ಪೋಸ್ಟ್‌ಗಳು

Devotional ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಅರಳಿವೆ ಮಲ್ಲಿಗೆ

ಇಮೇಜ್
ಮೂಲ: ಸಂತ ಧ್ಯಾನೇಶ್ವರ್  (ಈ ಅಭಂಗ್ ಲತಾ ಮಂಗೇಶ್ಕರ್ ಅವರ ಧ್ವನಿಯಲ್ಲಿ ಅತ್ಯಂತ ಸುಂದರವಾಗಿ ಅರಳಿದೆ. ಮೋಗರಾ ಫೂಲಲಾ ಎಂದು ಪ್ರಾರಂಭವಾಗುವ ಈ ಗೀತೆಯನ್ನು ನೀವೂ ಯೂಟ್ಯೂಬ್ ಮುಂತಾದ ಕಡೆ ಕೇಳಬಹುದು. ಒಬ್ಬ ಸಂತನಿಗೆ ಮಲ್ಲಿಗೆಯ ಮೇಲೆ ಏಕೆ ಮೋಹ? ಎಂದೋ ನೆಟ್ಟ ಮಾಯೆಯ ಬಳ್ಳಿ ಇಂದು ಬೆಳೆದು ಹೂ ಬಿಟ್ಟು ಸೆಳೆಯುತ್ತಿದೆ. ಆದರೆ ಈ ಹೂಗಳನ್ನು ತಾನು ಮಾಲೆ ಮಾಡಿ ದೇವರಿಗೆ ಅರ್ಪಿಸುವೆನೆಂದು ಸಂತನು ನಿರ್ಧಾರ ಪ್ರಕಟಿಸುತ್ತಾನೆ.) ಅರಳಿವೆ ಮಲ್ಲಿಗೆ, ಅರಳಿವೆ ಮಲ್ಲಿಗೆ! ಬಿರಿದಿವೆ ಮೊಗ್ಗು ಕಾಯುತ ನಾಳೆಗೆ! ಎಂದು ನಾನು ನೆಟ್ಟೆನೋ, ಬಳ್ಳಿ ಬೆಳೆ ಬೆಳೆದು ಮುಟ್ಟಿದೆ ಇಂದು ಮುಗಿಲಿನವರೆಗೆ! ಮಾನಸ ಸೂತ್ರದೆ ಮಾಲೆಯ ಮಾಡಿ  ಮುಡಿಸುವೆ ವಿಠಲನ ರಾಣಿಯ ಮುಡಿಗೆ!

ಕರೆದೊಯ್ಯಿ ಆ ದೇಶಕ್ಕೆ

ಇಮೇಜ್
(ಮೂಲ: ಮೀರಾ ಬಾಯಿ) ನಡೆ ಹೋಗುವ ಆ ದೇಶಕ್ಕೆ ನಡೆ ಹೋಗುವ ಆ ದೇಶಕ್ಕೆ! ಎಲ್ಲಿ ತೊಡಬಹುದೋ ಸಪ್ತ ವರ್ಣಗಳ ಸೀರೆ ಅಷ್ಟೇ ಮೌಲ್ಯ ವಿಧವೆಯ ವೇಷಕ್ಕೆ ಬೇಕೆಂದರೆ ಜಡೆಯಲ್ಲಿ ತೊಡಬಹುದೋ ಮುತ್ತುಗಳ ಮಾಲೆ ಬೇಕೆಂದರೆ ಕತ್ತರಿ ಬಿತ್ತು  ನೀಳಕೇಶಕ್ಕೆ ಮೀರಾಳ ಪ್ರಭು ಗಿರಿಧರನಾಗರ ಕಿವಿಗೊಟ್ಟು ಪೀಡೆಗೆ ಕರೆದೊಯ್ಯು ಆ ದೇಶಕ್ಕೆ

ಬೆಣ್ಣೆಯ ತಿಂದಿಲ್ಲ ನಾನು

ಇಮೇಜ್
ಮೂಲ ರಚನೆ - ಸೂರದಾಸ  ಕನ್ನಡಕ್ಕೆ - ಸಿ.ಪಿ. ರವಿಕುಮಾರ್  "ಮೈಯ್ಯಾ ಮೋರಿ, ಮೈ ನಹೀಂ ಮಾಖನ್ ಖಾಯೋ" ಎಂಬುದು ಸೂರದಾಸರ ಅತ್ಯಂತ ಜನಪ್ರಿಯ ರಚನೆ ಎಂದರೆ ತಪ್ಪಾಗಲಾರದು. ಕೃಷ್ಣನ ಬಾಲಲೀಲೆಯನ್ನು ಕುರುಡರಾದ ಸೂರದಾಸರು ತಮ್ಮ ಮನೋಚಕ್ಷುಗಳಿಂದ ಕಂಡು ಅವುಗಳನ್ನು ಮನೋಹರವಾಗಿ ಚಿತ್ರಿಸಿದರು. ಈ ಗೀತೆಯಲ್ಲಿ ಕೃಷ್ಣ ತಾನು ಬೆಣ್ಣೆ ಕದ್ದಿಲ್ಲವೆಂದು ಸಾಧಿಸುತ್ತಾ ಅಮ್ಮನಿಗೆ ಲಾ ಪಾಯಿಂಟ್ ಹಾಕುವುದರಲ್ಲಿ ಸುಕುಮಾರವಾದ ಹಾಸ್ಯವಿದೆ.  "ನನ್ನನ್ನು ಬೆಳಗಿನಿಂದ ಸಂಜೆಯವರೆಗೂ ಚಾಕರಿಗೆ ಅಟ್ಟಿರುತ್ತೀ! ನಾನು ಬೆಣ್ಣೆ ಯಾವಾಗ ಕದಿಯಬೇಕು?" ಎಂಬುದು ಒಂದು ಪಟ್ಟು. ಅಷ್ಟು ಗಿಡ್ಡವಾಗಿರುವ ತನಗೆ ಅಟ್ಟದ ಮೇಲಿರುವ ಗಡಿಗೆ ನಿಲುಕುವುದೇ ಎಂಬುದು ಇನ್ನೊಂದು ಪಟ್ಟು. ಗೊಲ್ಲರ ಹುಡುಗರು ತಾವು ತಿಂದು ನನ್ನ ಮೂತಿಗೆ ಬೆಣ್ಣೆ ಬಳಿದರು ಎಂಬ ಆರೋಪ! ಅದನ್ನೂ ನಂಬದಿದ್ದಾಗ "ನಾನು ಎಷ್ಟಾದರೂ ಬೇರೆಯವನಲ್ಲವೇ! ಸರಿ, ಇಗೋ, ನಾನು ಮನೆ ಬಿಟ್ಟು ಹೊರಟೆ" ಎಂಬ ಬ್ರಹ್ಮಾಸ್ತ್ರ!  ಈ ಗೀತೆಯನ್ನು ಅದೆಷ್ಟೋ ಜನ ಗಾಯಕರು ಹಾಡಿದ್ದಾರೆ. ಇಲ್ಲಿ ನಾನು ಲತಾ ಮಂಗೇಶ್ಕರ್ ಅವರು ಅದ್ಭುತವಾಗಿ ಹಾಡಿರುವ ಈ ಧ್ವನಿಮುದ್ರಿಕೆಯನ್ನು ಅನುಸರಿಸಿದ್ದೇನೆ.   

ಯಾರೊಡನೆ ಆಡಲಿ ಹೋಳಿ

ಇಮೇಜ್
ತನ್ನ ಕಡೆಯ ದಿನಗಳನ್ನು ಮೀರಾಬಾಯಿ ವೃಂದಾವನ ಮತ್ತು ದ್ವಾರಕಾ ಕ್ಷೇತ್ರಗಳಲ್ಲಿ ಕಳೆದಳು ಎನ್ನುತ್ತಾರೆ. ಕೃಷ್ಣನಿಗಾಗಿ ಪರಿತಪಿಸುತ್ತಾ ಅವಳು ಇಡೀ ಜೀವಮಾನವನ್ನೇ ಕಳೆದಳು. ವೃಂದಾವನದಲ್ಲಿ ಹೋಳಿಯ ಉತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಕೃಷ್ಣ ತನ್ನ ಸಂಗಡಿಗರೊಂದಿಗೆ ಸೇರಿಕೊಂಡು ಆಡುತ್ತಿದ್ದ  ರಾಸಲೀಲೆಯನ್ನು ಮರುಸೃಷ್ಟಿಸಲಾಗುತ್ತದೆ.  ಈ ಸಂಭ್ರಮವನ್ನು ನೋಡಿದಾಗ ಮೀರಾಳ ಮನಸ್ಸು ಕುಗ್ಗುತ್ತದೆ. ತಾನು ಯಾರೊಂದಿಗೆ ಹೋಳಿ ಆಚರಿಸಲಿ? ತಾನು ನಂಬಿದವನು ಒಂಟಿ ಬಿಟ್ಟು ಹೊರಟುಹೋದನಲ್ಲ ಎಂಬ ಅಧೈರ್ಯ ಮೂಡುತ್ತದೆ.  ಆದರೆ ತನ್ನ ದೈನ್ಯವನ್ನು ತೋಡಿಕೊಳ್ಳುವಾಗಲೂ  ಅವಳಿಗೆ ಶ್ಯಾಮನ ದರ್ಶನದ  ಆಸೆ ಬತ್ತಿಹೋಗಿಲ್ಲ.   ಮೂಲ ರಚನೆ - ಮೀರಾಬಾಯಿ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ಯಾರೊಡನೆ ಆಡಲಿ ಹೋಳಿ ನನಗೇನು ಗೊತ್ತು ಪ್ರಿಯನು ಒಬ್ಬಂಟಿ ಹೋಗಿಹನು ಬಿಟ್ಟು ಮಾಣಿಕ್ಯ ಮುತ್ತು ಎಲ್ಲವನೂ ಬಿಟ್ಟು, ತುಳಸೀಮಣಿ ಕೊರಳಲ್ಲಿ ತೊಟ್ಟು ಊಟದೊಳು ರುಚಿಯಿಲ್ಲ ಮನೆಯಲ್ಲಿ ಮನಸಿಲ್ಲ, ಹೇಳಲೇನಿದರ ಗುಟ್ಟು ಪ್ರಿಯಕರನ ಕಾಯುತ್ತ ಉರುಳುತ್ತಿದೆ ಹೊತ್ತು ... ನಿನ್ನೊಲವು ಈಗ ಬೇರಾರದೋ ಸೊತ್ತು! ನನ್ನೊಂದಿಗೇತಕ್ಕೆ ಆಡಬೇಕಿತ್ತು?  ಇಂದೂ ಬರಲಿಲ್ಲ, ಎಷ್ಟು ದಿನವಾಯಿತು, ನನ್ನನ್ನು ಹೀಗೆ ಒಬ್ಬಳನ್ನೇ ಬಿಟ್ಟು! ಏಳುತ್ತಿದೆ ಮನದೊಳಗೆ ತಲ್ಲಣದ ಸುತ್ತು ...    ಶ್ಯಾ...

ಬಾಯಿಪಾಠವಾಯ್ತು

ಇಮೇಜ್
ಸಂತ ರವಿದಾಸ (ಅಥವಾ ರೈದಾಸ) ಹದಿನೈದನೇ ಶತಮಾನದಲ್ಲಿ ಜೀವಿಸಿದ್ದ ಭಕ್ತಿಕವಿ.  ಈತನ ಜನ್ಮ ಕಾಶಿಯ ಹತ್ತಿರದ ಒಂದು ಗ್ರಾಮದಲ್ಲಿ ಆಯಿತು (೧೩೯೮). ಇವನ ತಂದೆತಾಯಿ ಚಮ್ಮಾರವೃತ್ತಿ ಮಾಡುತ್ತಿದ್ದವರು. ಅವರನ್ನು ಅಸ್ಪೃಶ್ಯರೆಂದು ಪರಿಗಣಿಸಲಾಗುತ್ತಿತ್ತು. ರವಿದಾಸನೂ ಮೊದಲು ಚಮ್ಮಾರವೃತ್ತಿಯಲ್ಲಿ ತೊಡಗಿಕೊಂಡರೂ ಮುಂದೆ ಭಕ್ತಿಮಾರ್ಗದಿಂದ ಆಕರ್ಷಿತನಾದ.  ಪ್ರಸಿದ್ಧ ಸಂತ ರಾಮಾನಂದರು ಅವನನ್ನು ಶಿಷ್ಯನೆಂದು ಸ್ವೀಕರಿಸಿದರು. ತನ್ನ ಜೀವನದ ಬಹುಭಾಗವನ್ನು ರವಿದಾಸನು ಹಿಂದು ಸಂತರು-ಸಾಧುಗಳ ಸಾಂಗತ್ಯದಲ್ಲಿ ಕಳೆದ. ಈತನ ಭಕ್ತಿ ರಚನೆಗಳಲ್ಲಿ ಹಲವಾರನ್ನು ಸಿಕ್ಖರ ಆಧಿಗ್ರಂಥದಲ್ಲಿ  (ಗುರು ಗ್ರಂಥ್ ಸಾಹಿಬ್)  ಸೇರಿಸಿಕೊಳ್ಳಲಾಗಿದೆ.  ದೇವರನ್ನು ನಿರ್ಗುಣನೆಂದು ಭಾವಿಸಿದ ರವಿದಾಸನು ದೈವದಲ್ಲಿ ಅಪಾರ ಭಕ್ತಿಯನ್ನು ಹೊಂದಿದ್ದವನು.  ಈತನ ಮೃತ್ಯು ೧೫೪೦ರಲ್ಲಿ ಆಯಿತೆಂದು ನಂಬುತ್ತಾರೆ. ಅವನ ಹೆಸರಿನಲ್ಲಿ ಒಂದು ಧರ್ಮವೇ ಇದೆ. ಈ ಧರ್ಮವನ್ನು ಪಾಲಿಸುವವರು ತಮ್ಮನ್ನು  "ರವಿದಾಸಿಯಾ" ಎಂದು ಕರೆದುಕೊಳ್ಳುತ್ತಾರೆ. ಈತನ ಹೆಸರಿನಲ್ಲಿ ಲಂಡನ್ ನಗರದಲ್ಲಿ ದೇವಸ್ಥಾನವಿದೆ.  ಪ್ರಸ್ತುತ ಗೀತೆಯಲ್ಲಿ ರವಿದಾಸ ತನ್ನ ಭಕ್ತಿಯ ಸ್ವರೂಪವನ್ನು ತಿಳಿಸಿದ್ದಾನೆ. ದೈವದೊಂದಿಗೆ ತನ್ನ ಸಂಬಂಧ ಎಂಥದು ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸಿದ್ದಾನೆ. "ಅಬ್ ಕೈಸೆ ಛೂಟೆ, ನಾಮ್ ರಟ್ ಲಾಗಿ" ಎಂಬ ಈ ಗೀತೆಯನ್ನು ಅನೇಕ ಕಲಾವಿದ...

ಮನಸು ನಿಲ್ಲಿಸದೆ ಆಗದು, ನಿರ್ಮೋಹಿ!

ಇಮೇಜ್
ಮೂಲ: ಮಹಾತ್ಮಾ ಕಬೀರ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್   ಅಶ್ವಿನಿ ಭಿಡೆ ಅವರು ಅದ್ಭುತವಾಗಿ ಹಾಡಿರುವ ಕಬೀರನ ಈ ಭಜನೆಯನ್ನು (ಶಬದ್) ನೀವು ಇಲ್ಲಿ ಕೇಳಬಹುದು .    ಇದೇ ಭಜನೆಯನ್ನು ಅಶ್ವಿನಿ ಅಂಬೇಡ್ಕರ್ ಎಂಬ ಗಾಯಕಿ ಕೂಡಾ ಅದ್ಭುತವಾಗಿ ಹಾಡಿದ್ದಾರೆ .  ಭಕ್ತಿಯಿಲ್ಲದ ಪೂಜೆಯನ್ನು ಕುರಿತು ನಮ್ಮ ಹರಿದಾಸರು ಮತ್ತು ವಚನಕಾರರು ಕೂಡಾ ಹಾಡಿದ್ದಾರೆ.  ಕಬೀರನು ಹೇಳುವುದೂ ಅದೇ - ಮೋಹ (ಭಕ್ತಿ) ಇಲ್ಲದೆ ಮನಸು ನಿಲ್ಲಿಸದೆ  ಪೂಜಿಸಿದರೆ ಅದರಿಂದ ಏನೂ ಸಿದ್ಧಿಸದು! ಇಷ್ಟಾಗಿ ಏನಾದರೂ ದೇವರ ಇಷ್ಟದಲ್ಲಿದ್ದಂತೆಯೇ ಆಗುತ್ತದೆ!  ದೇವನ ಕೃಪೆಯಿದ್ದರೆ ನಿನಗೆ ಸದ್ಗುರು ದೊರಕುತ್ತಾನೆ. ಗುರುವಿನಿಂದ ಮುಕ್ತಿ ದೊರಕುತ್ತದೆ, ಇಲ್ಲದಿದ್ದರೆ ಇಲ್ಲ! ಮನಸು ನಿಲ್ಲಿಸದೆ ಆಗದು, ನಿರ್ಮೋಹಿ! ಮನಸು ನಿಲ್ಲಿಸದ ಪ್ರೀತಿಯು ಹುಚ್ಚ, ಇಬ್ಬನಿಯಿಂದ ಮೈ ತೊಳೆದಂತೆ! ನಂಬಿ  ರಾಮನನ್ನು ನಡೆಸುವ ಈ ಬದುಕು  ನಡೆವುದು ಅವನ ಮನದೊಳಿರುವಂತೆ! ಕೃಪೆಯಿಲ್ಲದೆ ಸಿಗುವನೇ  ಸದ್ಗುರು, ಎಷ್ಟು ಪ್ರಯತ್ನಿಸಿದರೆ ಏನಂತೆ! ಹೇಳುವನು ಕಬೀರ ಕೇಳಿ ಸಂತರೇ,  ಮುಕ್ತಿ  ದೊರೆಯದು   ಗುರುವಿಲ್ಲದೆ!

ಒಬ್ಬಿಬ್ಬರಾದರೆ ತಿಳಿಸಿ ಹೇಳಬಹುದಾಗಿತ್ತು

ಇಮೇಜ್
ಮೂಲ ರಚನೆ : ಮಹಾತ್ಮಾ ಕಬೀರ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಓದುವ ಮುನ್ನ: ಕಬೀರನ ಈ ರಚನೆಯನ್ನು "ಭಜನೆ" ಅಥವಾ "ಕೀರ್ತನೆ" ಎಂದು ಕರೆಯುವುದು ಅಷ್ಟು ಒಪ್ಪುವುದಿಲ್ಲ. ಏಕೆಂದರೆ ಕಬೀರ ಇಲ್ಲಿ ಯಾವುದೇ ದೇವರನ್ನು ಭಜಿಸುತ್ತಿಲ್ಲ, ಯಾರ ಕೀರ್ತಿಯನ್ನೂ ಹೊಗಳುತ್ತಿಲ್ಲ.  ಅವನು ಇಲ್ಲಿ ಹೇಳುತ್ತಿರುವುದು ಜೀವನದ ಕಹಿ ಸತ್ಯಗಳನ್ನು.  ಎಲ್ಲರೂ ಹೊಟ್ಟೆಪಾಡಿನ ಧಂಧೆಯಲ್ಲಿ ತೊಡಗಿಕೊಂಡು ಜೀವನದ ಸತ್ಯಗಳನ್ನು ಮರೆತಿರುವುದು ಅವನಿಗೆ ಸೋಜಿಗ ತರುತ್ತಿದೆ. "ಎಷ್ಟು ಜನರಿಗೆ ತಿಳಿಸಿ ಹೇಳುವುದು, ಒಬ್ಬಿಬ್ಬರಾದರೆ ಎಬ್ಬಿಸಿ  ಹೇಳಬಹುದಾಗಿತ್ತು!" ಎಂದು ಅವನು ಮರುಗುತ್ತಾನೆ. ಅವನು ತಿಳಿಸಿ ಹೇಳಬೇಕಾಗಿರುವುದು ನಮ್ಮ ಬದುಕು ನಶ್ವರ ಎಂಬ ಸತ್ಯ. ನಮ್ಮ ಶರೀರದಲ್ಲಿರುವುದು ನೀರು. ಅದರಲ್ಲಿ ಹರಿಯುತ್ತಿರುವುದು ವಾಯು. ಹೇಗೆ ಮಂಜಿನ ಹನಿಯನ್ನು ಗಾಳಿ ಆರಿಸಿ ಕೊಂಡೊಯ್ಯುವುದೋ ಹಾಗೆ ಒಂದು ದಿನ ನಮ್ಮ ಶರೀರವೂ ನಾಶವಾಗುವುದು ಖಂಡಿತ ಎಂಬುದು ಕಬೀರನ ವಾಣಿ.  ಜೀವನವು ಒಂದು ಅನಾದಿ ಅನಂತ ನದಿ. ಹೊಳೆಯ ಆಳ-ಹರಿವು ಇವುಗಳ ಅರಿವೇ ಇಲ್ಲದೆ ಹೊರಟ ಅಂಬಿಗನಿಗೆ ಮೃತ್ಯು ಕೊರಳಿಗೆ ಕಟ್ಟಿದೆ. ದೋಣಿಗೆ ಹಗ್ಗ ಕಟ್ಟಿದ ಹಾಗೆ ಅಂಬಿಗನ ಕೊರಳಿಗೆ ಹಗ್ಗ ಕಟ್ಟಿದೆ ಎಂಬ ರೂಪಕ ಕೂಡಾ ಸುಂದರವಾಗಿದೆ.   ಒಬ್ಬಿಬ್ಬರಾದರೆ ತಿಳಿಸಿ ಹೇಳಬಹುದಾಗಿತ್ತು  ಎಲ್ಲ   ಮರೆಸಿದೆ  ಹೊಟ್ಟೆಪಾಡು ಎಲ್ಲರಿಗ...

ಕಣ್ಣಿಗೆ ಹರಿದರ್ಶನದ ದಾಹ (ಸೂರದಾಸರ ರಚನೆ)

ಇಮೇಜ್
"ಅಂಖಿಯಾ ಹರಿದರ್ಶನ್ ಕೀ ಪ್ಯಾಸೀ" ... ಸೂರದಾಸರ ಈ ಗೀತೆಯನ್ನು ಎಂ.ಎಸ್. ಸುಬ್ಬುಲಕ್ಷ್ಮಿ ಅವರ ದಿವ್ಯಕಂಠದಲ್ಲಿ ನೀವು ಕೇಳಬಹುದು.  ಈ ರಚನೆಯಲ್ಲಿ ಸೂರದಾಸರು ತಮ್ಮ ಇಷ್ಟದೈವ ಕೃಷ್ಣನನ್ನು ಕಾಣಲಾರದೇ ತಮಗೆ ಉಂಟಾಗುವ ಸಂಕಟವನ್ನು ತೋಡಿಕೊಂಡಿದ್ದಾರೆ.  ಸೂರದಾಸರು ಹುಟ್ಟಾ ಕುರುಡರಾಗಿದ್ದವರು. ಅವರಿಗೆ ಕೃಷ್ಣನ ದರ್ಶನ ಹೇಗೆ  ಉಂಟಾಯಿತು ಎಂಬುದಕ್ಕೆ ಒಂದು ಕಥೆ ಜನಜನಿತವಾಗಿದೆ.   ಒಮ್ಮೆ ಸೂರದಾಸರು ದಾರಿಯಲ್ಲಿದ್ದ ಬಾವಿಯನ್ನು ಕಾಣದೇ ಅದರೊಳಕ್ಕೆ ಬಿದ್ದರಂತೆ. ಆಗ ಸಾಕ್ಷಾತ್ ಶ್ರೀ ಕೃಷ್ಣನೇ ಬಂದು ಅವರನ್ನು ಬಾವಿಯಿಂದ ಮೇಲೆತ್ತಿ ರಕ್ಷಿಸಿದನಂತೆ.  ಕೃಷ್ಣನ ಸಂಗಡ ಇದ್ದ ರಾಧೆ "ಇವನಿಗಾಗಿ ನೀನೇ ಸ್ವತಃ ಬರುವ ಅಗತ್ಯವೇನಿತ್ತು?" ಎಂದು ಪ್ರಶ್ನಿಸುತ್ತಾಳೆ.  "ಅವನು ನನ್ನ ಪರಮ ಭಕ್ತ" ಎಂದು ಕೃಷ್ಣ ಉತ್ತರಿಸುತ್ತಾನೆ. ಹಾಗೇ "ಅವನ ಬಳಿಗೆ ಹೋಗಬೇಡ," ಎಂದು ಎಚ್ಚರಿಸುತ್ತಾನೆ. ಆದರೆ ರಾಧೆ ಕುತೂಹಲದಿಂದ ಸೂರದಾಸನ ಬಳಿಗೆ ಹೋಗುತ್ತಾಳೆ.  ಆಕೆ ಯಾರೆಂದು ಊಹಿಸಿದ ಸೂರದಾಸರು ಆಕೆಯ ಕಾಲಿನ ಗೆಜ್ಜೆಯನ್ನು ಕಿತ್ತುಕೊಂಡು ಇಟ್ಟುಕೊಳ್ಳುತ್ತಾರೆ.  ರಾಧೆ ಎಷ್ಟು ಬೇಡಿಕೊಂಡರೂ ಕೊಡುವುದಿಲ್ಲ. "ನಾನು ಯಾರು ಗೊತ್ತೇ? ನಾನು ಕೃಷ್ಣನ ಪ್ರಿಯತಮೆ, ರಾಧೆ" ಎಂದು ಆಕೆ ಹೇಳಿದಾಗ ಸೂರದಾಸರು "ನಾನು ಹೇಗೆ ನಂಬಲಿ?  ಕುರುಡನೆಂದು ನೀನು  ಮೋಸ ಮಾಡುತ್ತಿರಬಹುದು!" ಎನ್ನುತ್ತಾರೆ.  ರಾಧೆ ...

ತಪ್ಪು ಹೆಜ್ಜೆ ಇಟ್ಟು ನಡೆದ ಬಾಲ ರಾಮಚಂದ್ರ!

ಇಮೇಜ್
ಕವಿತೆ ಓದುವ ಮುನ್ನ ... ಕನ್ನಡದಲ್ಲಿ ಪುರಂದರದಾಸರು ಹೇಗೆ ಕೃಷ್ಣನ ಬಾಲ್ಯವನ್ನು ನವಿರು ಹಾಸ್ಯದಿಂದ ಚಿತ್ರಿಸಿದ್ದಾರೋ ಅದೇ ಬಗೆಯ ನವಿರು ಹಾಸ್ಯವನ್ನು ತುಲಸೀದಾಸರ ಈ ಗೀತೆಯಲ್ಲಿ ಕಾಣಬಹುದು. ರಾಮನ ಬಾಲ್ಯವನ್ನು ಕವಿ ವರ್ಣಿಸುತ್ತಿದ್ದಾನೆ. ಕವಿಯ ಒಳಗಣ್ಣಿಗೆ ಮಗು ಶ್ರೀರಾಮನು ತಪ್ಪು ಹೆಜ್ಜೆ ಇಡುತ್ತಾ ನಡೆಯಲು ಕಲಿಯುವ ಚಿತ್ರ ಗೋಚರಿಸುತ್ತಿದೆ. ಹಾಗೆ ನಡೆಯುವಾಗ ಅವನ ಪುಟ್ಟ ಕಾಲಿಗೆ ಕಟ್ಟಿದ ಗೆಜ್ಜೆಯ ಘಲ್ ಘಲ್ ಸದ್ದು ಕವಿಯ ಕಿವಿಗೆ ಕೇಳುತ್ತಿದೆ. ನಡೆಯುವ ರಭಸದಲ್ಲಿ ರಾಮ ಧೊಪ್ಪನೆ ಬಿದ್ದಾಗ ಅವನತ್ತ ತಾಯಿ-ತಂದೆಯರು ಧಾವಿಸಿ ಬರುತ್ತಾರೆ. ರಾಮನು ಪುತ್ರಕಾಮೇಷ್ಟಿ ಯಾಗವನ್ನೇ ಮಾಡಿ ಪಡೆದ ಪುತ್ರ! ಅಯ್ಯೋ, ಮಗುವಿಗೆ ಏನಾಯಿತೋ ಎಂದು ದಶರಥ ಪರಿತಪಿಸುತ್ತಾನೆ! ತಂದೆ ತಾಯಿ ಹೀಗೆ ಕಂಗಾಲಾದಾಗ ಮಗುವೂ ಪೆಚ್ಚಾಗಿ ಅಳುತ್ತದೆ! ಕವಿಯ ಕಲ್ಪನೆಯಲ್ಲಿ ಸಾಕ್ಷಾತ್ ಶ್ರೀರಾಮಚಂದ್ರನೇ ಅಳುತ್ತಿದ್ದಾನೆ! ತಂದೆ ತನ್ನ ಉತ್ತರೀಯದ ಸೆರಗಿನಿಂದಲೇ ಧೂಳನ್ನು ಝಾಡಿಸಿ ಒರೆಸಿ ಮಗುವಿಗೆ ಪರಿಪರಿಯಾಗಿ ಸಮಾಧಾನ ಮಾಡುತ್ತಿದ್ದಾನೆ! ಗಲ್ಲ ನೇವರಿಸಿ ಕೂದಲು ಸರಿಮಾಡಿ ಅಳಬಾರದೆಂದು ಗೋಗರೆಯುತ್ತಿದ್ದಾನೆ! ಈ ಬಗೆಯ ಕಕ್ಕುಲತೆಯಿಂದ ಸಮಾಧಾನಗೊಂಡ ಮಗುವಿನ ತುಟಿಯಲ್ಲಿ ಕೊನೆಗೂ ನಗು ಅರಳುತ್ತದೆ. ಜೇನು ಸುರಿಯುವಂತೆ ತೋರುವ ಹವಳದಂಥ ತುಟಿಗಳಿಂದ ಜೇನಿನಷ್ಟೇ ಸವಿಯಾದ ತೊದಲು ಮಾತುಗಳನ್ನು ಕೇಳಿ ದಶರಥ-ಕೌಸಲ್ಯೆ ಮುಗ್ಧರಾಗಿದ...

ಕರಗುತ್ತಿದೆ ಕರದಲಿ ನವನೀತ

ಸೂರದಾಸ್ ಉತ್ತರಭಾರತದ ಸಂತಕವಿ. ಕೃಷ್ಣ ಇವನ ಇಷ್ಟದೈವ. ಕುರುಡನಾಗಿದ್ದರೂ ಇವನ ಒಳಗಣ್ಣಿಗೆ ಕೃಷ್ಣನ ಬಾಲಲೀಲೆಗಳು ವೇದ್ಯವಾಗಿದ್ದು  ತನ್ನ ರಚನೆಗಳಲ್ಲಿ ಗ್ರಾಮ್ಯ ಭಾಷೆಯ ಮಾಧುರ್ಯದಲ್ಲಿ ಅದ್ಭುತವಾಗಿ ವರ್ಣಿಸುತ್ತಾನೆ. ಅವನ "ಶೋಭಿತ ಕರ್ ನವನೀತ್ ಲಿಯೇ" ಎಂಬ ಭಜನೆಯ ಭಾವಾನುವಾದವನ್ನು ಇಲ್ಲಿ ಓದಿ. ಮೂಲ ರಚನೆ: ಸಂತ ಸೂರದಾಸ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಕರಗುತ್ತಿದೆ ಕರದಲಿ ನವನೀತ ಕರಗುತ್ತಿದೆ  ಹೃದಯವು ನೋಡುತ್ತಾ ಧೂಳು ಮಣ್ಣಿನಲ್ಲಿ ಅಂಬೆಗಾಲಿಡುತ್ತ ಹಾಲುಗಲ್ಲದ ಮೆಲುನಗೆ ಚೆಲ್ಲುತ್ತ   ॥ ೧ ॥ ತುದಿಬಾಯೊಳು ಮೊಸರಿನ ಅವಶೇಷ ದಧಿಯೊಲು ಸಿಹಿನಗೆ ಕಳೆವುದು ಕ್ಲೇಶ || ೨ ॥ ಹೊಳೆವುದು ಹಣೆಯಲಿ ಗೋರೋಚನ ತಿಲಕ ಸುಳಿಗಲ್ಲದ ನಗೆ ಕಿವಿಗಳ ತನಕ  ॥ ೩ ॥ ಗುಂಗುರು ಕೇಶದ ರಾಶಿಯ ನೋಟ ಭೃಂಗಾವಳಿ ಮಧುವನದಲಿ  ಹಾರಾಟ ॥ ೪ ॥ ಪದಕ ವಜ್ರ ಹೊಳೆವುದು ಕೊರಳಲ್ಲಿ ಸಿಂಹನಖವು ತರುವುದು ಶುಭದೃಷ್ಟಿ   ॥ ೫ ॥ ಕ್ಷಣವೊಂದರ ಈ ದರುಶನ ಭಾಗ್ಯ ಏಳುಕಲ್ಪಗಳ ಸುಖ ಸಾಮ್ರಾಜ್ಯ   ॥ ೬ ॥ ------ A bhajan by Surdas (Shobhit Kar Navneet Liye), translated into Kannada by C.P. Ravikumar