ಪೋಸ್ಟ್‌ಗಳು

ನವೆಂಬರ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮನೆಗೆಲಸದವಳು, ೧೯೩೭

ಇಮೇಜ್
ಮೂಲ - ನತಾಷಾ ಟ್ರೆಥೆವೇ (ಅಮೇರಿಕಾ ಸಂಸ್ಥಾನ) ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಇಡೀ ವಾರ ಅವಳು ಶುಚಿಗೊಳಿಸಿದ್ದಾಳೆ ಬೇರಾರದೋ ಮನೆ.  ಬಗ್ಗಿ ನೋಡಿಕೊಂಡಿದ್ದಾಳೆ  ತನ್ನದೇ ಬಿಂಬ  ತಾನು ತಿಕ್ಕಿ ತೊಳೆದ  ತಾಮ್ರತಳದ ಪಾತ್ರೆಗಳಲ್ಲಿ, ತಾನೇ ಉಜ್ಜಿ ಒರೆಸಿದ  ಮರದ ಮೇಜು-ಬಾಗಿಲುಗಳಲ್ಲಿ, ತಾನೇ ಮುಚ್ಚಿದ  ಟಾಯ್ಲೆಟ್ ಮುಚ್ಚಳದಲ್ಲಿ.  ಅವಳ ಬಿಂಬ ಅವಳಿಗೆ ಹೇಳುತ್ತದೆ: ಇದನ್ನು ಬದಲಾಯಿಸೋಣ, ಹುಡುಗಿ.  ರವಿವಾರ ಮಾತ್ರ ಅವಳಿಗೆ ಸೇರಿದ್ದು - ಚರ್ಚಿಗೆ ಧರಿಸುವ ಬಟ್ಟೆಗಳಿಗೆ  ಗಂಜಿ ಹಾಕಿ ಒಗೆದು ಇಸ್ತ್ರಿ ಮಾಡಿ  ತೂಗುಹಾಕಿದ್ದಾಳೆ, ಸಂಗೀತದ ರೆಕಾರ್ಡ್ ಹಾಡುತ್ತಿದೆ, ಇಡೀ ಮನೆಯೇ ನರ್ತಿಸುತ್ತಿದೆ.  ಅವಳು ಪರದೆ ಸರಿಸಿ  ಇಡೀ ಮನೆಯನ್ನು ಬೆಳಗುತ್ತಾಳೆ, ಬೆಳಕಿನಿಂದ, ಬಕೆಟ್ ತುಂಬಾ ನೀರಿನಿಂದ, ಅಷ್ಟಮೂಲೆಗಳ ಸಾಬೂನಿನಿಂದ.  ಸ್ವಚ್ಚತೆಯು ದೈವತ್ವಕ್ಕೆ ಸಮಾನ.  ಕಿಟಕಿ ಬಾಗಿಲುಗಳನ್ನು ಪೂರ್ತಿ ತೆರೆದಿದ್ದಾಳೆ, ಪರದೆಗಳು ಹಿಂದೆಮುಂದೆ ಓಲಾಡುತ್ತಿವೆ, ಬಗ್ಗಿ ತೆಗೆಯುವಾಗ ಒಗೆದ ಬಟ್ಟೆಗಳನ್ನು ಅವಳ ಕುತ್ತಿಗೆ ಬಡಿಯುತ್ತದೆ ಮಡಕೆಗಳ ಅಂಚಿಗೆ, ಒಣಹಾಕಿದ ಬಟ್ಟೆಗಳು ತಂತಿಯ ಮೇಲೆ ರಪರಪ ಸದ್ದು ಮಾಡುತ್ತಿವೆ.  ನನ್ನ  ಬಳಿಯಲ್ಲೇ ಇರುವೆ ಓ ನನ್ನ ದೇವರೇ.  ಅವಳು ಕಂಬಳಿಗೆ ಹೊಡೆದು ಧೂಳೆಬ್ಬಿಸುತ್ತಾಳೆ ಪೊರಕೆಯಿಂದ ಝಾಡಿಸುತ್ತಾಳೆ ಮಣ್ಣುಧ

ಇಡೀ ರಾತ್ರಿ

ಇಮೇಜ್
ಮೂಲ ಗಜಲ್ - ಮಖದೂಮ್ ಮುಹಿಯುದ್ದೀನ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ (ಇದನ್ನು "ಗಮನ್" ಹಿಂದಿ ಚಿತ್ರಕ್ಕಾಗಿ ಛಾಯಾ ಗಂಗೂಲಿ ಹಾಡಿದ್ದಾರೆ .) ಬರುತಲಿತ್ತು ನಿಮ್ಮದೇ ನೆನಪು ಇಡೀ ರಾತ್ರಿ ಒದ್ದೆಕಣ್ಣು ಮುಗುಳುನಗುತಲಿತ್ತು ಇಡೀ ರಾತ್ರಿ ಇಡೀ ರಾತ್ರಿ ಉರಿಯುತಿತ್ತು ನೋವಿನ ಕಿರುಹಣತೆ ದುಃಖದ ಹೊಗೆ ನರಳಿ ನಡುಗುತಿತ್ತು ಇಡೀ ರಾತ್ರಿ ಕೊಳಲ ಕೊರಳಿನಿಂದ ಹೊರಟ ಮಧುರ ನಾದವೊಂದು ನೆನಪಿನಂತೆ ಮರುಕಳಿಸುತಲಿತ್ತು ಇಡೀ ರಾತ್ರಿ ಎದೆಗೆ ಇಳಿಯುತ್ತಿತ್ತು ನೆನಪು ಚಂದ್ರಬಿಂಬದಂತೆ ಬೆಳದಿಂಗಳು ಜಗಮಗಿಸುತ್ತಿತ್ತು ಇಡೀ ರಾತ್ರಿ ಹುಚ್ಚನಂತೆ ಬೀದಿ ಬೀದಿ ಅಲೆಯುತಿದ್ದನಾರೋ ಸದ್ದು ಯಾವುದೋ ಕೇಳುತಿತ್ತು ಇಡೀ ರಾತ್ರಿ

ರಾಜನು ತನ್ನನ್ನು ರಕ್ಷಿಸಿಕೊಂಡ

ಇಮೇಜ್
ಮೂಲ ಹಿಂದಿ - ಸೂರ್ಯಕಾಂತ್ ತ್ರಿಪಾಠಿ ನಿರಾಲಾ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ರಾಜನು ತನ್ನನ್ನು ರಕ್ಷಿಸಿಕೊಂಡ.  ಕೋಟೆ ಕಟ್ಟಿದ, ದೊಡ್ಡ ಸೈನ್ಯ ಇಟ್ಟುಕೊಂಡ.  ಬಾಲ ಅಲ್ಲಾಡಿಸುವ ಸಾಮಂತರಾಜರು  ತಮ್ಮ ಸ್ವಾರ್ಥದ ಕೋಲನ್ನಿಟ್ಟುಕೊಂಡು  ಅವನ  ಹಿಂದೆ ಬಂದರು.  ಗ್ರಂಥಗಳಲ್ಲಿ  ಬ್ರಾಹ್ಮಣರು  ಜನತೆಯನ್ನು ಬಂಧಿಸಿ ತಂದ ರು.  ಕವಿಗಳು ರಾಜನ ಶೌರ್ಯವನ್ನು ಹಾಡಿದರು, ಲೇಖಕರು ಲೇಖನಗಳನ್ನು ಬರೆದರು, ಇತಿಹಾಸಕಾರರು ಇತಿಹಾಸದ ಪುಟ ತುಂಬಿಸಿದರು.  ನಟರು-ಕಲಾವಿದರು ನಾಟಕಗಳನ್ನು ರಚಿಸಿ  ರಂಗಮಂಚದ ಮೇಲೆ ಆಡಿದರು.  ಜನರ ಮೇಲೆ ನಾಟಿತು ರಾಜನ ಸಮ್ಮೋಹನಾಸ್ತ್ರ, ಲೋಕದ ನಾರಿಯರಿಗೆ ಅವನ ರಾಣಿಯರು ಆದರ್ಶರಾದರು, ಧರ್ಮಕಾರ್ಯಗಳು ಹೆಚ್ಚುತ್ತಿವೆ ಎಂಬ ಸುಳ್ಳು ಹಬ್ಬಿತು.  ಆದರೆ ಸಭ್ಯತೆಯ ಹೆಸರಿನಲ್ಲಿ ಧರ್ಮ ಕಂಟಕದಲ್ಲಿತ್ತು.  ರಕ್ತದ ನದಿ ಹರಿಯಿತು, ಜನ ಕಣ್ಣು-ಕಿವಿ ಮುಚ್ಚಿಕೊಂಡು ಅದರಲ್ಲಿ ಮುಳುಗೆದ್ದರು.  ಕಣ್ಣು ತೆರೆದಾಗ ರಾಜ ತನ್ನನ್ನು ರಕ್ಷಿಸಿಕೊಂಡ. 

ಪ್ರವಾಸ

ಇಮೇಜ್

ರೆಮೊರಾ, ರೆಮೊರಾ

ಇಮೇಜ್
ಮೂಲ: ಥಾಮಸ್ ಲಕ್ಸ್ (ಅಮೇರಿಕಾ ಸಂಸ್ಥಾನ) ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಶಾರ್ಕ್ ಮೀನಿಗೆ ಅವಚಿಕೊಂಡಿದೆ ಒಂದು ಹೀರುವ ಶಾರ್ಕ್, ಅದಕ್ಕೆ ಅಂಟಿಕೊಂಡು ಅದರ ತುತ್ತನ್ನು ನುಂಗಿ ಬದುಕುವ ಮತ್ತೊಂದು ಇನ್ನೂ ಪುಟ್ಟದು, ಒಂದೆರಡು ಇಂಚು ಉದ್ದದ್ದು, ಮತ್ತದರ ಮೇಲೆ ಮಾಡುತ್ತಿದೆ ಸವಾರಿ ಇನ್ನೊಂದು, ಜಾಲರಿಯ ಕಣ್ಣಿನ ಗಾತ್ರದ್ದು; ಪುಟ್ಟದಾಗುತ್ತಾ ಪುಟ್ಟದಾಗುತ್ತಾ (ಮಂಕ, ಮಡೆಯ, ಮಡ್ಡಿ, ಶತಮೂರ್ಖ) ಎಲ್ಲಕ್ಕಿಂತಲೂ ತುತ್ತತುದಿಗೆ ಒಂದಿದೆ ಮೈಕ್ರೋ ಚುಕ್ಕೆ ಶಾರ್ಕ್, ಬಲ್ಬ್ ಒಳಗೆ ಅಲ್ಲಾಡುವ ತಂತಿಯ ಗಾತ್ರದ್ದು, ತುಡಿಯುವ ಹೃದಯವಿದೆ ಅದರಲ್ಲೂ, ಮಹಾಸಮುದ್ರದಲ್ಲಿ ಅದೂ ಈಜುತ್ತದೆ ತನ್ನ ಅತಿಥೇಯನಿಂದ ಸ್ವೀಕರಿಸುತ್ತಾ ಆಹಾರ, ತತ್ ಕಾರಣ ಅತಿಥೇಯನ ಹಸಿವಿಗೆ ನೀಡಿ ಆಧಾರ. ನೇರವಾಗಿ ತಿನ್ನಲು ಅದು ತೀರಾ ಪುಟ್ಟದು (ಬಾಯ್ತೆರೆದು ಈಜುವ ಪ್ರಾಣಿಗಳು ಆದರೂ ಇವೆ ಸುತ್ತಲೂ) ಹೀಗಾಗಿ ಅದು ಈಜುತ್ತದೆ ನೀಲಪ್ರವಾಹದಲ್ಲಿ, ಕಣ್ಣಿಗೆ ಕಾಣದ  ಪಿರಮಿಡ್ ತುತ್ತತುದಿ ಮಿಕ್ಕೆಲ್ಲದರ ಮೇಲಿರುವ ತುತ್ತುತುದಿ.     ಕವಿತೆಯ ಸ್ವಾರಸ್ಯ: ರೆಮೊರಾ ಎಂಬುವುದು ಒಂದು ಪುಟ್ಟ  ಶಾರ್ಕ್ ಮೀನಿನ ಹೆಸರು. ಬಾಟಮ್ ಆಫ್ ದ ಪಿರಮಿಡ್ ಎಂಬ ಮಾತನ್ನು ನೀವು ಕೇಳಿರಬಹುದು. ಅದನ್ನು ಕುರಿತು ಯೋಚಿಸಿ. ಬಲಿಷ್ಠನಾದವನನ್ನು ಎಲ್ಲಕ್ಕಿಂತ ಮೇಲಿರುವ ರಾಜ ಎಂದು ಭಾವಿಸುವುದು ರೂಢಿ. ಇಲ್ಲಿ  ಅತ್ಯಂತ ಸಣ್ಣ ಶಾರ್ಕ್ ಎಲ್ಲಕ್ಕಿಂತ ಮೇಲೆ ತು

ಡೋರಿ ಅಟ್ಲಾಂಟಾಗೆ ಹೊರಟಿದ್ದು

ಇಮೇಜ್
ಮೂಲ - ಮಾರ್ಕ್ ಹ್ಯಾಲಿಡೆ (ಅಮೇರಿಕಾ ಸಂಸ್ಥಾನ) ಕನ್ನಡಕ್ಕೆ - ಸಿ. ಪಿ ರವಿಕುಮಾರ್     ಜೆನ್? ಹೇಯ್, ನಾನು, ಡೋರಿ. ಬಸ್‍ನಲ್ಲಿ ಹೊರಟಿದ್ದೇನೆ ಲಗ್ವಾರ್ಡಿಯಾ, ಅಟ್ಲಾಂಟಾಗೆ.  ಏನು? ... ಇರಬಹುದು. ನನಗೆ ಖಡಾಖಂಡಿತ ಗೊತ್ತಿಲ್ಲ. ಅವನ ದಿನಚರಿ ಎಷ್ಟು ಕಿತ್ತುಹೋಗಿದೆ ಅಂದರೆ ...  ಅದು ಹೋಗಲಿ. ನಾನು ನಿನಗೆ ಮಾರ್ಸಿಯ ವಿಷಯ ಹೇಳೋದಿತ್ತು. ಹೂಂ.  ನಾನು ಅವಳಿಗೆ ಹೇಳಿದೆ. ನಾನಂದೆ, ಮಾರ್ಸೀ, ಇವನು ಉಳಿದವರ ಹಾಗಲ್ಲ ಅನ್ನಿಸುತ್ತೆ, ಗೊತ್ತಾ? ನೀನು ಈನಡುವೆ  ಡೇಟ್ ಮಾಡಿದ ಹುಡುಗರಿಗೆ ಹೋಲಿಸಿ ನೋಡು.  ನೀನು ಅವರ ಬಗ್ಗೆ ಹೇಳಿದ್ದು ಕೇಳಿದರೆ  ನಿಜ ಹೇಳ್ತೀನಿ, ಮಾರ್ಸೀ, ಈ ಹುಡುಗರು  ಎಷ್ಟೇ ಚಮಕ್ ಧಮಕ್ ಇರಬಹುದು, ಎಷ್ಟೇ ಒಳ್ಳೇ ಕೆಲಸದಲ್ಲಿರಬಹುದು, ಆದರೆ ನಿಜ ಹೇಳಬೇಕಂದ್ರೆ - ಕೊನೆಗೆ ಆಗೋದೇನು, ಮಂಚಕ್ಕೆ ಹೋಗೋದು ತಾನೇ, ಬೆಳಗ್ಗೆ ಎದ್ದಾಗ ಕಾಫಿ ಚೆನ್ನಾಗಿತ್ತು, ಥ್ಯಾಂಕ್ಸ್ ಅಂತ ಹೇಳೋದು, ಅಷ್ಟೇ ತಾನೇ? ಆದರೆ ಈ ಹುಡುಗ ... ಏನಂದಿ? ಹೌದು, ಜೇಸನ್. ಹೂಂ,  ನಾನು ಮಾರ್ಸಿಗೆ ಹೀಗೇ ಹೇಳಿದೆ,  ನೀನು ಹೇಳೋದು ಕೇಳಿದರೆ ಜೇಸನ್ ಬೇರೆ ಥರದ ಹುಡುಗ ಅಂತ ಕಾಣತ್ತೆ, ಮತ್ತೆ ಬಾಬ್ ಅವನ ವಿಷಯದಲ್ಲಿ ಹೇಳಿದ್ದು ಕೇಳಿದರೂ ಅಷ್ಟೇ ... ಬಾಬ್ ಅವನ ಜೊತೆ ಹೋದ ವರ್ಷ ಯಾವುದೋ ಪ್ರಾಜೆಕ್ಟ್ ಮಾಡಿದ್ದನಂತೆ,  ಅದಕ್ಕೇ ನಾನು ಮಾರ್ಸಿಗೆ ಅಂದೆ, ನೀವಿಬ್ಬರೂ ಈಗಾಗಲೇ  ಎರಡು ಸಲ ಕಾಫಿ, ಎರಡು ಸಲ ಮಧ್

ಕಷ್ಟದ ದಿನ

ಇಮೇಜ್
ಮೂಲ ಪದ್ಯ - ಕೇ ರಯಾನ್ (ಅಮೇರಿಕಾ ಸಂಸ್ಥಾನ) ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಪ್ರತಿದಿನವೂ ತೆರೆದುಕೊಳ್ಳುವುದಿಲ್ಲ ನೋಡಿ ಮಾಯಾವಿ ದರ್ಜಿಯ ಅದೃಷ್ಟ. ಕದ್ದು ತಂದ ಬಟ್ಟೆಯಲ್ಲಿ ಕೆಲವೊಮ್ಮೆ ಕಾಣುತ್ತದೆ ಉಡುಪಿನ  ಆಕಾರ ಸ್ಪಷ್ಟ.  ಕೆಲವೊಮ್ಮೆ ಮನದಲ್ಲಿ ಮೂಡಿದ ಉಡುಪಿನ ಚಿತ್ರಕ್ಕೆ ಹುಡುಕಿ ಹೊರಡುತ್ತಾನೆ ಸೂಕ್ತ ವಸ್ತ್ರ.   ಕೆಲವೊಂದು ದಿನ ಮಾತ್ರ ಮನದಲ್ಲಿ ಮೂಡುವುದಿಲ್ಲ ಯಾವುದೂ ಚಿತ್ರ   ಮತ್ತು ಸಿಕ್ಕುವುದೂ ಇಲ್ಲ ಯಾವುದೇ ಸೂಕ್ತ ವಸ್ತ್ರ.    ಅಂಥ ದಿನಗಳು ನೋಡಿ ಮಾಯಾವಿ ದರ್ಜಿಗೆ ಕಷ್ಟ. (elf ಎಂಬ ಕಲ್ಪನೆ ಪಾಶ್ಚಿಮಾತ್ಯ ದೇಶಗಳ ಕಿನ್ನರಕಥೆಗಳಲ್ಲಿದೆ. elf ಒಬ್ಬ ಪುಟ್ಟ ಯಕ್ಷ. ಚೂಪು ಕಿವಿಗಳ ಈ ಮಾಯಾವಿ ಮೋಸ ಮಾಡುವುದರಲ್ಲಿ, ಕದಿಯುವುದರಲ್ಲಿ ನಿಸ್ಸೀಮ.  ಈ ಪದ್ಯದಲ್ಲಿ ಮಾಯಾವಿ ದರ್ಜಿ ಎಂದರೆ ಯಾರಿರಬಹುದು? ಉಡುಪನ್ನು ಸಿದ್ಧಪಡಿಸಲು ಮುಟ್ಟಿ ಅನುಭವಿಸಬಲ್ಲ ಬಟ್ಟೆ ಮಾತ್ರವಲ್ಲ ಮುಟ್ಟಿ ಅನುಭವಿಸಲಾರದ ಕಲ್ಪನೆಯೂ ಬೇಕು. ಒಂದು ಸಿಕ್ಕರೆ ಇನ್ನೊಂದನ್ನು ಹುದುಕಿಕೊಳ್ಳುತ್ತಾನೆ. ಎರಡೂ ಸಿಕ್ಕದ ದಿವಸ ಮಾಯಾವಿ ದರ್ಜಿಗೂ ಕಷ್ಟ. ಕವಿಯೂ ಒಂದು ಬಗೆಯ ಮಾಯಾವಿ ದರ್ಜಿಯೇ ಅಲ್ಲವೇ? ಪದಗಳು ಸಿಕ್ಕ ದಿವಸ ಕಲ್ಪನೆ ಸಿಗದಿರಬಹುದು. ಕಲ್ಪನೆ ಮೂಡಿದಾಗ ಪದಗಳು ಸಿಕ್ಕದೇ ಇರಬಹುದು!)

ಗಾಳಿಯ ಬಣ್ಣಗಳ ವರ್ಣಚಿತ್ರ

ಇಮೇಜ್
ಪೋಕಹಾಂಟಾಸ್ ಎಂಬ ಮೂಲ ಅಮೇರಿಕನ್ (ರೆಡ್ ಇಂಡಿಯನ್) ಮಹಿಳೆಯನ್ನು ಕುರಿತು ಡಿಸ್ನಿ ಚಲಚ್ಚಿತ್ರ ಕಂಪನಿ ತಯಾರಿಸಿದ ಅನಿಮೇಷನ್ ಚಿತ್ರ ಅಪಾರ ಜನಪ್ರಿಯತೆ ಪಡೆದಿದೆ. ಇದರಲ್ಲಿ "ಪೇಂಟ್ ವಿತ್ ಆಲ್ ದ ಕಲರ್ಸ್ ಆಫ್ ದ ವಿಂಡ್" ಎಂಬ ಹಾಡು ತುಂಬಾ ಜನಪ್ರಿಯವಾಯಿತು.  ಯೂಟೂಬ್‍ನಲ್ಲಿ ಈ ಹಾಡನ್ನು ನೀವು ಕೇಳಬಹುದು. ಈ ಹಾಡಿನ ಭಾವಾನುವಾದವನ್ನು ಕೆಳಗೆ ಕೊಟ್ಟಿದ್ದೇನೆ.  ಬ್ರಿಟನ್ನಿನಿಂದ ಬಂದ ವಲಸೆಗಾರರು ಮೂಲ ಅಮೇರಿಕನ್ ಜನಾಂಗದವರನ್ನು ನಾಶಗೊಳಿಸಿ ಅಮೇರಿಕಾ ಭೂಮಿಯ ಮೇಲೆ ತಮ್ಮ ಸ್ವಾಮ್ಯವನ್ನು ಘೋಷಿಸಿಕೊಂಡರು. ರೆಡ್ ಇಂಡಿಯನ್ ಬುಡಕಟ್ಟಿನ ಜನರಲ್ಲಿ ನಿಸರ್ಗದ ಪ್ರತಿಯೊಂದು ವಸ್ತುವಿನಲ್ಲೂ ಆತ್ಮವಿದೆ ಎಂಬ ನಂಬಿಕೆಯಿದೆ. ಆದರೆ ವಲಸೆ ಬಂದವರಿಗೆ ಇದೆಲ್ಲಾ ಹಾಸ್ಯಾಸ್ಪದ ವಿಷಯ. ಅವರಿಗೆ ಭೂಮಿಯ ಮೇಲೆ ತಮ್ಮ ಹಕ್ಕನ್ನು ಸ್ಥಾಪಿಸುವುದಷ್ಟೇ ಮುಖ್ಯ. ಪೋಕಹಾಂಟಾಸ್ ಎಂಬ ಮಹಿಳೆ ಜಾನ್ ಎಂಬ ವಲಸೆಗಾರನಲ್ಲಿ ಅನುರಕ್ತಳಾಗುತ್ತಾಳೆ. ಅವನಿಗೆ ನಿಸರ್ಗದ ಶಕ್ತಿಯನ್ನೂ ಮತ್ತು ನಿಸರ್ಗದೊಂದಿಗೆ ನಮ್ಮ ಅವಿನಾ ಸಂಬಂಧವನ್ನೂ ಅವಳು ತಿಳಿಸಿಕೊಡುತ್ತಾಳೆ.  ಮೂಲ ಇಂಗ್ಲಿಷ್ ರಚನೆ - ಆಲನ್ ಮೆಂಕೆನ್ ಮತ್ತು ಸ್ಟೀಫನ್ ಲಾರೆನ್ಸ್ ಶ್ವಾರ್ಜ್  ಕನ್ನಡಕ್ಕೆ - ಸಿ. ಪಿ ರವಿಕುಮಾರ್   ವಿಶ್ವವನ್ನೆಲ್ಲಾ ಸುತ್ತಿದ ನಿನ್ನ ದೃಷ್ಟಿಯಲ್ಲಿ  ಏನೂ ತಿಳಿಯದ ಅನಾಗರೀಕಳು ನಾನು;  ಇರಬಹುದು! ಆದರೂ ಈ ಸೃಷ್ಟಿಯಲ್ಲಿ  ಎಷ್ಟೊಂದನ್ನು ಇನ್ನೂ ಅರಿತಿಲ್ಲ ನ