ಪೋಸ್ಟ್‌ಗಳು

Kishwar Naheed ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮೊದಲು

ಇಮೇಜ್
ಮೂಲ ಉರ್ದೂ ಗಜಲ್: ಕಿಶ್ವರ್ ನಾಹೀದ್ (ಪಾಕೀಸ್ತಾನ್) ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ವಿಶ್ವಾಸ ನಂಬಿಕೆಗಳಲ್ಲಿ ಕಳೆದು ಹೋಗಿದ್ದೆ ಮುಂಚೆ ಇಂದಿಗೂ ನಾನಿರುವುದು ಎಲ್ಲಿದ್ದೆನೋ ಮೊದಲು ಆಸೆಗಳು ನೆರಿಗೆಗಳಾಗಿ ಹೊಮ್ಮಿದವು  ಇದ್ದವು ಎದೆಯಲ್ಲಿ ಗಾಯಗಳು ಮೊದಲೇ  ಈಗಂತೂ ಅಳುತ್ತೇನೆ  ಪ್ರತಿಯೊಂದು ಮಾತಿಗೂ  ಲಾಭ ನಷ್ಟಗಳ ಲೆಕ್ಕ ಹಾಕುತ್ತಿದ್ದೆ ಮೊದಲು  ಎದೆಯಿಂದ ಹೊರಗೆ ತೆಗೆದಂತೆ ಯಾವುದೋ ಮುಳ್ಳು  ಕಣ್ಣುಗಳಿಂದ ನೀರು ಹರಿಯುತ್ತಿದ್ದವು ಮೊದಲೇ  ಸಭೆಗೆ ಈಗೇನಿದ್ದರೂ ಹಾಜರಿ ಹಾಕಬೇಕೆಂದು ಅಷ್ಟೇ  ಹೃದಯ  ಕೈಯಲ್ಲಿ ಹಿಡಿದು ಬರುತ್ತಿದ್ದೆ ಮೊದಲು  ಹೆಗಲಿನ ಮೇಲಿರುವುದು ತಲೆಯೋ ಇಲ್ಲ ಹಿಮಗಲ್ಲೋ  ನಾಲಗೆಯಿಂದ ಹೊರಡುತ್ತಿದ್ದವು ಜ್ವಾಲೆಗಳು ಮೊದಲು  ಪ್ರತಿಯೊಂದು ಜುಲುಮೆಗೂ ಈಗ ಮುಕ್ತದ್ವಾರ  ಸಣ್ಣ ಸಂಗತಿಯೂ ನೋವು ನೀಡುತ್ತಿತ್ತು ಮೊದಲು  ನನಗೆ ಒಡಹುಟ್ಟಿದ ಸೋದರಿ ಈ ನನ್ನ ಮೌನ  ಇಂಥ ಸಂಬಂಧಗಳಾದರೂ ಎಲ್ಲಿದ್ದವು ಮೊದಲು?