ಪೋಸ್ಟ್‌ಗಳು

Gandhi ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಗಾಂಧೀಜಿಯ ಸಾಬೂನು ಕಲ್ಲು

ಇಮೇಜ್
ಮೂಲ - ರೀಟಾ ರಾಯ್ ಕನ್ನಡ ಅನುವಾದ - ಸಿ ಪಿ ರವಿಕುಮಾರ್ ಸಾಬೂನಿನ ಬದಲು ಮೈ ಉಜ್ಜಿ ತೊಳೆಯಲು ಗಾಂಧೀಜಿ ಒಂದು ಕಲ್ಲನ್ನು ಬಳಸುತ್ತಿದ್ದರು. ಗಾಂಧೀಜಿಗೆ ಮೀರಾ ಬೆನ್ ಒಂದು ನುಣುಪಾದ ಕಲ್ಲು ಕೊಟ್ಟಿದ್ದರು.  ಇದನ್ನು ತಾವು ಹೋದ ಕಡೆಗೆಲ್ಲಾ ಗಾಂಧೀಜಿ ಕೊಂಡೊಯ್ಯುತ್ತಿದ್ದರು. ನೌಖಾಲಿಯಲ್ಲಿ ಗಾಂಧೀಜಿ ಪಾದಯಾತ್ರೆ ಮಾಡಲು ಹೊರಟ ದಿನಗಳು. ನಾರಾಯಣಪುರ ಎಂಬ ಗ್ರಾಮದಲ್ಲಿ ಗಾಂಧೀಜಿ ಮತ್ತು ಜೊತೆಗಾರರು ರಾತ್ರಿ ತಂಗಿದರು.  ಗಾಂಧೀಜಿಯ ವಸ್ತುಗಳನ್ನು ಜೋಪಾನ ಮಾಡುವ ಹೊಣೆ ಹೊತ್ತಿದ್ದ ಮನು ಬೆನ್ ಅವರ ಸಾಬೂನು ಕಲ್ಲನ್ನು ಹಿಂದೆ ತಂಗಿದ ಸ್ಥಳದಲ್ಲೇ ಮರೆತುಬಂದಿದ್ದರು. "ನೀನು ಈಗ ವಾಪಸು ಹೋಗಿ ಕಲ್ಲನ್ನು ಹುಡುಕಿ ತರಬೇಕು. ಆಗ ನೀನು ಮತ್ತೊಮ್ಮೆ ಮರೆಯುವುದಿಲ್ಲ," ಎಂದು ಗಾಂಧೀಜಿ ನುಡಿದುಬಿಟ್ಟರು. "ನನ್ನ ಜೊತೆ ಒಬ್ಬ ಸ್ವಯಂಸೇವಕನನ್ನು ಕರೆದುಕೊಂಡು ಹೋಗಲೇ?" "ಯಾಕೆ?" ಪಾಪ, ಮನು ಬೆನ್! ತಾವು ಬಂದ ದಾರಿಯುದ್ದಕ್ಕೂ ಅಡಕೆ ಮತ್ತು ತೆಂಗಿನ ಮರಗಳ ದಟ್ಟವಾದ ಕಾಡುಗಳಿದ್ದದ್ದನ್ನು ನೆನೆದು ಅವರಿಗೆ ದಿಗಿಲಾಯಿತು. ಅಲ್ಲಿ ಅಪರಿಚಿತರು ದಾರಿ ಕಳೆದುಕೊಂಡರೆ! ಆಗ ದಂಗೆಗಳು ನಡೆಯುತ್ತಿದ್ದ ದಿನಗಳು ಬೇರೆ! ಅಂತೂ ಮನು ಬೆನ್ ಬೆಳಗ್ಗೆ ಒಂಬತ್ತೂವರೆಗೆ ಕಲ್ಲನ್ನು ಹುಡುಕಿಕೊಂಡು ನಾರಾಯಣಪುರದಿಂದ ಒಬ್ಬರೇ  ಹೊರಟರು.  ಬಾಯಲ್ಲಿ ರಾಮನ ಹೆಸರು ಹೇಳುತ್ತಾ ಕಾಡಿನ ರಸ್ತೆಯಲ್ಲಿ ನಡೆದು ಹೋದರು.  ತಾವು ತಂಗಿದ...

ಬಾಪುವನ್ನು ಕಂಡ ಹುಡುಗ

ಇಮೇಜ್
ಮೂಲ - ರಾಮ್ ಪ್ರದೇಶ್ ಶಾಸ್ತ್ರಿ  ಕನ್ನಡಕ್ಕೆ -  ಸಿ ಪಿ ರವಿಕುಮಾರ್  ಒಮ್ಮೆ ದೆಹಲಿಯಲ್ಲಿರುವ ಒಂದು ಹರಿಜನ ಆಶ್ರಮಕ್ಕೆ ಗಾಂಧೀಜಿ ಭೇಟಿ ಕೊಟ್ಟರು. ಆಶ್ರಮದಲ್ಲಿದ್ದ ಕಾರ್ಯಾಗಾರದಲ್ಲಿ ಹುಡುಗರಿಗೆ ಯಾವುದಾದರೂ ಉದ್ಯೋಗದಲ್ಲಿ ತರಬೇತಿ ನೀಡಲಾಗುತ್ತಿತ್ತು.   ಗಾಂಧೀಜಿ ಕಾರ್ಯಾಗಾರವನ್ನು ಹೊಕ್ಕು ಸುತ್ತಲೂ ಸಮೀಕ್ಷೆ ನಡೆಸುತ್ತಿರುವಾಗ ಹುಡುಗರು ತಾವು  ಮಾಡುತ್ತಿದ್ದ ಕೆಲಸ ನಿಲ್ಲಿಸಿ ತಮ್ಮನ್ನು ನೋಡಲು ಬಂದ  ಹಿರಿಯ ನೇತಾರನ ಕಡೆ ನಿಬ್ಬೆರಗಿನಿಂದ ನೋಡುತ್ತಿದ್ದರು. ಅಲ್ಲೊಬ್ಬ ಹುಡುಗ ಅಗ್ಗಿಷ್ಟಿಕೆಯ ಮೇಲೆ ರೊಟ್ಟಿಗಳನ್ನು ಸುಡುತ್ತಿದ್ದ. ಅವನು ತನ್ನ ಕೆಲಸದಲ್ಲಿ ಸಂಪೂರ್ಣ ತಲ್ಲೀನನಾಗಿದ್ದರಿಂದ ಗಾಂಧೀಜಿ ಬಂದಿದ್ದನ್ನು ಅವನು ಗಮನಿಸಲಿಲ್ಲ. ಗಾಂಧೀಜಿ ಅವನನ್ನು  ಗಮನಿಸಿ ಮುಂದೆ ಸಾಗಿದರು.  ಕಾರ್ಯಾಗಾರದಿಂದ  ಹೊರಗೆ ಬಂದಾಗ ಒಬ್ಬ ಹುಡುಗ "ಅಯ್ಯೋ! ರಾಜು ರೊಟ್ಟಿ ಮಾಡೋದರಲ್ಲಿ ಮುಳುಗಿಹೋಗಿದ್ದಾನೆ - ಅವನು ಬಾಪೂಜಿಯನ್ನು ನೋಡಲೇ ಇಲ್ಲ!" ಎಂದು ಪೇಚಾಡಿದ. ಬಾಪು ತಕ್ಷಣ " ಇವತ್ತು ಇಲ್ಲಿ ನನ್ನನ್ನು ನಿಜವಾಗಲೂ ಯಾರಾದರೂ ನೋಡಿದ್ದರೆ ಅದು ರೊಟ್ಟಿ ಮಾಡುವ ರಾಜು ಮಾತ್ರ!" ಎಂದರು. 

ಗಾಂಧೀಜಿ, ಭಗವದ್ಗೀತೆ ಮತ್ತು ಬ್ರಾಹ್ಮಣರು

ಇಮೇಜ್
ಸಿ ಪಿ ರವಿಕುಮಾರ್     ಭಗವದ್ಗೀತೆಯನ್ನು ಕುರಿತು ವಿವಾದಿತ ವ್ಯಕ್ತಿ ಶ್ರೀ ಕೆ. ಎಸ್. ಭಗವಾನ್ ಆಗಾಗ ಹೇಳಿಕೆಗಳನ್ನು ಕೊಡುವುದನ್ನು ನಾವು ಕೇಳುತ್ತೇವೆ. ಹಾಗೇ ಬ್ರಾಹ್ಮಣವರ್ಗವನ್ನು ಕುರಿತು ಅವರು ಮತ್ತು ಇನ್ನೂ ಅನೇಕ ಸಾಹಿತಿಗಳು ಆಕ್ರೋಶ ವ್ಯಕ್ತ ಪಡಿಸುವುದನ್ನೂ ಪತ್ರಿಕೆಗಳಲ್ಲಿ ಆಗಾಗ ಓದುತ್ತೇವೆ.  ಭಗವದ್ಗೀತೆಯನ್ನು ಕುರಿತು ಮತ್ತು ಬ್ರಾಹ್ಮಣ್ಯವನ್ನು ಕುರಿತು ಗಾಂಧೀಜಿ ಏನು ಹೇಳುತ್ತಿದ್ದರು? ಇದನ್ನು ತಿಳಿಯುವ ಕುತೂಹಲದಿಂದ ನಾನು http://www.mkgandhi.org/ ವೆಬ್ ತಾಣದಲ್ಲಿ ಹುಡುಕಿದೆ. ಗಾಂಧೀಜಿಯವರ ಬರವಣಿಗೆಗಳಿಂದ ಆಯ್ದ ಭಾಗಗಳನ್ನು ಅವರು ಅಚ್ಚುಕಟ್ಟಾಗಿ ವಿಂಗಡಿಸಿದ್ದಾರೆ.  ಈ ಎರಡೂ ವಿವಾದಿತ ವಿಷಯಗಳನ್ನು ಕುರಿತ ಗಾಂಧೀಜಿಯವರ ಮಾತುಗಳನ್ನು ನಾನು ಅನುವಾದಿಸಿ ಕೆಳಗೆ ಕೊಡುತ್ತಿದ್ದೇನೆ.  ಇದನ್ನು ಓದುತ್ತಿದ್ದಾಗ   ಕೆ. ಎಸ್. ಭಗವಾನ್ ನಂಥವರು ಗಾಂಧೀಜಿಯ ಕಾಲದಲ್ಲೂ ಇದ್ದಿರಬಹುದು ಎನ್ನಿಸಿತು; ಮುಂದೆಯೂ ಇರುತ್ತಾರೆ. ಅವರಿಗೆ ಗಾಂಧೀಜಿಯ ಮಾತುಗಳು ಬೆಳಕು ನೀಡಲೆಂದು ಹಾರೈಸುತ್ತೇನೆ! ಭಗವದ್ಗೀತೆ ಕುರಿತು ಗಾಂಧಿ  ಭಗವದ್ಗೀತೆಯು ನಂಬಿಕೆ ಇಲ್ಲದವರಿಗೆ ಅಲ್ಲವೇ ಅಲ್ಲ (T-೨-೩೧೨) ಭಗವದ್ಗೀತೆಯು ಬೆಳಕು ಮತ್ತು ಕತ್ತಲೆಗಳ ಶಕ್ತಿಗಳನ್ನು ಪ್ರತ್ಯೇಕಗೊಳಿಸಿ  ನೋಡುತ್ತದೆ ಮತ್ತು ಅವುಗಳ ನಡುವಿನ ಅಸಾಂಗತ್ಯವನ್ನು ತೋರಿಸುತ್ತದೆ (MM...

ಬಾಪೂ ಮತ್ತು ನಯಾ ದೌರ್

ಇಮೇಜ್
ಬಾಪೂ ಮತ್ತು ನಯಾ ದೌರ್  ಸಿ. ಪಿ. ರವಿಕುಮಾರ್  ಇ ತ್ತೀಚೆಗೆ ಕೈಮಗ್ಗದ ಕೆಲಸಗಾರರ ಪರವಾಗಿ ನಾಟಕಕಾರ ಪ್ರಸನ್ನ ಉಪವಾಸ ಸತ್ಯಾಗ್ರಹ ಹೂಡಿದ್ದಾರೆ. ಇದರ ಬಗ್ಗೆ ಓದುವಾಗ ನನಗೆ ಕನ್ನಡ ಕತೆಗಾರರಾದ ಬಾಗಲೋಡಿ ದೇವರಾಯ ಅವರ "ಮಗ್ಗದ ಸಾಹೇಬ" ಕತೆ ನೆನಪಾಗಿ ಅದನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ ನನ್ನ ಬ್ಲಾಗ್ ನಲ್ಲಿ ಪ್ರಕಟಿಸಿದೆ. ಮಹಾತ್ಮಾ ಗಾಂಧಿ ಬೃಹತ್ ಕೈಗಾರಿಕೀಕರಣದ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲದಿಂದ ಅವರ ಕೆಲವು ಲೇಖನಗಳನ್ನು ಓದಿದೆ; ಅವುಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸಿದೆ. ಈ ಹುಡುಕಾಟದಲ್ಲಿ ನನ್ನ ಕಣ್ಣಿಗೆ ಬಿದ್ದ ಕವಿತೆ "ಬಾಪೂ." ಹಿಂದಿಯ ಪ್ರಸಿದ್ಧ ಕವಿ ಸುಮಿತ್ರಾನಂದನ್ ಪಂತ್  ಈ ಕವಿತೆಯನ್ನು ಸ್ವಾತಂತ್ರ್ಯಪೂರ್ವದಲ್ಲಿ (೧೯೩೯) ರಚಿಸಿದರು. ಇಲ್ಲಿ "ಬಾಪೂ" ಎಂದು ಅವರು ಸಂಬೋಧಿಸುವುದು ಮಹಾತ್ಮಾಗಾಂಧಿಯವರನ್ನು; ಆದರೆ "ಬಾಪೂ" ಎಂದರೆ ತಂದೆ ಎಂಬ ಅರ್ಥ ಬರುವುದರಿಂದ ರಬೀಂದ್ರನಾಥ್ ಟ್ಯಾಗೋರ್  ಗೀತಾಂಜಲಿಯಲ್ಲಿ "ತಂದೆ" ಎಂದು ಸಂಬೋಧಿಸಿದ ಭಗವಂತನ ಸ್ವರೂಪವನ್ನು ಉದ್ದೇಶಿಸಿ ಮಾತಾಡುತ್ತಿದ್ದಾರೆ ಎಂದು ಕೂಡಾ ಅರ್ಥೈಸಬಹುದು.  ಈ ಕವಿತೆಯನ್ನು ಬರೆದಾಗ ಕೈಗಾರಿಕಾ ಕ್ರಾಂತಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಇಂಗ್ಲೆಂಡ್ ನಲ್ಲಿ ಮಿಲ್ ಗಳು ಸ್ಥಾಪಿತವಾಗಿದ್ದವು; ಈ ಮಿಲ್ ಬಟ್ಟೆಗಳಿಗೆ ಭಾರತವು ಒಂದು ಮಾರುಕಟ್ಟೆಯಾಯಿತು. ನಮ್ಮ ಖಾದಿ...

ಗ್ರಾಮೀಣ ಕೈಗಾರಿಕೆ ಕುರಿತು ಗಾಂಧಿ -೨

ಇಮೇಜ್
ಗ್ರಾಮೀಣ ಕೈಗಾರಿಕೆ ಕುರಿತು ಗಾಂಧಿ -೨ ಮೂಲ: ಮಹಾತ್ಮಾ ಗಾಂಧಿ ಅನುವಾದ - ಡಾ. ಸಿ. ಪಿ. ರವಿಕುಮಾರ್ (ಮೊದಲ ಭಾಗವನ್ನು ಓದಲು ಈ ಕೊಕ್ಕೆಯನ್ನು ಅನುಸರಿಸಿ.) ಖಾದಿ  ಖಾ ದಿ ನನಗೆ ಭಾರತದ ಮಾನವ ಸಮಾಜದ ಐಕ್ಯತೆಯ ಕುರುಹಾಗಿ ಕಾಣುತ್ತದೆ. ಭಾರತದ ಆರ್ಥಿಕ ಸ್ವಾತಂತ್ರ್ಯದ ಕುರುಹಾಗಿ, ಸಮಾನತೆಯ ಕುರುಹಾಗಿ, ಕೊನೆಗೆ ಜವಾಹರಲಾಲ್ ನೆಹರೂ ಅವರ ಕಾವ್ಯಮಯ ಭಾಷೆಯಲ್ಲಿ ಹೇಳುವುದಾದರೆ "ಭಾರತದ ಸ್ವಾತಂತ್ರ್ಯದ ಪೋಷಾಕಿನಂತೆ" ತೋರುತ್ತದೆ.  ಖಾದಿ ಮನೋಭಾವ ಎಂದರೆ ಆವಶ್ಯಕ ವಸ್ತುಗಳ ತಯಾರಿಕೆ ಮತ್ತು ವಿತರಣೆಗಳನ್ನು ವಿಕೆಂದ್ರೀಕರಿಸುವುದು ಎಂದೇ ಅರ್ಥ. ಪ್ರತಿಯೊಂದು ಹಳ್ಳಿಯೂ ತನಗೆ ಅಗತ್ಯವಾದುದಕ್ಕಿಂತ ಸ್ವಲ್ಪ ಹೆಚ್ಚು ಪರಿಮಾಣದಲ್ಲಿ ನಗರಗಳ ಆವಶ್ಯಕತೆಯ ಪೂರೈಕೆಗಾಗಿ ಪದಾರ್ಥಗಳನ್ನು ತಯಾರಿಸಬೇಕು. ದೊಡ್ಡ ಕೈಗಾರಿಕೆಗಳನ್ನು ಕೇಂದ್ರೀಕೃತಗೊಳಿಸಿ ರಾಷ್ಟ್ರದ ಮಟ್ಟದಲ್ಲಿ ನಡೆಸಬೇಕು. ಆದರೆ ಯಾವ ರಾಷ್ಟ್ರದ ಬಹುಪಾಲಿನ ಚಟುವಟಿಕೆಗಳು ಹಳ್ಳಿಗಳಲ್ಲಿ ನಡೆಯುತ್ತವೋ ಅಲ್ಲಿ ಈ ದೊಡ್ಡ ಕೈಗಾರಿಕೆಗಳ ಪಾತ್ರ ಗೌಣವೇ ಆಗಿರುತ್ತದೆ.  ಖಾದಿಯ ತಯಾರಿಕೆ ಎಂದರೆ ಹತ್ತಿಯ ಕೃಷಿ, ಹತ್ತಿಯನ್ನು ಬಿಡಿಸುವುದು, ಹತ್ತಿಯ ಬೀಜಗಳನ್ನು ಬೇರ್ಪಡಿಸುವುದು, ಹತ್ತಿಯನ್ನು ಸ್ವಚ್ಛಗೊಳಿಸುವುದು, ಎಳೆಗಳನ್ನು ಬಿಡಿಸುವುದು, ಎಳೆಗಳ ಆಕಾರದ ಪ್ರಕಾರ ಅವುಗಳನ್ನು ಬೇರೆ ಮಾಡುವುದು, ಬಣ್ಣ ಹಾಕುವುದು, ...

ಗ್ರಾಮೀಣ ಕೈಗಾರಿಕೆ ಕುರಿತು ಗಾಂಧಿ - ಭಾಗ ೧

ಇಮೇಜ್
ಗ್ರಾಮೀಣ ಕೈಗಾರಿಕೆ ಕುರಿತು ಗಾಂಧಿ - ಭಾಗ ೧  ಮೂಲ: ಮಹಾತ್ಮಾ ಗಾಂಧಿ ಕನ್ನಡ ಅನುವಾದ:  ಡಾ. ಸಿ. ಪಿ. ರವಿಕುಮಾರ್ ಇಂದು ಗಾಂಧೀಜಿಯವರ ಪುಣ್ಯತಿಥಿ. ಯಾಂತ್ರೀಕೃತ ಮಗ್ಗಗಳು ಕೈಮಗ್ಗಗಳನ್ನು ನಿರ್ನಾಮಗೊಳಿಸಿ ನಿರುದ್ಯೋಗವನ್ನು ಸೃಷ್ಟಿಸುತ್ತವೆ ಎಂದು ಪ್ರತಿಭಟಿಸಿ ರಂಗ ನಾಟಕ ಕರ್ಮಿ ಮತ್ತು ಗಾಂಧೀವಾದಿ ಪ್ರಸನ್ನ ಇಂದು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಗಾಂಧೀಜಿ ಗುಡಿ ಕೈಗಾರಿಕೆಗಳನ್ನು ಕುರಿತು ವ್ಯಕ್ತ ಪಡಿಸಿರುವ ಅಭಿಪ್ರಾಯಗಳನ್ನು ನೋಡುವುದು ಸೂಕ್ತ.  ಗ್ರಾ ಮೀಣ ಕೈಗಾರಿಕೆಗಳ ಅಳಿವಿನಿಂದ ಭಾರತದ ಏಳು ಲಕ್ಷ ಗ್ರಾಮಗಳ ನಾಶವಾಗುತ್ತದೆ. ನಾನು ಕೊಟ್ಟ ಸಲಹೆಗಳನ್ನು ಕುರಿತು ಪತ್ರಿಕೆಗಳಲ್ಲಿ ಬಂದ ಟೀಕೆಗಳನ್ನು ಗಮನಿಸಿದ್ದೇನೆ. ನಿಸರ್ಗದ ಯಾವ ಶಕ್ತಿಗಳ ಮೇಲೆ ಮನುಷ್ಯ ವಿಜಯ ಸಾಧಿಸಿದ್ದಾನೋ ಆ ಶಕ್ತಿಗಳ ಬಳಕೆಗೆ ನಾನು ಶರಣಾಗಬೇಕೆಂದು ಕೆಲವರು ನನಗೆ ಸಲಹೆ ಕೊಟ್ಟಿದ್ದಾರೆ.  ನೀರು, ಗಾಳಿ, ತೈಲ ಮತ್ತು ವಿದ್ಯುತ್ - ಇವುಗಳನ್ನು ಪಾಶ್ಚಾತ್ಯರು ಬಳಸಿಕೊಂಡಷ್ಟೇ ಸಂಪೂರ್ಣವಾಗಿ ನಾವೂ ಉಪಯೋಗಿಸಬೇಕು ಎಂದು ನನ್ನ ಟೀಕಾಕಾರ ಅಭಿಪ್ರಾಯ. ನಿಸರ್ಗದ ನಿಗೂಢ ಶಕ್ತಿಗಳ ಮೇಲೆ ಸಾಧಿಸಿದ ಹತೋಟಿಯ ಕಾರಣ ಪ್ರತಿಯೊಬ್ಬ ಅಮೇರಿಕನ್ ಪ್ರಜೆಗೂ ಮೂವತ್ತಮೂರು ಜನ ದಾಸರು ದೊರೆತಿದ್ದಾರಂತೆ. ಇದೇ ಮಾದರಿಯನ್ನು ಭಾರತದಲ್ಲಿ ಅಳವಡಿಸಿದರೆ ಪ್ರತಿಯ...

ಪತ್ರಿಕೋದ್ಯಮವನ್ನು ಕುರಿತು ಗಾಂಧಿ

ಇಮೇಜ್
ಅನುವಾದ: ಸಿ.ಪಿ. ರವಿಕುಮಾರ್ ಗಾಂಧಿ ಪ್ರೆಸ್ ಬಗ್ಗೆ ಹೀಗೆ ಬರೆಯುತ್ತಾರೆ: (೧) ಸೇವೆಯೇ ಪತ್ರಿಕೋದ್ಯಮದ ಏಕಮಾತ್ರ ಗುರಿಯಾಗಿರಬೇಕು ಎಂಬುದು ನನ್ನ ಭಾವನೆ. ಪತ್ರಿಕೆಗಳು ಒಂದು ಮಹಾನ್ ಶಕ್ತಿಯೇನೋ ನಿಜ, ಆದರೆ ನಿಗ್ರಹವಿಲ್ಲದ ನೀರಿನ ತೊರೆಯು ಹೇಗೆ  ಇಡೀ ಹಳ್ಳಿಗಳನ್ನು ಮುಳುಗಿಸಿ ಬೆಳೆಯನ್ನು ನಾಶ ಮಾಡುತ್ತದೋ, ನಿಗ್ರಹವಿಲ್ಲದ ಲೇಖನಿಯೂ ನಾಶಕ್ಕೆ ಕಾರಣವಾಗುತ್ತದೆ. ಆದರೆ ಬರವಣಿಗೆಗೆ ನಿಗ್ರಹವು ಹೊರಗಡೆಯಿಂದ ಬಂದರೆ ಅದು ನಿಗ್ರಹವಿಲ್ಲದೇ ಇರುವ ಬರವಣಿಗೆಗಿಂಗಲೂ ಹೆಚ್ಚು ವಿಷಮಯವಾಗಬಲ್ಲದು. ಬರವಣಿಗೆಗೆ ಸ್ವಯಂನಿಗ್ರಹವಿದ್ದಾಗ ಮಾತ್ರ ಅದು ಪ್ರಯೋಜನಕಾರಿ. ನನ್ನ ಈ ವಿಚಾರಧಾರೆ ಸರಿಯಾಗಿದ್ದರೆ ಜಗತ್ತಿನ ಎಷ್ಟು ನಿಯತಕಾಲಿಕೆಗಳು ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತವೆಯೋ? ನಿಷ್ಪ್ರಯೋಜಕವಾದ ಪತ್ರಿಕೆಗಳನ್ನು ತಡೆಯುವವರು ಯಾರು? ಯಾವುದು ನಿಷ್ಪ್ರಯೋಜಕ ಎಂಬುದನ್ನು ನಿರ್ಧರಿಸುವುದು ಯಾರು? ಜಗತ್ತಿನಲ್ಲಿ ಹೇಗೆ ಒಳ್ಳೆಯದೂ ಮತ್ತು ಕೆಟ್ಟದ್ದೂ ಒಟ್ಟಿಗೆ ಬಾಳುತ್ತವೆಯೋ ಹಾಗೇ ಪ್ರಯೋಜನವುಳ್ಳದ್ದೂ ಮತ್ತು ನಿಷ್ಪ್ರಯೋಜಕವಾದದ್ದೂ ಜೊತೆಜೊತೆಗೇ ಬಾಳಬೇಕಾಗುತ್ತದೆ; ಯಾವುದನ್ನು ಸ್ವೀಕರಿಸಬೇಕು ಎಂಬುದು  ಮನುಷ್ಯನಿಗೆ  ಬಿಟ್ಟದ್ದು. (ಆತ್ಮ ಚರಿತ್ರೆ)  (೨) ಬರಿಯ ತೋರಿಕೆ,  ಏಕಪಕ್ಷೀಯತೆ, ಅನಿಖರತೆ, ಮತ್ತು ಸ್ವಲ್ಪ ಮಟ್ಟಿಗೆ ಅಪ್ರಾಮಾಣಿಕತೆ, ಇವೆಲ್ಲಾ ಆಧುನಿಕ ಪತ್ರಿಕೋದ್ಯಮದಲ್ಲಿ ನುಸ...