ಪೋಸ್ಟ್‌ಗಳು

ಜನವರಿ, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಯಥಾಯಥಾಹಿ ಧರ್ಮಸ್ಯ

ಇಮೇಜ್
ಇದ್ದಲ್ಲೇ ಇರೋಣ ನಾವೆಲ್ಲಾ ಹೀಗೇ ಚೆನ್ನಾಗಿದೆಯಲ್ಲ ಬೇಜಾರಾದರೆ ಮಾಡೋಣ ಕಿತಾಪತಿ ಒಬ್ಬರನ್ನೊಬ್ಬರು ಕಿತ್ತೋಣ ಸುಪ್ರೀಂ ಕೋರ್ಟಿಗೆ ಹೋಗೋಣ ಅರ್ಜಿ ಹಾಕೋಣ ಸಂಸ್ಕೃತ ಬ್ರಾಹ್ಮಣ ದ್ರಾವಿಡ ಶೂದ್ರ ಚರ್ಚಿಸುತ್ತ ಕೂಗಾಡೋಣ ಎಡಗೈಯಿಂದ ಬಲಗೆನ್ನೆಗೆ ಬಲಗೈಯಿಂದ ಎಡಗೆನ್ನೆಗೆ ಕಪಾಳ ಮೋಕ್ಷ ಮಾಡೋಣ ಕಲ್ಲೆಸೆದು ಹಲ್ಮಸೆದು ಹಂಗಿಸೋಣ ಒಬ್ಬರಿನ್ನೊಬ್ಬರ ಕಾಲೆಳೆಯೋಣ ಇದ್ದಲ್ಲೇ ಇರೋಣ ನಾವೆಲ್ಲಾ ಹೀಗೇ ಚೆನ್ನಾಗಿದೆಯಲ್ಲ ನಮಗೇತಕೆ ಗೊತ್ತು-ಗುರಿ ಸಾಕಾಗುವಷ್ಟಿದೆ ಹೊಟ್ಟೆ ಉರಿ ನಮಗೇತಕೆ ಹಾರಾಟ ಮರೆತಿದ್ದೇವೆ ರೆಕ್ಕೆ-ಗರಿ ಅಲ್ಲಿ ಹಾಗಂತೆ ಇಲ್ಲಿ ಹೀಗಂತೆ ಡ್ರೈವರ್ ರಹಿತ ಕಾರಂತೆ ಇದೆಯಂತೆ ಏಐ ಕೃತಕ ಬುದ್ಧಿಮತ್ತೆ ವಾವ್ ಸೂಪರ್ ಚಿಂದಿ ಇಲ್ಲೇನಿದ್ದರೂ ಬಿಲಿಯನ್ ಮಂದಿ  ಧೂಳು,ಟ್ರಾಫಿಕ್, ನಾಯಿ, ಹಂದಿ ಎನ್ನುತ್ತಾ ಹತಾಶರಾಗೋಣ ಆದರೂ ಇಲ್ಲೇ ಇರೋಣ ನಾವೆಲ್ಲಾ ಹೀಗೇ  ಚೆನ್ನಾಗಿದೆಯಲ್ಲ ಯಥಾಸ್ಥಿತಿ ಯಥಾಗತಿ ಯಥಾಯಥಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ಇದ್ದಲ್ಲೇ ಇರೋಣ ನಾವೆಲ್ಲಾ ಹೀಗೇ ಚೆನ್ನಾಗಿದೆಯಲ್ಲ -- ಸಿ. ಪಿ. ರವಿಕುಮಾರ್

ಗ್ಯಾಲರಿ (ಅತಿಸಣ್ಣಕತೆ)

ಇಮೇಜ್
ಸ್ವಾಮೀಜಿ ಬಹಳ ಬೇಸರ ಮಾಡಿಕೊಂಡಿದ್ದರು. "ಯಾಕೆ ಸ್ವಾಮೀಜಿ? ಏನಾಯಿತು?" ಎಂದು ಶಿಷ್ಯರು ಪ್ರಶ್ನಿಸಿದರು. ಸ್ವಾಮೀಜಿ ಅವರ ಕಡೆಗೆ ಬೇಸರದಿಂದ ನೋಡಿದರೇ ಹೊರತು ಮಾತಾಡಲಿಲ್ಲ. ಕೊನೆಗೂ ಒಬ್ಬ ಜಾಣ ಅವರ ಬೇಸರದ ಕಾರಣವನ್ನು ಹುಡುಕಿಯೇ ಬಿಟ್ಟ. ಸ್ವಾಮೀಜಿ ತೆರೆಯಬೇಕೆಂದು ಉದ್ದೇಶಿಸಿದ್ದ ದೇವರ ಚಿತ್ರಪಟಗಳ ಗ್ಯಾಲರಿಗೆ ಅವರು "ಡಿವೈನ್ ಗ್ಯಾಲರಿ" ಎಂದು ಹೆಸರಿಡಲು ಇಚ್ಛಿಸಿದ್ದರು. ಅಂದೇ ಬೆಳಗ್ಗೆ ಶಿಷ್ಯರು ಸೇರಿ ಬೋರ್ಡ್ ಬರೆಸಿ ತಾವೇ ಖುದ್ದಾಗಿ ನಿಂತು ಅದನ್ನು ಏರಿಸಿ ಬಂದಿದ್ದರು. ತಮ್ಮ ಕೆಲಸಕ್ಕೆ ಸ್ವಾಮೀಜಿ ಸಂತುಷ್ಟರಾಗಿ ಏನಾದರೂ ಬಹುಮಾನ ನೀಡಬಹುದು ಎಂದು ಕಾಯುತ್ತಿದ್ದರು. ಸ್ವಾಮೀಜಿ ಬಂದರು. ಬೋರ್ಡ್ ನೋಡಿದರು. ತುಂಬಾ ಆಘಾತವಾದವರಂತೆ ಕಂಡರು. ಸ್ವಾಮೀಜಿಯನ್ನು ಏನು ಕೇಳಿದರೂ ಮೌನ. ಕೊನೆಗೂ ಸ್ವಾಮೀಜಿಯವರ ದುಃಖದ ಕಾರಣ ಬೆಳಕಿಗೆ ಬಂತು. ಅವರ ಚಿತ್ರಪಟ ಗ್ಯಾಲರಿಗೆ ಹಾಕಿದ ಬೋರ್ಡಿನ ಮೇಲೆ ದೊಡ್ಡ ಅಕ್ಷರಗಳಲ್ಲಿ "ದಿ ವೈನ್ ಗ್ಯಾಲರಿ" ಎಂದು ಬರೆಯಲಾಗಿತ್ತು.

ಅಶ್ವತ್ಥ ಮತ್ತು ಅಸ್ವಸ್ಥ (ಒಂದು ಅತಿಸಣ್ಣಕತೆ)

ಇಮೇಜ್
"ಅಶ್ವತ್ಥ ಮರಕ್ಕೆ ಐದು ರಂಧ್ರ ಕೊರೆದು ವಿಷ ತುಂಬಿದರಂತೆ." ಎಂದು ಮೂಕಜ್ಜಿ ಪೇಪರ್ ಓದಿ ಹೇಳಿದಳು. "ಅಯ್ಯೋ! ಯಾಕಂತೆ?" ಎಂದು ಮೊಮ್ಮಗ ಸುಬ್ಬರಾಯ ಕೇಳಿದ. "ಅದನ್ನು ಬೀಳಿಸುವ ಪ್ರಯತ್ನ. ಒಳಗಿಂದ ಒಳಗೇ ನಾಶವಾಗಿ ಒಣಗಿಹೋದಾಗ ಅದನ್ನು ಬೀಳಿಸಬಹುದು." "ಯಾಕೆ?" "ಕೆಲವರಿಗೆ ಅದರ ಕಟ್ಟಿಗೆಯ ಮೇಲೆ ಕಣ್ಣು. ಕೆಲವರಿಗೆ ಅದು ಬೆಳೆದ ಸ್ಥಳದ ಮೇಲೆ ಕಣ್ಣು. ಕೆಲವರಿಗೆ ಅವರಿಗೇ ಅರ್ಥವಾಗದ ಅಸಹನೆ. ಕೆಲವರಿಗೆ ಯಾವುದೋ ಹಳೆಯ ಸೇಡು. ಕೆಲವರಿಗೆ ಅದರಲ್ಲಿ ನೆಲೆಸಿರುವ ಮಂಗಗಳನ್ನು ಓಡಿಸುವ ಹುಮ್ಮಸ್ಸು." "ಆಯಿತಲ್ಲ, ಈ ಐದು ವಿಷಗಳೇ ಸಾಕಿತ್ತು." "ಇಲ್ಲ, ಸುಬ್ಬ. ಅಶ್ವತ್ಥದ ಮರ ಹಾಗೆಲ್ಲಾ ಸಾಯುವುದಿಲ್ಲ. ನೀನು ನೋಡಿರಬಹುದು. ಅದು ಅಸಾಧ್ಯವೆನ್ನಿಸುವ ಕಡೆಯಲ್ಲೂ ಕುಡಿಯೊಡೆಯುತ್ತದೆ. ಕಟ್ಟಡದ ಆರನೇ ಮಹಡಿಯ ಗೋಡೆಯಲ್ಲೂ ಬೆಳೆಯಲು ಹವಣಿಸುತ್ತದೆ. ಇವರಿಗೆ ಅದನ್ನು ಕೊಲ್ಲುವ ಒತ್ತಾಸೆ ಎಷ್ಟಿದೆಯೋ ಅದರ ಎರಡು ಪಟ್ಟು ಬದುಕುವ ಆಸೆ ಅಶ್ವತ್ಥದ ಮರಕ್ಕಿದೆ. ಅದು ನೂರಾರು ಕಾಲ ಬದುಕುತ್ತದಂತೆ. ಅಶ್ವತ್ಥದ ಮರದ ಕೆಳಗೆ ಹಗಲಲ್ಲಿ ಕುಳಿತರೆ ನಿನಗೆ ಆಕ್ಸಿಜನ್ ಸಿಕ್ಕುತ್ತದೆ. ನಿನ್ನ ಮನಸ್ಸು ನಿರಾಳವಾಗುತ್ತದೆ. ರಾತ್ರಿ ಅದರ ಕೆಳಗೆ ಮಲಗಿದರೆ ಅಲ್ಲಿ ಆಕ್ಸಿಜನ್ ಸಿಕ್ಕದೆ ಭೂತಪ್ರೇತಗಳೂ ಕಂಡಾವು." "ಇದಕ್ಕೇ ಕೆಲವರು ಈ ಮರದಲ್ಲಿ ಭೂತವಿದೆ ಎ

ಅಮೃತವಿಶ್ವ

ಇಮೇಜ್
ಅಮೃತಾಳನ್ನು ಕಾಲೇಜಿನಲ್ಲಿ ನೋಡಿದ ಕೂಡಲೇ ವಿಶ್ವ ಪೂರಾ ಬೋಲ್ಡ್ ಆಗಿಹೋದ. ಅವನ ಅದೃಷ್ಟ ಹೇಗಿತ್ತೆಂದರೆ ಅಮೃತಾ ಕೂಡಾ ಅವನನ್ನು ಇಷ್ಟ ಪಟ್ಟಳು. ಮನೆಗೆ ಕರೆದುಕೊಂಡು ಹೋಗಿ ತನ್ನ ತಂದೆತಾಯಿಗೆ ಪರಿಚಯ ಮಾಡಿಸಿದಳು. ಇದು ಫಿಲ್ಮ್ ಕತೆಯಾಗಿದ್ದರೆ ನೀವು ಅವರಿಬ್ಬರೂ ಹಾಡು ಹೇಳುತ್ತಾ ಮರಗಳ ಸುತ್ತಲೂ ಓಡುವುದನ್ನು ಕಲ್ಪಿಸಿಕೊಳ್ಳಬಹುದು. ಅಷ್ಟರಲ್ಲಿ ಇಂಟರ್ವಲ್. ನೀವು ಪಾಪ್ ಕಾರ್ನ್ ಐಸ್ ಕ್ರೀಮ್ ಕೋಡುಬಳೆ ಎಲ್ಲಾ ತಿಂದು ಮತ್ತೆ ವಾಪಸ್ ಬಂದಾಗ ವಿಶ್ವ ಅಮೃತಾಳನ್ನು ಕಾಲೇಜ್ ಟ್ರಿಪ್ ಗೆ ಕರೆಯಲು ಬಂದಿದ್ದಾನೆ. ಅಮೃತಾ ಕಪ್ಪು ಡ್ರೆಸ್ ಹಾಕಿಕೊಂಡಿದ್ದಾಳೆ. ಅವಳು ಹಾಲಿನಲ್ಲಿ ಕೂತು ಒಂದು ಕೈಯಲ್ಲಿ ಮೊಬೈಲ್  ಹಿಡಿದು ಇನ್ನೊಂದು ಕೈಯಿಂದ ಬಾಳೆಹಣ್ಣು ತಿನ್ನುತ್ತಿದ್ದಾಳೆ. ಅಮ್ಮೂ ಎಂದು ವಿಶ್ವ ಕರೆದಾಗ ಅವಳು ತಿರುಗಿ ಕೂಡಾ ನೋಡುತ್ತಿಲ್ಲ. ಅವಳು ಮೊಬೈಲಿನಲ್ಲಿ ಮಾತಾಡುತ್ತಾ ನಗುತ್ತಾ ತನ್ನದೇ ಲೋಕದಲ್ಲಿದ್ದದ್ದು ನೋಡಿ ವಿಶ್ವನಿಗೆ ಶಾಕ್, ಕೋಪ, ದುಃಖಎಲ್ಲಾ ಒಟ್ಟಿಗೆ ಆಗಿ ಅವನು ಕುಸಿಯುವುದೊಂದು ಬಾಕಿ. ಆದರೂ ಹೇಗೋ ಶಕ್ತಿ ತಂದುಕೊಂಡು ಅವಳ ಮುಂದೆ ಹೋಗಿ ನಿಲ್ಲುತ್ತಾನೆ. ಅವಳು ಕೂಲಾಗಿ ವಾಟ್ ಎಂದು ಹುಬ್ಬೇರಿಸಿ ನೋಡುತ್ತಾಳೆ. ಅಮ್ಮೂ! ಯಾರ ಜೊತೆ ಮಾತಾಡ್ತಿದೀಯ! ಮೈಂಡ್ ಯುವರ್ ಓನ್ ಬಿಸಿನೆಸ್! ಹೂ ಆರ್ ಯೂ ಎನಿ ವೇ? ವಿಶ್ವನಿಗೆ ಈಗ ನಿಲ್ಲಲೂ ಶಕ್ತಿಯಿಲ್ಲ. ಇದೇನು ಹುಡುಗಾಟ! ಅಮ್ಮೂ! ನಿನಗೇನಾಯಿತು? ನನ್ನ ನೆನಪಿ

ಮತ್ತೆ ಬಂದಿದೆ ಹೊಸವರ್ಷ

ಇಮೇಜ್
ಮತ್ತೆ ಸರಕಾರ ಉರುಳಿಹೋಗುವ ಭೀತಿ ಬಿಟ್ಟು ಎಲ್ಲಾ ಮಾನ ಹೊಸವರ್ಷ ಬಂದಿದೆ ಮತ್ತೆ ಬ್ರಿಗೇಡ್ ರೋಡಿನಲ್ಲಿ ಗಂಡಸರ ತಳ್ಳಾಟ ಕೊಟ್ಟು ಒಂದು ಕಪಾಳಕ್ಕೆ ಹೊಸವರ್ಷ ಬಂದಿದೆ ಮತ್ತೆ ರಾಜಕಾರಣ ಕುದುರೆ ಕಾಲೆಳೆದಾಟ ತುತ್ತೂರಿ ಊದುತ್ತ ಹೊಸವರ್ಷ ಬಂದಿದೆ ಮತ್ತೆ ಯಾರಿಗೋ ನೂರಾಹತ್ತನೇ ಸನ್ಮಾನ ಸುತ್ತಿ ತಲೆಮಾರಿಗೆ ಪೇಟ ಹೊಸವರ್ಷ ಬಂದಿದೆ ಮತ್ತೆ ಕನ್ನಡಕ್ಕೆ ಅನ್ಯಾಯ ಅನ್ಯಾಯ ಕೂಗು ಹಾ- ಕುತ್ತ ಬ್ರೋ ಹ್ಯಾಪೀ ನ್ಯೂ ಇಯರ್ ಬಂದಿದೆ ಮತ್ತೆ ಭಗವಾನ ರಾಮನಿಂದಾಸ್ತೋತ್ರ ಸತ್ತು ಹಳೆವರ್ಷ ಹೊಸವರ್ಷ ಬಂದಿದೆ