ಪೋಸ್ಟ್‌ಗಳು

Rajyotsava ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಥಟ್ ಅಂತ ಒಂದು ಕ್ವಿಜ್ ಕಾರ್ಯಕ್ರಮ!

- ಸಿ ಪಿ ರವಿಕುಮಾರ್ ಡಾ. ನಾ. ಸೋಮೇಶ್ವರ ಅವರನ್ನು ನಮ್ಮ ಕಚೇರಿಯಲ್ಲಿ ನಡೆಸಿದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದಾಗ ಅವರು ಯಾವ ಶರತ್ತುಗಳೂ ಇಲ್ಲದೆ ಸಂತೋಷವಾಗಿ ಒಪ್ಪಿಗೆ ಕೊಟ್ಟರು.  "ಥಟ್ ಅಂತ ಹೇಳಿ" ಕಾರ್ಯಕ್ರಮವನ್ನು 14 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಡಾ. ಸೋಮೇಶ್ವರ ಅವರು ಈಗಾಗಲೇ ಲಿಮ್ಕಾ ದಾಖಲೆಯಲ್ಲಿ ಸ್ಥಾನ ಕಂಡುಕೊಂಡಿದ್ದಾರೆ. ಇದುವರೆಗೂ "ಥಟ್ ಅಂತ ಹೇಳಿ" ಕಾರ್ಯಕ್ರಮದ 2902 ಕಂತುಗಳು ಪ್ರಸಾರವಾಗಿವೆ ಎಂದು ಅವರೇ ನಮಗೆ ತಿಳಿಸಿದರು. ವಿಕಿಪೀಡಿಯಾದಲ್ಲಿರುವ  ಮಾಹಿತಿ ಹಳತಾಗಿದೆ! ಈ ಕಾರ್ಯಕ್ರಮ 3000 ಮುಟ್ಟಿದಾಗ ಗಿನ್ನೆಸ್ ದಾಖಲೆಯನ್ನೇ ಮುರಿಯುತ್ತದೆ. ಡಾ. ಸೋಮೇಶ್ವರ ಅವರಿಂದ ನಾವು ಭಾಷಣವನ್ನು ಅಪೇಕ್ಷಿಸಿದ್ದು ತಪ್ಪು! ಅವರು ಪ್ರಶ್ನೆಗಳನ್ನು ಕೇಳಲು ಸಿದ್ಧರಾಗಿ ಬಂದಿದ್ದರು - ತಾವೇ ಸಂಪಾದಿಸಿದ ಪುಸ್ತಕಮಾಲೆಯಿಂದ ಕೆಲವು ಕನ್ನಡ ಪುಸ್ತಕಗಳನ್ನು  ಬಹುಮಾನವಾಗಿ ಕೊಡಲು ಕೈಯಲ್ಲಿ ಹಿಡಿದೇ ಬಂದರು. ನಮ್ಮ ಕಚೇರಿಯ ಅಂಗಳದಲ್ಲಿ ಕನ್ನಡ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದ್ದುದನ್ನು ಕಂಡು ಸಂತೋಷ ಪಟ್ಟರು. ಕೆಲವು ಹೊಸ ಪುಸ್ತಕಗಳನ್ನು ತಿರುವಿ ಹಾಕಿ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು.  ಅವರು ಅಂದು ಮೈಕ್ ಮುಂದೆ ನಿಂತು ಮಾತಾಡಿದ್ದು ಸುಮಾರು 40 ನಿಮಿಷ. ಅಷ್ಟರಲ್ಲಿಯೇ ಅದೆಷ್ಟು ಹೊಸ ಮಾಹಿತಿಗಳನ್ನು ನಮ್ಮ ಜೊತೆ ಹಂಚಿಕೊಂಡರು! ಬೆಂಗಳೂ...

ತಂತ್ರಜ್ಞಾನದ ನಡುವೆಯೂ ಒಂದು ಕರ್ನಾಟಕ ರಾಜ್ಯೋತ್ಸವ

ಇಮೇಜ್
ಸಿ ಪಿ ರವಿಕುಮಾರ್ ಸೆಪ್ಟೆಂಬರ್ ತಿಂಗಳಲ್ಲಿ ನಾನು ಬಿ. ಆರ್. ಲಕ್ಷ್ಮಣರಾವ್ ಅವರ "ಸಂವಾದ" ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರನ್ನು ನಮ್ಮ ಕಚೇರಿಯಲ್ಲಿ ನಡೆಯುವ ರಾಜ್ಯೋತ್ಸವ ಸಮಾರಂಭಕ್ಕೆ ಆಹ್ವಾನಿಸಬೇಕು ಎಂಬ ಉತ್ಸಾಹ ಉಂಟಾಯಿತು. ನನ್ನ ಸಹೋದ್ಯೋಗಿಗಳ ಬೆಂಬಲದಿಂದ ಇದು ಸಾಧ್ಯವಾಯಿತು. ನಮ್ಮ ಆಹ್ವಾನಕ್ಕೆ ಒಪ್ಪಿ ಕವಿ ಲಕ್ಷ್ಮಣರಾವ್ ನಮ್ಮ ಕಚೇರಿಗೆ ಬಂದು ನಮ್ಮೊಂದಿಗೆ ಎರಡೂವರೆ ಗಂಟೆ ಕಾಲ ಕಳೆದದ್ದು ನಮಗೆಲ್ಲಾ ಸಂತೋಷದ ವಿಷಯವಾಯಿತು. ನಮ್ಮ ಕಚೇರಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಸಾಫ್ಟ್ ವೇರ್ ಪರಿಭಾಷೆಯೇ ಹೆಚ್ಚು ರೂಢಿಯಲ್ಲಿರುವ ಸ್ಥಿತಿ ಇದ್ದರೂ ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ ನಡೆಸುವ ರೂಢಿ ನಡೆದುಕೊಂಡು ಬಂದಿದೆ. ಹಿಂದೆ ಚಿತ್ರ ನಿರ್ದೇಶಕ ನಾಗಾಭರಣ, ಸಮಾಜ ಕಾರ್ಯಕರ್ತ ಎಚ್ ಸುದರ್ಶನ್, ಕವಿ ಎಚ್ ಎಸ್ ವೆಂಕಟೇಶಮೂರ್ತಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಬಂದಿದ್ದಾರೆ. ಈ ಸಲದ ರಾಜ್ಯೋತ್ಸವ ನವೆಂಬರ್ ಐದನೇ ತಾರೀಕು ಸಂಪನ್ನವಾಯಿತು. ನಮ್ಮ ಕಚೇರಿಯಲ್ಲಿ ರಾಜ್ಯೋತ್ಸವದ ಹಿಂದಿನ ವಾರ ಮತ್ತು ಆಚರಣೆಯ ದಿವಸ  ಹಲವಾರು ಕಾರ್ಯಕ್ರಮಗಳು   ನಡೆಯುತ್ತವೆ. ಕನ್ನಡೇತರರಿಗಾಗಿ ಕನ್ನಡ ಮಾತಾಡುವ ಸ್ಪರ್ಧೆ, ಛಾಯಾಚಿತ್ರ ಗ್ರಹಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆಗಳು ಜನಪ್ರಿಯವಾಗಿವೆ. ಅದರಲ್ಲೂ ಕನ್ನಡೇತರರು ಭಾಗವಹಿಸುವ "ಸಂಭಾಷಣಾ ಸ್ಪರ್ಧ...