ಏನೇ ಮಾಡಿದರೂ
ಏನೇ ಮಾಡಿದರೂ ಮೂಲ: ಮ್ಯಾಕ್ಸ್ ಏರ್ಮನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಏನೇ ಮಾಡಿದರೂ ಮಾಡದಿದ್ದರೂ ನೀನು ಅನುಸರಿಸಬೇಕಾದ ವ್ರತವೊಂದಿದೆ: ಸಂತೋಷ. ಆಗಾಗ ಒಮ್ಮೆ ಯಾವ ಭಿಡೆಯೂ ಇಲ್ಲದೆ ಮಾಡು ಜೋರಾಗಿ ನಕ್ಕುಬಿಡುವ ಕೆಲಸ. ಎಷ್ಟೇ ಶಪಿಸಿದರೂ ಜಗತ್ತಿನ ಕೆಡುಕನ್ನು ನೀನು, ನೆನಪಿರಲಿ ಜಗತ್ತು ಕೆಟ್ಟುಹೋಗಿಲ್ಲ ಪೂರ್ತಿ; ಎಲ್ಲೋ ಮಕ್ಕಳು ಇನ್ನೂ ಆಟವಾಡುತ್ತಿವೆ ನಿನ್ನ ವೃದ್ಧಾಪ್ಯವೂ ಮಕ್ಕಳಾಟಗಳ ಕಲಿಯಲಿ; ನೆನಪಿರಲಿ ಹೆಣ್ಣುಗಳು ಇನ್ನೂ ನಲಿಯುತ್ತವೆ ಗಂಡುಗಳ ಧೀರೋದಾತ್ತ ಹೃದಯಗಳಲ್ಲಿ. ನೆನಪಿರಲಿ ಎಷ್ಟೇ ಅಲೆದಾಡಿದರೂ ಮಾನವ ಎಲ್ಲೆಲ್ಲೂ ತುಳಿಯುತ್ತಾ ಅವಿಶ್ರಾಂತ ಹೆಜ್ಜೆ ಜಗದ ಬಿರುಗಾಳಿ ಮಳೆ ಸಿಡಿಲು ಮಿಂಚುಗಳಿಂದ ನೀಡುವುದು ಒಲವೆಂಬ ಮನೆ ನಿನಗೆ ರಕ್ಷೆ.