ಪೋಸ್ಟ್‌ಗಳು

ದಿಢೀರ್ ಕಥೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಳೆದುಹೋಗಿದೆ

ಸಿ. ಪಿ. ರವಿಕುಮಾರ್  "ಸಮ್ಮೇಳನದ ಗದ್ದಲದಲ್ಲಿ ಕಳೆದುಹೋಗಿದೆ, ದಯವಿಟ್ಟು ಅನೌನ್ಸ್ ಮಾಡಿ" ಎಂದು ಒಬ್ಬರು ಅವಲತ್ತುಕೊಂಡರು. ಸಮ್ಮೇಳನದ ಆಯೋಜಕರು ಎಲ್ಲರಿಗೂ ಊಟದ ವ್ಯವಸ್ಥೆ ಮಾಡುವುದರಲ್ಲಿ "ಬಿಸಿ"ಯಾಗಿದ್ದರು. ಮಂತ್ರಿಗಳು ಆರು ಗಂಟೆ ತಡವಾಗಿ ಬಂದು ಕಾರ್ಯಕ್ರಮಗಲೆಲ್ಲಾ ಆಕ್ರಮಗಳಾಗಿಹೋಗಿದ್ದವು. ಮಂತ್ರಿಗಳ ಭಾಷಣದ ನಡುವೆ ಒಂದು ಗುಂಪು ಘೋಷಣೆ ಕೂಗಿದ್ದು ಆಭಾಸಕ್ಕೆ ಎಡೆಮಾಡಿಕೊಟ್ಟಿತ್ತು. ಮೊದಲೇ ಮಂತ್ರಿಗಳು ತಮ್ಮ ಹೆಸರು ಆರನೇ ಸಾಲಿನಲ್ಲಿ ಬಂದಿದೆ ಅಂತ "ಗರಂ" ಆಗಿದ್ದರು. ಅವರಿಗಾಗಿ ಆಮಂತ್ರಣ ಪತ್ರಿಕೆ, ಬ್ಯಾನರ್ ಎಲ್ಲವನ್ನೂ ಮರುಮುದ್ರಣ ಮಾಡಿ ಬಜೆಟ್ ಗೋತಾ ಹೊಡೆದಿತ್ತು. ಇಷ್ಟೆಲ್ಲಾ ಗೊಂದಲದ ನಡುವೆ ಸುಸ್ತಾದರೂ  ಮರುದಿನ ಪತ್ರಿಕೆಗಳಿಗಾಗಿ ಊಟದ ವ್ಯವಸ್ಥೆಗಳ ಫೋಟೋ ತೆಗೆಸುತ್ತಿದ್ದರು. ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರಿನ ವ್ಯವಸ್ಥೆ ಇದ್ದುದನ್ನು ನೋಡಿ ಜನ ಮೆಚ್ಚುಗೆಯಿಂದ ತಲೆದೂಗುತ್ತಿದ್ದರು. "ಸರ್ ದಯವಿಟ್ಟು ಅನೌನ್ಸ್ ಮಾಡಿ!" ಎಂದು ಬಂದವರು ಮತ್ತೊಮ್ಮೆ ಕೈಮುಗಿದು ಕೇಳಿಕೊಂಡರು. ಆಯೋಜಕರು ಸಿಡಿಮಿಡಿಗೊಂಡರು. ಆದರೂ ಪತ್ರಕರ್ತರು ಅಲ್ಲೇ ಓಡಾಡುತ್ತಾ ಇದ್ದುದರಿಂದ ಸಂಭಾಳಿಸಿಕೊಂಡು "ಆಗಲಿ, ಅನೌನ್ಸ್ ಮಾಡೋಣ. ಏನು ಕಳೆದುಹೋದವರ ಹೆಸರು?" ಎಂದರು. "ಕಳೆದುಹೋದವರು ಅಲ್ಲ, ಕಳೆದುಹೋದದ್ದು." "ಅಯ್ಯೋ ಕಳೆದುಹೋದದ್ದು ...

ಮೂರು ಮಿನಿಕಥೆಗಳು

ಸಿ. ಪಿ. ರವಿಕುಮಾರ್  ಮುಕ್ತಾಯ  ಅವರು ಮನೆಯಲ್ಲಿ ಇಂಗ್ಲಿಷ್ ಮಾತಾಡುವುದನ್ನು ರೂಢಿ ಮಾಡಿಕೊಂಡಿದ್ದರು. ಗಂಡ ಮತ್ತು ಹೆಂಡತಿ ಅವತ್ತು ರಜಾ ಆಚರಿಸಲು ಹೊರಗೆ ಹೊರಟಿದ್ದರು. ಗಂಡ ಕಾರಿನಲ್ಲಿ ಕುಳಿತು ಹೆಂಡತಿಗಾಗಿ ಕಾಯುತ್ತಿದ್ದ. ಒಂದೆರಡು ಸಲ ಹಾರ್ನ್ ಮಾಡಿ ಆಕೆಯ ಗಮನ ಸೆಳೆಯಲು ಪ್ರಯತ್ನಿಸಿಯೂ ಆಗಿತ್ತು. ಆಕೆ ತನ್ನ ಶೃಂಗಾರ ಮುಗಿಸಿ ಹೊರಗೆ ಬರುವಾಗ ಗಡಿಬಿಡಿಯಲ್ಲಿ ಮನೆಗೆ ಬೀಗ ಹಾಕುವುದನ್ನೇ ಮರೆತು ಕಾರಿನತ್ತ ಧಾವಿಸುವುದನ್ನು ಕಂಡು ಗಂಡ "ದ ಲಾಕ್" ಎಂದು ಕೂಗಿದ. ಆಕೆ ದಿಗ್ಭ್ರಮೆಯಾದವಳಂತೆ ಏನೂ ತೋರದೆ ಅಲ್ಲೇ ನಿಂತಳು. ಗಿಡಕ್ಕೆ ನೀರು ಹಾಕುತ್ತಿದ್ದ ಪಕ್ಕದ ಮನೆಯವನು ತಲೆಯೆತ್ತಿ ನೋಡಿದ. "ದ ಲಾಕ್! ದಲಾಕ್!" ಎಂದು ಗಂಡ  ಮತ್ತೆರಡು ಬಾರಿ ಕೂಗಿದ. ಕತೆ ಮುಗಿಯಿತು. ಹೆಸರಿನಲ್ಲೇನಿದೆ? "ನಮ್ಮ ಬಾರ್ ಗೆ ಗಿರಾಕಿಗಳೇ ಇಲ್ಲವಲ್ಲ" ಎಂದು ಮಂಜು ಪೇಚಾಡಿದ. "ಯಾಕೆ ಅಂದ್ರೆ ಬೀದಿಗೊಂದು ಮಧುಲೋಕ ಇದೆ," ಎಂದು ಸಂಜು ಸಮಜಾಯಿಷಿ ಹೇಳಿದ. ಗಿರಾಕಿಗಳೇ ಇಲ್ಲದ ಕಾರಣ ಅವರು ತಾವೇ ಕುಡಿಯುತ್ತಾ ಕುಳಿತಿದ್ದರು. "ಏನಾದರೂ ಮಾಡಲೇ ಬೇಕು." "ಹೊಸ ಬಾರ್ ಗಳೆಲ್ಲಾ ನೋಡು, ಹ್ಯಾಗೆ ಚಮಕ್ ಚಮಕ್ ಅಂತ ಹೊಳೆಯುತ್ತಾ ಇವೆ." "ರೀಮಾಡೆಲಿಂಗ್ ಮಾಡಿಸಬೇಕು." "ಒಂದು ಹೊಸಾ ಹೆಸರು ಕೂಡಾ ಇಡಬಹುದು." "ಗ್ರೇಟ್ ಐಡಿಯಾ....