ಪೋಸ್ಟ್‌ಗಳು

Light ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಪ್ರೇಮ

ಇಮೇಜ್
 ಮೂಲ: ಖಲೀಲ್ ಗಿಬ್ರಾನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಪ್ರೇಮವು – ಹೊತ್ತಿ ಉರಿಯುವ ಆತ್ಮದಿಂದ ಸ್ಫುರಿಸಿ ಸುತ್ತಲಿನ ಭೂಮಿಯನ್ನು ಬೆಳಗುವ ಒಂದು ಮಾಂತ್ರಿಕ ಕಿರಣ. ಅದರ ಬೆಳಕಿನಲ್ಲಿ ನಮಗೆ ಮೂಡುವುದು ನಮ್ಮ ಜಾಗೃತ ಸ್ಥಿತಿಗಳ ನಡುವೆ ಜೀವನ ಒಂದು ಸುಂದರ ಕನಸೆಂಬ ಪರಿಜ್ಞಾನ.

ಕತ್ತಲ ಹಣತೆ

ಇಮೇಜ್
ಕತ್ತಲ ಹಣತೆ ಮೂಲ: ಹರಿವಂಶರಾಯ್ ಬಚ್ಚನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್  ಆಗಸ್ಟ್ ಹದಿನೈದು ೨೦೨೩ ಇರುಳು ಕತ್ತಲುಮಯವಾದರೆ ದೀಪ ಹಚ್ಚಲು ಯಾರ ನಿರ್ಬಂಧ? ಕಮನೀಯ ಮಂದಿರವನ್ನು ಕಟ್ಟಿದ್ದೆಯಾ ಕಲ್ಪನೆಯ ಕೈಯಿಂದ? ಭಾವನೆಯ ಕೈಯಿಂದ ಅದರೊಳಗೆ ಬಂಧಿಸಿದ್ದೆಯಾ ಸ್ವಚ್ಛಂದ?ಕನಸುಗಳ ಕೈಯಿಂದ ಸಿಂಗರಿಸಿದ್ದೆಯಲ್ಲ ಬಹು ಅಂದ?ಅಲ್ಲಿ ಹರಡಿದ್ದೆಯಾ ಸ್ವರ್ಗದ ಸೌರಭದ ಸಿರಿಗಂಧ? ಮುರಿದು ಬಿದ್ದಿತೆ ಸೌಧ? ಆಯ್ದು ಇಟ್ಟಿಗೆ ಕಲ್ಲು ಅದರಿಂದ ಕಟ್ಟಿಕೊಳ್ಳಲು ಕಷ್ಟವೇ ಸರಳ ಶಾಂತಿ ಕುಟೀರವೊಂದ? ಇರುಳು ಕತ್ತಲುಮಯವಾದರೆ ದೀಪ ಹಚ್ಚಲು ಯಾರ ನಿರ್ಬಂಧ? ನಭನೀಲ ನೀಲಿಮೆಯಿಂದ ಮಾಡಿದ ಮಧುಪಾತ್ರೆಯೋ ಮನಮೋಹಕ ಮುಗಿಲ ಕಂಬನಿಯಲ್ಲಿ ನೆಂದು ಹೊಳೆಯುತ ಲಕಲಕ ಮಧುಪಾತ್ರೆಯೊಳು ನವಮೇಘದೊಲು ತುಳುಕುವ ದ್ರಾವಕ ಉಷೆಯ ಕೋಮಲ ಪ್ರಥಮ ಕಿರಣದ ಬಣ್ಣದ ಸಿಹಿ ಪಾನಕ ಮುರಿದು ಹೋದರೆ ಪಾತ್ರೆ ಜೋಡಿಸಿ ಎರಡು ಕೈಗಳ ಅಂಜಲಿ ಒಂದು ನಿರ್ಮಲ ನೀರಧಾರೆಯ ಕುಡಿಯಲು ಯಾವ ನಿರ್ಬಂಧ? ಇರುಳು ಕತ್ತಲುಮಯವಾದರೆ ದೀಪ ಹಚ್ಚಲು ಯಾರ ನಿರ್ಬಂಧ? ಹಿಂದೆ ಜೀವನದಲ್ಲಿ ಎಂದೂ ಹತ್ತಿರ ಬರಲಿಲ್ಲ ಚಿಂತೆ ಕತ್ತಲೆಯ ಮಾತಿರಲಿ ಕರಿಛಾಯೆಯೂ ಬೀಳಲಿಲ್ಲ ಎಂಬಂತೆ! ಕಣ್ಣಲ್ಲಿತ್ತು ಮಾದಕತೆ, ಮಾತುಗಳಲ್ಲಿ ಮೋದದ ಕವಿತೆ ಗುಡುಗಿನಂತಹ ನಗೆಗೆ ನಾಚುತ್ತಿತ್ತು ಕಾರ್ಮೋಡಗಳ ಸಂತೆ ಕಳೆದುಕೊಂಡು ಇದೆಲ್ಲ ಉಲ್ಲಾಸವೇ ಕಳೆದುಹೋದಂತೆ, ಆದರೆ ಅಸ್ಥಿರತೆಯ ಈ ಸಮಯದಲ್ಲಿ ಮುಗುಳುನಗಲು ಯಾರ ನಿರ್ಬಂಧ? ಇರುಳು ಕತ್ತಲುಮಯವಾದ...

ಬೆಳಕು ವಿನ್ಯಾಸ

ಇಮೇಜ್
 (ಐಗಾರ್ ದುಬೊವಾಯ್ ಅವರ ಚಿತ್ರ ನೋಡಿ ಬರೆದ ಕವಿತೆ) ಮೇಲಿಂದ ಯಾರೋ ಲೈಟಿಂಗ್ ಮಾಡುತ್ತಾರಲ್ಲ ನಮ್ಮ ರಂಗಸ್ಥಳ ಯಾರವರು - ಪ್ರತಿದಿವಸ ಹೊಸ ವಿನ್ಯಾಸ ಏನಾದರೂ ಯೋಚಿಸಿಕೊಂಡು ಬರುವರು, ಬೆಳಕು ಅವರದು ಕ್ಯಾಮೆರಾ ನಮ್ಮದು : ಎಷ್ಟು ಮೆಗಾಪಿಕ್ಸೆಲ್ ಏನೋ ತಿಳಿಯದು, ತಾಳು ಸೇವ್ ಮಾಡುವೆನೆಂದರೆ ನಕ್ಕು ಮುಂದುವರೆವರು! ಚಿತ್ರಕವಿತೆ: ಸಿ. ಪಿ. ರವಿಕುಮಾರ್

ಜ್ಯೋತಿರ್ಗಮಯ

ಇಮೇಜ್
ಮೂಲ ಕವಿತೆ: ಯಾವೋ ಫೆಂಗ್  ಕನ್ನಡಕ್ಕೆ:  ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ: ಮೊದಲು ಕವಿತೆಯನ್ನು ಓದಿ ಅನಂತರ ಈ ಟಿಪ್ಪಣಿ ಓದಿ. ದೀಪದ ಹುಳುವನ್ನು ಕಂಡಾಗ ಬಹುತೇಕ ಕವಿಗಳಿಗೆ ಹೊಳೆಯುವುದು ಬೆಂಕಿಯ ಆಕರ್ಷಣೆಗೆ ಒಳಗಾಗಿ ತನ್ನ ನಾಶಕ್ಕೆ ತಾನೇ ಕಾರಣವಾಗುವ ವ್ಯಕ್ತಿತ್ವ.  ಆದರೆ ಪ್ರಸ್ತುತ ಕವಿತೆಯಲ್ಲಿ ಇದಕ್ಕಿಂತ ಭಿನ್ನವಾದ ಕಲ್ಪನೆಯಿದೆ.   ಪತಂಗವು ಕತ್ತಲಿನ ಮರಿಯೂ ಆಗಿರಬಹುದು. ದೀಪದೊಂದಿಗೆ ಹೋರಾಡಿ ಬೆಳಕನ್ನು ನಂದಿಸಿ ಮತ್ತೆ ಕತ್ತಲು ಮಾಡಲು ಕೂಡಾ ಅದು ಪ್ರಯತ್ನಿಸುತ್ತಿರಬಹುದು! ಈ ಪತಂಗದಲ್ಲಿ ನಿಮಗೆ ಮನುಷ್ಯನ ವ್ಯಸನಗಳೂ  ಗೋಚರಿಸಬಹುದು.  ದೀಪದ ಮರೆಗೆ ಬೆಳಕನ್ನು ಹಿಂದಿರುಗಿಸಿದಾಗ   ಆವರಿಸಿಕೊಳ್ಳುತ್ತದೆ ಕತ್ತಲು.  ದೀಪದ ಹುಳುವನ್ನು ಕತ್ತಲಿಗೆ ಹಿಂದಿರುಗಿಸಿ  ಕತ್ತಲಲ್ಲೇ ಇರುವಂತೆ ಯಾರು ತರಬೇತಿ ಕೊಟ್ಟವರು? ಕೊನೆಯಿಲ್ಲದ ತರಬೇತಿಯ ನಂತರವೂ  ರೆಕ್ಕೆ ಮೊಳೆತ ನಂತರ   ಹಾರಲಾಗದ  ಹುಳ ತನ್ನೊಂದಿಗೆ  ಜಗ್ಗಿಕೊಂಡು ಮುಸ್ಸಂಜೆಯನ್ನು  ದೇಕುತ್ತದೆ ಬಹು ನಿ-ಧಾ-ನ-ವಾ-ಗಿ   ಬೆಳಕಿನ ಕಡೆಗೆ.