ಪೋಸ್ಟ್‌ಗಳು

Music ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಬಣ್ಣದ ತುತ್ತೂರಿ

ಇಮೇಜ್
ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ ಪಿಪಿಪಿಪಿ ಪೀಪಿ ಊದಿದನು ಪೀಪೀಪೀಪೀ ಮಾಡಿದನು ಸಾಕೋ ನಿಲ್ಲಿಸು ಎಂದೆಲ್ಲಾ ಕೂಗಿ ಎಲ್ಲರಿಗೂ ಸುಸ್ತೂ ರೀ! ಕೋಪ ಬಂದಿತು ಅಪ್ಪನಿಗೆ ಬೆನ್ನಿಗೆ ಎರಡು ಬಿತ್ತೂ ರೀ! ಪೀಪೀ ಎಂದನು ಕಸ್ತೂರಿ ಗಳಗಳ ಅಳುತ್ತಾ ಕಸ್ತೂರಿ ಅಳುವ ಸದ್ದು ಕೇಳಿದವರೆಲ್ಲ "ಪೀಪೀ ಸದ್ದೇ ಚೆನ್ನಾಗಿತ್ತೂ ರೀ!"

ಒಂದು ಗಾಯನ ಕಚೇರಿ

ಇಮೇಜ್
ಸಿ ಪಿ ರವಿಕುಮಾರ್  ಇ ವತ್ತು ಬೆಳಗ್ಗೆ ಒಂದು ಬಹಳ ಒಳ್ಳೆಯ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಇದಕ್ಕೆ ನನ್ನನ್ನು ಆಹ್ವಾನಿಸಿದವರು ನಮ್ಮ ಮೇಷ್ಟ್ರು ಕ.ನಂ. ನಾಗರಾಜು. ತಮ್ಮ ಮನೆಯಲ್ಲಿ ಈ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ನನ್ನ ಮೇಲೆ ಅವರು ಇಟ್ಟುಕೊಂಡಿರುವ ವಿಶ್ವಾಸಕ್ಕೆ ನಾನು ಋಣಿ.  ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಗಂಧವೇ ಇಲ್ಲದ ನಾನು ಕಾರ್ಯಕ್ರಮಕ್ಕೆ ಹೋದಾಗ ಹೆಚ್ಚಿನ ಅಪೇಕ್ಷೆಗಳನ್ನು ಇಟ್ಟುಕೊಂಡಿರಲಿಲ್ಲ. ಗಾಯಕರಾದ ಪಂಡಿತ  ವೆಂಕಟೇಶಕುಮಾರ್  ಅವರು ತಮ್ಮ ಮೊದಲ ಪ್ರಸ್ತುತಿಯಲ್ಲೇ ನನ್ನಂಥ ಪಾಮರರ ಮನಸ್ಸನ್ನೂ ಸೆಳೆದರು.  ಮೊದಲ ಎರಡು ಪ್ರಸ್ತುತಿಗಳು ಹಿಂದಿ ಭಾಷೆಯಲ್ಲಿದ್ದವು; ಅನಂತರ ಅವರು ವಚನ ಮತ್ತು ದಾಸರ ಪದಗಳನ್ನು ಹಾಡಿದರು. ಅವರು ಹಾಡಿದ ರಾಗ/ತಾಳ ಇವುಗಳ ವಿಷಯದಲ್ಲಿ ನನಗೆ ಇರುವ ಜ್ಞಾನ ಶೂನ್ಯ.  ಆದರೆ ಅವರು ಹಾಡಿದ ರೀತಿ ಮನಸ್ಸನ್ನು ಸೆಳೆಯಿತು. ಮೊದಲ ಪ್ರಸ್ತುತಿ ದೇವರಲ್ಲಿ ಆತ್ಮ ನಿವೇದನೆ. ಹಿಂದೆ ಕೆಲವು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಚೇರಿಗಳಿಗೆ ಹೋದಾಗ ಅಲ್ಲಿ ಆಲಾಪಗಳೇ ಹೆಚ್ಚಾಗಿ ಇದ್ದಿದ್ದರಿಂದ ನನಗೆ ಅಷ್ಟೇನೂ ಅರ್ಥವಾಗಿರಲಿಲ್ಲ. ಎಲ್ಲೋ ಕೊನೆಯಲ್ಲಿ ಸಾಹಿತ್ಯ ಬಂದು ಹೋಯಿತು ಎನ್ನುವಹಾಗಿತ್ತು.  ಆದರೆ ಪಂಡಿತ ವೆಂಕಟೇಶಕುಮಾರ್  ಅವರ ಗಾಯನದಲ್ಲಿ ಸಾಹಿತ್ಯಕ್ಕೆ ಸ...