ಪೋಸ್ಟ್‌ಗಳು

ಅತಿಸಣ್ಣಕತೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಗ್ಯಾಲರಿ (ಅತಿಸಣ್ಣಕತೆ)

ಇಮೇಜ್
ಸ್ವಾಮೀಜಿ ಬಹಳ ಬೇಸರ ಮಾಡಿಕೊಂಡಿದ್ದರು. "ಯಾಕೆ ಸ್ವಾಮೀಜಿ? ಏನಾಯಿತು?" ಎಂದು ಶಿಷ್ಯರು ಪ್ರಶ್ನಿಸಿದರು. ಸ್ವಾಮೀಜಿ ಅವರ ಕಡೆಗೆ ಬೇಸರದಿಂದ ನೋಡಿದರೇ ಹೊರತು ಮಾತಾಡಲಿಲ್ಲ. ಕೊನೆಗೂ ಒಬ್ಬ ಜಾಣ ಅವರ ಬೇಸರದ ಕಾರಣವನ್ನು ಹುಡುಕಿಯೇ ಬಿಟ್ಟ. ಸ್ವಾಮೀಜಿ ತೆರೆಯಬೇಕೆಂದು ಉದ್ದೇಶಿಸಿದ್ದ ದೇವರ ಚಿತ್ರಪಟಗಳ ಗ್ಯಾಲರಿಗೆ ಅವರು "ಡಿವೈನ್ ಗ್ಯಾಲರಿ" ಎಂದು ಹೆಸರಿಡಲು ಇಚ್ಛಿಸಿದ್ದರು. ಅಂದೇ ಬೆಳಗ್ಗೆ ಶಿಷ್ಯರು ಸೇರಿ ಬೋರ್ಡ್ ಬರೆಸಿ ತಾವೇ ಖುದ್ದಾಗಿ ನಿಂತು ಅದನ್ನು ಏರಿಸಿ ಬಂದಿದ್ದರು. ತಮ್ಮ ಕೆಲಸಕ್ಕೆ ಸ್ವಾಮೀಜಿ ಸಂತುಷ್ಟರಾಗಿ ಏನಾದರೂ ಬಹುಮಾನ ನೀಡಬಹುದು ಎಂದು ಕಾಯುತ್ತಿದ್ದರು. ಸ್ವಾಮೀಜಿ ಬಂದರು. ಬೋರ್ಡ್ ನೋಡಿದರು. ತುಂಬಾ ಆಘಾತವಾದವರಂತೆ ಕಂಡರು. ಸ್ವಾಮೀಜಿಯನ್ನು ಏನು ಕೇಳಿದರೂ ಮೌನ. ಕೊನೆಗೂ ಸ್ವಾಮೀಜಿಯವರ ದುಃಖದ ಕಾರಣ ಬೆಳಕಿಗೆ ಬಂತು. ಅವರ ಚಿತ್ರಪಟ ಗ್ಯಾಲರಿಗೆ ಹಾಕಿದ ಬೋರ್ಡಿನ ಮೇಲೆ ದೊಡ್ಡ ಅಕ್ಷರಗಳಲ್ಲಿ "ದಿ ವೈನ್ ಗ್ಯಾಲರಿ" ಎಂದು ಬರೆಯಲಾಗಿತ್ತು.

ಅಶ್ವತ್ಥ ಮತ್ತು ಅಸ್ವಸ್ಥ (ಒಂದು ಅತಿಸಣ್ಣಕತೆ)

ಇಮೇಜ್
"ಅಶ್ವತ್ಥ ಮರಕ್ಕೆ ಐದು ರಂಧ್ರ ಕೊರೆದು ವಿಷ ತುಂಬಿದರಂತೆ." ಎಂದು ಮೂಕಜ್ಜಿ ಪೇಪರ್ ಓದಿ ಹೇಳಿದಳು. "ಅಯ್ಯೋ! ಯಾಕಂತೆ?" ಎಂದು ಮೊಮ್ಮಗ ಸುಬ್ಬರಾಯ ಕೇಳಿದ. "ಅದನ್ನು ಬೀಳಿಸುವ ಪ್ರಯತ್ನ. ಒಳಗಿಂದ ಒಳಗೇ ನಾಶವಾಗಿ ಒಣಗಿಹೋದಾಗ ಅದನ್ನು ಬೀಳಿಸಬಹುದು." "ಯಾಕೆ?" "ಕೆಲವರಿಗೆ ಅದರ ಕಟ್ಟಿಗೆಯ ಮೇಲೆ ಕಣ್ಣು. ಕೆಲವರಿಗೆ ಅದು ಬೆಳೆದ ಸ್ಥಳದ ಮೇಲೆ ಕಣ್ಣು. ಕೆಲವರಿಗೆ ಅವರಿಗೇ ಅರ್ಥವಾಗದ ಅಸಹನೆ. ಕೆಲವರಿಗೆ ಯಾವುದೋ ಹಳೆಯ ಸೇಡು. ಕೆಲವರಿಗೆ ಅದರಲ್ಲಿ ನೆಲೆಸಿರುವ ಮಂಗಗಳನ್ನು ಓಡಿಸುವ ಹುಮ್ಮಸ್ಸು." "ಆಯಿತಲ್ಲ, ಈ ಐದು ವಿಷಗಳೇ ಸಾಕಿತ್ತು." "ಇಲ್ಲ, ಸುಬ್ಬ. ಅಶ್ವತ್ಥದ ಮರ ಹಾಗೆಲ್ಲಾ ಸಾಯುವುದಿಲ್ಲ. ನೀನು ನೋಡಿರಬಹುದು. ಅದು ಅಸಾಧ್ಯವೆನ್ನಿಸುವ ಕಡೆಯಲ್ಲೂ ಕುಡಿಯೊಡೆಯುತ್ತದೆ. ಕಟ್ಟಡದ ಆರನೇ ಮಹಡಿಯ ಗೋಡೆಯಲ್ಲೂ ಬೆಳೆಯಲು ಹವಣಿಸುತ್ತದೆ. ಇವರಿಗೆ ಅದನ್ನು ಕೊಲ್ಲುವ ಒತ್ತಾಸೆ ಎಷ್ಟಿದೆಯೋ ಅದರ ಎರಡು ಪಟ್ಟು ಬದುಕುವ ಆಸೆ ಅಶ್ವತ್ಥದ ಮರಕ್ಕಿದೆ. ಅದು ನೂರಾರು ಕಾಲ ಬದುಕುತ್ತದಂತೆ. ಅಶ್ವತ್ಥದ ಮರದ ಕೆಳಗೆ ಹಗಲಲ್ಲಿ ಕುಳಿತರೆ ನಿನಗೆ ಆಕ್ಸಿಜನ್ ಸಿಕ್ಕುತ್ತದೆ. ನಿನ್ನ ಮನಸ್ಸು ನಿರಾಳವಾಗುತ್ತದೆ. ರಾತ್ರಿ ಅದರ ಕೆಳಗೆ ಮಲಗಿದರೆ ಅಲ್ಲಿ ಆಕ್ಸಿಜನ್ ಸಿಕ್ಕದೆ ಭೂತಪ್ರೇತಗಳೂ ಕಂಡಾವು." "ಇದಕ್ಕೇ ಕೆಲವರು ಈ ಮರದಲ್ಲಿ ಭೂತವಿದೆ ಎ...

ಕಳೆದುಹೋಗಿದೆ

ಸಿ. ಪಿ. ರವಿಕುಮಾರ್  "ಸಮ್ಮೇಳನದ ಗದ್ದಲದಲ್ಲಿ ಕಳೆದುಹೋಗಿದೆ, ದಯವಿಟ್ಟು ಅನೌನ್ಸ್ ಮಾಡಿ" ಎಂದು ಒಬ್ಬರು ಅವಲತ್ತುಕೊಂಡರು. ಸಮ್ಮೇಳನದ ಆಯೋಜಕರು ಎಲ್ಲರಿಗೂ ಊಟದ ವ್ಯವಸ್ಥೆ ಮಾಡುವುದರಲ್ಲಿ "ಬಿಸಿ"ಯಾಗಿದ್ದರು. ಮಂತ್ರಿಗಳು ಆರು ಗಂಟೆ ತಡವಾಗಿ ಬಂದು ಕಾರ್ಯಕ್ರಮಗಲೆಲ್ಲಾ ಆಕ್ರಮಗಳಾಗಿಹೋಗಿದ್ದವು. ಮಂತ್ರಿಗಳ ಭಾಷಣದ ನಡುವೆ ಒಂದು ಗುಂಪು ಘೋಷಣೆ ಕೂಗಿದ್ದು ಆಭಾಸಕ್ಕೆ ಎಡೆಮಾಡಿಕೊಟ್ಟಿತ್ತು. ಮೊದಲೇ ಮಂತ್ರಿಗಳು ತಮ್ಮ ಹೆಸರು ಆರನೇ ಸಾಲಿನಲ್ಲಿ ಬಂದಿದೆ ಅಂತ "ಗರಂ" ಆಗಿದ್ದರು. ಅವರಿಗಾಗಿ ಆಮಂತ್ರಣ ಪತ್ರಿಕೆ, ಬ್ಯಾನರ್ ಎಲ್ಲವನ್ನೂ ಮರುಮುದ್ರಣ ಮಾಡಿ ಬಜೆಟ್ ಗೋತಾ ಹೊಡೆದಿತ್ತು. ಇಷ್ಟೆಲ್ಲಾ ಗೊಂದಲದ ನಡುವೆ ಸುಸ್ತಾದರೂ  ಮರುದಿನ ಪತ್ರಿಕೆಗಳಿಗಾಗಿ ಊಟದ ವ್ಯವಸ್ಥೆಗಳ ಫೋಟೋ ತೆಗೆಸುತ್ತಿದ್ದರು. ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರಿನ ವ್ಯವಸ್ಥೆ ಇದ್ದುದನ್ನು ನೋಡಿ ಜನ ಮೆಚ್ಚುಗೆಯಿಂದ ತಲೆದೂಗುತ್ತಿದ್ದರು. "ಸರ್ ದಯವಿಟ್ಟು ಅನೌನ್ಸ್ ಮಾಡಿ!" ಎಂದು ಬಂದವರು ಮತ್ತೊಮ್ಮೆ ಕೈಮುಗಿದು ಕೇಳಿಕೊಂಡರು. ಆಯೋಜಕರು ಸಿಡಿಮಿಡಿಗೊಂಡರು. ಆದರೂ ಪತ್ರಕರ್ತರು ಅಲ್ಲೇ ಓಡಾಡುತ್ತಾ ಇದ್ದುದರಿಂದ ಸಂಭಾಳಿಸಿಕೊಂಡು "ಆಗಲಿ, ಅನೌನ್ಸ್ ಮಾಡೋಣ. ಏನು ಕಳೆದುಹೋದವರ ಹೆಸರು?" ಎಂದರು. "ಕಳೆದುಹೋದವರು ಅಲ್ಲ, ಕಳೆದುಹೋದದ್ದು." "ಅಯ್ಯೋ ಕಳೆದುಹೋದದ್ದು ...