ಪೋಸ್ಟ್‌ಗಳು

Urdu Poetry ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಇಶ್ರತ್ ಏ ಕತರಾ ಹೈ ದರಿಯಾ ಮೇ ಫನಾ ಹೋ ಜಾನಾ

ಇಮೇಜ್
ಮೂಲ - ಮಿರ್ಜಾ ಗಾಲಿಬ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ('ಇಶ್ರತ್ ಏ ಕತರಾ ಹೈ ದರಿಯಾ ಮೇ ಫನಾ ಹೋ ಜಾನಾ'  - ಗಾಲಿಬ್ ಅವರ ಈ ಗಜಲ್ ಅನೇಕ ಗಾಯಕರಿಂದ ಹಾಡಲ್ಪಟ್ಟಿದೆ. ಕರ್ನಾಟಕ ಗಾಯನ ಶೈಲಿಯಲ್ಲಿ ಎಂ. ಎಸ್. ಸುಬ್ಬುಲಕ್ಷ್ಮಿಯವರೂ ಇದನ್ನು ಹಾಡಿದ್ದಾರೆ!  ತನ್ನ ಪ್ರೇಮಿಕೆಯಿಂದ ಯಾವುದೋ ಕಾರಣದಿಂದ ಬೇರಾದ ಪ್ರೇಮಿಯೊಬ್ಬನ ಅಳಲು ಈ ಕವಿತೆಯಲ್ಲಿದೆ.) ಸಿಂಧುವಿನಲ್ಲಿ ಕೊನೆಗಾಣುವುದರಲ್ಲಿದೆ ಬಿಂದುವಿನ ಆನಂದ ತಿಂದ ನೋವು ಮಿತಿ ಮೀರಿದಾಗ ಅದೇ ಆಗುತ್ತದೆ ದಿವ್ಯೌಷಧ ಬೀಗ ಮತ್ತದರ ಕೀಲಿಯಂತಾಯಿತಲ್ಲ ನನ್ನ ನಿನ್ನ ಸಂಬಂಧ ಎಲ್ಲ ನೇರವಾಯಿತು ಎನ್ನುವಾಗ ಕಳಚಿ ಬಿದ್ದಿತು ಬಂಧ ಕಷ್ಟಗಳಿಗಿಂತಲೂ ಪರಿಹಾರಗಳಿಂದ  ತತ್ತರಿಸಿದೆ  ಎದೆ  ಗಂಟು ಬಿಡಿಸಲು ಹೋಗಿ ಎಲ್ಲಾ  ಗೋಜಲುಗೋಜಲಾಗಿದೆ  ದೈವವೇ! ಹಿಂಸೆಯಿಂದಲೂ ವಂಚಿತವಾಗುತ್ತಿದೆ  ಮನಸ್ಸು ತನ್ನ  ಆರಾಧಕನ  ಮೇಲೆ ಅವಳಿಗೇಕೆ ಇಷ್ಟೊಂದು ಸಿಟ್ಟು? ಬಿಸಿ ನಿಟ್ಟುಸಿರುಗಳು  ಕಂಬನಿಯ ಸ್ಥಳವನ್ನಾಕ್ರಮಿಸಿದಾಗ ನೀರೂ ಆವಿಯಾಗಬಹುದೆಂದು ನಂಬಿಕೆ ಬಂತು ಆವಾಗ ಮದರಂಗಿ ಚಿತ್ತಾರದ ನಿನ್ನ ಮೃದು ಹಸ್ತಗಳ ನೆನಪು ಎದೆಯಿಂದ ಬೇರ್ಪಡಿಸುವುದಿದೆಯಲ್ಲ, ಕಿತ್ತಂತೆ ಉಗುರು ನಿನ್ನ ಮನೆ ಓಣಿಯನು ತಲುಪಲೊಲ್ಲದ  ಕುಸುಮದ ಗಂಧ ಬೀಸುಗಾಳಿಗೆ ಕಾದು ಕುಳಿತಿದೆ ಏತಕೆ  ಧೂಳಿ...

ಕಲ್ಲಂಗಡಿಯ ಭೂತ

ಇಮೇಜ್
ಸ್ಫೂರ್ತಿ ... ಸಾಗರ್ ಖಯ್ಯಾಮಿ ಅವರ ಉರ್ದು ಕವಿತೆ ಕನ್ನಡ ಅವತರಣ ... ಸಿ.ಪಿ. ರವಿಕುಮಾರ್ ಬೆಂಗಳೂರಲ್ಲಿ ಬಾಡಿಗೆಗೆ ಮನೆಯೊಂದನ್ನು ಹುಡುಕುತ್ತ ಪ್ರಾಣ ಬಿಡುವುದೇ ಏನೋ ಪರದೈವದ ಚಿತ್ತ ಒಂದು ದಿನ ಹೀಗೇ ಅಲೆದಲೆದೂ ದಿನವೆಲ್ಲಾ ಹೊಟ್ಟೆಯಲ್ಲಿ ನಡೆಯುತಿತ್ತು ತಾಳಮದ್ದಳೆ ಮೇಳ ನನ್ನ ಹೊಟ್ಟೆಯು ಕೂಡಾ ತುಸು ದೊಡ್ಡದೇ, ಕ್ಷಮಿಸಿ ! ಮತ್ತು ಜೋಬಿನಲ್ಲಿದ್ದದ್ದು ಅತ್ಯಲ್ಪ ಧನರಾಶಿ! ಇನ್ನೇನು ಸಿಕ್ಕುವುದು ಜುಜುಬಿ ಕಲ್ಲಂಗಡಿ ಹೊರತು? ಹೊತ್ತು ಬರುವಾಗ ಎಡವಿ ಅದು ಕೂಡಾ ಕೈಜಾರಿತು! ಆಯಿತು ನೋಡಿರಿ ಆಗ ಒಂದು ಕರಾಮತ್ತು ಹೊಗೆಯೆದ್ದು ಭುಸ್ ಒಂದು ಭೂತ ಹೊರಬಂತು! ರಸ್ತೆಯಲ್ಲೇ ನನ್ನ ಕಾಲಿಗೆ ಸಾಷ್ಟಾಂಗ ಪ್ರಣಾಮ ನೀಡು ಆಜ್ಞೆಯ! ಶಿರಸಾ ವಹಿಸುವನು ಗುಲಾಮ! ಬೀರಿದರೆ ನಾನು ಒಂದೇ ಕಟಾಕ್ಷ ಸಾಹಿತ್ಯ ಸಮ್ಮೇಳನಕ್ಕೆ ನೀನೇ ಅಧ್ಯಕ್ಷ ಕವಿಗೋಷ್ಠಿಯಲ್ಲಿ ನಿನ್ನದೇ ಮೊದಲ ಕವಿತಾ ವಾಚನ ತಡೆಹಿಡಿಯಬಲ್ಲೆ ಓಡದಂತೆ ಅಧ್ಯಕ್ಷರ ವಾಚನ್ನ! ಮುದ್ರಿಸುವೆನು ನಿನ್ನ ಕವನಸಂಗ್ರಹಗಳ ಸಂಪುಟ ಮುನ್ನುಡಿ, ಬೆನ್ನುಡಿ, ಬಿಡುಗಡೆಯೆಲ್ಲಾ ಚಟಪಟ ಮುಖಪುಟದಲ್ಲೇ ಬಂದೀತು ಅರೆಪುಟದ ವರದಿ ನೀನೆಂತೆಂಥಾ ದೊಡ್ಡ ಕಾವ್ಯಗಳ ಬರದೀ ನೋಡುತ್ತಿರು ನೀನು ಏನೇನು ಆಗುವೆ ಏನೂ ಮಾಡದೆ ಅವಾರ್ಡ್ ಪಡೆಯುತ್ತ ಸಾಗುವೆ! ಕೆಟ್ಟ ವಿಮರ್ಶಕರನ್ನು ಮಾಡುವೆನು ನಾಶ ನಿನ್ನ ಬಕ್ಕತಲೆ ಮೇಲೂ ಬೆಳೆಸುವೆನು ಕೇಶ ಅಪ್ರತಿಮ ಸುಂದರ...

ಕಠಿಣ ಪ್ರೇಮದ ನಿಯಮ

ಇಮೇಜ್
ಮೂಲ ಉರ್ದೂ : ನಕ್ಷ್ ಲಾಲ್ ಪುರಿ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  "ರಸ್ಮೆ ಉಲ್ಫತ್ ಕೋ ನಿಭಾಯೇo ತೋ ನಿಭಾಯೇo ಕೈಸೇ" ಎಂದು ಪ್ರಾರಂಭವಾಗುವ ಈ ಗೀತೆಯ ರಚನೆ ನಕ್ಷ್ ಲಾಲ್ ಪುರಿ ಅವರದ್ದು. ಇದನ್ನು "ದಿಲ್ ಕೀ ರಾಹೇಂ" ಚಿತ್ರದಲ್ಲಿ ಬಳಸಲಾಗಿದೆ. ಮದನ್ ಮೋಹನ್ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಮಂಗೇಶ್ಕರ್ ಹಾಡಿದ್ದಾರೆ. ಕಠಿಣ ಪ್ರೇಮದ ನಿಯಮ ಪಾಲಿಸುವುದಾದರೂ ಹೇಗೆ ಪಾಲಿಸಲಿ  ಸುತ್ತಲೂ ಹರಡಿರುವಾಗ ಬೆಂಕಿ ಸೆರಗನ್ನು ಹೇಗೆ ಕಾಪಾಡಲಿ? ಎಬ್ಬಿಸುತ್ತಾರಲ್ಲ ಜನರು ಹೃದಯದ ಹಾದಿಯಲ್ಲಿ  ಗೋಡೆಗಳನ್ನು ಉರುಳಿಸುವುದು ಹೇಗೆಂದು ಯಾರಾದರೂ ಹೇಳುವಿರೇನು? ಹಾಡುಗಳು ಸಾವಿರಾರಿವೆ ದುಃಖದಲ್ಲಿ ಅದ್ದಿದ್ದು, ಆದರೂ  ಮುರಿದ ಹೃದಯದ ವೀಣೆಯಲ್ಲಿ ನುಡಿಸುವುದದೆಂತು? ಎತ್ತಿಕೊಳ್ಳಬಹುದಾಗಿತ್ತು ಹೇಗೋ ದುಃಖಗಳ ಹೊರೆಯನ್ನಾದರೂ  ಬದುಕೇ ಹೊರೆಯಾದಾಗ ಮೇಲೆತ್ತಿ ಹೇಗೆ ನಡೆಯುವುದು?

ಸ್ನೇಹಕ್ಕೆ ಕೈಚಾಚುವ ಮುನ್ನ

ಇಮೇಜ್
ಮೂಲ ಉರ್ದು - ನಕ್ಷ್ ಲಾಲ್ ಪುರಿ ಕನ್ನಡಕ್ಕೆ - ಸಿ. ಪಿ. ರವಿಕುಮಾರ್   ಉಲ್ಫತ್ ಮೇ ಜಮಾನೇ ಕೀ ಹರ್ ರಸ್ಮ್ ಕೋ ಠುಕರಾಓ ... ಎಂದು ಪ್ರಾರಂಭವಾಗುವ ಈ ಗೀತೆಯನ್ನು ನಕ್ಷ್ ಲಾಲ್ ಪುರಿ ಅವರು ಬರೆದಿದ್ದಾರೆ. ಇದನ್ನು ಕಾಲ್ ಗರ್ಲ್ ಎಂಬ ಚಿತ್ರದಲ್ಲಿ ಬಳಸಲಾಗಿದೆ.  ಲತಾ ಮಂಗೇಶ್ಕರ್ ಈ ಗೀತೆಯನ್ನು ಹಾಡಿದ್ದಾರೆ. ಬಹಳ ಇಂಪಾದ ಈ ಹಾಡನ್ನು ನೀವು ಕೂಡಾ ಕೇಳಬಹುದು - ಯೂ ಟ್ಯೂಬಿನಲ್ಲಿ ಲಭ್ಯವಾಗಿದೆ ದೊಂದು ಗಂಭೀರವಾದ ಸನ್ನಿವೇಶ.  ಅನುರಕ್ತನಾಗಿ ತನ್ನತ್ತ ಬಂದವನಿಗೆ ಒಬ್ಬಳು ಹೆಣ್ಣು ಎಚ್ಚರಿಕೆ ನೀಡುತ್ತಿದ್ದಾಳೆ. ಅವಳ ಜೀವನದಲ್ಲಿ ಯಾವುದೋ ಕಪ್ಪು ನೆರಳಿದೆ. ಇದನ್ನು ಅರಿತೂ ತನ್ನ ಸ್ನೇಹ ಬೇಡಿ ಬಂದಿರುವ ಗಂಡನ್ನು ಕುರಿತು ಅವಳಿಗೆ ಸಹಜವಾಗಿ ಅನುಮಾನಗಳಿವೆ.  ಮುಂದಿರುವ ದಾರಿ ಸುಗಮವಾದದ್ದಲ್ಲ ಎಂದು ಅವಳಿಗೆ ಗೊತ್ತು. ಕಷ್ಟಗಳು ಬಂದಾಗ ತನ್ನನ್ನು ಇವನು ತೊರೆದು ಹೋದರೆ ಎಂಬ ಅಳುಕು ಕೂಡಾ ಅವಳನ್ನು ಕಾಡುತ್ತದೆ.  ತಾನು ಹೇಗೋ ಈ ಸಮಾಜದಲ್ಲಿ ಒಬ್ಬಂಟಿಯಾಗಿ ಬಾಳಬಲ್ಲೆ. ಆದರೆ ನಾಲ್ಕು ಹೆಜ್ಜೆ ತನ್ನೊಂದಿಗೆ ನಡೆದು ಮುಂದೆ ತನ್ನನ್ನು ಏಕಾಂಗಿಯಾಗಿ ತೊರೆದರೆ ತಾನು ಬಾಳಬಲ್ಲೆನೇ? ನನ್ನ ಸ್ನೇಹಕ್ಕೆ ಕೈಚಾಚುವ ಮುನ್ನ  ದಾಟಬೇಕು ಜಗತ್ತಿನ ನಿಯಮಗಳನ್ನ ಎಲ್ಲೆಗಳನ್ನು ದಾಟಿ ಎಲ್ಲರಿಂದಲೂ ದೂರ  ನಾವು ಸಾಗಬೇಕೆಂದಿರುವ ಮುನ್ನಡೆಯ ಹಾದಿ  ಆ ದಾರಿಯಲ್ಲಿ ಪ್ರ...

ಗಡಿ

ಇಮೇಜ್
ಮೂಲ ಉರ್ದೂ : ಜಾಹೀದ್ ಇಮ್ರೋಜ್ (ಪಾಕೀಸ್ತಾನಿ ಯುವಕವಿ) ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಗಡಿಯ ಮೇಲೆ ಬರಿಹೊಟ್ಟೆಯಲ್ಲೇ ನಮಗೆ ಕಟ್ಟಲಾಗದು ಬೇಲಿ. ರಾತ್ರಿಗಳನ್ನು ಒಣಗಿಸಿಬಿಡುತ್ತದೆ ಹಸಿವು. ದಾಹ ತೀರಿಸದು ನಮ್ಮ ಕಣ್ಣೀರು. ಧಾರ್ಮಿಕ ಸಂಗೀತಕ್ಕೆ ರಣಗೀತೆಯ ರಾಗ ದೊರೆತಾಗ ಫಲವಂತಿಕೆಯಲ್ಲೂ ಬೆಳೆಯುತ್ತದೆ ಬರಗಾಲ. ಮಕ್ಕಳು ತಾಯಿಎದೆಯಿಂದ ರಕ್ತ ಹೀರತೊಡಗುತ್ತಾರೆ. ಮುಖಗಳ ಮೇಲೆ ಯಾರೂ ಬಾವುಟಗಳನ್ನು ತೊಡುವುದಿಲ್ಲ, ಸ್ವಾತಂತ್ರ್ಯದಿನದಂದು ಜನ ತಮ್ಮ ಸಂತೋಷವನ್ನು ಸುಡುತ್ತಾರೆ, ನಕ್ಷತ್ರಕಡ್ಡಿಯನ್ನಲ್ಲ. ಸಿಪಾಯಿಗಳು ಹೊಲ ನಾಶಮಾಡುವ ಯಂತ್ರಗಳೆಂಬ ಹಾಡನ್ನು ಸೇನೆಯು ಎಂದೂ ಗುಣುಗುಣಿಸುವುದಿಲ್ಲ. ಹೂವುಗಳು ನವವಧುವಿನ ಹೆರಳಲ್ಲಿ ಮತ್ತು ಮಕ್ಕಳ ಸಮವಸ್ತ್ರಗಳ ಮೇಲೆ ಮಾತ್ರ ಭೂಷಣವಾಗುತ್ತವೆಯೇ? ಗಡಿಗಳ ರೇಖೆಗಳನ್ನು ಗುರುತಿಸಲು ಮುಳ್ಳುತಂತಿಯ ಬದಲು ಹೂಗಿಡಗಳ ಸಾಲನ್ನು ಕಟ್ಟಲಾಗದೆ?