ಅಮ್ಮ
ಮೂಲ ಇಂಗ್ಲಿಷ್ ಕವಿತೆ: ತಬೀಶ್ ಖೈರ್ (ಭಾರತ) ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಪ್ಲಾಸ್ಟರ್ ಕಿತ್ತು ಉದುರುವ ಈ ಮನೆಯ ಮೆಟ್ಟಿಲುಗಳನ್ನು ಇಳಿಯುವಾಗ ಅದರ ಕೋಣೆಗಳ ಆಪ್ಯಾಯಮಾನ ಖಾಲೀತನದಲ್ಲಿ ಸುತ್ತುವಾಗ ಮರುಧ್ವನಿಸುತ್ತದೆ ಅಜ್ಜಿ, ನಿನ್ನ ಮೆಲ್ಲನೆಯ ಹೆಜ್ಜೆಯ ಸಪ್ಪಳ ಮತ್ತು ನಡುವಣ ಮೌನ. ಥೇಟ್ ಹಾಗೇ, ಹೇಗೆ ಅನುರಣಿಸುತ್ತಿದ್ದವೋ ಬೇಸಗೆಯ ಮಧ್ಯಾಹ್ನಗಳಲ್ಲಿ ಕೋಣೆಯ ಸುತ್ತಲೂ ತೊಯ್ಯಿಸಿದ ಖಸ್ ಪರದೆಗಳ ನಡುವೆ ಮಾವು ನಿಂಬೆಗಳ ತಂಪುಪಾನೀಯಗಳಿಂದ, ಕಲ್ಲಂಗಡಿ ಚೂರುಗಳಿಂದ ಕಾದುವಾಗ ಬಿಸಿಲನ್ನ. ನಿಧಾನವಾಗಿ ತೂರಾಡಿಕೊಂಡು ಓಡಾಡುತ್ತಾ ನೀನು ಗಮನಿಸುತ್ತೀಯೆ ಪರದೆಗಳಲ್ಲಿ ಎಷ್ಟು ಕಡೆ ಹರಿದಿದೆ ಹೊಸದಾಗಿ, ಬೇಸಗೆಯಿಂದ ಬಿಡುವು ಸಿಕ್ಕರೆ ತಾನೇ, ಯಾವಾಗ ಬಂದೀತೋ ಮುಂಗಾರು ಮಳೆ, ಯಾವಾಗ ಮಾಡುವೆನೋ ಹೊಲೆದು ಜೋಪಾನ. ಕೀಲುನೋವಿನ ನಡುವೆಯೇ ನೀನು ಓಡಾಡುವೆ ಕೋಣೆಯಿಂದ ಕೋಣೆಗೆ, ಲೆಕ್ಕ ಹಾಕುತ್ತಾ ಉರುಳುವ ಸಂವತ್ಸರಗಳು ಎಲ್ಲೆಲ್ಲಿ ಎಷ್ಟೆಷ್ಟು ಹಾನಿ ಮಾಡಿವೆ, ಎಂದು ಭೂತವು ಕುಸಿದು ಬೀಳುತ್ತದೋ ಮತ್ತು ಎಷ್ಟು ಕಾಲ ಬಾಳುತ್ತದೋ ವರ್ತಮಾನ ನಿನಗೆಂದೂ ಬೇಕಾಗದು ಕನ್ನಡಕ ಮನೆಯ ಸುತ್ತ ಓಡಾಡುವುದಕ್ಕೆ, ಮೊಮ್ಮಕ್ಕಳನ್ನು ದೂರದಿಂದ ಗುರುತಿಸಲಾರೆಯಾದರೂ, ರವಿಕೆ ತಳಕಂಪಳಕ ಧರಿಸಿದ್ದೆ ಒಮ್ಮೆ! ಬ...