ಪೋಸ್ಟ್‌ಗಳು

Oscar Wilde ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಶಿಷ್ಯ (ಕವಿತೆ)

ಇಮೇಜ್
ಮೂಲ: ಆಸ್ಕರ್ ವೈಲ್ಡ್ ಅನುವಾದ: ಸಿ.ಪಿ. ರವಿಕುಮಾರ್ ನಾರ್ಸಿಸಸ್ ಸತ್ತಾಗ ಅವನ ಅಚ್ಚುಮೆಚ್ಚಿನ ಸಿಹಿನೀರಿನ ಕೊಳ ಉಪ್ಪು ಕಣ್ಣೀರಿನ ಮಡುವಾಗಿಹೋಯ್ತು. ಕೇಳಿದಾಗ ಈ ಸಂಗತಿ ಗಿರಿಕಿನ್ನರಿಯರು ಹಾರಿ ಬಂದು ನಿಜಕ್ಕೂ ಸಿಹಿನೀರಿನ ಕೊಳ ಉಪ್ಪು ಕಣ್ಣೀರ ಮಡುವಾಗಿದ್ದು ಕಂಡು ಸಂತೈಸಿದರು ತಮ್ಮ ನೀಳ ಹಸಿರುಕೇಶವನ್ನು ಇಳಿಬಿಟ್ಟು ಕೊಳದೊಳಗೆ. ನಿನ್ನ ದುಃಖ ನನಗೆ ಅರ್ಥವಾಗುತ್ತದೆ! ನಾರ್ಸಿಸಸ್‌ನಂಥ ಚೆಲುವನಿರಲಿಲ್ಲ ಬೇರೊಬ್ಬ! ಕುತೂಹಲದಿಂದ ಕೇಳಿತು ಕೊಳ: ನಾರ್ಸಿಸಸ್ ಚೆಲುವನಾಗಿದ್ದನೇ? ನಿನಗಿಂತಲೂ ಚೆನ್ನಾಗಿ ಬಲ್ಲವರಾರು ಈ ವಿಷಯ? ನಿನ್ನ ಮೊಗದ ಕನ್ನಡಿಯಲ್ಲಿ ಅವನು ನೋಡಿಕೊಳ್ಳುತ್ತಿರಲಿಲ್ಲವೇ ತನ್ನ ಮುಖ! ಕೊಳವು ಉತ್ತರಿಸಿತು: ಹೌದೇ! ಅವನು ಬಾಗಿ ನೋಡಿದಾಗ ಅವನ ಕಣ್ಣಲ್ಲಿ ನಾನು ನನ್ನ ಸೌಂದರ್ಯವನ್ನು ನೋಡಿ ಹಿಗ್ಗುತ್ತಿದ್ದೆ.

ಶ್ರೀಮಂತ ರೂಪದರ್ಶಿ - ೩

ಇಮೇಜ್
ಮೂಲ ಇಂಗ್ಲಿಷ್ ಕಥೆ - ಆಸ್ಕರ್ ವೈಲ್ಡ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್  ( ಎರಡನೇ ಭಾಗವನ್ನು ಇಲ್ಲಿ ನೋಡಿ ) ಭಾಗ - ೩ "ಚಿಂದಿಯಾಗಿದ್ದರೇನು, ಅದೇ ಚೆನ್ನಾಗಿ ಒಪ್ಪುತ್ತಿತ್ತು! ನಾನೇನು ಹೊಸ ಉಡುಪು ಹಾಕಿಸಿ ಚಿತ್ರ ಬರೆಯಬೇಕಾಗಿತ್ತೇ! ನೀನು ಯಾವುದನ್ನು ಚಿಂದಿ ಅಂತ ಕರೀತೀಯೋ ಅದನ್ನು ನಾನು ಭಾವತೀವ್ರತೆ ಅಂತ ಕರೆಯುತ್ತೇನೆ. ನಿನಗೆ ಯಾವುದು ಬಡತನ ಅಂತ ಕಾಣಿಸುತ್ತೋ ಅದು ನನ್ನ ಕಣ್ಣಿಗೆ ಕಲೆ ಎಂದು ತೋರುತ್ತದೆ. ಇರಲಿ, ನೀನು ನಿನ್ನ ಹಳೆಯ ಬಟ್ಟೆ ಕೊಡಲು ಸಿದ್ಧನಾಗಿದ್ದೀಯ ಅಂತ ಸುದ್ದಿ ಮುಟ್ಟಿಸುತ್ತೇನೆ, ಬಿಡು," ಎಂದು ಟ್ರೆವರ್ ನುಡಿದ.  "ನೀವು ಕಲಾವಿದರು ಹೃದಯಹೀನರು!" ಎಂದು ಹ್ಯೂಯಿ ಗಂಭೀರವಾದ.  "ಒಬ್ಬ ಕಲಾವಿದನ ಹೃದಯ ಅವನ ತಲೆಯಲ್ಲಿ ಇರುತ್ತೆ. ನಮ್ಮ ಕೆಲಸ ಏನಿದ್ದರೂ ಜಗತ್ತನ್ನು ಇದ್ದ ಹಾಗೆ ತೋರಿಸುವುದೇ ಹೊರತು ಅದನ್ನು ತಿದ್ದುವುದಲ್ಲ. ಚಪ್ಪಲಿ ಹೊಲಿಯುವವನು ಚಪ್ಪಲಿ ಹೊಲಿಯಬೇಕು ಅಂತ ಗಾದೆ ಇಲ್ಲವೇ? ಅಂದಹಾಗೆ  ಲಾರಾ ಹೇಗಿದ್ದಾಳೆ? ನಮ್ಮ ರೂಪದರ್ಶಿಗೆ  ಅವಳ ವಿಷಯದಲ್ಲಿ ತುಂಬಾ ಕುತೂಹಲ ಇದ್ದಂತೆ ತೋರಿತು." "ನೀನು ಅವನಿಗೆ ಲಾರಾ ವಿಷಯ  ಯಾಕೆ  ಹೇಳೋದಕ್ಕೆ ಹೋದೆ?" ಎಂದು ಹ್ಯೂಯಿ ನಸುಮುನಿಸು ತೋರಿದ.  "ಲಾರಾ ವಿಷಯ ಅಷ್ಟೇ ಅಲ್ಲ, ನಮ್ಮ ಕರ್ನಲ್ ಸಾಹೇಬರು ಮತ್ತು ಹತ್ತು ಸಾವಿರ ಪೌಂಡ್ ವಿಷಯ ಕೂಡಾ ಹೇಳಿದ್ದೇನೆ." "ನನ್...

ಶ್ರೀಮಂತ ರೂಪದರ್ಶಿ -೨

ಇಮೇಜ್
ಮೂಲ ಇಂಗ್ಲಿಷ್ ಕತೆ - ಆಸ್ಕರ್ ವೈಲ್ಡ್ ಕನ್ನಡ ಅನುವಾದ - ಸಿ ಪಿ ರವಿಕುಮಾರ್ (ಮೊದಲ ಭಾಗವನ್ನು ಇಲ್ಲಿ ಓದಿ ) ಭಾಗ-೨ ಹ್ಯೂಯಿ ಒಳಗೆ ಬಂದಾಗ ಅವನ ಗೆಳೆಯ ಟ್ರೆವರ್ ತಾನು ಆಗತಾನೇ ಪೂರೈಸಿದ್ದ ಒಬ್ಬ ಭಿಕ್ಷುಕನ ಚಿತ್ರಕ್ಕೆ ಕುಂಚದಿಂದ ಕೊನೆಯ ಗೆರೆಗಳನ್ನು ಬರೆಯುತ್ತಿದ್ದ.  ನಿಜಗಾತ್ರದ ಚಿತ್ರ ಅದ್ಭುತವಾಗಿ ಮೂಡಿ ಬಂದಿತ್ತು.  ಚಿತ್ರಕ್ಕೆ ರೂಪದರ್ಶಿಯಾದ ಭಿಕ್ಷುಕ ಸ್ಟೂಡಿಯೋದಲ್ಲಿ ಒಂದು ಮೂಲೆಯಲ್ಲಿ ಸ್ವಲ್ಪ ಎತ್ತರವಾದ ಪೀಠದ ಮೇಲೆ ನಿಂತಿದ್ದ. ಸುಕ್ಕುಗಟ್ಟಿದ ಅವನ ಮುಖದಲ್ಲಿ ನೋಡಿದರೆ ಅಯ್ಯೋ ಎನ್ನಿಸುವ ದೈನ್ಯಭಾವವಿತ್ತು.  ಅವನು ಧರಿಸಿದ್ದ ಕೋಟು ಎಲ್ಲಾ ಕಡೆ ಹರಿದು ಜೂಲುಜೂಲಾಗಿತ್ತು. ಅವನ ಬೂಟುಗಳಿಗೆ ಹಲವಾರು ಕಡೆ ತೇಪೆ ಹಾಕಿತ್ತು.  ಒಂದು ಕೈಯಲ್ಲಿ ಒಂದು ಮರದ ಕೋಲು ಹಿಡಿದು ಬಗ್ಗಿ ನಿಂತಿದ್ದ. ಮುಂದೆ ಚಾಚಿದ ಇನ್ನೊಂದು ಕೈಯಲ್ಲಿ ಟೋಪಿ ಹಿಡಿದು ಭಿಕ್ಷೆ ಬೇಡಲು ಸನ್ನದ್ಧನಾಗಿ ನಿಂತಿದ್ದ.  "ಅಬ್ಬಾ! ಎಂಥ ಅದ್ಭುತವಾದ ರೂಪದರ್ಶಿಯನ್ನು ಹಿಡಿದು ತಂದಿದ್ದೀಯಾ!" ಎಂದು ಹ್ಯೂಯಿ ಸಿಳ್ಳೆ ಹಾಕುತ್ತಾ ಸ್ನೇಹಿತನ ಕೈ ಕುಲುಕಿದ.  "ಅದ್ಭುತ ರೂಪದರ್ಶಿ ಅಂದೆಯಾ? ನಿಜವೇ! ಇವನಂತಹ ಭಿಕ್ಷುಕರು ಹುಡುಕಿದರೂ ಸಿಕ್ಕೋದಿಲ್ಲ! ನನ್ನ ಅದೃಷ್ಟ ಚೆನ್ನಾಗಿತ್ತು.  ರೆಂಮ್ಬ್ರಾಂಗೆ ಇವನು ಸಿಕ್ಕಿದ್ದರೆ ಎಂಥ ಅದ್ಭುತ ಕೆತ್ತನೆ ಮಾಡಿರುತ್ತಿದ್ದನೋ!" ಎಂದು ಟ್ರೆವರ್ ದೊಡ್ಡ ದನಿಯಲ್ಲಿ ಉತ್...

ಶ್ರೀಮಂತ ರೂಪದರ್ಶಿ - 1

ಇಮೇಜ್
  ಮೂಲ ಇಂಗ್ಲಿಷ್ ಕತೆ -  ಆಸ್ಕರ್ ವೈಲ್ಡ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್  ಕೈಯಲ್ಲಿ ದುಡ್ಡಿಲ್ಲದಿದ್ದರೆ ನೋಡಲು ಚೆನ್ನಾಗಿದ್ದರೇನು ಬಂತು? ಪ್ರೀತಿ-ಪ್ರೇಮ ಎಲ್ಲವೂ ದುಡ್ಡಿದ್ದವರಿಗೆ ಸರಿ; ಕೆಲಸ-ಬೊಗಸವಿಲ್ಲದವರಿಗೆ ಇದೆಲ್ಲಾ ಕಟ್ಟಿಕೊಂಡು ಏನಾಗಬೇಕಿದೆ? ಬಡವಾ ನೀನು ಮಡಗಿದಲ್ಲಿರು ಅಂತ ಸುಮ್ಮನೆ ಹೇಳುತ್ತಾರೆಯೇ? ಆಹಾ ಇವನೆಷ್ಟು ಚೆಲುವ ಎಂದು ಜನ ಹೊಗಳುವಷ್ಟು ಆಕರ್ಷಕವಾಗಿರುವ ಬದಲು ತಿಂಗಳಿಗೆ ಒಂದಿಷ್ಟು ಆದಾಯವಿರುವುದು ಎಷ್ಟೋ ಮೇಲು. ಆಧುನಿಕ ಜೀವನದ ಇಂತಹ ಮಹಾನ್ ಸತ್ಯಗಳನ್ನು ಹ್ಯೂಯಿ ಎರ್ಸ್ಕಿನ್ ಅರಿತುಕೊಂಡಿರಲಿಲ್ಲ.  ಹ್ಯೂಯಿ ಒಬ್ಬ ಪಾಪದ ಪ್ರಾಣಿ! ಓದು-ಬರಹ ಅಷ್ಟೇನೂ ತಲೆಗೆ ಹತ್ತಲಿಲ್ಲ. ಒಳ್ಳೆಯದಾಗಲಿ, ಕೆಟ್ಟದ್ದಾಗಲಿ ಹೇಳಿಕೊಳ್ಳುವಂಥ ಸಾಧನೆಯನ್ನೇನೂ ಅವನು ಮಾಡಲಿಲ್ಲ. ಆದರೆ ದೇವರು ಅವನಿಗೆ ರೂಪವನ್ನು ಧಾರಾಳವಾಗಿ ಸುರಿದು ಕಳಿಸಿದ್ದಾನೆ. ಗರಿಗರಿಯಾದ ಕಂದು ಬಣ್ಣದ ತಲೆಗೂದಲು. ಕಡೆದಂಥ ಮಾಟದ ಶರೀರ. ಬೂದಿ ಬಣ್ಣದ ಕಣ್ಣುಗಳು. ಹೆಂಗಸರು-ಗಂಡಸರು ಎನ್ನದೆ ಎಲ್ಲರ ನಡುವೆಯೂ ಅವನು ಜನಪ್ರಿಯ ವ್ಯಕ್ತಿ.  ಅವನ ತಂದೆ ಅವನಿಗೆ ಅಂಥ ಆಸ್ತಿಯನ್ನೇನು ಬಿಟ್ಟು ಹೋಗಿರಲಿಲ್ಲ - ಯುದ್ಧದಲ್ಲಿ ಬಳಸಿದ ಒಂದು ಖಡ್ಗ ಮತ್ತು ದ್ವೀಪ ಭೂಖಂಡ ಯುದ್ಧದ ಸುದೀರ್ಘ ಇತಿಹಾಸದ ಹದಿನೈದು ಸಂಪುಟಗಳನ್ನು  ಬಿಟ್ಟರೆ! ಕತ್ತಿಯನ್ನು ಹ್ಯೂಯಿ ಮನೆಯ...