ಪೋಸ್ಟ್‌ಗಳು

Indpendence ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ತಮಸ್ - ಸ್ವಾತಂತ್ರ್ಯ ದಿವಸದ ಸಂದರ್ಭದಲ್ಲಿ ಒಂದು ನೋಟ

ಇಮೇಜ್
ಯಾರು ಹಿಂದೆ ನಡೆದದ್ದನ್ನು ನೆನಪಿಡಲಾರರೋ ಅವರಿಗೆ ಅದರ  ಪುನರಾವೃತ್ತಿಯೇ ಶಾಪ - ಜಾರ್ಜ್ ಸಾಂತಾಯನ .  ಸಿ ಪಿ ರವಿಕುಮಾರ್ ಗೋವಿಂದ್ ನಿಹಲಾನಿ ಅವರು ನಿರ್ದೇಶಿಸಿದ "ತಮಸ್" ಚಿತ್ರವನ್ನು ಸ್ವಾತಂತ್ರ್ಯ ದಿನೋತ್ಸವದ ಸಂದರ್ಭದಲ್ಲಿ ನೋಡಿ; ಇದು ಇಂಟರ್ ನೆಟ್ ಮೇಲೆ ಲಭ್ಯವಾಗಿದೆ.  ಪ್ರಸಿದ್ಧ ಹಿಂದಿ ಲೇಖಕ ಭೀಷ್ಮ ಸಾಹನಿ ಅವರ ಕಾದಂಬರಿಯನ್ನು ಆಧರಿಸಿದ ಈ ಚಿತ್ರದ ಕತೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಪೂರ್ವದ ಕೆಲವು ದಿನಗಳಲ್ಲಿ ನಡೆದ ಘಟನೆಗಳ ಸುತ್ತ ಹೆಣೆಯಲಾಗಿದೆ. ಈಗಾಗಲೇ ದೇಶವನ್ನು ವಿಭಜನೆ ಮಾಡುವ ಮಾತು ಪ್ರಾರಂಭವಾಗಿದೆ.  ಲಾಹೋರ್ ನಗರದಲ್ಲಿ ದಂಗೆಯ ಸೂಚನೆಗಳು ದಟ್ಟವಾಗಿವೆ.  ಮೂರು ವಿವಿಧ ಧರ್ಮದ ಜನ ಲಾಹೋರ್ ನಲ್ಲಿ ನೆಲೆಸಿದ್ದಾರೆ - ಹಿಂದೂ, ಮುಸ್ಲಿಂ, ಮತ್ತು ಸಿಖ್. ಇವರ ನಡುವೆ ಭಿನ್ನಾಭಿಪ್ರಾಯಗಳು ಇದ್ದರೂ ಸಾಮಾನ್ಯ ಜನ ಅದನ್ನು ಮರೆತು ತಮ್ಮ ಪಾಡಿಗೆ ತಾವಿದ್ದಾರೆ; ಸಾಮರಸ್ಯದಿಂದ ಬಾಳುತ್ತಿದ್ದಾರೆ.  ಒಬ್ಬ ಮುಸ್ಲಿಂ ಕವಿ ಸಂಸ್ಕೃತದ ಶಾಕುಂತಲಾ ಕಾವ್ಯವನ್ನು ಉರ್ದುವಿಗೆ ತರ್ಜುಮೆ ಮಾಡುತ್ತಾನೆ. ಮುಸ್ಲಿಂ ಶಿಕ್ಷಕನೊಬ್ಬ ಸಿಖ್ ಪರಿವಾರದವರ ಮನೆಯಲ್ಲಿ ಬಾಡಿಗೆಗೆ ಇದ್ದಾನೆ. ಮುಸ್ಲಿಂ ಜನರೇ ಹೆಚ್ಚಾಗಿ ವಾಸಿಸುವ ಬಡಾವಣೆಯಲ್ಲಿ ಹಿಂದೂ ಧರ್ಮೀಯ ಸೇಠ್ ಜೀ ಯಾವ ಭಯವಿಲ್ಲದೆ ವಾಸವಾಗಿದ್ದಾನೆ.  ತೊಂಬತ್ತೊಂಬತ್ತು ಭಾಗ ಸಾಮರಸ್ಯ ಮತ್ತು  ಎಲ್ಲೋ ...