ಪೋಸ್ಟ್‌ಗಳು

2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಿನ್ನನ್ನು ನೀನೇ ಹುಡುಕಿಕೋ

ಇಮೇಜ್
ಮೂಲ - ಎಮಿಲಿ ಮೆಕ್ ಡೊವೆಲ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ನಿನ್ನನ್ನು ನೀನು ಹುಡುಕಿಕೋ  ಎಂದು ಹೇಳುವರಲ್ಲ ಜನ ನೀನೇನು ಕೋಟಿನ ಜೋಬಿನಲ್ಲಿಟ್ಟು ಮರೆತ  ನೂರು ರೂಪಾಯಿಯ ನೋಟೇ? ನೀನೆಲ್ಲೂ ಕಳೆದುಹೋಗಿಲ್ಲ  ನಿನ್ನ ನಿಜಸ್ವರೂಪ ಅಗೋ ಅಲ್ಲೇ ಇದೆ.  ಹುದುಗಿಹೋಗಿದೆ  ಸಂಸ್ಕಾರಗಳೆಂಬ ತಿದ್ದುಪಡಿ, ಒಪ್ಪಓರಣಗಳ ಕೆಳಗೆ, ಪರರ ಅಭಿಪ್ರಾಯಗಳ ಕೆಳಗೆ, ನೀನಿನ್ನೂ ಮಗುವಾಗಿದ್ದಾಗ  ನೀನು ಯಾರೆಂಬ ಪ್ರಶ್ನೆಗೆ ನೀನು  ಕಂಡುಕೊಂಡ ತಪ್ಪುತ್ತರಗಳಿಂದ  ಬೆಳೆದ ನಂಬಿಕೆಗಳ ಕೆಳಗೆ.  ನಿನ್ನನ್ನು ಹುಡುಕಿಕೊಳ್ಳುವುದೆಂದರೆ  ನಿನ್ನತನಕ್ಕೆ ಮರಳುವುದು, ಅಷ್ಟೇ.  ನಿನ್ನನ್ನು ಹುಡುಕಿಕೊಳ್ಳಬೇಕೇ? ನಿನಗೆ ಬೇಕಾಗಿರುವುದು - ಕಲಿತ ತಪ್ಪು ಪಾಠಗಳನ್ನು ಮರೆಯುವುದು, ಅಗೆಯುವುದು, ಮತ್ತು ಜಗತ್ತು ನಿನ್ನನ್ನು ಹಿಡಿಯುವ ಮೊದಲು  ನೀನು ಏನಾಗಿದ್ದೆ ಎಂದು ನೆನೆಯುವುದು 

ಗೊಂಡಾರಣ್ಯಕ್ಕೆ ಪ್ರವಾಸ

ಇಮೇಜ್
ನಾನು ದೆಹಲಿ ಐಐಟಿ ಸೇರಿದ ಹೊಸತು. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಇಂದೂಲ್ಕರ್ ನನ್ನನ್ನು ಕರೆದು "ನೋಡಿ, ಪ್ರತಿವರ್ಷ ಬಿ.ಟೆಕ್ ವಿದ್ಯಾರ್ಥಿಗಳು ಬೇಸಗೆ ತರಬೇತಿಗಾಗಿ ಯಾವುದಾದರೂ ಕಂಪನಿಗೆ ಹೋಗುತ್ತಾರೆ. ಅವರ ಪ್ರಾಜೆಕ್ಟ್ ನೋಡಿ ಅವರಿಗೆ ಸಲಹೆ ಕೊಡಲು ನಮ್ಮ ಕಡೆಯಿಂದ ಒಬ್ಬ ಉಪಾಧ್ಯಾಯರು ಹೋಗಬೇಕು. ಇಲ್ಲಿ ಲಿಸ್ಟ್ ಇದೆ. ನಿಮಗೆ ಇಷ್ಟವಾದದ್ದು ಯಾವುದಾದರೂ ಕಂಪನಿ ಇದ್ದರೆ ಆರಿಸಿಕೊಳ್ಳಿ" ಎಂದರು. ಈಗಾಗಲೇ ಬೆಂಗಳೂರು, ಬಾಂಬೆ, ಮದ್ರಾಸ್ ಮುಂತಾದ ಸಿಟಿಗಳಲ್ಲಿರುವ ಕಂಪನಿಗಳನ್ನು ಯಾರೋ ಆರಿಸಿಕೊಂಡುಬಿಟ್ಟಿದ್ದರು. ನನಗೆ ಆಗಿನ್ನೂ "ಸಾರಿ ಸರ್, ಇವು ಯಾವುದೂ ನನಗಿಷ್ಟವಿಲ್ಲ" ಎನ್ನುವಷ್ಟು ತಿಳಿವಳಿಕೆ ಇರಲಿಲ್ಲ.  ನನಗೆ ಆಗ ಇನ್ನೂ ಮದುವೆ ಆಗಿರಲಿಲ್ಲ. ಹೀಗಾಗಿ ಇವನು ಎಲ್ಲಿಗಾದರೂ ಹೋಗಲು ತಯಾರಾಗುತ್ತಾನೆ ಎಂದು ಅವರಿಗೆ ಅನ್ನಿಸಿರಬಹುದು! ನನಗೆ ಸಿಕ್ಕ ಎರಡು ಇಂಡಸ್ಟ್ರಿಗಳಲ್ಲಿ ಒಂದು ಉತ್ತರಪ್ರದೇಶದ ಗೊಂಡಾ ಎಂಬ ಕಡೆ ಇರುವ ಐಟಿಐ ಮತ್ತು ಇನ್ನೊಂದು ಅಲಾಹಾಬಾದಿನ ಹತ್ತಿರ ಇರುವ ನೈನಿ ಎಂಬಲ್ಲಿರುವ ಐಟಿಐ!  ಗೊಂಡಾ ಎಂಬ ಹೆಸರೇ ನಾನು ಕೇಳಿರಲಿಲ್ಲ. ಇದಾವುದೋ ಗೊಂಡಾರಣ್ಯದ ಅವಶೇಷವೇನೋ ಎಂದು ನನಗೆ ಅನ್ನಿಸಿತು. ನೈನಿ ಎಂಬ ಹೆಸರು ಕೇಳಿದ್ದು ಮಸುಕಾಗಿ ನೆನಪಿತ್ತು. ಆಗ ಇಂಟರ್ನೆಟ್ ಇರಲಿಲ್ಲ. ಅನಂತರ ನೈನಿ ಪ್ರಸಿದ್ಧವಾಗಿರುವುದು ಅಲ್ಲಿಯ ಜೈಲಿಗೆ ಎಂದು ತಿಳಿಯಿತು. ಅಲಾಹಾಬಾದಿನಲ್ಲಿ

ಶ್ರೀರಾಮಚಂದ್ರ ಕೃಪಾಳು ಭಜಮನ - ಕನ್ನಡದಲ್ಲಿ ಅರ್ಥ

ಇಮೇಜ್
ಶ್ರೀರಾಮಚಂದ್ರ ಕೃಪಾಳು ಭಜಮನ ಹರಣ ಭವಭಯ ದಾರುಣಮ್ ನವಕಂಜ ಲೋಚನ ಕಂಜಮುಖ ಕರಕಂಜ ಪದಕಂಜಾರುಣಮ್  ಮನಸ್ಸೇ, ಕೃಪಾಳುವಾದ ರಾಮಚಂದ್ರನನ್ನು ಭಜಿಸು -  ದಾರುಣವಾದ ಭವಭಯಗಳು ನಾಶವಾಗುತ್ತವೆ. ಶ್ರೀರಾಮನನ್ನು ಕಲ್ಪಿಸಿಕೋ - ಅವನ ಕಣ್ಣುಗಳು ಈಗತಾನೇ ಅರಳಿದ ಕಮಲಗಳಂತಿವೆ. ಅವನ ಮುಖವೂ ಕಮಲದಂತೆ ಅರಳಿದೆ. ಕೈಗಳೂ ಕಮಲದಂತೆ, ಪಾದಗಳೂ ಕೆಂಪುಕಮಲಗಳಂತಿವೆ. ಕಂದರ್ಪ ಅಗಣಿತ ಅಮಿತ ಛವಿ ನವನೀಲ ನೀರಜ ಸುಂದರಮ್  ಪಟಪೀತ ಮಾನಹು ತಡಿತ ರುಚಿ-ಶುಚಿ ನೌಮಿ ಜನಕಸುತಾವರಮ್   ಶ್ರೀರಾಮನ ಸೌಂದರ್ಯವು ಅಗಣಿತ ಸಂಖ್ಯೆಯ ಮನ್ಮಥರಿಗಿಂತಲೂ ಮೀರಿದ್ದು! ನೀರಿನಿಂದ ತುಂಬಿದ ನೀಲಮೇಘದ ಮೈಬಣ್ಣ.  ಹಳದಿಬಣ್ಣದ ವಸ್ತ್ರಗಳೋ  ಮೇಘಗಳ ಅಂಚಿನ ಮಿಂಚಿನಂತಿವೆ!  ಜನಕನ ಮಗಳಾದ ಸೀತೆಯನ್ನು ವರಿಸಿದ ಶ್ರೀರಾಮನ ಪಾವನಮೂರ್ತಿಗೆ ನಮಸ್ಕರಿಸು! ಭಜ ದೀನಬಂಧು ದಿನೇಶ ದಾನವ ದೈತ್ಯ ವಂಶನಿಕಂದನಮ್  ರಘುನಂದ ಆನಂದಕಂದ ಕೋಸಲಚಂದ ದಶರಥನಂದನಮ್ ಮನಸ್ಸೇ, ದೀನಬಂಧುವಾದ ರಾಮನನ್ನು ಭಜಿಸು!  ದೈತ್ಯರ ವಂಶವನ್ನು ತನ್ನ ಪ್ರಖರತೆಯಿಂದ ಬೇರುಸಹಿತ ನಿರ್ಮೂಲನ ಮಾಡಿದವನು.  ರಘುವಂಶದಲ್ಲಿ ಹುಟ್ಟಿದವನೂ ಎಲ್ಲ ಸಂತೋಷಕ್ಕೂ ಮೂಲ ಕಾರಣನಾದವನೂ,  ಕೋಸಲದೇಶವೆಂಬ ಆಕಾಶದಲ್ಲಿ  ಚಂದ್ರನಂತೆ ತಂಪಾಗಿ ಹೊಳೆಯುತ್ತಿರುವವನೂ ಆದ ಶ್ರೀರಾಮನನ್ನು ನೆನೆಸು! ಸಿರ ಮುಕುಟ ಕುಂಡಲ ತಿಲಕ ಚಾರು ಉದಾರ ಅಂಗ ವಿಭೂಷಣಮ್ ಆಜಾನುಭುಜ ಶರ ಚಾಪಧರ ಸಂಗ್ರಾಮಜಿತ ಖರದೂಷಣಮ್ ತಲೆಯ ಮೇಲೆ ಮುಕುಟವನ್ನು ಧರಿ

ಶಕುಂತಲಾದೇವಿ ಅವರ ನೆನಪು

ನಾನು ಪಿಎಚ್.ಡಿ. ಮಾಡುತ್ತಿದ್ದ ದಿನಗಳು. ಒಮ್ಮೆ ಕಂಪ್ಯೂಟರ್ ವಿಭಾಗದಲ್ಲಿ ಭಾರತೀಯ ಮೂಲದ ಶಕುಂತಲಾದೇವಿ ಅವರೊಂದಿಗೆ ಒಂದು ಕಾರ್ಯಕ್ರಮ ಆಯೋಜಿಸಲಾಗಿದೆ ಎಂಬ ಪ್ರಕಟಣೆ ನೋಡಿ ನನಗೆ ಮತ್ತು ನನ್ನ ಭಾರತೀಯ ಮಿತ್ರರಿಗೆ ಎಲ್ಲಿಲ್ಲದ ಕುತೂಹಲ ಮತ್ತು ಸಂಭ್ರಮ ಉಂಟಾಯಿತು. ಶಕುಂತಲಾದೇವಿ ಅವರನ್ನು ಕುರಿತು ಸಾಕಷ್ಟು ಕೇಳಿದ್ದೆ. ಪತ್ರಿಕೆಗಳಲ್ಲಿ ಅವರ ಬಗ್ಗೆ ಸಾಕಷ್ಟು ವರ್ತಮಾನಗಳು ಪ್ರಕಟವಾಗುತ್ತಿದ್ದವು. ಅವರು ಒಬ್ಬ ಅಸಾಮಾನ್ಯ ವ್ಯಕ್ತಿ. ದೈವದತ್ತವಾಗಿದ್ದ ಅಸಾಧಾರಣ ಸ್ಮೃತಿಶಕ್ತಿಯನ್ನು ಬೆಳೆಸಿಕೊಂಡು ಅದರಿಂದಲೇ ಜೀವನೋಪಾಯ ಮಾರ್ಗವನ್ನು ಕಂಡುಕೊಂಡವರು. ಅವರಲ್ಲಿ ಶೋಮನ್ ಶಿಪ್ ಕೂಡಾ ಉತ್ತಮವಾಗಿತ್ತು. ಸಭಿಕರ ಮೇಲೆ ತಮ್ಮ ಸಮ್ಮೋಹನಾ ಶಕ್ತಿ ಬೀರುತ್ತಿದ್ದರು. ಬಹುಶಃ  ಚಿಕ್ಕಂದಿನಿಂದ ಶೋಗಳಲ್ಲಿ ಭಾಗವಹಿಸಿ ಅವರಿಗೆ ಇದು ಕರಗತವಾಗಿತ್ತು.  ನಾನು ಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ನಾವು ದೆಹಲಿಯಲ್ಲಿ ಕೆಲವು ವರ್ಷ ಇದ್ದೆವು. ಆಗ ನಮ್ಮ ತಂದೆ ಅಲ್ಲಿಯ ಪತ್ರಿಕೆಗಳಾದ ಹಿಂದೂಸ್ತಾನ್ ಟೈಮ್ಸ್, ಈವನಿಂಗ್ ನ್ಯೂಸ್ ಮುಂತಾದ ಪತ್ರಿಕೆಗಳಿಗೆ ಬರೆಯುತ್ತಿದ್ದರು. ಕರ್ನಾಟಕದ ಅನೇಕಾನೇಕ ಕಲಾವಿದರು ಮತ್ತು ಸಾಹಿತಿಗಳನ್ನು ಕುರಿತು ಅವರು ಬರೆದರು. ಶಕುಂತಲಾದೇವಿ ಅವರು ಒಮ್ಮೆ ದೆಹಲಿಗೆ ಭೇಟಿ ಕೊಟ್ಟರು. ನಮ್ಮ ತಂದೆ ಅವರನ್ನು ಭೇಟಿಯಾಗಿ ಅವರೊಂದಿಗೆ ಸಂದರ್ಶನ ನಡೆಸಿ ಪತ್ರಿಕೆಯಲ್ಲಿ ಲೇಖನ ಬರೆದರು. ಅದರಲ್ಲಿ ಶಕುಂತಲಾದೇವಿ ತಮ್ಮ ತಂದೆಯಿಂದ ಗಣಿತ ಕಲಿತರು ಎಂ

ಶ್ರಾವಣ ಸುರಿಸುವ ಮಳೆಯ ಹನಿ

ಇಮೇಜ್
ಮೂಲ - ಮೀರಾ ಬಾಯಿ  ಕನ್ನಡ ಭಾವಾನುವಾದ - ಸಿ. ಪಿ. ರವಿಕುಮಾರ್  (ಶ್ರಾವಣದ ಮಳೆಯ ಹನಿಗಳು ಮೈಮೇಲೆ ಬಿದ್ದಾಗ ಮೀರಾಬಾಯಿಯ ಮನಸ್ಸು ಕೃಷ್ಣನ ಸ್ಮರಣೆಯಿಂದ ತೊಯ್ಯುತ್ತದೆ.  ಬೇಸಗೆಯ ನಂತರ ತಂಗಾಳಿ ಮಳೆಯನ್ನು ತಂದ ಶ್ರಾವಣ ಅವಳಲ್ಲಿ ಉಲ್ಲಾಸ ತುಂಬುತ್ತದೆ. ಅವಳ ಮನಸ್ಸು ಗಿರಿಧರ ನಾಗರನನ್ನು ನೆನೆದು ಆನಂದದಿಂದ ತುಂಬುತ್ತದೆ.) ನೆನೆಸುತ್ತಿದೆ ಮನಮೋಹನನ  ಶ್ರಾವಣ ಸುರಿಸುವ ಮಳೆಯ ಹನಿ  ಶ್ರಾವಣ ತಂದಿತು  ಹರ್ಷೋಲ್ಲಾಸ   ಕೇಳಿದಂತೆ ಹರಿ ಗೆಜ್ಜೆ ದನಿ  ಕವಿದು ಮುಗಿದು ನಾಲ್ಕೂ ದೆಸೆಯಿಂದ  ಗುಡುಗುಮಿಂಚು ನಡುಗುವ ಅವನಿ ಪುಟ್ಟಪುಟ್ಟ ಹನಿಗಳ ಸುರಿಸುವ ಮೋಡ  ಶೀತಲ ಪವನ ಜೀವ ಸಂಚಯಿನಿ      ಪ್ರಭು ಗಿರಿಧರ ನಾಗರನನು ನೆನೆದು  ಮಂಗಳ ಹಾಡುವ ಮೀರಾ ಉನ್ಮಾದಿನಿ 

ನೇಯ್ಗೆಯ ಹಾಡು

ನೇಯ್ಗೆಯ ಹಾಡು  ಮೂಲ ಹಿಂದಿ ಕವಿತೆ: ಕೇದಾರನಾಥ್ ಸಿಂಗ್  ಕನ್ನಡ ಅನುವಾದ: ಸಿ. ಪಿ. ರವಿಕುಮಾರ್  ಎದ್ದೇಳಿ  ಮಲಗಿರುವ ದಾರಗಳೇ  ಎದ್ದೇಳಿ  ಎದ್ದೇಳಿ, ಚಕಚಕಿಸುತ್ತಿದೆ ಆಗಲೇ  ದರ್ಜಿಯ ಯಂತ್ರ   ಎದ್ದೇಳಿ, ಕೆರೆಯ ಕಟ್ಟೆಗೆ ಬಂದಾಗಿದೆ ಮಡಿವಾಳ ಎದ್ದೇಳಿ, ಶಾಲೆಗೆ ಹೊರಟುನಿಂತಿದ್ದಾರೆ  ಮಕ್ಕಳು ಬೆತ್ತಲೆ ಎದ್ದೇಳಿ, ನನ್ನ ಬೆಳಗಿನ ದಾರಗಳೇ   ಮತ್ತು ನನ್ನ ಸಂಜೆಯ ದಾರಗಳೇ ಎದ್ದೇಳಿ  ಎದ್ದೇಳಿ, ಎಲ್ಲೋ ಸಿಕ್ಕಿಹಾಕಿಕೊಳ್ಳುತ್ತಿದೆ ಎಳೆ  ಎದ್ದೇಳಿ, ಗಂಟಾಗಿದೆ ಎಲ್ಲೋ ಏನೋ  ಎದ್ದೇಳಿ, ಎಳೆದು ಕಟ್ಟಲು  ಕೊಂಚ ಕಡಿಮೆಯಾಗಿದೆ ಯಂತ್ರದಲ್ಲಿ ಸೂತ್ರ ಏಳಿ  ಅಂಗಿಗಳಲ್ಲಿ ಕಾಲುಚೀಲಗಳಲ್ಲಿ ಜೋಳಿಗೆಗಳಲ್ಲಿ ಹಾಸಿಗೆಗಳಲ್ಲಿ ಅದುಮಿಟ್ಟ ದಾರಗಳೇ ಏಳಿ ಏಳಿ, ಏಕೆಂದರೆ ಏನೋ ತಪ್ಪಾಗಿಹೋಗಿದೆ ಏಳಿ, ಏಕೆಂದರೆ  ನೇಯಬೇಕಾಗಿದೆ ಈ ಪ್ರಪಂಚದ ಎಲ್ಲಾ ಬಟ್ಟೆ ಮತ್ತೆ ಹೊಸದಾಗಿ ಏಳಿ ನನ್ನ ತುಂಡಾದ ದಾರಗಳೇ ನನ್ನ ಗೋಜಲಾದ ದಾರಗಳೇ ಏಳಿ ಏಳಿ ಏಕೆಂದರೆ ಆಗುತ್ತಿದೆ ನೇಯ್ಗೆಯ ಸಮಯ

ವಾಘಾ - ಒಂದು ನೆನಪು

ಇಮೇಜ್
ಶೂನ್ಯರೇಖೆಯ ನೆನಪು ಸಿ ಪಿ ರವಿಕುಮಾರ್ ಕೆ ಲವು ವರ್ಷಗಳ ಹಿಂದೆ ನಾನು ವಾಘಾ ಬಾರ್ಡರ್ ನೋಡಲು ಹೋಗಿದ್ದೆ.  ಅಮೃತಸರಕ್ಕೆ ಹೋದವರು ಅಲ್ಲಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರದಲ್ಲಿರುವ ಬಾರ್ಡರ್ ನೋಡಲು ಹೋಗುವುದು ಸಾಮಾನ್ಯ.  ಅಮೃತಸರದಲ್ಲಿ ಸಿಖ್ ಧರ್ಮದ ಅನುಯಾಯಿಗಳ ಪವಿತ್ರಸ್ಥಾನವಾದ ಸ್ವರ್ಣ ಮಂದಿರವಲ್ಲದೆ ಜಲಿಯಾನ್ ವಾಲಾ ಬಾಗ್ ಕೂಡಾ ಇದೆ. ಇಂದು  ಜಲಿಯಾನ್ ವಾಲಾ ಬಾಗ್ಅನ್ನು  ಇಂದು ಒಂದು ಪ್ರೇಕ್ಷಣೀಯ ಸ್ಥಾನವಾಗಿ ಮಾರ್ಪಡಿಸಲಾಗಿದೆ.  ಈ ಉದ್ಯಾನವನದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಒಂದು ದುರಂತ ನಡೆದುಹೋಯಿತು. ಸ್ವರಾಜ್ಯ ಕುರಿತು ಭಾಷಣ ಕೇಳಲು ಬಂದಿದ್ದ ಸಹಸ್ರಾರು ಜನ ತಮ್ಮ ಪಾಡಿಗೆ ಶಾಂತಿಯಿಂದ ಸಭೆಯಲ್ಲಿ ಕುಳಿತಿದ್ದಾಗ ಜೆನೆರಲ್ ಡಯರ್ ಎಂಬ ಬ್ರಿಟಿಷ್ ಅಧಿಕಾರಿ ಐವತ್ತು ಸೈನಿಕರೊಂದಿಗೆ ಅಲ್ಲಿ ಬಂದ. ಸ್ವರಾಜ್ಯದ ಕೂಗು ಬಲವಾಗುತ್ತಲೇ ಇದ್ದ ಕಾಲದಲ್ಲಿ  ಬ್ರಿಟಿಷ್ ಆಳ್ವಿಕೆಗೆ ಅಧೈರ್ಯ ಉಂಟಾಗಿದ್ದು ಆಶ್ಚರ್ಯವೇನಲ್ಲ. ಅವರ ಆಳ್ವಿಕೆಯ ವಿರುದ್ಧ ನಡೆಯುತ್ತಲೇ ಇದ್ದ ಪ್ರತಿಭಟನೆಗಳು, ದಂಗೆಗಳು ಅವರನ್ನು ಕಂಗೆಡಿಸಿದ್ದವು. ಡಯರ್ ತಾಳ್ಮೆ ಕಳೆದುಕೊಂಡು ತನ್ನ ಸೈನಿಕರಿಗೆ ಗೋಲೀಬಾರು ಮಾಡಲು ಆದೇಶ ನೀಡಿದ. ಗುಂಡಿಗೆ ಬಲಿಯಾದವರು ಒಂದು ಕಡೆಯಾದರೆ  ಜನ ಹೆದರಿ ಓಡುವಾಗ ಕಾಲ್ತುಳಿತಕ್ಕೆ ಸಿಕ್ಕು ಸತ್ತವರು ಒಂದು ಕಡೆ.  ಉದ್ಯಾನವನದಲ್ಲಿರುವ ದೊಡ್ಡ ಬಾವಿಗೆ ಎಷ್ಟೋ ಜನ ಆತ್ಮರಕ್ಷಣೆಗಾಗಿ ಹಾರಿ ಪ್ರಾಣ ಕಳೆದುಕೊಂಡರು. ಇಂದಿಗೂ ಆ ಬಾವಿ

ನೆರವಿಗಿರುತಿರಲು ಜಾನಕಿನಾಥ

ಇಮೇಜ್
(ತುಲಸೀದಾಸರ ರಚನೆಯ ಅನುವಾದ) "ಜಾನಕಿನಾಥ ಸಹಾಯ ಕರೇ..." ಎಂದು ಪ್ರಾರಂಭವಾಗುವ ತುಲಸೀದಾಸರ ಈ ರಚನೆಯನ್ನು ಅನೇಕ ಹಾಡುಗಾರರು ಹಾಡಿದ್ದಾರೆ.  ಈ ಜನಪ್ರಿಯ ರಚನೆಯ ಅನುವಾದವನ್ನು ಕೆಳಗೆ ಪ್ರಯತ್ನಿಸಿದ್ದೇನೆ.  ಶ್ರೀರಾಮನ ಪರಮಭಕ್ತರಾಗಿದ್ದ ತುಲಸೀದಾಸರು ತಮ್ಮ ಸುಲಲಿತ ಶೈಲಿಯಲ್ಲಿ ರಾಮನನ್ನು ಸ್ತುತಿಸಿದ್ದಾರೆ. ಯಾರ ನೆರವಿಗೆ ಸಾಕ್ಷಾತ್ ಶ್ರೀರಾಮನೇ ಇದ್ದಾನೋ ಅವನಿಗೆ ಯಾರೂ ಏನೂ ಮಾಡಲಾರರು ಎಂಬುದು ಕವಿಯ ಸಂದೇಶ. ಗ್ರಹಣಕಾಲದಲ್ಲಿ ರಾಹು-ಕೇತುಗಳಿಗೆ ಹೆದರುವ ಜನರಿಗೆ ಈ ರಚನೆ ಸಾಂತ್ವನ ನೀಡಬಹುದು.  ನೆರವಿಗಿರುತಿರಲು ಜಾನಕಿನಾಥ  ಬರದು ನಿನ್ನ ಬಳಿ ಯಾವ ವಿಪತ್ತು ।। ತರುವರು ಶುಭಫಲ  ರವಿ ಶಶಿ ಮಂಗಳ,  ಗುರು ಭೃಗುಸುತ  ಬುಧ ವರಗಳನಿತ್ತು । ಇರದು ಗಮ್ಯತೆಯು ರಾಹುಕೇತುವಿಗೆ, ಸರಿವನು ಶನಿ ಹೆಜ್ಜೆಯ ಹಿಂದಿಟ್ಟು ।। ದುರುಳ ದುಶ್ಶಾಸನ ವಿಮಲ ದ್ರೌಪದಿಯ ಸೀರೆಯನೆಳೆಯಲು ಸಾಹಸಪಟ್ಟು । ಪೊರೆಯಲು ಕರುಣಾನಿಧಿ ಬರಲಿಲ್ಲವೇ ಹರಿದು ಮೋಡ ಬರುವಂತೆ  ಸವಿತೃ ।। ಯಾರ ಪರವೋ ಕರುಣಾನಿಧಿ ಜಗದೊಳು ತೆರೆವುದು ಅವರಿಗೆ ಭಾಗ್ಯಜಗತ್ತು । ಎರಗುವೆ ತುಲಸೀದಾಸ ರಘುವರನ ಸುಖದಾಯಿ ಚರಣಕೆ ಯಾವತ್ತೂ  ।। ಮೂಲ ರಚನೆ: जानकी नाथ सहाय करें जब कौन बिगाड़ करे नर तेरो ॥ सुरज मंगल सोम भृगु सुत बुध और गुरु वरदायक तेरो । राहु केतु की नाहिं गम्यता संग शनीचर होत हुचेरो ॥ दुष्ट दु:शासन विमल द्रौपदी चीर उतार कुमंत

2020

ಎರಡು ಸಾವಿರದ ಇಪ್ಪತ್ತು  ಪಾಪ ಬೇಜಾರು ಮಾಡಿಕೊಂಡಿತ್ತು ಜನ ಬೈತಾರೆ ನನ್ನ, ಮಾಡಿಕೋತಾರೆ ಸಿಟ್ಟು ತಾವು ಮಾಡಿದ್ದನ್ನ ಪೂರ್ತಿ ಮರೆತೇಬಿಟ್ಟು ಗೋಡೆಯ ಮೇಲೆ ದೊಡ್ಡಕ್ಷರದಲ್ಲಿ ಬರೆದಿತ್ತು ತಂದುಕೊಳ್ಳುತ್ತೀರಿ ನಿಮಗೆ ನೀವೇ ವಿಪತ್ತು ಕೇಳಿದಿರಾ ಕಿವಿಗೊಟ್ಟು? ಬಾಚಿಕೊಳ್ಳುವುದರಲ್ಲಿ ಸಂಪತ್ತು ನಿಮ್ಮ ಧ್ಯಾನವೆಲ್ಲಾ ಇತ್ತು ನವನವೋನ್ಮೇಷ ಮದಿರೆಯ ಮತ್ತು ಪೂರ್ತಿ ಆವರಿಸಿತ್ತು ಹೇಗಿತ್ತು ಅಂದರೆ ನಿಮ್ಮ ಗಮ್ಮತ್ತು ಭೂಮಿಯ ಯಕೃತ್ತು ಮುಕ್ಕಾಲುಭಾಗ ಕೆಟ್ಟುಹೋಗಿತ್ತು ನನ್ನ ತಲೆಗೇಕೆ ಕಟ್ಟುವಿರಿ ನಿಮ್ಮ ಸ್ವತ್ತು ಅನುಭವಿಸಿ ನೀವು ಗಳಿಸಿದ ಸಂಪತ್ತು ಎಂದು ಇನ್ನೇನೇನೋ ಹೇಳುತ್ತಿತ್ತು ಅಷ್ಟರಲ್ಲಿ ಹಗಲ್ಗನಸು ಮುರಿದು ಬಿತ್ತು ಎಚ್ಚರವಾಗಿತ್ತು ಎನ್ನಲು ಯಾಕೋ ಹಿಂದೇಟು ಸಿ.ಪಿ. ರವಿಕುಮಾರ್

ಮಧ್ಯಾಹ್ನದ ಮಳೆ (ಮಕ್ಕಳ ಪದ್ಯ)

ಇಮೇಜ್
ಕತ್ತಲಾಗುತಿದೆ ನಡುಮಧ್ಯಾಹ್ನ ಸೂರ್ಯನೆಲ್ಲಿ ಹೋದನು ಹೇಳಮ್ಮಾ ಮೋಡಗಳಿವು ಬಂದವು ಎಲ್ಲಿಂದ? ಒಮ್ಮೆಲೇ ಸೂರ್ಯನಿಗೇತಕೆ ಬಂಧ! ಬ್ರೇಕಿಂಗ್ ನ್ಯೂಸ್ ಬರುತಿದೆಯೇನಮ್ಮಾ ಹಚ್ಚು ಟಿವಿ ಹಚ್ಚು! ನಡೆಯುತ್ತಿದೆಯೇನಮ್ಮಾ ಯುದ್ಧ? ಏನದು ಬಾನೊಳು ಗುಡುಗುಡು ಶಬ್ದ! ನೋಡಮ್ಮಾ ಈ ರೊಯ್ಯನೆ ಗಾಳಿ ನುಗ್ಗುವ ಹಾಗೆ ಸೊಕ್ಕಿದ ಗೂಳಿ ಗುಟುರು ಹಾಕಿ ಬರುತಿದೆ ಸನ್ನದ್ಧ! ಮುಚ್ಚು ಕದವ ಮುಚ್ಚು! ಧೋ ಧೋ ಮಳೆ  ಸುರಿಯುತ್ತಿದೆ ಹೇಗೆ ಮರಗಳೆಲ್ಲ ಉಯ್ಯಾಲೆಯ ಹಾಗೆ ತೂಗಾಡುತ್ತಿವೆ ಅತ್ತಿಂದಿತ್ತ! ಗಿಡಗಳು ಬಾಗಿವೆ ಸೊಟ್ಟಂಪಟ್ಟ! ಕಾಣದು ಏನೂ ಕಿಟಕಿಯ ಹೊರಗೆ, ಎಲ್ಲಿ ದೀಪ ಸ್ವಿಚ್ಚು! ಕೊನೆಗೂ ನಿಂತಿತು ಮಳೆ ಸುರಿಸುರಿದು ಶುಭ್ರಾಕಾಶವು ಬರಿದೋ ಬರಿದು ಶಾಂತವಾಗಿಹವು ಗಿಡಮರಬಳ್ಳಿ ಸೂರ್ಯ ನಗುತಿಹನು ಆಗಸದಲ್ಲಿ ಏಳು ಬಣ್ಣಗಳ ಕಮಾನು ತೆರೆದು! ಹೊರಡುವೆ, ಆಟದ ಹೊತ್ತು! ಸಿ. ಪಿ. ರವಿಕುಮಾರ್ 

ನ್ಯೂಟನ್, ಬುದ್ಧ, ಮತ್ತು ಮರ

ನ್ಯೂಟನ್, ಬುದ್ಧ, ಮತ್ತು ಮರ ^^^^^^^^^^^^^^^^^^^^^^^^^^^^ ಒಬ್ಬನು ಹೋಗಿ ಕೂತ ಬೋಧಿ ಮರದ ಕೆಳಗೆ ಪೂರ್ಣಿಮೆಯ ರಾತ್ರಿ ಮಲಗಿರುವಾಗ ಧಾತ್ರಿ ಇರದಿದ್ದರೂ ಸದ್ದು ನಿದ್ದೆ ಬರದೆ ಎದ್ದಿದ್ದು ಆಸೆಯೇ ದುಃಖಕ್ಕೆ ರೂಟು ಎಂದೇನೇನೋ ನೂರೆಂಟು ರಚಿಸಿ ಸಮೀಕರಣ ತೊಡಿಸಿದ ಆಭರಣ ನಮ್ಮ ನಿಮ್ಮ ತಲೆಗೆ ಬೋಧಿ ಮರದ ಕೆಳಗೆ ಇನ್ನೊಬ್ಬ ಹೋಗಿ ಕೂತ ಸೇಬಿನ ಮರದ ಕೆಳಗೆ ಸೇಬು ತಿನ್ನುವ ಆಸೆ ಒಳಗೊಳಗೇ ಮೇಲೇಳಲು ಮಾತ್ರ ಬಿಡದು ಆಲಸಿಕೆ ಪ್ಲೇಗ್ ಹರಡಿದ್ದ ಕಾಲಮಾನ ಲಾಕ್ ಡೌನ್ ಪರಿಣಾಮ ರದ್ದಾಗಿ ಸಾರೋಟು ಲೈಸೆನ್ಸು ಎಲ್ಲೆಲ್ಲೂ ಶಾಂತಿ ಸೈಲೆನ್ಸು ಹೀಗಿರುವಾಗ ಸದ್ದಾಗಿ ಟಪ್ ಎಂದು ಹಣ್ಣು ತಲೆಯಮೇಲೇ ಬಿದ್ದಿತೊಂದು! ಏನಾಯಿತೋ ತಲೆಯಲ್ಲಿ ಪರಿವರ್ತನೆ ವಿಚಿತ್ರವಾಯಿತು ಐಸಾಕನ ವರ್ತನೆ ಫೋರ್ಸು ಗ್ರಾವಿಟಿ ಎಂಜಿ ಎಂದು ಏನೇನೋ ಬಡಬಡಿಸಿ ಮಡದಿ "ಯಾವಾಗ ಬರುವುದೋ ರೇಷನ್ನು?" ಎಂದರಿವನು "ಬಂದಾಗ ಆಕ್ಸಲರೇಷನ್ನು, ಯಾವುದೂ ಬಾರದು ತನ್ನಿಂದ ತಾನೇ ತಡೆಯಲೂ ನಡೆಸಲೂ ಶಕ್ತಿ ಇರಬೇಕು ಕಾಣೇ" ಎಂದು ಆಕೆಗೂ ತನ್ನ ಕನ್ಫ್ಯೂಷನ್ನು ಹರಡಿಬಿಡುತ್ತಿದ್ದನಂತೆ ನ್ಯೂಟನ್ನು! ಪಾಪ ಇನ್ನೇನು ಮಾಡಿಯಾಳು ಬಡಪಾಯಿ ಹೆಣ್ಣು ನೀಡದೆ ಈಕ್ವಲ್ ಅಂಡ್ ಆಪೋಸಿಟ್ ರಿಯಾಕ್ಷನ್ನು! ಕಂಡುಹಿಡಿಯುವ ಮುನ್ನ ಪ್ಲೇಗ್ ಲಸಿಕೆ ಚುಚ್ಚಿಬಿಟ್ಟನು ಎಲ್ಲರಿಗೂ ಕ್ಯಾಲ್ಕ್ಯುಲಸಿಕೆ! ಒಂದೆರಡಲ್ಲ ಚಲನಕ್ಕೆ ಮೂರು ಸೂತ್ರಗಳು ಯೂ, ವೀ, ಏ, ಟೀ ಎಂಬ ವಿಚಿತ್ರ ಪಾತ್ರಗಳು! ತುಂಬಿಹೋದ ನಮ್ಮ

ನಾನೂ ಹಕ್ಕಿ

ಇಮೇಜ್
(ಮಕ್ಕಳಪದ್ಯ) ನಾನೂ ಹಕ್ಕಿ ನಾನೂ ಹಕ್ಕಿ ರೆಕ್ಕೆಯ ಬಿಚ್ಚಿ ಹಾರುತ್ತಿರುವೆನು ಬಾನಲ್ಲಿ ಅತ್ತಿಂದಿತ್ತ ಅಲೆಯುವ ಚಿತ್ತ ಊರು, ಕೇರಿ, ಕಾನನ,ಹಳ್ಳಿ! ನಗುವಿರಿ ಏಕೆ ಕೈಗಳ ರೆಕ್ಕೆ ಎಬ್ಬಿಸಲಾರದೆ ಸುಳಿಗಾಳಿ? ಓಡಿಸಿ ತಲೆಯ ಗಳಿಸಿ ಐಡಿಯಾ ಗುಟ್ಟು ನಿಮಗೂ ಹೇಳುವೆ ತಾಳಿ! ಕಾಗದ ಪಿನ್ನು ಕಡ್ಡಿ ತುಂಡನ್ನು ಸೇರಿಸಿದರೆ ತಿರುಗುವ ರಾಟೆ ತಲೆಯ ಮೇಲ್ಗಡೆ ಡ್ರೋನಿನ ಹಾಗೆ ಹಚ್ಚಿಕೊಂಡು ಇಗೋ ನಾ ಹೊರಟೆ! ನಾನೂ ಡ್ರೋನು ಹಾರಾಡುವೆನು ಬರಿದಾಗಿವೆ ಕೈಗಳು ನೋಡಿ ಕೊಡುವಳು ಅಮ್ಮ ಕೊಬ್ಬರಿ  ಬೆಲ್ಲ ತಿನ್ನುತ ಹಾರುವೆ ಬಾನಾಡಿ -- ಸಿ.ಪಿ. ರವಿಕುಮಾರ್

ಬೂರ್ಶ್ವಾ

ಬ್ರೆಡ್ ಕದ್ದನೆಂಬ ಅಪರಾಧಕ್ಕಾಗಿ ಜಾನ್ ವಾಲ್ಜಾನ್ ಅನುಭವಿಸಿದ ವರ್ಷಗಟ್ಟಲೆ ಸೆರೆವಾಸ ಮತ್ತು ತಪ್ಪಿಸಿಕೊಂಡಾಗ ಬೆಂಬಿಡದ ಪೊಲೀಸ್ ಅಧಿಕಾರಿ ಜಾವೇ ಕಣ್ತಪ್ಪಿಸಿ ಓಡಾಡುವ ದುಸ್ಸಾಹಸ. ಮಂದಿಗೆ ಬ್ರೆಡ್ ಸಿಕ್ಕದ ಕಾಲದಲ್ಲೂ ಬೂರ್ಶ್ವಾ ಶ್ರೀಮಂತರು ನಡೆಸುತ್ತಿದ್ದರು ಕೇಕ್ ಮತ್ತು ವೈನ್ ಗಮ್ಮತ್ತು. ಮೇರಿ ಅಂಟಾಯ್ನೇ ಕೇಳಿದ ಪ್ರಶ್ನೆಯಿಂದ ಉದ್ರಿಕ್ತ ಜನ ಗಿಲೊಟಿನ್ ಗರಗಸಕ್ಕೆ ದೂಡಿದರು ಅವಳ ನಾಜೂಕು ಕತ್ತು. ಯಾರೋ ಅನ್ನುತ್ತಾರೆ ದಿನಗೂಲಿ ಜನರಿಗೆ ತಿನ್ನಲು ಗತಿಯಿಲ್ಲ. ಇನ್ನೊಬ್ಬರು ಶೇರ್ ಮಾಡುತ್ತಾರೆ ಇದು ನಾನೇ ಮನೆಯಲ್ಲಿ ಮಾಡಿದ ರಸಗುಲ್ಲ. ಸಮೋಸಾ ವಡೆ ಕಾಶಿ ಹಲ್ವಾ. ನಾವೆಲ್ಲರೂ ಹೀಗೆ ಬೂರ್ಶ್ವಾ ಆಗಿಬಿಟ್ಟಿದ್ದೇವಲ್ವಾ. ಇರಲಾರದು ನಮಗೆ ಗಿಲೊಟಿನ್ ಆಪತ್ತು ಆದರೆ ಹೇಗಿದ್ದೀತು ಕತ್ತರಿಸಿದರೆ ನಮ್ಮೆಲ್ಲರ ನೆಟ್ಟು. ಸಿ. ಪಿ. ರವಿಕುಮಾರ್

ಲಾಕ್ ಡೌನ್ ಶಾಪ

ಮಾಲಿನಲ್ಲಿ ಅದೆಷ್ಟು ಮಾಡಿದೆವು ಶಾಪ ವೀಕೆಂಡಿನಲ್ಲಿ ತುಂಬಿ ತುಂಬಿ ತಂದೆವು ಪಾಪ ಪ್ಲಾಸ್ಟಿಕ್ ಚೀಲಗಳಲ್ಲಿ ಕಂಡ ಪ್ರತಿ ಇಂದ್ರಚಾಪ ಆನ್ಲೈನ್ ಖರೀದಿಯಂತೂ ಇಪ್ಪತ್ನಾಕು ಬಾರ್ ಏಳು ಹಚ್ಚಿಕೊಂಡೆವು ಕ್ಲಿಕ್ ಮಾಡಿ ತರಿಸುವ ಗೀಳು ಮನೆಗೇ ಹರಿಯಿತು ಕಾಮಧೇನುವಿನ ಹಾಲು ಮನೆಗೆ ಬಂದ ಪೀಟ್ಸಾ ತಣ್ಣಗಾಗಿದೆ ಎಂದು ಮೂಗು ಮುರಿದೆವು ಬೈದಾಡಿಕೊಂಡು ಡ್ರೋನ್ ತರಲಾರದೇ ಹಾರುತ್ತಾ ಬಂದು? ಓಲಾಡಿ ಹೊರಟೆವು ಓಲಾ ಊಬರುಗಳಲ್ಲಿ ಕಬಳಿಸಿದವು ನಗರಗಳು ಒಂದೊಂದೇ ಹಳ್ಳಿ ಹಬ್ಬಿದಷ್ಟೂ ರಿಸಾರ್ಟ್ ಕನಸುಗಳ ಬಳ್ಳಿ. ತಟ್ಟಿಬಿಟ್ಟಿತು ನಮಗೆ ಪ್ರಾಣಿಪಕ್ಷಿಗಳ ಶಾಪ ತೋಡಿಕೊಂಡೆವು ನಮಗಾಗಿ ನಾವೇ ಕೂಪ. ಸಿ.ಪಿ. ರವಿಕುಮಾರ್

ಲಾಕ್ ಡೌನ್ ಸಡಿಲ

ಈಗ ಹೊರಗಡೆ ಓಡಾಡುವುದು ಸುಲಭವಲ್ಲ ಗೂಗಲ್ ಅಕ್ಕನಿಗೂ ರಸ್ತೆ ತಿಳಿಯುವುದಿಲ್ಲ ಕೆಲವು ದಾರಿಗಳು ಮುಚ್ಚಿವೆ ಕೆಲವು ಅರ್ಧ ಮಾತ್ರ ಕಣ್ಬಿಚ್ಚಿವೆ ಜನ ಹೇಗೆ ಗಾಡಿ ಓಡಿಸುತ್ತಿದ್ದಾರೋ ಕಾಣೆ ಹೇಗೋ ಒಪ್ಪಿಕೊಂಡಿದ್ದಾರೆ ಬದಲಾವಣೆ ನಮ್ಮ ಜನರಿಗಿಲ್ಲ ಮಾಸ್ಕ್ ತೊಟ್ಟು ಅಭ್ಯಾಸ ಕೆಲವರು ಹಾಗೇ ಹೊರಬಂದಿದ್ದಾರೆ ರಾಜಾರೋಷ ಕೆಲವರ ಧ್ವಜ ಜಾರಿದೆ ಅರ್ಧದಷ್ಟು ಕೆಳಗೆ ಕೆಲವರಿಗೆ ಮಾತ್ರ ಬಾಯ್ಮುಚ್ಚುವಷ್ಟು ಸಲುಗೆ ಜನ ಹೇಗೋ ಉಸಿರಾಡುತ್ತಿದ್ದಾರೆ ಈಗಲೂ ಮೂಗು ಬಾಯಿ ಲಾಕ್ ಡೌನ್ ಮಾಡಿದರೂ ಬಾಗಿಲು ಇರಾಕ್, ಸಿರಿಯಾಗಳಲ್ಲಿ ಬಾಂಬ್ ದಾಳಿಗೆ ಹೆದರಿ ಜನ ಹೇಗೆ ಬದುಕುವರೋ ದಿನದಿನ! ಧರ್ಮಾಂಧನ ಎದೆ ಕರೋನಾಗಿಂತ ಕಠಿಣ ಸಿಡಿಯುವುದು ಯಾವುದೋ ಅನಿರೀಕ್ಷಿತ ಕ್ಷಣ ಯಾವ ಮುಖವಾಡವೂ ನೀಡಲಾರದು ರಕ್ಷೆ ಎಷ್ಟು ಕೈ ತೊಳೆದರೇನು ಯಾರ ಪಾಪಕ್ಕೆ ಬಾಂಬ್ ದಾಳಿಯ ನಂತರ ಹೊರಗೆ ಬಂದಂತೆ ಜನ ಅಳುಕುತ್ತಿದ್ದರೂ ತಾಳಲಾಗದೇ ಬಂಧನ ಹೊರಗೆ ಇಣುಕುತ್ತಿದ್ದಾರೆ ಮೆಲ್ಲಮೆಲ್ಲನೆ ಮಂದಿ ಬಹುಮೆಲ್ಲನೆ ಕುಂಟುತ್ತಿದೆ ಬದುಕಿನ ಜಟಕಾ ಬಂಡಿ. ಮುಖವಾಡವಿದ್ದರೂ ಗುರುತಿಸಿ ಮುಗುಳ್ನಗೆ ಹೆಚ್ಚು ಮಾತಿಲ್ಲ ಹೊರಗೆ, ಎಲ್ಲ ಒಳಗೊಳಗೇ. "ತೆರೆದ ಬಾಗಿಲು ನಾನು, ಸರ್ವಋತು ಬಂದರು." ವೈಶಾಖ ಕಳೆದರೂ ವರ್ಷಋತು ಬಂದರೂ. ಬರಲಿ ಏನೇ ಪಾಲಿಗೆ ಅದುವೆ ಪಂಚಾಮೃತ ಎನ್ನುತ್ತ ಜನಗಣವು ಬಿಡದೆ ಜೀವನವೃತ ಮುನ್ನಡೆಯುತ್ತಿದೆ ಹೇಗೋ ನಮ್ಮ ಮಹಾನ್ ಭಾರತ ಗತಿ ನಿಧಾನವಾದರೇನು ಯಾರಿಗಿಲ್

ನಿಸಾರ್ ಅಹಮದ್ ಅವರ ನೆನಪು

ನಿ ಸಾರ್ ಅಹ್ಮದ್ ಅವರೊಂದಿಗೆ ಒಮ್ಮೆ ಪ್ರಯಾಣಿಸುವ ಮತ್ತು ಅವರೊಂದಿಗೆ ಕಾವ್ಯವಾಚನದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ಬಂದಿತ್ತು. ಅದು ಆದದ್ದು ಹೀಗೆ. ಶ್ರೀ ಎಂ. ಎಸ್. ಭಾರದ್ವಾಜ್ ಅವರು ನನ್ನ ತಂದೆಯವರ ಹತ್ತಿರದ ಮಿತ್ರರು. ಅವರಿಗೆ ವಾರ್ತಾ ಇಲಾಖೆಯಲ್ಲಿ ಉನ್ನತ ಹುದ್ದೆ. ನಿರಂಜನ, ಭಾರದ್ವಾಜ್, ನಮ್ಮ ತಂದೆ ಇವರು ಮೂವರೂ ಹತ್ತಿರದ ಮಿತ್ರರು. ನನ್ನ ತಂದೆ ದೆಹಲಿಗೆ ಹೋದಾಗ ಭಾರದ್ವಾಜ್ ಅವರೂ ದೆಹಲಿಯಲ್ಲಿದ್ದರು. ಅವರ ಮನೆಗೆ ನಾವು ಹೋದ ನೆನಪು ಹಸಿರಾಗಿದೆ. ಅವರ ಹೆಂಡತಿ ಶ್ರೀಮತಿ ವೃಂದಾ ಭಾರದ್ವಾಜ್ ಸಣ್ಣ ಕತೆಗಳನ್ನು ಬರೆಯುತ್ತಿದ್ದರು. ಮಕ್ಕಳು ಮಾಯಾ ಮತ್ತು ಮಮತಾ. ನಮ್ಮ ತಂದೆ ದೆಹಲಿಯಲ್ಲಿ 5 ವರ್ಷ ಕೆಲಸ ಮಾಡಿ ಬೆಂಗಳೂರಿಗೆ ಮರಳಿದರು. ಮುಂದೆ ಭಾರದ್ವಾಜ್ ಕೂಡಾ ಬೆಂಗಳೂರಿಗೆ ಮರಳಿ ಬಂದರು. ಅವರ ಮನೆ ನಮ್ಮ ಮನೆಯ ಪಕ್ಕದ ಬೀದಿಯಲ್ಲೇ ಇತ್ತು. ಅವರು ಈಗ ನಮ್ಮ ಮನೆಗೆ ಆಗಾಗ ಬರುತ್ತಿದ್ದರು. ನನ್ನನ್ನು ಅವರು ತಮ್ಮ ಮಗನಷ್ಟೇ ಪ್ರೀತಿಸುತ್ತಿದ್ದರು ಎಂದರೆ ಅತಿಶಯೋಕ್ತಿಯಲ್ಲ. ನಾನೂ ಒಂದಿಷ್ಟು ಬರೆಯುತ್ತೇನೆ ಎಂದು ನನ್ನ ತಂದೆ ಅವರಿಗೆ ಹೇಳಿದ್ದೇ ಅವರಿಗೆ ಸಾಕಾಯಿತು. ಒಂದು ದಿನ ಬಂದು "ಚಿತ್ರದುರ್ಗದಲ್ಲಿ ಒಂದು ಕವಿಗೋಷ್ಠಿ ಇದೆ. ರವಿಯನ್ನೂ ಕಳಿಸಿಕೊಡಿ, ನನ್ನ ಜೊತೆ ಬರುತ್ತಾನೆ, ಅವನೂ ಒಂದು ಕವಿತೆ ಓದಲಿ" ಎಂದರು. ಹಿಂದೆಂದೂ ಕವಿಗೋಷ್ಠಿಯಲ್ಲಿ ನಾನು ಪಾಲ್ಗೊಂಡಿರಲಿಲ್ಲ. ಹೀಗಾಗಿ ನನಗೆ ಇದು ಹೊಸ ಅನುಭವ. ನಾನು ಒಂದು ಕವಿತ

ನಾನು ಓದಿದ ಕವಿತೆ

ನಾನು ಓದಿದ ಮತ್ತು ನನಗೆ ಇಷ್ಟವಾದ ಕವಿತೆಗಳನ್ನು ಹಂಚಿಕೊಳ್ಳಲು ನಾನೊಂದು ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದೇನೆ.  ಈಗ ಈ ಚಾನೆಲಿನಲ್ಲಿ ಲಭ್ಯವಾದವು ೧. ಅಡಿಗರ "ನನ್ನ ಅವತಾರ" ೨. ಅಡಿಗರ "ಅಲಸನ ಹಾಡು" ೩. ಕೆ. ಎಸ್. ನರಸಿಂಹಸ್ವಾಮಿ ಅವರ "ದೇವರ ಹೆಜ್ಜೆ" ೪. ಬಾಬ್ ಡಿಲನ್ ಅವರ "ಎಲ್ಲಿ ಹುಡುಕುತ್ತಿರುವೆ ಪ್ರಶ್ನೆಗಳಿಗೆ ಉತ್ತರ?" ೫. ಮೈಥಿಲಿ ಶರಣ ಗುಪ್ತ ಅವರ "ಜೀವನಕ್ಕೇ ವಿಜಯ" ೬. ಮಾಯಾ ಏಂಜೆಲೋ ಅವರ "ವಸುಧೈವ ಕುಟುಂಬಕಮ್" ೭. ರಾಬರ್ಟ್ ಫ್ರಾಸ್ಟ್ ಬರೆದ "ನಾನು ತುಳಿಯದ ಹಾದಿ" ನಿಮ್ಮ ಅನ್ನಿಸಿಕೆಗಳನ್ನು ತಿಳಿಯಲು ಕುತೂಹಲಿಯಾಗಿದ್ದೇನೆ. ಸಿ. ಪಿ. ರವಿಕುಮಾರ್

ಇಶ್ರತ್ ಏ ಕತರಾ ಹೈ ದರಿಯಾ ಮೇ ಫನಾ ಹೋ ಜಾನಾ

ಇಮೇಜ್
ಮೂಲ - ಮಿರ್ಜಾ ಗಾಲಿಬ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ('ಇಶ್ರತ್ ಏ ಕತರಾ ಹೈ ದರಿಯಾ ಮೇ ಫನಾ ಹೋ ಜಾನಾ'  - ಗಾಲಿಬ್ ಅವರ ಈ ಗಜಲ್ ಅನೇಕ ಗಾಯಕರಿಂದ ಹಾಡಲ್ಪಟ್ಟಿದೆ. ಕರ್ನಾಟಕ ಗಾಯನ ಶೈಲಿಯಲ್ಲಿ ಎಂ. ಎಸ್. ಸುಬ್ಬುಲಕ್ಷ್ಮಿಯವರೂ ಇದನ್ನು ಹಾಡಿದ್ದಾರೆ!  ತನ್ನ ಪ್ರೇಮಿಕೆಯಿಂದ ಯಾವುದೋ ಕಾರಣದಿಂದ ಬೇರಾದ ಪ್ರೇಮಿಯೊಬ್ಬನ ಅಳಲು ಈ ಕವಿತೆಯಲ್ಲಿದೆ.) ಸಿಂಧುವಿನಲ್ಲಿ ಕೊನೆಗಾಣುವುದರಲ್ಲಿದೆ ಬಿಂದುವಿನ ಆನಂದ ತಿಂದ ನೋವು ಮಿತಿ ಮೀರಿದಾಗ ಅದೇ ಆಗುತ್ತದೆ ದಿವ್ಯೌಷಧ ಬೀಗ ಮತ್ತದರ ಕೀಲಿಯಂತಾಯಿತಲ್ಲ ನನ್ನ ನಿನ್ನ ಸಂಬಂಧ ಎಲ್ಲ ನೇರವಾಯಿತು ಎನ್ನುವಾಗ ಕಳಚಿ ಬಿದ್ದಿತು ಬಂಧ ಕಷ್ಟಗಳಿಗಿಂತಲೂ ಪರಿಹಾರಗಳಿಂದ  ತತ್ತರಿಸಿದೆ  ಎದೆ  ಗಂಟು ಬಿಡಿಸಲು ಹೋಗಿ ಎಲ್ಲಾ  ಗೋಜಲುಗೋಜಲಾಗಿದೆ  ದೈವವೇ! ಹಿಂಸೆಯಿಂದಲೂ ವಂಚಿತವಾಗುತ್ತಿದೆ  ಮನಸ್ಸು ತನ್ನ  ಆರಾಧಕನ  ಮೇಲೆ ಅವಳಿಗೇಕೆ ಇಷ್ಟೊಂದು ಸಿಟ್ಟು? ಬಿಸಿ ನಿಟ್ಟುಸಿರುಗಳು  ಕಂಬನಿಯ ಸ್ಥಳವನ್ನಾಕ್ರಮಿಸಿದಾಗ ನೀರೂ ಆವಿಯಾಗಬಹುದೆಂದು ನಂಬಿಕೆ ಬಂತು ಆವಾಗ ಮದರಂಗಿ ಚಿತ್ತಾರದ ನಿನ್ನ ಮೃದು ಹಸ್ತಗಳ ನೆನಪು ಎದೆಯಿಂದ ಬೇರ್ಪಡಿಸುವುದಿದೆಯಲ್ಲ, ಕಿತ್ತಂತೆ ಉಗುರು ನಿನ್ನ ಮನೆ ಓಣಿಯನು ತಲುಪಲೊಲ್ಲದ  ಕುಸುಮದ ಗಂಧ ಬೀಸುಗಾಳಿಗೆ ಕಾದು ಕುಳಿತಿದೆ ಏತಕೆ  ಧೂಳಿನ ಅಂದ ಶ್ರಾವಣದ  ಕಾರ್ಮೋಡವು ಸುರಿಸಿದ ಮೇಲೆ ಬರಿದಾಗದೆ ಬಾನು? ಕಣ್ಣೀರು ಸುರಿಸಿದ ಮೇಲೆ ನನಗೂ ಬೇರೇ

ಲಾಕ್ ಡೌನ್ ಇಲ್ಲದ ಹಕ್ಕಿಗಳು

ಇಮೇಜ್
ಹೊರಗಡೆ ಮರದಲಿ ಅಮ್ಮಾ ನೋಡು ಹಕ್ಕಿಯೊಂದು ಕಟ್ಟಿದೆ ಹೊಸ ಗೂಡು ಬಿಡದೆ ಹಾಡುವುದು ಯಾವುದೋ ಹಾಡು ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ಹೊರಗಡೆ ಮರದಲಿ ಅಮ್ಮಾ ನೋಡು ಎಲೆಗಿಂತಲೂ ಹೆಚ್ಚಾಗಿದೆ ಹೂವು ದಟ್ಟಹಳದಿ, ನೀಲಿ, ತಿಳಿಗೆಂಪು ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ನೋಡು ಹಕ್ಕಿಗಳು ಬಡಿಯುತ ರೆಕ್ಕೆ ಪಟಪಟ ಹಾರುತ್ತವೆ ಮೇಲಕ್ಕೆ ಲಾಕ್ ಡೌನ್ ಇಲ್ಲವೇ ಇಲ್ಲ ಇವಕ್ಕೆ! ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ಬಂದಿರುವಾಗ ಸಕ್ಕರೆ ನಿದ್ದೆ ಕನಸೊಳು ಕಾರ್ಟೂನ್ ನೋಡುತ್ತಿದ್ದೆ ಇವುಗಳ ಕಲಕಲ ಕೇಳುತ ಎದ್ದೆ ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ಯಾಕಮ್ಮಾ ಹಕ್ಕಿಗಳಿವು ಹೀಗೆ ಕೂಡದೆ ಸುಮ್ಮನೆ ಒಂದೇ ಕಡೆಗೆ ಹಾರುತ್ತಿರುವುವು ದಿನಾ ಬೆಳಗ್ಗೆ ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ನಿನ್ನ ಹಾಗೆ ಹಕ್ಕಿಗಳೂ ಪುಟ್ಟ ಬರುವೆಯಲ್ಲ ತಿಂಡಿಯ ಹುಡುಕುತ್ತ ಹಾಗೇ ಹುಡುಕುತ್ತವೆ ಹುಳು ಹುಪ್ಟ ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ತಿಂಡಿ ಎಂದ ಕೂಡಲೇ ನೆನಪಾಯ್ತು ಏನೋ ಘಮಘಮ ಬರ್ತಾ ಇತ್ತು ಮೈಸೂರ್ ಪಾಕೇನಮ್ಮ ಇವತ್ತು? ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! - ಸಿ.ಪಿ. ರವಿಕುಮಾರ್, ಏಪ್ರಿಲ್ ೨೫, ೨೦೨೦

ಲಾಕ್ ಡೌನ್ ಚುಟುಕಗಳು

ಲಾಕ್ ಡೌನ್ ಕಾಲದಲ್ಲಿ ಬರೆದ ಚುಟುಕಗಳು  ರಾಜು   ನನ್ನ ಫ್ರೆಂಡ್ ಎಂಎನ್ಎಚ್ ರಾಜು ಅಂತ ಓದಿಕೊಂಡಿಲ್ಲವಾದ್ರೂ ಸಹಜ ಬುದ್ಧಿವಂತ ಹುಟ್ಟಿದ್ದು ಮಾಗಡಿಯ ನಗುವಳ್ಳಿ ಅಂತ ಅವನ ತಂದೆಯ ಹೆಸರು ಹನುಮಂತ ಎಂದೂ ಬರೆದದ್ದು ಕಾಣೆ ಮಾ.ನ.ಹ. ರಾಜು ಅಂತ ಥ್ರೋ ಬ್ಯಾಕ್  ಮ್ಯಾನೇಜರ್ ನೀಡಿದ ಸಮಸ್ಯೆಗೆ ಪರಿಹಾರ ಇಂಜಿನಿಯರ್ ಕೊಡಬಾರದಾಗಿತ್ತು ಗುರುವಾರ ಸೂಕ್ತವಾಗಿದ್ದರೂ ವಾಪಸ್ ಬಂತು ರೀಬೌಂಡು ಯೋಚಿಸಲು ತಿಳಿದುಬಂತು ಯಾಕೆಂದು ಅಂದು ಮ್ಯಾನೇಜರ್‌ಗೆ ಥ್ರೋ ಬ್ಯಾಕ್ ಥರ್ಸ್ಡೇ ಆಚಾರ ಮೂರು   ರುಕ್ಮಿಣಿಗೆ ಎಷ್ಟಿತ್ತು ಗೊತ್ತೇ ಮುತುವರ್ಜಿ ಪತಿದೇವ ಕೃಷ್ಣನ ತೂಕ ಕುರಿತು ಕಾಳಜಿ ತಂದಾಗ ಸುದಾಮ ಖಾರದವಲಕ್ಕಿ ಕೃಷ್ಣ ತಿಂದದ್ದು ಎರಡೇ ಹಿಡಿ ಮುಕ್ಕಿ ಮೂರನೇ ಹಿಡಿಗೇ ಬಸ್ ಕರೋ ಸರ್ ಜೀ. ಲಾಕ್ ಡೌನ್ ಅಲೆಮಾರಿ   ಕೆಲವರು ಅಲೆಮಾರಿ ಜನಾಂಗ ಮನೆಯ ಹೊರಗೇ ಪಟ್ಟಾಂಗ ಈಗ "ಅಲ್ಲಿದೆ ನಮ್ಮ ಮನೆ ಇಲ್ಲಿಗೆ ಬಂದೆವು ಸುಮ್ಮನೆ" ಎಂದು ದಾಸರ ರಾಗ ಹಾಡುತ್ತಿರುವರೀಗ! ಕಳಪೆ ಕಿಟ್ಟು  ಯಾವಾಗ ಹೋದ ಭಾರತ ಬಿಟ್ಟು ನಮ್ಮ ಕಿಟ್ಟು ಚೈನಾಗೆ, ಮಾನಗೆಟ್ಟು! ಇಲ್ಲಿ ಕನಕಪುರದಲ್ಲಿದ್ದಾಗಲೂ ಮಾರುತ್ತಿದ್ದದ್ದು ಕಳಪೆ ಮಾಲು ಈಗಂತೂ ಹೆಡ್ಲೈನ್ ನ್ಯೂಸ್ "ಕಳಪೆ ಚೈನಾ ಕಿಟ್ಟು" ಡೌನ್ ಡೌನ್  ಅದು ಡೌನು ಇದು ಡೌನು ಲಾಕ್ ಡೌನು ಸೀಲ್ ಡೌನು ಬರಲಿದೆಯೋ ಏನೇನು ಚಿಂತಿಸೆನು ನಾನಿನ್ನು ಏನು ಫಲ, ಲೋಕವೇ ಆದಾಗ ಅಪ್ ಸೈಡ್ ಡೌನು!! ಏಕಲವ್ಯನ ಬೆ