ದುಃಖದ ಐಸಿರಿ ನಿನ್ನದು ಮಾತ್ರವೇ?
"ಗಮ್ ಕಾ ಖಜಾನಾ ತೇರಾ ಭೀ ಹೈ, ಮೇರಾ ಭೀ" ಎಂದು ಪ್ರಾರಂಭವಾಗುವ ಈ ಗಜಲ್ ಹಾಡಿದವರು ಪ್ರಸಿದ್ಧ ಗಾಯಕರಾದ ಜಗಜಿತ್ ಸಿಂಗ್ ಮತ್ತು ಲತಾ ಮಂಗೇಶ್ಕರ್. ಈ ಗೀತೆಯನ್ನು ನೀವು ಇಲ್ಲಿ ಕೇಳಬಹುದು . ಇಲ್ಲೊಂದು ಕತೆಯ ಎಳೆಯನ್ನು ನೀವು ಗುರುತಿಸಬಹುದು. ಬಹಳ ದಿನಗಳ ನಂತರ ಇಬ್ಬರು ಹಳೆಯ ಸ್ನೇಹಿತರು (ಹಿಂದೊಮ್ಮೆ ಪರಸ್ಪರ ಪ್ರೇಮಿಸಿದವರು, ಅಥವಾ ಹಿಂದೊಮ್ಮೆ ವಿವಾಹವಾಗಿದ್ದು ಈಗ ವಿಚ್ಛೇದನ ಪಡೆದವರು ) ಆಕಸ್ಮಿಕವಾಗಿ ಮುಖಾಮುಖಿಯಾಗಿದ್ದಾರೆ. ಈ ಭೇಟಿ ಬಹುಶಃ ಒಂದು ಮದಿರಾಗೃಹದಲ್ಲಿ ನಡೆದಿರಬಹುದು. ಪರಸ್ಪರರಿಂದ ಬೇರಾದ ಇವರು ಇಬ್ಬರೂ ಸಮಾನ ದುಃಖಿಗಳು. ಇಬ್ಬರೂ ತಮ್ಮ ಜೀವನದಲ್ಲಿ ಮುಂದುವರೆದರೂ ತಮ್ಮ ಹಳೆಯ ಗೆಳೆತನವನ್ನು ಮರೆಯಲು ಅವರಿಗೆ ಸಾಧ್ಯವಾಗಿಲ್ಲ. ಈಗಲೂ ಅವರು ಒಂದಾಗಬಹುದಲ್ಲವೇ ಎಂದರೆ ಅದಕ್ಕೆ ದಾರಿ ನೇರವಾಗಿಲ್ಲ. ಅವರು ದುಃಖವನ್ನೇ ಪಾಲಿಗೆ ಬಂದ ಸಂಪತ್ತೆಂದು ಸ್ವೀಕರಿಸಿ ಅದನ್ನೇ ಮದಿರೆಯಾಗಿ ಹೀರಿ ಬದುಕುತ್ತಿರುವ ಭಗ್ನಪ್ರೇಮಿಗಳು. ಇವರ ಪರಸ್ಪರ ಮಾತಿನಲ್ಲಿ ತಮ್ಮ ಬದುಕಿನ ಪರಾಮರ್ಶೆ ಮತ್ತು ತಮ್ಮ ಪರಿಸ್ಥಿತಿಯ ಬಗ್ಗೆ ವ್ಯಂಗ್ಯವನ್ನು ಗಜಲಿನಲ್ಲಿ ಕಾಣಬಹುದು. ಗಜಲ್ ಅನುವಾದವನ್ನು ಕೆಳಗೆ ಕೊಟ್ಟಿದೆ. ಮೂಲ ಗಜಲಿನ ಲಯವನ್ನು ಸ್ವಲ್ಪಮಟ್ಟಿಗಾದರೂ ಹಿಡಿದಿಟ್ಟಿರುವ ತೃಪ್ತಿ ನನಗಿದೆ. ಮೂಲ ಗಜಲ್: ಶಾ ಹಿದ್ ಕಬೀರ್ ಕನ್ನಡಕ್ಕೆ : ಸಿ. ಪಿ. ರವಿಕುಮ...