ಪೋಸ್ಟ್‌ಗಳು

Translation of a Bhojpuri poem ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನೆರವಿಗಿರುತಿರಲು ಜಾನಕಿನಾಥ

ಇಮೇಜ್
(ತುಲಸೀದಾಸರ ರಚನೆಯ ಅನುವಾದ) "ಜಾನಕಿನಾಥ ಸಹಾಯ ಕರೇ..." ಎಂದು ಪ್ರಾರಂಭವಾಗುವ ತುಲಸೀದಾಸರ ಈ ರಚನೆಯನ್ನು ಅನೇಕ ಹಾಡುಗಾರರು ಹಾಡಿದ್ದಾರೆ.  ಈ ಜನಪ್ರಿಯ ರಚನೆಯ ಅನುವಾದವನ್ನು ಕೆಳಗೆ ಪ್ರಯತ್ನಿಸಿದ್ದೇನೆ.  ಶ್ರೀರಾಮನ ಪರಮಭಕ್ತರಾಗಿದ್ದ ತುಲಸೀದಾಸರು ತಮ್ಮ ಸುಲಲಿತ ಶೈಲಿಯಲ್ಲಿ ರಾಮನನ್ನು ಸ್ತುತಿಸಿದ್ದಾರೆ. ಯಾರ ನೆರವಿಗೆ ಸಾಕ್ಷಾತ್ ಶ್ರೀರಾಮನೇ ಇದ್ದಾನೋ ಅವನಿಗೆ ಯಾರೂ ಏನೂ ಮಾಡಲಾರರು ಎಂಬುದು ಕವಿಯ ಸಂದೇಶ. ಗ್ರಹಣಕಾಲದಲ್ಲಿ ರಾಹು-ಕೇತುಗಳಿಗೆ ಹೆದರುವ ಜನರಿಗೆ ಈ ರಚನೆ ಸಾಂತ್ವನ ನೀಡಬಹುದು.  ನೆರವಿಗಿರುತಿರಲು ಜಾನಕಿನಾಥ  ಬರದು ನಿನ್ನ ಬಳಿ ಯಾವ ವಿಪತ್ತು ।। ತರುವರು ಶುಭಫಲ  ರವಿ ಶಶಿ ಮಂಗಳ,  ಗುರು ಭೃಗುಸುತ  ಬುಧ ವರಗಳನಿತ್ತು । ಇರದು ಗಮ್ಯತೆಯು ರಾಹುಕೇತುವಿಗೆ, ಸರಿವನು ಶನಿ ಹೆಜ್ಜೆಯ ಹಿಂದಿಟ್ಟು ।। ದುರುಳ ದುಶ್ಶಾಸನ ವಿಮಲ ದ್ರೌಪದಿಯ ಸೀರೆಯನೆಳೆಯಲು ಸಾಹಸಪಟ್ಟು । ಪೊರೆಯಲು ಕರುಣಾನಿಧಿ ಬರಲಿಲ್ಲವೇ ಹರಿದು ಮೋಡ ಬರುವಂತೆ  ಸವಿತೃ ।। ಯಾರ ಪರವೋ ಕರುಣಾನಿಧಿ ಜಗದೊಳು ತೆರೆವುದು ಅವರಿಗೆ ಭಾಗ್ಯಜಗತ್ತು । ಎರಗುವೆ ತುಲಸೀದಾಸ ರಘುವರನ ಸುಖದಾಯಿ ಚರಣಕೆ ಯಾವತ್ತೂ  ।। ಮೂಲ ರಚನೆ: जानकी नाथ सहाय करें जब कौन बिगाड़ करे नर तेरो ॥ सुरज मंगल सोम भृगु सुत बुध और गुरु वरदायक तेरो । र...

ಯಾರೊಡನೆ ಆಡಲಿ ಹೋಳಿ

ಇಮೇಜ್
ತನ್ನ ಕಡೆಯ ದಿನಗಳನ್ನು ಮೀರಾಬಾಯಿ ವೃಂದಾವನ ಮತ್ತು ದ್ವಾರಕಾ ಕ್ಷೇತ್ರಗಳಲ್ಲಿ ಕಳೆದಳು ಎನ್ನುತ್ತಾರೆ. ಕೃಷ್ಣನಿಗಾಗಿ ಪರಿತಪಿಸುತ್ತಾ ಅವಳು ಇಡೀ ಜೀವಮಾನವನ್ನೇ ಕಳೆದಳು. ವೃಂದಾವನದಲ್ಲಿ ಹೋಳಿಯ ಉತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಕೃಷ್ಣ ತನ್ನ ಸಂಗಡಿಗರೊಂದಿಗೆ ಸೇರಿಕೊಂಡು ಆಡುತ್ತಿದ್ದ  ರಾಸಲೀಲೆಯನ್ನು ಮರುಸೃಷ್ಟಿಸಲಾಗುತ್ತದೆ.  ಈ ಸಂಭ್ರಮವನ್ನು ನೋಡಿದಾಗ ಮೀರಾಳ ಮನಸ್ಸು ಕುಗ್ಗುತ್ತದೆ. ತಾನು ಯಾರೊಂದಿಗೆ ಹೋಳಿ ಆಚರಿಸಲಿ? ತಾನು ನಂಬಿದವನು ಒಂಟಿ ಬಿಟ್ಟು ಹೊರಟುಹೋದನಲ್ಲ ಎಂಬ ಅಧೈರ್ಯ ಮೂಡುತ್ತದೆ.  ಆದರೆ ತನ್ನ ದೈನ್ಯವನ್ನು ತೋಡಿಕೊಳ್ಳುವಾಗಲೂ  ಅವಳಿಗೆ ಶ್ಯಾಮನ ದರ್ಶನದ  ಆಸೆ ಬತ್ತಿಹೋಗಿಲ್ಲ.   ಮೂಲ ರಚನೆ - ಮೀರಾಬಾಯಿ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ಯಾರೊಡನೆ ಆಡಲಿ ಹೋಳಿ ನನಗೇನು ಗೊತ್ತು ಪ್ರಿಯನು ಒಬ್ಬಂಟಿ ಹೋಗಿಹನು ಬಿಟ್ಟು ಮಾಣಿಕ್ಯ ಮುತ್ತು ಎಲ್ಲವನೂ ಬಿಟ್ಟು, ತುಳಸೀಮಣಿ ಕೊರಳಲ್ಲಿ ತೊಟ್ಟು ಊಟದೊಳು ರುಚಿಯಿಲ್ಲ ಮನೆಯಲ್ಲಿ ಮನಸಿಲ್ಲ, ಹೇಳಲೇನಿದರ ಗುಟ್ಟು ಪ್ರಿಯಕರನ ಕಾಯುತ್ತ ಉರುಳುತ್ತಿದೆ ಹೊತ್ತು ... ನಿನ್ನೊಲವು ಈಗ ಬೇರಾರದೋ ಸೊತ್ತು! ನನ್ನೊಂದಿಗೇತಕ್ಕೆ ಆಡಬೇಕಿತ್ತು?  ಇಂದೂ ಬರಲಿಲ್ಲ, ಎಷ್ಟು ದಿನವಾಯಿತು, ನನ್ನನ್ನು ಹೀಗೆ ಒಬ್ಬಳನ್ನೇ ಬಿಟ್ಟು! ಏಳುತ್ತಿದೆ ಮನದೊಳಗೆ ತಲ್ಲಣದ ಸುತ್ತು ...    ಶ್ಯಾ...

ಸರೋವರ ತ್ಯಜಿಸಿದ ಮೀನು ಮಕರಮಿಲನಕ್ಕೆ ಬಂದಂತೆ

ಇಮೇಜ್
ಸಿ. ಪಿ. ರವಿಕುಮಾರ್  "ನಂದನಂದನ ದಿಠು ಪಡೆಯಾ ಮಾಯಿ ..." ಎಂಬ ಮೀರಾ ಭಜನೆಯನ್ನು ನೀವು ಕೇಳಿರಬಹುದು. ಲತಾ ಮಂಗೇಶ್ಕರ್ ಇದನ್ನು ಹಾಡಿದ್ದಾರೆ. ನಿಮಗೆ ಅಂತರ್ಜಾಲದ ಮೇಲೆ ರೆಕಾರ್ಡಿಂಗ್ ಸಿಕ್ಕುತ್ತದೆ.   ಈ ಭಜನೆಯಲ್ಲಿ ಮೀರಾಬಾಯಿ ಕೃಷ್ಣನನ್ನು ಕುರಿತು ತನಗಿರುವ ಅಪೂರ್ವ ಆಕರ್ಷಣೆಯ ಕಾರಣವನ್ನು ತಿಳಿಸುತ್ತಾಳೆ. ನಂದನಂದನ ಕೃಷ್ಣನ ಮೈಬಣ್ಣ ಕಪ್ಪು.  ತಲೆಯ ಮೇಲೆ  ಓರೆಯಾಗಿಟ್ಟ  ನವಿಲುಗರಿಯ ಚಂದ್ರಕಿರೀಟ! ಹಣೆಯ ಮೇಲೆ ಕೇಸರಿ ತಿಲಕ.  ಅವನನ್ನು ಕಂಡಾಗಿನಿಂದ ತಾನು ಅವನಿಗೆ ಆಕರ್ಷಿತಳಾಗಿ ಲೋಕದ ಲಜ್ಜೆಯನ್ನು ಕಿತ್ತೆಸೆದಿದ್ದೇನೆ ಎಂದು ಮೀರಾ ತನ್ನ ತಾಯಿಯಲ್ಲಿ ತೋಡಿಕೊಳ್ಳುತ್ತಿದ್ದಾಳೆ.  ಇಲ್ಲಿ "ತಾಯಿ" ಎಂದರೆ ಅವಳ ಸ್ವಂತ ತಾಯಿಯೇ ಇರಬೇಕಾಗಿಲ್ಲ, ಅವಳನ್ನು ಕರುಣೆಯಿಂದ ಮಾತಾಡಿಸಿದ ಬೇರೆ ಯಾರೇ ಆಗಿರಬಹುದು.   ಕೃಷ್ಣನ ಕಿವಿಯಲ್ಲಿರುವ ಕುಂಡಲದ ಬೆಳಕು ಅವನ ಕೆನ್ನೆಯ ಮೇಲೆ ಪ್ರತಿಫಲಿಸಿದಾಗ ತಾನು ಸರೋವರವನ್ನು ತ್ಯಜಿಸಿ ಮೊಸಳೆಯನ್ನು ಸಂಧಿಸಲು  ಬಂದ ಮೀನಿನಂತೆ ಎಂಬ ಮೀರಾಬಾಯಿಯ ಉಪಮೆ ತುಂಬಾ ಸುಂದರವಾಗಿದೆ.  ತನಗೆ ಯಾರನ್ನು ಕೊಟ್ಟು ಮದುವೆ ಮಾಡಿದರೋ ಅವನೊಂದಿಗೆ ಬಾಳ್ವೆ ಮಾಡುವುದು ಮೀನು ಸರೋವರದಲ್ಲಿ ಈಜಿದಷ್ಟೇ ಸಹಜ.  ಆದರೆ ತಾನು ಅದೆಲ್ಲವನ್ನೂ ಬಿಟ್ಟು ಕೃಷ್ಣನಲ್ಲಿ ಅನುರಕ್ತಿ ಹೊಂದಿದ್ದೇನೆ! ಇದರಿಂದ ತನಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಅರಿವಿದ್ದರೂ...

ವಿಚಿತ್ರ ವಿಡಂಬನೆ ವಿಧಿಯು ಬರೆದ ಹಣೆಬರಹ!

ಮೂಲ ಭೋಜಪುರಿ - ಮೀರಾಬಾಯಿ  ಕನ್ನಡಕ್ಕೆ - ಸಿ ಪಿ ರವಿಕುಮಾರ್   "ಕರಮ್ ಕೀ ಗತಿ ನ್ಯಾರೀ ಸಂತೋ ..." ಎಂಬ ಮೀರಾ ಭಜನೆಯನ್ನು ನೀವು ಕೇಳಿರಬಹುದು.  ಹೃದಯನಾಥ್ ಮಂಗೇಶ್ಕರ್ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಮಂಗೇಶ್ಕರ್  ಈ ಭಜನೆಯನ್ನು  ಹಾಡಿದ್ದಾರೆ.  ಅಂತರ್ಜಾಲದಲ್ಲಿ ಲಭ್ಯವಾಗಿದೆ, ನೀವೂ ಕೇಳಬಹುದು. ಈ ಭಜನೆಯಲ್ಲಿ ಮೀರಾಬಾಯಿ ವಿಧಿಯ ವಿಪರ್ಯಾಸವನ್ನು ಕುರಿತು ಹೇಳುತ್ತಿದ್ದಾಳೆ. ದೊಡ್ಡ ದೊಡ್ಡ ಕಣ್ಣುಗಳನ್ನು ಪಡೆದ ಜಿಂಕೆಯ ಕರ್ಮ ಒಣಕಲು ಕಾಡಿನಲ್ಲಿ ಅಲೆದಾಡುವುದು! ಮೀರಾಬಾಯಿಗೆ ತನ್ನ ಜೀವನದ ಬಗ್ಗೆ ಕೂಡಾ ಹೀಗೇ ಅನ್ನಿಸಿರಬಹುದು. ತಾನು ಹುಟ್ಟಿದ್ದು ಗಿರಿಧರ ಗೋಪಾಲನಿಗಾಗಿ - ಆದರೆ  ರಾಜನೊಬ್ಬ ತನ್ನನ್ನು ಬಲವಂತದಿಂದ ಮದುವೆಯಾಗಿದ್ದಾನೆ.  ಇದೂ ಕರ್ಮದ ಆಟವೆಂದೇ ಅವಳಿಗೆ ತೋರುತ್ತದೆ.    ವಿಚಿತ್ರ ವಿಡಂಬನೆ ವಿಧಿಯು ಬರೆದ ಹಣೆಬರಹ! ಸಂತರೇ ಹೇಳುವೆ ಕೇಳಿ, ನಾ ಕಂಡ ತರಹ ಮೃಗಕ್ಕೆ ಕೊಟ್ಟದ್ದೇಕೆ ದೊಡ್ಡ ಬಟ್ಟಲುಗಣ್ಣು ? ಅಲೆಯುತ್ತದೆ ನೋಡುತ್ತ ಒಣಕಲು ಕಾಡನ್ನು! ಕೊಕ್ಕರೆಗೆ ಕೊಟ್ಟದ್ದೇಕೆ ಉಜ್ವಲ ಬಿಳಿ ಬಣ್ಣ? ಕೋಗಿಲೆಗೆ ಬಳಿದು ಬರಿಯ ಕಪ್ಪನ್ನ! ಸಿಹಿನೀರು ತುಂಬಿ ಪುಟ್ಟ ನದಿಗಳೊಡಲಲ್ಲಿ  ತುಂಬಿದ್ದೇಕೆ  ಉಪ್ಪುನೀರು  ಕಡಲಲ್ಲಿ! ಮೂರ್ಖನ ಕೈಯಲ್ಲಿ ರಾಜ್ಯಭಾರವನಿತ್ತು ಪಂಡಿತನನ್ನಲಸುವೆ ಭಿಕ...

ರಾಮರತ್ನವೆಂಬ ನಿಕ್ಷೇಪ

ಇಮೇಜ್
ಮೂಲ ಭೋಜಪುರಿ ಗೀತೆ - ಮೀರಾ ಬಾಯಿ  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಈ ಮೀರಾ-ಭಜನೆಯನ್ನು ನೀವೆಲ್ಲರೂ ಕೇಳಿರುತ್ತೀರಿ. "ಪಾಯೋ ಜೀ ಮೈನೆ ರಾಮ್ ರತನ್ ಧನ್ ಪಾಯೋ!" ... ಅನೇಕಾನೇಕ ಗಾಯಕ/ಗಾಯಕಿಯರು ಹಾಡಿರುವ ಭಜನೆ. ಯೂ ಟ್ಯೂಬಿನಲ್ಲಿ ಹುಡುಕಿದರೆ ರೆಕಾರ್ಡಿಂಗ್ ಸಿಕ್ಕುತ್ತದೆ, ಕೇಳಿ. ಈ ಭಜನೆಯನ್ನು ಕುರಿತು ಯೋಚಿಸುತ್ತಿದ್ದೆ. ಜನರಿಗೆ ಎಲ್ಲಾ ಕಾಲದಲ್ಲೂ ನಾಳೆಯ ಚಿಂತೆ ಇದ್ದೇ ಇತ್ತೆಂದು ತೋರುತ್ತದೆ. ಈಗಂತೂ ಕೆಲವರು ಇನ್ಷೂರೆನ್ಸ್, ಇನ್ವೆಸ್ಟ್ ಮೆಂಟ್, ರಿಯಲ್ ಎಸ್ಟೇಟ್ ಇವನ್ನು ಬಿಟ್ಟರೆ ಬೇರೆ ಮಾತೇ ಆಡುವುದಿಲ್ಲ ಎನ್ನುವುದನ್ನು ನೀವೂ ಗಮನಿಸಿರುತ್ತೀರಿ. ಈ ಕವಿತೆಯನ್ನು ರಚಿಸಿದಾಗ ಮೀರಾಬಾಯಿಗೂ ಭವಿಷ್ಯದ ಯೋಚನೆಯಾಗಿರಬಹುದು - "ನಾಳೆಯ ಗತಿ ಏನು?" ಎಂದು ಯಾರಾದರೂ ಅವಳನ್ನು ಚುಚ್ಚಿರಬಹುದು. ಅವರಿಗೆ ಉತ್ತರದ ರೂಪದಲ್ಲಿ ಮೀರಾಬಾಯಿ ಈ ಕವಿತೆ ಬರೆದಿದ್ದಾಳೆ. "ನನ್ನಲ್ಲಿ ಅಪಾರವಾದ ಧನವಿದೆ -ರಾಮನಾಮವೆಂಬ ಧನ!" ಎಂದು ಅವಳು ತನ್ನ ಶ್ರೀಮಂತ್ರಿಕೆಯನ್ನು ಮೆರೆಯುತ್ತಿದ್ದಾಳೆ. "ಭವಸಾಗರವನ್ನು ಹೇಗಪ್ಪಾ ದಾಟುವುದು?" ಎಂದು ಹಲುಬುವವರಿಗೆ ಅವಳ ಉತ್ತರ - "ಸತ್ಯವೆಂಬ ದೋಣಿ ಇದೆ, ಸದ್ಗುರುಗಳೇ ಅಂಬಿಗರಾಗಿದ್ದಾರೆ, ದಾಟಿಸುತ್ತಾರೆ, ಸಂತೋಷವಾಗಿರು!" ಈಗ ಅನುವಾದವನ್ನು ಓದಿ. ಸಿಕ್ಕಿಬಿಟ್ಟಿತು ನನಗೆ ರಾಮರತ್ನವೆಂಬ ನಿಕ್ಷೇಪ ಅಪಾರ - ದಾನವಿತ್ತರು ಸದ್ಗುರ...