ಪೋಸ್ಟ್‌ಗಳು

ಜನವರಿ, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹತ್ತು ಹನಿಗವನಗಳು

ಇಮೇಜ್
Add caption

ಎಚ್ಚರ

ಇಮೇಜ್
ಸಿ. ಪಿ. ರವಿಕುಮಾರ್ (ಯಜ್ಞ ಆಚಾರ್ಯ ಅವರ ಛಾಯಾಚಿತ್ರದಿಂದ ಸ್ಫೂರ್ತಿ ಪಡೆದ ಅತಿ ಸಣ್ಣಕತೆ) ಅ ಜ್ಜಿಯ ಕತೆಯಲ್ಲಿ ಬೇಟೆಗೆ ಹೋದ ರಾಜ ಕಾಡಿನಲ್ಲಿ ಕಳೆದು ಹೋದ. ಮರದ ಮೇಲೆ ಹತ್ತಿ ನೋಡಿದರೆ ದೂರದಲ್ಲಿ ಎಲ್ಲೋ ಬೆಳಕು ಕಾಣಿಸಿತು. ಮನೆಯ ಮೇಲುಛಾವಣಿಯಿಂದ ಹೊಗೆ ಬರುತ್ತಿತ್ತು! ಅದೇ ಅಡಗೂಲಜ್ಜಿಯ ಮನೆ! ಸದ್ಯ ಬದುಕಿದೆ! ಅಂತ ಲಗುಬಗೆಯಿಂದ ರಾಜ ಮರದಿಂದ ಕೆಳಗಿಳಿದು ಬಂದಾಗ ... "ಆಗ ಏನಾಯಿತಜ್ಜೀ?" ಮುಂಗೈಮೇಲೆ ಮುಖವನ್ನೂರಿ ಕಥೆ ಕೇಳುತ್ತಿದ್ದ ಮಗು ಕೇಳಿತು. ಅಜ್ಜಿ ಆಕಳಿಸುತ್ತಾ "ಏನಿಲ್ಲ ಮಗು, ರಾಜ ಮೋಟರ್ ಬೈಕ್ ಏರಿ ಅಜ್ಜಿಯ ಮನೆಗೆ ಹೋದ, ಊಟ ಮಾಡಿ ಮಲಗಿದ. ಇನ್ನು ನೀನೂ ಮಲಗು. ನಾಳೆ ಬೇಗ ಏಳಬೇಕಲ್ಲ" ಎಂದಳು. ಹೊರಗೆ ಮೋಟರ್ ಬೈಕ್ ಸದ್ದಿನಿಂದ ನಿದ್ದೆ ಬಾರದೇ ಇಬ್ಬರೂ ಬಹಳ ಹೊತ್ತು ಎಚ್ಚರವಾಗೇ ಇದ್ದರು.

ಮೀನು ಮತ್ತು ಕೊಳ

ಇಮೇಜ್
ಸಿ ಪಿ ರವಿಕುಮಾರ್ ಮೀನು ವಿಲವಿಲ ಒದ್ದಾಡುತ್ತಿತ್ತು. ಕೊಳದ ಕಡೆ ದೈನ್ಯದಿಂದ ನೋಡುತ್ತಿತ್ತು. ಆಗ ಅಲ್ಲಿಗೆ ಬಂದ ಮಾಧ್ಯಮ ವರದಿಗಾರ ಅದರ ಚಿತ್ರ ತೆಗೆಯತೊಡಗಿದ. ಮೀನು ಆಘಾತಗೊಂಡು ಅವನ ಕಡೆ ನೋಡಿತು. "ನಾನೇನು ಮಾಡಲಿ? ಇದು ನನ್ನ ಕರ್ಮ. ನಾನೇನಿದ್ದರೂ ವರದಿಗಾರ. ನೀನು ಚಿಂತೆ ಮಾಡಬೇಡ. ನಾಳೆ ದೊಡ್ಡ ಅಕ್ಷರಗಳಲ್ಲಿ ವರದಿ ಬರುತ್ತದೆ. ಹಿಂದುಳಿದ ವರ್ಗದ ಮೀನುಗಳನ್ನು ಕೊಳದಿಂದ ಹೊರಗೆ ಹಾಕಿದ ತಿಮಿಂಗಿಲಗಳು." ಆಗ ಅಲ್ಲಿಗೆ ಒಬ್ಬ ರಾಜಕಾರಣಿ ಬಂದ. ಮೀನಿನ ಜೊತೆ ಸೆಲ್ಫೀ ತೆಗೆದುಕೊಳ್ಳಲು ಮುಂದಾದ. ಮೀನು ಇನ್ನಷ್ಟು ಆಘಾತಗೊಂಡು ಅವನ ಕಡೆ ನೋಡಿತು. ಈಗ ಮಾಧ್ಯಮದವನು ಚೀಲದಿಂದ ಕ್ಯಾಮೆರಾ ತೆಗೆದು "ಸರ್, ಏನಾದರೂ ಸೌಂಡ್ ಬೈಟ್ಸ್ ಕೊಡಿ," ಎಂದ. ಸ್ವಲ್ಪ ಹೊತ್ತಿನ ನಂತರ ಗರಿಮುರಿಯಾದ ಖಾದೀ ಜುಬ್ಬಾ, ಗಡ್ಡ ಮತ್ತು ದೊಡ್ಡ ಸೈಜಿನ ಕನ್ನಡಕ ತೊಟ್ಟವನೊಬ್ಬ ಬಂದ. ಅವನೊಂದಿಗೆ ಬೆಲೆಬಾಳುವ ಖಾದೀ ಸೀರೆಯನ್ನುಟ್ಟ ಒಬ್ಬಾಕೆಯೂ ಬಂದಳು. ಅವರು ಮೀನಿನ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು. "ನೋಡು, ಇದು ಈ ದೇಶದ ದುರಂತ. ಇಲ್ಲಿ ಮೀನುಗಳನ್ನು ಅದೆಷ್ಟು ಸಾವಿರ ವರ್ಷಗಳಿಂದ ಹೀಗೆ ಶೋಷಣೆ ಮಾಡಲಾಗುತ್ತಿದೆಯೋ! ಅದರಲ್ಲೂ ಹೆಣ್ಣು ಮೀನುಗಳನ್ನಂತೂ ವಿಶೇಷವಾಗಿ ಶೋಷಿಸಲಾಗಿದೆ. ನಿನ್ನ ಪಿಎಚ್.ಡಿ. ಪ್ರಬಂಧದಲ್ಲಿ ನೀನು ಇದನ್ನು ಕುರಿತು ಬರೆಯಬೇಕು." ಎಂದು ಗಡ್ಡ ಧರಿಸಿದವನು ಹೇಳುತ್ತಿದ್ದುದನ್ನು ಆಕೆ ತನ್ನ ಪಾರ್ಕರ್ ಪೆನ್

“ಪತ್ರ” (ಸಣ್ಣಕತೆ)

ಇಮೇಜ್
“ಪತ್ರ” ಮೂಲ ಗುಜರಾತಿ ಕಥೆ - ಧೂಮಕೇತು ಕನ್ನಡಕ್ಕೆ – ಸಿ. ಪಿ. ರವಿಕುಮಾರ್ ಆಕಾಶ ಶುಭ್ರವಾಗಿತ್ತು ; ತಾರೆಗಳು ಬೆಳಗುತ್ತಿದ್ದವು. ಇರುಳು ಹಿಂದೆ ಜರುಗುತ್ತಾ ನಸುಕಿಗೆ ಸ್ಥಳ ಮಾಡಿಕೊಡುತ್ತಿತ್ತು.  ಸಾಯುವ ಮುನ್ನ ಒಬ್ಬ ಮನುಷ್ಯ ಹೇಗೆ ತನ್ನ ಸೌಖ್ಯದ ದಿನಗಳನ್ನು ನೆನೆಸಿಕೊಂಡು ಒಂದಷ್ಟು ಸಮಾಧಾನ ತಂದುಕೊಳ್ಳುತ್ತಾನೋ , ಹೇಗೆ ಮರಣೋನ್ಮುಖನಾದ ಮನುಷ್ಯನ ಮುಖದ ಮೇಲೆ ಕಂಡೂ ಕಾಣದಂತೆ ಮುಗುಳ್ನಗುವೊಂದು ಮೂಡಿ ಮಾಯವಾಗುತ್ತದೋ , ಇನ್ನೇನು ಬರಲಿರುವ ಸೂರ್ಯನ ರಶ್ಮಿಗಳ ಆಗಮನದಿಂದ ಮಾಯವಾಗಿಹೋಗುವ ಮುನ್ನ ತಾರೆಗಳು ಅದೇ ರೀತಿಯಲ್ಲಿ ಮುಗುಳ್ನಗು ಸೂಸುತ್ತಿದ್ದವು.  ಅದೊಂದು ಚಳಿಗಾಲದ ನಸುಕು. ಬೀಸುತ್ತಿದ್ದ ಕುಳಿರ್ಗಾಳಿ ನಡುಕ ಹುಟ್ಟಿಸುವಂತಿತ್ತು.  ಕೆಲವು ಮನೆಗಳಲ್ಲಿ ಬೆಳಗಿನ ಕೆಲಸಗಳು ಈಗಾಗಲೇ ಪ್ರಾರಂಭವಾಗಿದ್ದವು. ಹೆಂಗಸರು ಬೀಸುವ ಕಲ್ಲು ತಿರುಗಿಸುತ್ತಾ ಹಾಡಿಕೊಳ್ಳುವ ಸದ್ದು ಕೇಳುತ್ತಿತ್ತು. ವಯಸ್ಸಾದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಒಂಟಿಯಾಗಿ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ನಡೆದುಹೋಗುತ್ತಿದ್ದ.  ಚಳಿಗಾಳಿಯನ್ನು ಎದುರಿಸಲು ಹಳೆಯ ಬಟ್ಟೆಯನ್ನು ಮೈಗೆ ಸುತ್ತಿಕೊಂಡಿದ್ದ.  ಎಲ್ಲೆಲ್ಲೂ ಗಾಢವಾದ ಮೌನ ಮುಸುಕಿಕೊಂಡಿತ್ತು. ನಡುವೆ ಎಲ್ಲೋ ಒಂದು ನಾಯಿ ಬೊಗಳಿದ ಸದ್ದು , ಕೆಲಸಕ್ಕೆ ಹೊರಟ ಹೆಂಗಸರು ಮಾತಾಡಿಕೊಂಡ ಸದ್ದು , ಅಥವಾ ತಮ್ಮ ಗೂಡುಗಳಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಗಳ ಸದ್ದು ಒಮ್ಮೆಲೇ ಕೇಳಿ ಆನಂತರ ಮತ್ತೆ ನಿಶಬ

ನಸುನಗೆ ಚೆನ್ನ! #1

ಇಮೇಜ್

ಹೊಟ್ಟೆನೋವು ಮತ್ತು ಹೋಮಿಯೋಪತಿ

ಸಿ ಪಿ ರವಿಕುಮಾರ್ ಆಗ ನನಗೆ ಹನ್ನೊಂದೋ ಹನ್ನೆರಡೋ ವಯಸ್ಸು. ನಾವು ಆಗ ದೆಹಲಿಯಲ್ಲಿದ್ದೆವು.  ಆಗ ಅಷ್ಟೊಂದು ಕ್ಲಿನಿಕ್ ಗಳು ಇರಲಿಲ್ಲ. ಜನ ಚಿಕಿತ್ಸೆಗಾಗಿ ಸರಕಾರೀ ಡಿಸ್ಪೆನ್ಸರಿಗೆ ಹೋಗುತ್ತಿದ್ದರು.  ನಾವಿದ್ದ ಮನೆಯ ಬೀದಿಯಲ್ಲೇ ಒಬ್ಬ ಪ್ರಸಿದ್ಧ ವೈದ್ಯರು ಮನೆಯಲ್ಲೇ ಕ್ಲಿನಿಕ್ ಹಾಕಿಕೊಂಡಿದ್ದರು. ಡಾ| ಘೋಷಾಲ್ ಎಂಬುದು ಅವರ ಹೆಸರು. ಅವರನ್ನು ಕಾಣಲು ದೂರದೂರದಿಂದ ಜನ ಬರುತ್ತಿದ್ದರು. ದಿನಬೆಳಗಾದರೆ ಅವರ ಮನೆಯ ಮುಂದೆ ದೊಡ್ಡ ಕ್ಯೂ  ನಿಲ್ಲುತ್ತಿತ್ತು. ಕೆಲವು ಸಲ ಸರಿರಾತ್ರಿಯ ಹೊತ್ತು ಯಾರಾದರೂ ಅವರನ್ನು ಕಾಣಲು ಬಂದರೆ ಗೇಟಿನ ಒಳಗೆ ಪ್ರವೇಶವಿರಲಿಲ್ಲ. "ಡಾಕ್ಟರ್ ಸಾಬ್! ಡಾಕ್ಟರ್ ಸಾಬ್!" ಎಂದು ಅವರು ಕೂಗಿಕೊಳ್ಳುತ್ತಿದ್ದುದು ನಮ್ಮ ಮನೆಗೂ ಕೇಳುತ್ತಿತ್ತು.  ಡಾಕ್ಟರ್ ಸಾಹೇಬರು ಇದನ್ನು ಕಿವಿಗೇ ಹಾಕಿಕೊಳ್ಳದೆ ಇದ್ದುಬಿಡುತ್ತಿದ್ದರು. ಕೆಲವೊಮ್ಮೆ ಅವರು ಬೈದು "ನಾಳೆ ಬೆಳಗ್ಗೆ ಬನ್ನಿ" ಎಂದು ಹೇಳುವುದು ಕೇಳುತ್ತಿತ್ತು. ಒಂದು ಸಲ ಯಾರದೋ ಮನೆಗೆ ಹೋದಾಗ ಅಲ್ಲಿ ಅವಲಕ್ಕಿ ತಿಂದದ್ದಕ್ಕೋ ಏನೋ ನನಗೆ ಹೊಟ್ಟೆನೋವು ಕಾಣಿಸಿಕೊಂಡಿತು. ಈ ಹೊಟ್ಟೆ ನೋವು ಬಂದಾಗ ಒಂದು ಅರ್ಧ ಗಂಟೆ ತುಂಬಾ ಕಷ್ಟವಾಗುತ್ತಿತ್ತು. ಕ್ರಮೇಣ ಹೊಟ್ಟೆ ನೋವು ಕಡಿಮೆಯಾಗುತ್ತಿತ್ತು.  ದಿನಕ್ಕೆ ಹೀಗೆ ಒಂದೆರಡು ಸಲ ಆಗತೊಡಗಿತು. ಮೊದಲು ಮನೆವೈದ್ಯ ಮಾಡಿದರು. ಗುಣವಾಗಲಿಲ್ಲ. ನಾನು ಒದ್ದಾಡುವುದು ನೋಡಿ ಅಷ್ಟು ಹತ್ತಿರದಲ್ಲಿದ್ದ ಡಾ. ಘೋ

ಚಳಿಯಲ್ಲೊಂದು ಬೆಳಗ್ಗೆ

ಇಮೇಜ್
ಚಳಿಯಲ್ಲೊಂದು ಬೆಳಗ್ಗೆ  ಸಿ ಪಿ ರವಿಕುಮಾರ್  "ಏಳು, ಅದು ಯಾಕೆ ಕಿಟಕಿಗಳನ್ನೆಲ್ಲಾ ಹಾಗೆ ಮುಚ್ಚಿ  ಮಲಕ್ಕೊಂಡಿದೀಯಾ?" "..." "ಚಳಿ ನನಗಿಲ್ಲವಾ? ನನಗೂ ಹೊದ್ದುಗೊಂಡು ಮಲಕ್ಕೋಬೇಕು ಅಂತ ಆಸೆ ಆಗೋಲ್ಲವಾ?" ಎಂದು ಹೊದಿಕೆಯನ್ನು ಮೇಲಕ್ಕೆ ಎತ್ತಿದೆ. "..." "ಯಾಕೆ? ಮೈ ಹುಷಾರಿಲ್ವಾ?" "..." "ಏನಾಯಿತು? ಏಳು, ಕಿಟಕಿ ತೆಗೆದು ಕೆಲಸ ಶುರು ಮಾಡು ..." "..." "ಏಯ್! ನಿನಗೇ ಹೇಳ್ತಾ ಇರೋದು ..." "..." "ತಾಳು, ನಿನಗೆ ಕಚಗುಳಿ ಕೊಟ್ಟರೆ ..." "..." "ಏಯ್! ಬೂಟ್ ತರಲಾ?" "..." "ಅಯ್ಯೋ! ಏನಾಯಿತು? ಸರಿ, ನಡಿ ಡಾಕ್ಟರ್ ಹತ್ತಿರ!" ಡಾಕ್ಟರ್ ಹತ್ತಿರ ಕೈಯಲ್ಲಿ ಅನಾಮತ್ತು ಎತ್ತಿಕೊಂಡೇ ಹೋಗಬೇಕಾಯಿತು.  ಎದೆ ಹೊಡಕೊಳ್ಳತೊಡಗಿತು. "ಡಾಕ್ಟರ್, ನೋಡಿ, ಯಾಕೋ ಮುಖದಲ್ಲಿ ಸ್ವಲ್ಪವೂ ಕಳೆಯೇ ಇಲ್ಲ. ನೆನ್ನೆ ಮಲಗೋ ಮುಂಚೆ ಏನೂ ತೊಂದರೆ ಇರಲಿಲ್ಲ. ಇವತ್ತು ಬೆಳಗ್ಗೆ ಮೇಲೆ ಏಳೋದಕ್ಕೇ ರೆಡಿ ಇಲ್ಲ!" "ನೀವು ಸ್ವಲ್ಪ ಸಮಾಧಾನವಾಗಿ ಕೂತುಕೊಳ್ಳಿ, ನೋಡೋಣ." "ಅಯ್ಯೋ, ಏನಾದರೂ ಮೇಜರ್ ಪ್ರಾಬ್ಲಮ್ ಇದೆಯಾ ಡಾಕ್ಟ್ರೇ?!" "ನನಗೆ ನೋಡೋದಕ್ಕೆ ಬಿಡ್ತೀರಾ?" "ಸಾರಿ."

ಸಮವಸ್ತ್ರ

ಸಿ. ಪಿ. ರವಿಕುಮಾರ್  ಅವತ್ತು ಬೆಸಸಂಖ್ಯಾದಿವಸ.  ದೆಹಲಿಯಲ್ಲಿ ಬೆಸಸಂಖ್ಯೆಯ ಲೈಸೆನ್ಸ್ ಪ್ಲೇಟುಗಳಿಗೆ ಮಾತ್ರ ಓಡಾಡಲು ಅವಕಾಶ.  ಯಶೋದಾನಂದನ್ ಗುಪ್ತಾನ  ಕಾರ್ ಲೈಸೆನ್ಸ್ ಪ್ಲೇಟ್ ಸಮಸಂಖ್ಯೆಯದು. ಲೇಟಾಗಿ  ಎದ್ದಿದ್ದರಿಂದ ಬಸ್ ಅಥವಾ ಮೆಟ್ರೋ ನೆಚ್ಚಿಕೊಳ್ಳುವಹಾಗಿಲ್ಲ. ಬಾಸ್ ಮೊದಲೇ ಇವನ ಮೇಲೆ ನಿಗಾ ಇಟ್ಟಿದ್ದಾನೆ.  ಸಾಮಾನ್ಯವಾಗಿ "ಯಶ್" ಎಂದೇ ಅವನನ್ನು ಸಂಬೋಧಿಸುತ್ತಿದ್ದ ತಾಯಿ ಅವನನ್ನು "ಯಶೋದಾನಂದನ್ ಗುಪ್ತಾ, ನೀನು ಹೀಗೆ ತಡವಾಗಿ ಏಳೋ ಅಭ್ಯಾಸ ಯಾವತ್ತು ಬಿಡ್ತೀಯೋ ಅವತ್ತು ಉದ್ಧಾರವಾಗ್ತೀಯ!" ಎಂದು ಬೈದಳು. ಅವನಿಗೆ ತಲೆಯಲ್ಲಿ ಅದೇನೋ ಹೊಳೆಯಿತು.  "ಅಮ್ಮಾ, ನಾನು ನಿನಗೆ ಹೇಳೋದು ಮರೆತೆ. ಗ್ಯಾಸ್ ಏಜೆನ್ಸಿಯ ಫೋನ್ ಬಂದಿತ್ತು. ಇವತ್ತು ತಕ್ಷಣ ಆಧಾರ್ ಕಾರ್ಡ್ ತರದೇ ಹೋದರೆ ಗ್ಯಾಸ್ ಸಪ್ಲೈ ಮಾಡೋದಿಲ್ಲವಂತೆ."  ಆಕೆ ಇದನ್ನು ಕೇಳಿ ಸ್ತಂಭೀಭೂತಳಾಗಿ ನಿಂತುಬಿಟ್ಟಳು.  "ಮೊದಲೇ ಯಾಕೆ ಹೇಳಲಿಲ್ಲ?" ಎಂದು ಬೈಯುತ್ತಾ ಬೇಗಬೇಗ ತಯಾರಾಗಿ "ಪೂರಿ-ಭಾಜಿ ಮಾಡಿಟ್ಟಿದ್ದೀನಿ. ತಿನ್ನದೇ ಹೋಗಬೇಡ!" ಎಂದು ನೆನಪಿಸಿ ಮನೆಯಿಂದ ಹೊರಗೆಬಿದ್ದಳು.  ಇದಾದ ಒಂದು ಗಂಟೆಯ ಸಮಯದಲ್ಲಿ ಸಮಸಂಖ್ಯೆಯ ಕಾರೊಂದು ಎಮ್‌ಎನ್‌ಕ್ಯೂ ಸಾಫ್ಟ್ ಕಚೇರಿಯ ಎದುರಿಗೆ ನಿಂತಿತು.  ಯುವತಿಯೊಬ್ಬಳು ಕೆಳಗಿಳಿದಳು. ಬಾಬ್ ಕೂದಲು, ಕಣ್ಣಿಗೆ ಕನ್ನಡಕ, ದೊಡ್ಡ ಬಿಂದಿ, ಲಿಪ್ ಸ್ಟಿಕ್.  ಚೂಡಿದಾರ್-ಕುರ್ತಾ.

ರಾಗಿ ನೂಡಲ್ - ಒಂದು ಹರಟೆ

ಇಮೇಜ್
ಈಚೆಗಿನ ಅತ್ಯದ್ಭುತ ಇನ್ನೋವೇಶನ್ ಏನೆಂದು ಯಾರಾದರೂ ಕೇಳಿದರೆ ನನ್ನ ಉತ್ತರ ಸಿದ್ಧವಾಗಿದೆ. ರಾಗಿ ಶ್ಯಾವಿಗೆ! ಇದುವರೆಗೂ ನೀವು ಟ್ರೈ ಮಾಡದೇ ಇದ್ದರೆ ೨೦೧೬ರಲ್ಲಿ ಮಾಡುವರಾಗಿ ಮತ್ತು ತಿನ್ನುವರಾಗಿ. ಎಲ್ಲಾ ಜನಾನೂ ರಾಗಿ ತಿಂದರೆ ರಾಗಿ ಜನಾನುರಾಗಿಯಾಗದೇ ಇರುವುದೇ? ರಾಗ-ದ್ವೇಷ ಬೇಡ ಎಂದು ಮಕ್ಕಳಿಗೆ ಪಾಠ ಹೇಳಿಕೊಡುವರಲ್ಲಾ, ಅವರು ರಾಗಿ-ದ್ವೇಷವನ್ನೇಕೆ ಖಂಡಿಸುವುದಿಲ್ಲ? ರಾಗವೆಂದರೆ ಬಣ್ಣ. ರಾಗಿಗೆ ನಿಜವಾದ ಹೆಸರು ಕರಿ-ರಾಗಿ ಅಥವಾ ಕಪ್ಪು ಬಣ್ಣದ್ದು ಎಂದೇ ಎಂಬುದು ನನ್ನ ಊಹೆ. ಆದರೆ ರಾಗಿಗೆ ಕರಿಯ ಕಂಪನಿ ಇಷ್ಟವಾಗದೆ  ಸಾರಿನ ಸಾಂಗತ್ಯವೇ ಪ್ರಿಯವಾದಾಗ "ಕರಿ" ಬಿಟ್ಟುಹೋಗಿ ಬರೀ ರಾಗಿ ಉಳಿದಿರಬಹುದು.  ರಾಗಿಯ ರಾಗವನ್ನು ನೋಡಿಯೇ ಅದಕ್ಕೆ "ಬೈಬೈ" ರಾಗ ಹಾಡುವ ಬೈರಾಗಿಗಳು ಎಂದಾದರೂ ರಾಗಿ ಶ್ಯಾವಿಗೆಯ ರುಚಿಯನ್ನು ಸವಿದರೆ - ಅದರಲ್ಲೂ ನನ್ನ ಹೆಂಡತಿ ಕೆಂಪು-ಹಳದಿ-ಹಸಿರು ಕ್ಯಾಪ್ಸಿಕಮ್ ಇತ್ಯಾದಿ ಬೆರೆಸಿ ಮಾಡುವ ಶ್ಯಾವಿಗೆಯ ರುಚಿಯನ್ನು ಸವಿದರೆ - ಮ್ಯಾಗಿಯನ್ನು ಮರೆತು ರಾಗಿಯನ್ನೇ ಧ್ಯಾನಿಸಿಯಾರು. ಕಪ್ಪು ಬಣ್ಣದ ಹಿನ್ನೆಲೆಯಲ್ಲಿ ಈ ಕೆಂಪು-ಹಸಿರು-ಹಳದಿಗಳ ವೈಭವ ನೋಡಿದವರಿಗೇ ಗೊತ್ತು! ಮುದ್ದಣನು ಕರಿಮಣಿಯ ಸರದಲ್ಲಿ ಕೆಂಪು ಹವಳವನ್ನು ಕೋದರೆ ಚೆನ್ನವೆಂದು ಮನೋರಮೆಗೆ ತಿಳಿಹೇಳಲಿಲ್ಲವೇ? ಆಗ ಅವನು ತನ್ನ ಹೆಂಡತಿ ಮನೋರಮೆಗೆ ರಾಗಿ-ಶ್ಯಾವಿಗೆಯಲ್ಲಿ ನೀನು ಒಂದಷ್ಟು ಕೆಂಪು ಕ್ಯಾಪ್ಸಿಕಮ್ ಬೆರೆಸಬಾರದೇ ಎಂದು