ಪೋಸ್ಟ್‌ಗಳು

Nand Saraswat ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಸಾಲದಲ್ಲಿ ಸ್ವರ್ಗ

ಇಮೇಜ್
ಮೂಲ .. ನಂದ್ ಸಾರಸ್ವತ್ ಹೇಮಾಸರ್‌ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ನಡೆಯುತ್ತಿದೆ ಅಪ್ಪನ ಹನ್ನೆರಡನೇ ದಿನದ ಕಾರ್ಯ ನಡೆಯುತ್ತಿದೆ ಸ್ವರ್ಗದ ಬಾಗಿಲು ತೆರೆಸುವ ಕಾರ್ಯ ಇನ್ನಷ್ಟು ದಿನ ಬದುಕಿರುತ್ತಿದ್ದನೇನೋ ನಡೆಸಿದ್ದರೆ ಚಿಕಿತ್ಸೆ ಹಿತ್ತಲಲ್ಲಿ ನಡೆಯುತ್ತಿದೆ ವಡೆ ಪಾಯಸ ಕಾರ್ಯ ಚಳಿಗೆ ನಡುಗುತ್ತಿದ್ದ ಅಪ್ಪ ನಿದ್ದೆ ಹತ್ತದೆ ಕಣ್ಣಿಗೆ ಅವನ ನೆನಪಿನಲ್ಲೀಗ ಶಾಲು ವಿತರಿಸುವ ಕಾರ್ಯ ಮಾತಾಡುತ್ತಿರಲಿಲ್ಲ ಅವನ ಮುಖಕ್ಕೆ ಮುಖಕೊಟ್ಟು ಈಗ ಅವನ ಗುಣಗಾನ ಗುಣುಗುಣಿಸುವ ಕಾರ್ಯ ವಿಚಿತ್ರವಾದವು ನೋಡಿ ಈ ಜಗದ ರೀತಿನೀತಿಗಳು ಸಾಲ ಮಾಡಿ ಋಣದ ಭಾರ ಇಳಿಸುವ ಕಾರ್ಯ ಸ್ವರ್ಗ ಪಡೆಯಲು ಅದೆಷ್ಟೋ ವಸ್ತು ವಿಶೇಷಗಳು ಗೋದಾನ ಮಾಡಿ ಗಂಗೆಯನು ದಾಟಿಸುವ ಕಾರ್ಯ

ಒರೆಹಚ್ಚಿ ನೋಡಬಾರದೇನು ನನ್ನನ್ನು

ಇಮೇಜ್
ಮೂಲ ... ನಂದ್ ಸಾರಸ್ವತ್ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ಒಮ್ಮೆ ಒರೆಹಚ್ಚಿ ನೋಡಬಾರದೇನು ನನ್ನನ್ನು ನನ್ನವಳಾಗು ಇಲ್ಲ ನಿನ್ನವನಾಗಗೊಡು ನನ್ನನ್ನು ತೋಡಿಕೊಳ್ಳುವೆ ಅಂತರಂಗವನ್ನೆ ನಿನ್ನ ಬಳಿ ಆಡಿ ಮಾತೆರಡು, ಕೇಳಲೊಪ್ಪಿದರೆ ಮಾತನ್ನು ಸೋಲುವೆನು ನನ್ನ ಹೃದಯವನ್ನೆ ನಿನ್ನ ಪ್ರೇಮದೊಳು ಗೆಲ್ಲು ನನ್ನನ್ನು, ಒಮ್ಮೆ ಸೋಲಿಸು ಬಾ ನನ್ನನ್ನು

ನಡೆಯೋಣ ದುಃಖಗಳ ಅಧ್ಯಾಯ ಕೊನೆಗೊಳಿಸಿ

ಇಮೇಜ್
ಮೂಲ ... ನಂದ್ ಸಾರಸ್ವತ್ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ನಡೆಯೋಣ ನಮ್ಮ ಧೋರಣೆಗಳ ಮೇಳವಿಸಿ ನಡೆಯೋಣ ದುಃಖಗಳ ಅಧ್ಯಾಯ ಕೊನೆಗೊಳಿಸಿ ಸಹಿಸಿಕೊಂಡದ್ದು ಸಾಕು ನೋವು ಪರಿತಾಪ ನಡೆ ಮುನ್ನಡೆಯೋಣ ಇವುಗಳನಿಲ್ಲೇ ತ್ಯಜಿಸಿ ಎಷ್ಟು ಸಹಿಸುವುದು ಏಕೆ ಸಹಿಸುವುದು ದುರಾಚಾರ ನಡೆ ಮುಂದೆ ರಕ್ತ ಕಣ್ಣೀರುಗಳನೊರೆಸಿ ನಡುಗುವುದೇಕೆ ಹೇಳು ಜಗದ ಭೀತಿಯಲ್ಲಿನ್ನೂ ಮುನ್ನಡೆಯೋಣ ಜಗದ ಪಂಥವನ್ನು ಸ್ವೀಕರಿಸಿ ಅಲ್ಲಿ ಇಲ್ಲೆಂದು ಎಲ್ಲ ಕಡೆಗೂ ಅಲೆದಾಡಿದೆವು ಬಾ, ನಡೆ, ಗುರಿಸೇರುವ ಮಾರ್ಗವನ್ನು ಅನುಸರಿಸಿ ಸಾಕು ಓದಿದ್ದು ಅಮರಪ್ರೇಮಗಳ ಕಹಿಕಥನ ನಡೆ ಪುಟವನ್ನು ತಿರುವಿ ಹೊಸ ಅಧ್ಯಾಯವನರಸಿ!

ನೋವಿನಲ್ಲಿ ಅರಳಿ ತೋರಿಸು ನೋಡೋಣ

ಇಮೇಜ್
ಮೂಲ ... ನಂದ್ ಸಾರಸ್ವತ್ ಕನ್ನಡಕ್ಕೆ ... ಸಿ.ಪಿ.ರವಿಕುಮಾರ್ ನೋವಿನಲ್ಲಿ ಅರಳಿ ತೋರಿಸು ನೋಡೋಣ ಎಲ್ಲರೊಂದಿಗೆ ನಗೆಸೂಸಿ ತೋರಿಸು, ನೋಡೋಣ ಯಾರದೋ ಮನೆಯನ್ನು ಹಚ್ಚಿರುವೆ ಕಿಚ್ಚು ಮೂಲೆಯಲ್ಲೊಂದು ಒಲೆಹೂಡಿ ತೋರಿಸು, ನೋಡೋಣ ನಿಂತಿರುವೆ ಯಾರದೋ ಮುಂದೆ ಕೈ ಮುಗಿದು ಜಗವನ್ನು ಬಗ್ಗಿಸಿ ತೋರಿಸು, ನೋಡೋಣ ಬಗೆಹರಿಯಿತೇ ಜಗಳದಿಂದ ವ್ಯಾಜ್ಯ ಯಾವುದಾದರೂ ಪ್ರೀತಿಯನು ಹಬ್ಬಿಸಿ ತೋರಿಸು, ನೋಡೋಣ ಕೈಯಲ್ಲಿ ಕತ್ತಿಯನು ಹಿಡಿದು ನಿಂತಿರುವೆ ಗಾಯವನು ಗುಣ ಮಾಡಿ ತೋರಿಸು, ನೋಡೋಣ ಕಡಿದು ಹಾಕಿದ್ದಾಯು ತರುಲತೆಗಳನ್ನು ಮಾಡಿತೋರಿಸು ಒಂದು ಹೂದೋಟ, ನೋಡೋಣ

ನೋವಿನಲ್ಲಿ ಅರಳಿ ತೋರಿಸು ನೋಡೋಣ

ಇಮೇಜ್

ಮರದ ಹಾಡು

ಇಮೇಜ್
ಮೂಲ ... ನಂದ್ ಸಾರಸ್ವತ್ ಕನ್ನಡಕ್ಕೆ .. ಸಿ.ಪಿ. ರವಿಕುಮಾರ್ ಮರವೂ ಯಾವಾಗ ಬೇಡುವುದೋ ನೆರಳು ಮರುಳೇ ಆವಾಗ ಹಳ್ಳಿಗೇ ಮರಳು ಹೆದ್ದೆರೆಗಳ ದೋಷವೇನಿಹುದು ಹೇಳಿ ಅಂಬಿಗನು ಮುಳುಗಿಸಲು ಹೊರಟಾಗ ದೋಣಿ ಗಾಯವೆಂಬುದು ಎಂದೂ ಮಾಗಲೇ ಇಲ್ಲ ಬಿಡದೆ ನಮ್ಮವರೇ ಕೆದರುತ್ತಿದ್ದರಲ್ಲ ಎರಡು ಮೆಟ್ಟಿಲು ಹತ್ತಿ ಜಾರಿದೆನು ಮೂರು ಕಾಲೆಳೆವ ಆಟಗಳು ಗೆಳೆಯರಿಗೆ ನೂರು ಬೆಲೆಯು ಸಿಕ್ಕದೆ ಮಾರಲೂ ಆಗಲಿಲ್ಲ ಮಾಡಿಬಿಟ್ಟರು ನಮ್ಮವರೇ ಅಪಮೌಲ್ಯ ಕಾಪಾಡಿಕೊಳ್ಳುವುದು ಹೇಗೆ ಈ ಪ್ರಾಣ? ನಡೆದುಹೋಗಲಿ ಬಿಡಿ ಕೊಡಲಿ ಆಕ್ರಮಣ

ಹಲ್ಲಿ

ಇಮೇಜ್