ಪೋಸ್ಟ್‌ಗಳು

ಅಕ್ಟೋಬರ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಲ್ಲು

ಇಮೇಜ್
ಸಣ್ಣಕತೆ -  ಸಿ. ಪಿ. ರವಿಕುಮಾರ್  (ಅಮೆರಿಕಾದ ಕೆಂಟಕಿ ರಾಜ್ಯದಲ್ಲಿ ಅಕ್ಟೋಬರ್ 6, 2018 ನಡೆದ ನಿಜಘಟನೆಯನ್ನು ಆಧರಿಸಿದ್ದು. ಪಾತ್ರಗಳು ಕಾಲ್ಪನಿಕ.) ಜಿಮ್ ಬಾಗಿಲು ತೆರೆದು ಒಳಗೆ ಬಂದಾಗ ಸ್ಟೆಲ್ಲಾ ಟೆಲಿವಿಷನ್ ನೋಡುತ್ತಾ ರಾತ್ರಿಯ ಅಡುಗೆಗೆಂದು ಹುರುಳಿಕಾಯಿಯನ್ನು ಕತ್ತರಿಯಿಂದ ಕತ್ತರಿಸುತ್ತಾ ಕೂತಿದ್ದಳು. "ಮಕ್ಕಳು ಇನ್ನೂ ಶಾಲೆಯಿಂದ ಬಂದಿಲ್ಲವಾ?" ಎಂದು ಜಿಮ್ ಕೇಳಿದ. ಅವಳು ತಲೆ ಎತ್ತಿ ನೋಡಿ. "ಓ ಹಾಯ್ ಡಿಯರ್! ಮೆಲ್ ಬಂದು ಅವಳ ರೂಮಿನಲ್ಲಿದ್ದಾಳೆ. ರಯಾನ್ ಇನ್ನೂ ಬಂದಿಲ್ಲ. ಬರೋ ಹೊತ್ತಾಯಿತು. ಅಗೋ, ಬಂದನಲ್ಲ! ಹಾಯ್ ರಯಾನ್ ಮರಿ, ಯಾಕೆ, ಸುಸ್ತಾದ ಹಾಗೆ ಕಾಣುತ್ತಿದೀಯಲ್ಲ!" ಕೈಯಲ್ಲಿದ್ದ ಭಾರದ ಬ್ಯಾಗ್ ಕೆಳಗಿಟ್ಟು ರಯಾನ್ "ಫ್ಯೂ! ಇದನ್ನು ಹೊತ್ತುಕೊಂಡು ಬರುವಷ್ಟು ಹೊತ್ತಿಗೆ ಸಾಕಾಯಿತು. ಡಿನ್ನರ್ ಯಾವಾಗ ಮಾಮ್! ನನಗೆ ಹೊಟ್ಟೆ ತಾಳ ಹಾಕ್ತಿದೆ!" ಎಂದ. "ಸ್ಪೆಗೆಟಿ ರೆಡಿಯಾಗಿದೆ.  ಈ ಬೀನ್ಸ್ ಆವಿಯಲ್ಲಿ ಬೇಯಿಸಿದರೆ ಆಯಿತು. ನೀನು ಮುಖ ತೊಳೆದು ಬಾ. ಜಿಮ್ ನೀನೂ ಅಷ್ಟೆ. ಇವತ್ತು ಸಿಹಿಗೆ ಬ್ಲೂಬೆರೀ ಕಾಬ್ಲರ್" ಎಂದು ಸ್ಟೆಲ್ಲಾ ಮೇಲೆದ್ದಳು. ಸಿಹಿಯ ಹೆಸರು ಕೇಳಿ ರಯಾನ್ ಮುಖ ಅರಳಿತು.   "ಕಿಮ್! ಇವತ್ತು ಬ್ಲೂಬೆರಿ ಕಾಬ್ಲರ್! ನಿನಗೆ ತುಂಬಾ ಇಷ್ಟ ಅಲ್ಲವಾ!" ಎಂದು ರಯಾನ್ ಹಿರಿಯ ಅಕ್ಕನನ್ನು ಕೂಗಿದ. ಅವಳು ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು ಬಂದಾಗ ಮಗು

ಬಾಪುವನ್ನು ಕಂಡ ಹುಡುಗ

ಇಮೇಜ್
ಮೂಲ - ರಾಮ್ ಪ್ರದೇಶ್ ಶಾಸ್ತ್ರಿ  ಕನ್ನಡಕ್ಕೆ -  ಸಿ ಪಿ ರವಿಕುಮಾರ್  ಒಮ್ಮೆ ದೆಹಲಿಯಲ್ಲಿರುವ ಒಂದು ಹರಿಜನ ಆಶ್ರಮಕ್ಕೆ ಗಾಂಧೀಜಿ ಭೇಟಿ ಕೊಟ್ಟರು. ಆಶ್ರಮದಲ್ಲಿದ್ದ ಕಾರ್ಯಾಗಾರದಲ್ಲಿ ಹುಡುಗರಿಗೆ ಯಾವುದಾದರೂ ಉದ್ಯೋಗದಲ್ಲಿ ತರಬೇತಿ ನೀಡಲಾಗುತ್ತಿತ್ತು.   ಗಾಂಧೀಜಿ ಕಾರ್ಯಾಗಾರವನ್ನು ಹೊಕ್ಕು ಸುತ್ತಲೂ ಸಮೀಕ್ಷೆ ನಡೆಸುತ್ತಿರುವಾಗ ಹುಡುಗರು ತಾವು  ಮಾಡುತ್ತಿದ್ದ ಕೆಲಸ ನಿಲ್ಲಿಸಿ ತಮ್ಮನ್ನು ನೋಡಲು ಬಂದ  ಹಿರಿಯ ನೇತಾರನ ಕಡೆ ನಿಬ್ಬೆರಗಿನಿಂದ ನೋಡುತ್ತಿದ್ದರು. ಅಲ್ಲೊಬ್ಬ ಹುಡುಗ ಅಗ್ಗಿಷ್ಟಿಕೆಯ ಮೇಲೆ ರೊಟ್ಟಿಗಳನ್ನು ಸುಡುತ್ತಿದ್ದ. ಅವನು ತನ್ನ ಕೆಲಸದಲ್ಲಿ ಸಂಪೂರ್ಣ ತಲ್ಲೀನನಾಗಿದ್ದರಿಂದ ಗಾಂಧೀಜಿ ಬಂದಿದ್ದನ್ನು ಅವನು ಗಮನಿಸಲಿಲ್ಲ. ಗಾಂಧೀಜಿ ಅವನನ್ನು  ಗಮನಿಸಿ ಮುಂದೆ ಸಾಗಿದರು.  ಕಾರ್ಯಾಗಾರದಿಂದ  ಹೊರಗೆ ಬಂದಾಗ ಒಬ್ಬ ಹುಡುಗ "ಅಯ್ಯೋ! ರಾಜು ರೊಟ್ಟಿ ಮಾಡೋದರಲ್ಲಿ ಮುಳುಗಿಹೋಗಿದ್ದಾನೆ - ಅವನು ಬಾಪೂಜಿಯನ್ನು ನೋಡಲೇ ಇಲ್ಲ!" ಎಂದು ಪೇಚಾಡಿದ. ಬಾಪು ತಕ್ಷಣ " ಇವತ್ತು ಇಲ್ಲಿ ನನ್ನನ್ನು ನಿಜವಾಗಲೂ ಯಾರಾದರೂ ನೋಡಿದ್ದರೆ ಅದು ರೊಟ್ಟಿ ಮಾಡುವ ರಾಜು ಮಾತ್ರ!" ಎಂದರು.