ಪೋಸ್ಟ್‌ಗಳು

Sonnet 116 ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಶೇಕ್ಸ್ ಪಿಯರ್ - ಸಾನೆಟ್ 116

ಇಮೇಜ್
ಮೂಲ ಕವಿತೆ - ಶೇಕ್ಸ್ ಪಿಯರ್ - ಸಾನೆಟ್ 116 ಕನ್ನಡಕ್ಕೆ - ಸಿ ಪಿ ರವಿಕುಮಾರ್ ಒಂದಾಗಲೆರಡು ಮನಗಳು ಅಡೆತಡೆಗಳಿವೆಯೆಂದು  ನಾನು ಒಪ್ಪುವುದಿಲ್ಲ  ಹೊಂದಾಣಿಕೆ ಮಾಡಿಕೊಳ್ಳುತ್ತಾ ಹೋಗುವುದು ಪ್ರೇಮವೇ ಅಲ್ಲ ಬಂದು ಹೋಗುತ್ತವೆ ಮಾತುಗಳು ನೂರೆಂಟು; ಮನಸ್ಸು ಚಂಚಲ; ಸಂದೇಹ, ಸಂತಾಪಗಳು ಬಂದಾಗ ಭಗ್ನವಾಗುವುದೇ ಪ್ರೇಮ? ಇಲ್ಲ! ಪರೀಕ್ಷೆ ಎಂದು ಸ್ವೀಕರಿಸಿ ಗೆಲ್ಲುತ್ತದೆ. ಪ್ರೇಮವೆಂಬುದು  ನೆರೆಯುಕ್ಕುವ  ಕಡಲಲ್ಲೂ ನಂದದೆ ನಿರ್ಭಯವಾಗಿ ನಿಲ್ಲುವ ದೀಪಗಂಬದ ಹಾಗೆ; ಕಂಗೆಡಿಸುವ  ಅಂಧಕಾರದಲ್ಲಿ ದಿಸೆಗೆಟ್ಟ ದೋಣಿಗಳಿಗೆ ದಿಕ್ಕುಗಾಣಿಸುವ  ದಾರಿದೀಪಕ್ಕೆ  ಇಂತಿಷ್ಟು ಎಂದು ಬೆಲೆಕಟ್ಟಲಾದೀತೇ? ಎತ್ತರ ಎಷ್ಟು ಅಡಿ ಎಷ್ಟು ಅಂಗುಲ   ಎಂದು ಹೇಳಬಹುದೇನೋ! ಕಾಲದ ಅತಿರೇಕಗಳಿಗೆ ಅಂಜದೆ ನಿಂದಿದೆ ಎದೆ- ಗುಂದದೆ. ಕಾಲನ ಬಾಗುಗತ್ತಿಯ ಹೊಡೆತಕ್ಕೆ ಕಳೆಗುಂದಬಹುದು ಹೊರಗಿನ  ಅಂದ;  ಬದಲಾಗದು ಆದರೂ ಒಳಗಿನ ಸೌಂದರ್ಯ ಒಂದಿಷ್ಟೂ.  ಸಂದರೂ ಎಷ್ಟೇ ಕಾಲಮಾನಗಳೂ ಬದಲಾಗದೆ ನಿಲ್ಲುವುದು ಸಾವು  ಸಂಧಿಸುವವರೆಗೂ. ಇದು ನಿಜವಲ್ಲವಾದರೆ ಪ್ರಮಾಣಿಸುವೆ ಸುಳ್ಳೆಂದು ನಾನು  ಹಿಂದೆ ಬರೆದದ್ದೆಲ್ಲ; ಹಿಂದೆ ಯಾರಾದರೂ ಪ್ರೇಮಿಸಿದರೆಂಬುದೂ ಸುಳ್ಳು.