ಪೋಸ್ಟ್‌ಗಳು

Galway Kinnel ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನಸುಕು ಹರಿಯುವ ಸಮಯ

ಇಮೇಜ್
  ಮೂಲ ಅಮೆರಿಕನ್ ಕವಿತೆ  - ಗಾಲ್ವೇ ಕಿನೆಲ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್   ಪ್ರಸ್ತುತ ಕವಿತೆಯಲ್ಲಿ ಕವಿ ತನಗೆ ಉಂಟಾದ ಒಂದು ಪುಟ್ಟ ಅನುಭವದಲ್ಲಿ ಗೂಢವಾದದ್ದನ್ನು ಅರಸುವ ಪ್ರಯತ್ನ ಮಾಡುತ್ತಿದ್ದಾನೆ.  ಒಂದು ಸಂಜೆ ಕವಿ ಒಂದು ಜಲಧಿಯ ತೀರದಲ್ಲಿ ಕುಳಿತಿದ್ದಾನೆ. ಮಳೆಯ ನಂತರ ಬಗ್ಗಡವಾದ ನೀರಿನಲ್ಲಿ ತೇಲುವ ಅಸಂಖ್ಯ ನಕ್ಷತ್ರಮೀನುಗಳು ಅವನ ಕಣ್ಣಿಗೆ ಬೀಳುತ್ತವೆ. ಅವುಗಳನ್ನು ನೋಡಿ ಅವನಿಗೆ ಆಕಾಶದಲ್ಲಿ ಹೀಗೇ ನಿಧಾನವಾಗಿ ಸಾಗುವ ನಕ್ಷತ್ರಗಳ ಯೋಚನೆ ಬರುತ್ತದೆ.  ಬಹುಶಃ ಅವುಗಳನ್ನು ನೋಡುತ್ತಾ ಕವಿ ಇಡೀ ರಾತ್ರಿ ಕಳೆದನೇನೋ! ನಸುಕು ಹರಿದಾಗ "ನಕ್ಷತ್ರಗಳು" ಒಮ್ಮೆಲೇ "ಕೆಳಗೆ ಉದುರಿಹೋದವು." ಅಲ್ಲಿಯವರೆಗೂ ಕವಿ ಅವುಗಳನ್ನು ನಿಟ್ಟಿಸುತ್ತಾ ತನ್ನ ಕಲ್ಪನಾಜಗತ್ತಿನಲ್ಲಿ ವಿಹರಿಸುತ್ತಿದ್ದ. ನಕ್ಷತ್ರಮೀನುಗಳಲ್ಲಿ ನಿಜವಾದ ತಾರೆಗಳನ್ನು ಕಾಣುವುದು ಕಲ್ಪನೆ. ರಾತ್ರಿಯ ಸಮಯದಲ್ಲಿ ಈ ಭ್ರಮಾಲೋಕ ನಿಜವೆಂದೇ ಭಾಸವಾಗುತ್ತದೆ. ಆದರೆ ನಸುಕಾದಾಗ ಒಮ್ಮೆಲೇ - ಕನಸುಗಳಂತೆ - ಈ ಭ್ರಮಾಲೋಕ ಮಾಯವಾಗುತ್ತದೆ! ಮಳೆಯ ಬಗ್ಗಡ ನೀರಲ್ಲಿ, ಮುಸ್ಸಂಜೆಗೆ ಮುಂಚೆ, ನೂರಾರು ನಕ್ಷತ್ರಮೀನುಗಳು ತೆವಳುತ್ತಿವೆ, ಮಣ್ಣೇ ಆಕಾಶವೋ ಎಂಬಂತೆ, ಅದರ ಉದ್ದಕ್ಕೂ ನಿಧಾನವಾಗಿ ಚಲಿಸುತ್ತಿವೆ ಈ ಅಗಾಧ ಅಪರಿಪೂರ್ಣ ನಕ್ಷತ್ರಗಳು ಎಷ್ಟು ನಿಧಾನವಾಗಿ ಚಲಿಸುತ್ತವೋ ಮೇಲೆ ಸ್ವರ್ಗದಲ್ಲಿ ನಿಜವಾದ ತಾರೆಗಳು. ಅನಂತರ  ಅವು ಹ...

ಬೂದು ಸಾರಸ

ಇಮೇಜ್
ಮೂಲ ಕವಿತೆ - ಗಾಲ್ವೇ ಕಿನ್ನೆಲ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಪ್ರಸ್ತುತ ಕವಿತೆಯಲ್ಲಿ ಒಂದು ಸರಳ ಅನುಭವದಲ್ಲಿ ಅದಕ್ಕಿಂತ ಮೀರಿದ್ದನ್ನೇನೋ ಕಾಣುವ ಪ್ರಯತ್ನವಿದೆ. ಕವಿ ಒಂದು ಬೂದು ಸಾರಸವನ್ನು ನೋಡುತ್ತಾನೆ.  ಬಹುಶಃ ಅವನು ಒಂದು ಕೆರೆಯ ಬದಿಯಲ್ಲಿ ಕುಳಿತಿರಬಹುದು. ಒಂದು ಬೂದು ಸಾರಸ ಪಕ್ಷಿ ಅವನ ಕಣ್ಣಿಗೆ ಬೀಳುತ್ತದೆ.  ಅದನ್ನು ಕವಿ ಹಿಂಬಾಲಿಸುತ್ತಾನೆ. ಆದರೆ ಸಾರಸವು ಹಠಾತ್ ಮರೆಯಾಗಿ ಅದರ ಸ್ಥಾನದಲ್ಲಿ ಒಂದು ಸರೀಸೃಪ ಅವನ ಕಣ್ಣಿಗೆ ಬೀಳುತ್ತದೆ. ಸರೀಸೃಪ ಕುಟುಂಬಕ್ಕೆ ಸೇರಿದ ಡೈನಾಸಾರ್ ಪ್ರಾಣಿಗಳೇ ಹಕ್ಕಿಗಳಾಗಿ ವಿಕಸನ ಹೊಂದಿದವು ಎನ್ನುವ ಹಿನ್ನೆಲೆಯಲ್ಲಿ ಈ ಪದ್ಯವನ್ನು ಓದಿ. ಕವಿಗೆ ಎದುರಾದ ಸರೀಸೃಪ ಅವನತ್ತ ನೋಡಿ "ಇವನು ಹೋಗುತ್ತಾನೋ ಅಥವಾ ಬೇರಾವುದೋ ಪ್ರಾಣಿಯಾಗಿ ರೂಪಾಂತರಗೊಳ್ಳುತ್ತಾನೋ" ಎಂದು ಯೋಚಿಸುತ್ತಿದೆ! ಬಹಳ ಹಳೆಯದನ್ನು ಡೈನಾಸಾರ್ ಎಂದು ಹಂಗಿಸುವ ಪದ್ಧತಿ ಇದೆ. ಆದರೆ ಈ ಸರೀಸೃಪ ಪಕ್ಷಿ ರೂಪದಲ್ಲಿ ಇನ್ನೂ ಬದುಕಿದೆ. ಮನುಷ್ಯನೋ ತನ್ನ ವಿನಾಶವನ್ನು ತಾನೇ ತಂದುಕೊಂಡಿದ್ದಾನೆ. ತಲೆ ಅಲ್ಲಾಡಿಸದು ಅತ್ತಿತ್ತ ತನ್ನ ಕಾಯ ಮತ್ತು ಹಸಿರು ಕಾಲ್ಗಳು ಒಂದು ಪಕ್ಕದಿಂದ ಇನ್ನೊಂದಕ್ಕೆ ಓಲಾಡುತ್ತಾ ಸಾಗುವಾಗಲೂ. ಅದು ನೋಟದಿಂದ ಮರೆಯಾದಾಗ ನಾನು ಹಿಂಬಾಲಿಸಿದೆನಾದರೂ ಹಕ್ಕಿ ಇದೆ ಎಂದುಕೊಂಡಿದ್ದ ಸ್ಥಳದಲ್ಲಿ ನನಗೆ ಕಂಡಿದ್ದಾದರೂ ಏನು ತನಗೊಪ್ಪದ ಚರ್ಮವನ್ನು ಹೊದ್ದು ಗೀರುಬಾಯಿಯ ಮೂಲಕ...