ಪೋಸ್ಟ್‌ಗಳು

Cruetly ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ವಿರಮಿಸುವ ಹದ್ದು

ಇಮೇಜ್
 ವಿರಮಿಸುವ ಹದ್ದು ಮೂಲ: ಟೆಡ್ ಹ್ಯೂಸ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಕೂತಿರುವೆ ಕಾಡಿನ ಪರಮ ಉತ್ತುಂಗದಲ್ಲಿ ಕಣ್ಮುಚ್ಚಿ. ಏನೂ ಕೆಲಸವಿಲ್ಲ, ಯಾವ ಕನಸುಗಳ ಅಡೆತಡೆಯಿಲ್ಲ ನನ್ನ ಬಾಗಿದ ತಲೆಯಿಂದ ಹಿಡಿದು ಬಾಗಿದ ಕಾಲಿನವರೆಗೂ. ನುರಿತ ಬೇಟೆಯ ನಂತರದ ಭೋಜನದ ತಾಲೀಮು ನಿದ್ದೆಯಲ್ಲಿ. ಎತ್ತರದ ಮರಗಳ ಅನುಕೂಲವೇ ಅನುಕೂಲ! ಗಾಳಿಯ ಇಂಬು ಮತ್ತು ಸೂರ್ಯನ ಬೆಳಕು ಎರಡೂ ನನ್ನ ಪರವಾಗಿವೆ; ಭೂಮಿಯ ಮುಖ ನನ್ನತ್ತ ತಿರುಗಿದೆ ತಕ್ಕಂತೆ ನನ್ನ ಅವಗಾಹನೆಗೆ. ಮರದ ಒರಟು ತೊಗಟೆಗೆ ತೆಕ್ಕೆ ಹಾಕಿಕೊಂಡಿವೆ ಪಾದ. ಸೃಷ್ಟಿಯ ಸಕಲ ಶಕ್ತಿಯೂ ವ್ಯಯವಾಯಿತು  ನನ್ನ ಪಾದದ, ನನ್ನ ಒಂದೊಂದೂ ಗರಿಯ ನಿರ್ಮಾಣಕ್ಕೆ. ಈಗ ಸೃಷ್ಟಿಯು ಬಿದ್ದಿದೆ ನನ್ನ ಪದತಲದಲ್ಲಿ. ಬೇಕೆಂದರೆ ಹಾರುವೆ ಮೇಲೆ, ತಿರುಗಿಸುವೆ ಸೃಷ್ಟಿಯನ್ನು ಮೆಲ್ಲನೆ. ನನಗೆ ಬೇಕಾದಲ್ಲಿ ಕೊಲ್ಲುವೆ, ಏಕೆಂದರೆ ಇವೆಲ್ಲ ನನ್ನದೇ. ಯಾವ ನಯನಾಜೂಕು ಇಲ್ಲ ನನ್ನ ದೇಹದಲ್ಲಿ: ತಲೆಗಳನ್ನು ಕಿತ್ತುಬಿಡುವುದು ನನ್ನ ಸಭ್ಯತೆ, ಮೃತ್ಯುದಂಡನೆ ನೀಡುವುದು ನನ್ನ ಅಧಿಕಾರ. ಜೀವಿಯ ಮೂಳೆಗಳ ಮೂಲಕವೇ ಹೋಗುವುದು ನೇರವಾಗಿ ನನ್ನ ಹಾರಾಟದ ರೇಖೆ. ಯಾವ ಪ್ರತಿವಾದವೂ ಇಲ್ಲದೆ ಸಿದ್ಧವಾಗಿದೆ ನನ್ನ ಹಕ್ಕು: ಸೂರ್ಯ ನಿಂತಿದ್ದಾನೆ ನನ್ನ  ಬೆಂಬಲಕ್ಕೆ. ನಾನು ಬಂದಲಾಗಾಯ್ತು ಏನೂ ಬದಲಾಗಿಲ್ಲ. ಏನೂ ಬದಲಾಗಲು ಬಿಟ್ಟಿಲ್ಲ ನನ್ನ ಕಣ್ಣುಗಳು. ಹೀಗೇ ಇಟ್ಟುಕೊಂಡಿರುವೆ ಮುಂದೆಯೂ ಎಲ್ಲ.

ಪ್ರಾಣಿಗಳಿಗೆ ಚಿರಂತನ ಮೃತ್ಯುಕೂಪ

ಇಮೇಜ್
ಮೂಲ: ಲೂಯಿ ಕ್ವಿಂಟಾಯ್ಸ್ (ಪೋರ್ಚುಗಲ್) ಕನ್ನಡಕ್ಕೆ: ಸಿ. ಪಿ. ರವಿಕುಮಾರ್    "ಪ್ರಾಣಿಗಳಿಗೆ ಚಿರಂತನ ಮೃತ್ಯುಕೂಪ." ನನಗೆ ಪ್ರಾಪ್ತವಾದ ನೆನಪಿನಲ್ಲಿ ವ್ಯಾಪಿಸಿದೆ ಬಲಿದಾನ.  ಅಮ್ಮ ನನ್ನ ಕೈ ಹಿಡಿದು ಕರೆದೊಯ್ಯುತ್ತಾಳೆ.  ನಾವು ವಧಾಸ್ಥಾನದ ಅಂಚಿಗೆ ಬಂದಿದ್ದೇವೆ.  ಜೀವನದ ಕೊನೆಯ ಘಳಿಗೆಯನ್ನು ಮುಟ್ಟಿದ ಕೋಳಿಗಳ ಸದ್ದು.  ಮುಗ್ಧತೆಯಿಂದ ಅವು ಕೊಕ್ ಕೊಕ್ ಎನ್ನುತ್ತಿವೆ.  ಅಲ್ಲೇ ಬಿದ್ದಿರುವ ಹೆಣಗಳ ದೃಶ್ಯದಲ್ಲಿ ಹಿಂಸೆ ಮಡುಗಟ್ಟಿದೆ,  ಎಲ್ಲೆಡೆ ಹರಡಿಕೊಂಡಿದೆ ಚೀರುತ್ತಿರುವ ಕರುಳುಗಳ ದುರ್ವಾಸನೆ.  ಕ್ರೋಧ ಮತ್ತು ಶಬ್ದಗಳು ಕುಸಿದುಬಿದ್ದು ಕೊಳೆಯುತ್ತಿವೆ.  ವಧಾಸ್ಥಾನದ ಅಂಚಿನಲ್ಲಿವೆ ಕಟ್ಟೆಗಳು, ಅಲ್ಲಿ ಕೇಳುತ್ತವೆ ಸತ್ಯ ಮತ್ತು ವ್ಯಾಪಾರದ ಕೂಗುಗಳು.  ದೊಡ್ಡ ಉಕ್ಕಿನ ಕೊಕ್ಕೆಗೆ ತೂಗಿಹಾಕಿದ  ದಪ್ಪನೆಯ ಮಾಂಸ ಮೆಲ್ಲನೆ ಅಲ್ಲಾಡುತ್ತದೆ.  ನೆಂದ ಪುಕ್ಕಗಳು ಎಲ್ಲಾ ಕಡೆ ಚೆಲ್ಲಿವೆ.  ಶಿರಚ್ಛೇದವಾದ ಹುಂಜವೊಂದು ಜಗತ್ತನ್ನು ತಬ್ಬಿಕೊಂಡಿದೆ.  ಅಂಚಿನಲ್ಲಿರುವ ಹಳ್ಳದಲ್ಲಿ ಕೂಡಿಕೊಳ್ಳುವ ರಕ್ತ  ಹೋಗಿ ಸೇರಿಕೊಳ್ಳುತ್ತದೆ ಎಲ್ಲೋ ದೂರ - ನನ್ನ ಕಲ್ಪನೆಯಲ್ಲಿ ಬೇರೊಂದು ದೇಶದಷ್ಟು ದೂರ.  ಕರುಳಿನ ವೇದನೆ ಒಂದಷ್ಟು ಕಡಿಮೆಯಾದಂತೆ ತೋರುತ್ತದೆ.  ಮಂದಿ ತಣ್ಣಗೆ ಕೂಡುತ...