಲಿದ್ದ ಹಿಮಕಣ ಬದಲಾಯಿತು ನನ್ನ ಹೃದಯದ ಭಾವನೆ ಸ್ವಲ್ಪವಾದರೂ ಮತ್ತು ಭಾಗಶಃ ಉಳಿಸಿತು ನಾನು ಬೇಸರದಲ್ಲಿ ಕಳೆದುಕೊಂಡಿದ್ದ ದಿನ