ಪೋಸ್ಟ್‌ಗಳು

Separation ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಷ್ಟವೆನ್ನಿಸಿದರೂ ಬೀಳ್ಕೊಡು

ಇಮೇಜ್
ಕಷ್ಟವೆನ್ನಿಸಿದರೂ ಬೀಳ್ಕೊಡು  ಮೂಲ: ಕ್ರಿಸ್ಟಿನಾ ರೊಸೆಟ್ಟಿ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನನ್ನ ದಾರಿಯ ಕೊನೆಗೆ ತಲುಪಿದಾಗ ನಾನು ಮುಳುಗಿದಾಗ ನನ್ನ ಬಾಳಿನ ಮೇಲೆ ಭಾನು ದುಗುಡ ತುಂಬಿದ ಕೋಣೆಯಲ್ಲಿ ಸಲ್ಲಿಸದಿರಾವ ವಿಧಿವಿಧಾನ ಆತ್ಮವೊಂದು ಮುಕ್ತವಾಗಿದ್ದಕ್ಕೆ ಏತಕ್ಕೆ ರೋದನ? ನಿನ್ನ ಅನುಭವಕ್ಕೆ ಬರಲಿ ನನ್ನ ಅನುಪಸ್ಥಿತಿ, ಆದರೆ ಸ್ವಲ್ಪ ದಿನ ಮಾತ್ರ, ಅದೂ ಹಾಕದೇ ಅಳುಮೋರೆ. ನಮ್ಮನ್ನು ಬಂಧಿಸಿದ್ದ ಪ್ರೀತಿಯನ್ನು ನೆನೆದು ಕಷ್ಟವೆನ್ನಿಸಿದರೂ ನನ್ನನ್ನು ಬೀಳ್ಕೊಡು  ಏಕೆಂದರೆ ಇದು ಎಲ್ಲರೂ ಕೈಗೊಳ್ಳಲೇಬೇಕಾದ ಪಯಣ ಮತ್ತು ಎಲ್ಲರೂ ಒಬ್ಬಂಟಿಯಾಗೇ ಕೈಗೊಳ್ಳಬೇಕು ಇದನ್ನ ಇದೆಲ್ಲವೂ ಪೂರ್ವಯೋಜನೆಯ ಒಂದು ಅಂಗ ಮನೆಯತ್ತ ಮತ್ತೊಂದು ಹೆಜ್ಜೆ ಹಾಕುವ ಪ್ರಸಂಗ ತಾಳಿಕೊಳ್ಳಲಾರದಷ್ಟು ಹೃದಯವಾದರೆ ಭಾರ ತೆಗೆದುಕೋ ನಮ್ಮ ಸ್ನೇಹಿತರ ಆಧಾರ ನಮ್ಮ ಹುಚ್ಚುತನವನ್ನೆಲ್ಲಾ ನೆನೆದು ನಕ್ಕು ಕಷ್ಟವೆನ್ನಿಸಿದರೂ ಬಿಡಿಸು ಬಂಧನದ ಸಿಕ್ಕು.

ನಾನಿರುವುದಿಲ್ಲ ಎಂಬ ಭೀತಿ

ಇಮೇಜ್
ಮೂಲ: ಜಾನ್ ಕೀಟ್ಸ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನಾನಿರುವುದಿಲ್ಲ ಮುಂದೊಂದು ದಿನ, ಅದಕ್ಕೆ ಮೊದಲೇ ಜೇನುನೊಣದಂತೆ ಹೀರಿಕೊಂಡು ನನ್ನ ಲೇಖನಿಯು ಮಾನಸೋದ್ಯಾನದ ಅಸಂಖ್ಯ ಕಲ್ಪನಾಪುಷ್ಪಗಳ ಮಧುವನ್ನು ಘನೀಕರಿಸದಿದ್ದರೆ ಅಕ್ಷರರೂಪ ಗ್ರಂಥಮಾಲೆಯಲ್ಲಿ , ಎಂದು ಧೇನಿಸಿ ಭೀತಗೊಳ್ಳುವೆನು. ನೋಡಿದಾಗ ಆಗಸದ ಕಡೆಗೆ ಕಾಣಿಸಿ ನಕ್ಷತ್ರಪುಂಜದಲ್ಲಿ ಯಾವುದೋ ಪ್ರೇಮಕಥನವು ಬಾನಲ್ಲಿ, ನಿಡುಸುಯ್ಯುವೆನು ಅದರ  ನೆರಳನ್ನಾದರೂ ನಾನಿಲ್ಲಿ ಗ್ರಹಿಸಿಡಲು ಬಿಡುವುದೇ ವಿಧಿಯ ಮಾಯಾಹಸ್ತ! ನಿನ್ನ ಮೊಗದ ಚೆಲುವನ್ನು ನೋಡುತ್ತಾ ದುಃಖಿಸುವೆ ಮತ್ತೆ ಇನ್ನೆಂದೂ ಕಾಣಲು ಸಿಕ್ಕದೆಂದು;  ದೊರೆಯದು ನನಗೆ ಇನ್ನೆಂದೂ ಭಾವನಾತೀತ, ನಿಷ್ಕಲ್ಮಶ ಪ್ರೇಮದ ಸುಖ; ಕಣ್ಣಾಡಿಸಿ ನೋಡುತ್ತೇನೆ ಜಗತ್ತಿನ ಕಿನಾರೆಯಲ್ಲಿ ನಿಂತು: ಎಲ್ಲಿಯವರೆಗೆ ನಿಂತಿರುತ್ತೇನೆ ಇಲ್ಲಿ ನಾನೆಂದರೆ ಯಾವ ಘಳಿಗೆ ಮುಳುಗುವುವೋ ಕೀರ್ತಿ ಮತ್ತು ಪ್ರೇಮ ಶೂನ್ಯದೊಳಗೆ.

ಮುಗುಳ್ನಕ್ಕು ಅದೆಷ್ಟು ಕಾಲವಾಯ್ತೆಂದು

ಇಮೇಜ್
ಮೂಲ ಉರ್ದೂ : ಕೈಫಿ ಆಜ್ಮಿ ಕನ್ನಡಕ್ಕೆ : ಸಿ. ಪಿ. ರವಿಕುಮಾರ್ ಮುಗುಳ್ನಕ್ಕು ಅದೆಷ್ಟು ಕಾಲವಾಯ್ತೆಂದು ನೆನಪಾದಾಗ ಕಣ್ಣಲ್ಲಿ ಕೂಡಿದವು ಬಿಂದು ಅವರ ಸಂಗ ಬಿಟ್ಟು ಬಂದದ್ದು ನಿಜವಾದರೂ ತಿರುಗಿ ನೋಡಿದೆ ಅತ್ತ ಪ್ರತಿಯೊಂದು ಹೆಜ್ಜೆಗೂ ಒಂದು ನೋವಾಗಿ ಉಳಿದುಕೊಂಡಿತು ಬಾಳು  ನೋವನ್ನು ಎದೆಯಲ್ಲಿ ಬಚ್ಚಿಟ್ಟು ಬಚ್ಚಿಟ್ಟು ಹರಿಯುತ್ತಿವೆ ಹೃದಯದ ನಾಜೂಕು ಎಳೆಗಳು ಇಷ್ಟೊಂದು ಯಾರೂ ನೆನಪಾಗಕೂಡದು

ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ

ಇಮೇಜ್
ಮೂಲ ಹಿಂದಿ ಕವಿತೆ - ಮಧು  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ ಕಣ್ಣೀರನ್ನು ಬಚ್ಚಿಟ್ಟುಕೊಂಡು ಬೇರೆಡೆಗೆ ನೋಡುತ್ತಾ ಸಪ್ಪಗೆ ಹೀಗೆ ನಗಬೇಡ ಅಪ್ಪಾ ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ ಮನೆಯ ದೀಪಗಳನ್ನು ಹುಷಾರಾಗಿ ಆರಿಸುವೆ ಬೇಕಾದ ವಸ್ತುಗಳನ್ನೂ ಬೇಡವೆಂದು ಸಾಧಿಸುವೆ ಪದೇಪದೇ ಗಾಡಿಯ ಮೈಲೇಜು ಚೆಕ್ ಮಾಡುವ ಅಪ್ಪಾ ನನ್ನ ಕೈಯಲ್ಲಿ ಎಟಿಎಂ ಕಾರ್ಡು ಇಡಬೇಡ ಅಪ್ಪಾ ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ ನೀರಿನ ಬಾಟಲ್ ಇಟ್ಟುಕೊಂಡೆಯೋ ಇಲ್ಲವೋ ಟಿಕೆಟ್ ಇದೆಯೋ ಇಲ್ಲವೋ ಮತ್ತೊಮ್ಮೆ ನೋಡಿಕೋ ಇಟ್ಟುಕೊಂಡಿದ್ದೀ ತಾನೇ ಪರ್ಸಿನಲ್ಲಿ ಚಿಲ್ಲರೆ? ನಿನ್ನ ಒದ್ದೆ ಪ್ರೀತಿಯನ್ನು ಸುರಿಸದಿರು ಅಪ್ಪಾ ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ ಚೀಲವನ್ನು ನೂಕುತ್ತಾ ಸೀಟಿನ ಕೆಳಗೆ ಒಂದು ಕಣ್ಣಿಟ್ಟಿರಿ ಹೊರಟಿದ್ದಾಳೆ ಒಬ್ಬಾಕೆ ಎಂದು ಬೇಡುತ್ತಾ ಎದುರು ಸೀಟಿನ ಹೆಂಗಸಿಗೆ ಸುಮ್ಮನೆ ಕಾಳಜಿ ಮಾಡಿಕೊಳ್ಳಬೇಡಪ್ಪಾ ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ ಮುಟ್ಟಿದ ಕೂಡಲೇ ಫೋನ್ ಮಾಡು ಆಯಿತಾ? ಇನ್ನು ಯಾವಾಗಲೋ ಮತ್ತೆ ಈಕಡೆಗೆ ಪಯಣ? ನೀನಿಲ್ಲದೆ ಇನ್ನು ಮನೆಯೆಲ್ಲ ಭಣಭಣ  ಎನ್ನುತ್ತಾ ತಲೆಯ ಮೇಲೆ ಕೈ ಇಡಬೇಡ ಅಪ್ಪಾ ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ ಮೌನಿಯಾಗುವೆನು ಏನು ಹೇಳಲೂ ತೋರದೆ ಎದೆತುಂಬಿ ನನ್ನನ್ನು ಅಪ್ಪಿಕೊಳ...