ಪೋಸ್ಟ್‌ಗಳು

Xu Lizhi ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನಿಂತನಿಂತಲ್ಲೇ ನಿದ್ರೆ

ಇಮೇಜ್
ಮೂಲ: ಕ್ಸು ಲಿಷೀ (ಚೈನಾ) ಕನ್ನಡಕ್ಕೆ : ಸಿ. ಪಿ. ರವಿಕುಮಾರ್   ಕಣ್ಣಮುಂದಿನ  ಪೇಲವ ಹಳದಿ ಕಾಗದದ  ಮೇಲೆ  ಸ್ಟೀಲ್ ಕಡ್ಡಿಯಿಂದ  ಕಪ್ಪು ಬಣ್ಣದಲ್ಲಿ ಬರೆಯುತ್ತೇನೆ  ಉದ್ಯೋಗಕ್ಕೆ ಸಂಬಂಧಿಸಿದ  ಪದಗಳನ್ನು: ವರ್ಕ್ ಶಾಪ್, ಅಸೆಂಬ್ಲಿ  ಲೈನ್, ಮಷೀನ್,  ವರ್ಕ್ ಕಾರ್ಡ್, ವೇಜಸ್,  ಓವರ್ ಟೈಮ್, ...  ನನಗೆ ಅವರು ನೀಡಿದ್ದಾರೆ ವಿಧೇಯತೆಯ ತರಬೇತಿ  ಕೂಗಾಡಲು, ಪ್ರತಿಭಟಿಸಲು ನನಗೆ ತಿಳಿಯದು  ದೂರಲು, ಬೇಡವೆನ್ನಲು ಬಾರದು  ಬರುವುದೇನಿದ್ದರೂ ಮೌನವಾಗಿ ಸಹಿಸಿಕೊಳ್ಳುವುದು ಸುಸ್ತನ್ನು  ಈ ಜಾಗಕ್ಕೆ ಮೊದಲಸಲ ಬಂದಾಗ ಪ್ರತಿತಿಂಗಳೂ ಹತ್ತನೇ ತಾರೀಕಿಗಾಗಿ ಹಾತೊರೆಯುತ್ತಿದ್ದೆ  ಪಗಾರದ ಕಂದು ಬಣ್ಣದ ಚೀಟಿಯ ಸಾಂತ್ವನದ ಬದಲಾಗಿ  ನಾನು ಅರೆದು ನುಣುಪು ಮಾಡುತ್ತಿದ್ದೆ  ನನ್ನ ಮತ್ತು ನನ್ನ ಪದಗಳ ಚೂಪುಗಳನ್ನು  ಕೆಲಸಕ್ಕೆ ತಪ್ಪಿಸಿಕೊಳ್ಳಲು ನಿರಾಕರಿಸುತ್ತಿದ್ದೆ  ಅನಾರೋಗ್ಯ ರಜೆಯನ್ನು ನಿರಾಕರಿಸುತ್ತಿದ್ದೆ, ಖಾಸಗೀ ಕೆಲಸಕ್ಕಾಗಿರುವ ರಜೆಯನ್ನು ನಿರಾಕರಿಸುತ್ತಿದ್ದೆ, ತಡವಾಗಿ ಬರಲು ನಿರಾಕರಿಸುತ್ತಿದ್ದೆ,  ಬೇಗ ಹೊರಡಲು ನಿರಾಕರಿಸುತ್ತಿದ್ದೆ.  ಅಸೆಂಬ್ಲಿ ಲೈನ್ ಬದಿಗೆ ನಿಂತಿರುತ್ತಿದ್ದೆ ನಾನು  ನೇರವಾಗಿ ಕಬ್ಬಿಣದ ಸಲಾಕೆಯ ಹಾಗೆ  ಕೈ...

ಕ್ಸು ಲಿಷೀ - ಮೂರು ಕವಿತೆಗಳು

ಇಮೇಜ್
ಮೂಲ: ಕ್ಸು ಲಿಷೀ (ಚೈನೀಸ್)  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಕವಿತೆ ಓದುವ ಮುನ್ನ:   ಫಾಕ್ಸ್ ಕಾನ್ ಕಂಪನಿಯ ಫ್ಯಾಕ್ಟರಿಯಲ್ಲಿ ಕಾರ್ಮಿಕನಾಗಿದ್ದ ಕ್ಸು ಲಿಷೀ (೧೯೯೦-೨೦೧೪) ಎಂಬ ತರುಣ ತನ್ನ ೨೪ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಈತನ ಹಾಗೇ ಶೆನ್ ಜೆನ್ ಪ್ರಾಂತದಲ್ಲಿ ಫಾಕ್ಸ್ ಕಾನ್ ಫ್ಯಾಕ್ಟರಿಗಳಲ್ಲಿ ಅನೇಕ ಕಾರ್ಮಿಕರು ತಮ್ಮ ದುರ್ಭರ ಜೀವನ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಾಗ ಪಾಶ್ಚಿಮಾತ್ಯ ಮಾಧ್ಯಮಗಳ ಗಮನ ಅತ್ತ ಹರಿಯಿತು.   ಒಟ್ಟು ಹದಿನೆಂಟು ಜನ ಫ್ಯಾಕ್ಟರಿಗಳ ಕಟ್ಟಡದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದರು. ಇವರಲ್ಲಿ ೧೪ ಮಂದಿ ಸಾವನ್ನಪ್ಪಿದರು. ಇವರಲ್ಲಿ ಕ್ಸು ಲಿಷೀ ಕೂಡಾ ಒಬ್ಬ. ಮರಣದ ನಂತರ ಈತನ ಸ್ನೇಹಿತರು ಇವನ ಕವಿತೆಗಳನ್ನು ಅಚ್ಚುಮಾಡಿದರು. ಇವನ ಕವಿತೆಗಳಲ್ಲಿ ಫ್ಯಾಕ್ಟರಿ ಕಾರ್ಮಿಕರ ಕರಾಳ ಬದುಕಿನ ನೆರಳು ಗಾಢವಾಗಿದೆ. ಕವಿತೆಗಳಲ್ಲಿರುವ ಸೂಕ್ಷ್ಮತೆ ಮತ್ತು ಜಾಣ್ಮೆ ನಮ್ಮ ಮನಸ್ಸನ್ನು ಮಿಡಿಯುತ್ತವೆ.  ಈತನ ಮೂರು ಕವಿತೆಗಳ ಭಾಷಾಂತರ ಕೆಳಗೆ ಕೊಟ್ಟಿದೆ.  ಕೆಳಕ್ಕೆ ಬಿದ್ದಾಗ  ಸ್ಕ್ರೂಮೊಳೆ   ಓವರ್ ಟೈಮ್ ರಾತ್ರಿಯಲ್ಲಿ ಒಂದು ಸ್ಕ್ರೂಮೊಳೆ ಕೆಳಗೆ ಬಿದ್ದುಹೋಯಿತು ಒಂದು ಸಣ್ಣ ಕಿಂಕಿಣಿ ಸದ್ದು, ಅಷ್ಟೆ. ಯಾರೂ ಗಮನಿಸುವುದಿಲ್ಲ. ಇಂಥದ್ದು ಹಿಂದೆಯೂ ಆಗಿದೆ. ಇಂಥದೇ ರಾತ್ರಿಯಲ್ಲಿ ಯಾರೋ ಒಬ್ಬರು ನ...