ಪೋಸ್ಟ್‌ಗಳು

Self Awareness ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹಳದಿ ಇಟ್ಟಿಗೆಗಳ ರಸ್ತೆ

ಇಮೇಜ್
ಹಳದಿ ಇಟ್ಟಿಗೆಗಳ ರಸ್ತೆ ಮೂಲ ಹಾಡು: ಬರ್ನಾರ್ಡ್ ಟಾಪಿನ್ ಮತ್ತು ಎಲ್ಟನ್ ಜಾನ್ ನೀನು ಬರುವುದು ಯಾವಾಗ? ಯಾವಾಗ ನೀನು ಬಂದಿಳಿಯುವುದು? ನಾನು ಹೊಲದಲ್ಲೇ ಇರಬೇಕಾಗಿತ್ತು ಅಪ್ಪನ ಮಾತು ಕೇಳಬೇಕಾಗಿತ್ತು ನೀನು ನನ್ನನ್ನು ಸದಾಕಾಲ ಹಿಡಿದಿಡಲಾರೆ ನಾನೇನೂ ನಿನಗೆ ಬರೆದುಕೊಟ್ಟಿಲ್ಲ  ನಿನ್ನ ಗೆಳೆಯರು ತೆರೆದು ನೋಡಲು ನಾನೊಂದು ಉಡುಗೊರೆಯಲ್ಲ ಈ ಹುಡುಗನದು ಶೋಕಗೀತೆ ಹಾಡುತ್ತಾ  ಕೂಡುವ ವಯಸ್ಸಲ್ಲ ಹೀಗಾಗಿ ಇದೋ ವಿದಾಯ ಹಳದಿ ಇಟ್ಟಿಗೆ ರಸ್ತೆಗೆ ಎಲ್ಲಿ ಸಮಾಜದ ನಾಯಿಗಳು ಊಳಿಡುತ್ತವೋ ಅಲ್ಲಿಗೆ ನೀನು ಪೆಂಟ್ ಹೌಸಿನಲ್ಲಿ ನನ್ನನ್ನು ನೆಡಲಾರೆ ಇಗೋ ಮರಳುತ್ತಿರುವೆ ನನ್ನ ನೇಗಿಲಿಗೆ. ಮರಳುತ್ತಿರುವೆ ನಾನು ಗೂಬೆಗಳ ಗುಟುರಿಗೆ ಮರಳುತ್ತಿರುವೆ ನಾನು ಕಪ್ಪೆಗಳ ವಟರಿಗೆ  ಹಳದಿ ಇಟ್ಟಿಗೆಗಳ ರಸ್ತೆಗಳ ಆಚೆಗಿದೆ  ನನ್ನ ಭವಿಷ್ಯವೆಂದು ನಾನು ನಿರ್ಧರಿಸಿರುವೆ. ನೀನು ಏನು ಮಾಡಬಹುದೆಂದು ಯೋಚಿಸುತ್ತೇನೆ. ವಿಮಾನವನ್ನು ಹೊಡೆದು ಉರುಳಿಸುತ್ತೀಯ ತಾನೇ? ಒಂದೆರಡು ಪೆಗ್ ವೋಡ್ಕಾ ಮತ್ತು ಟಾನಿಕ್  ಮತ್ತೆ ಮೇಲೆದ್ದು ನಿಲ್ಲಲು ನಿನಗೆ ಇಷ್ಟು ಸಾಕು ನನ್ನ ಬದಲಿಗೆ ಹಾಕಿಕೊಳ್ಳುವೆ ಯಾರನ್ನೋ ಬೇರೆ ನನ್ನಂಥವರು ಬೇಕಾದಷ್ಟು ಜನ ಸಿಕ್ಕುತ್ತಾರೆ ಬಿಡಿಗಾಸಿಗೂ ಗತಿ ಇಲ್ಲದ ಬೀದಿನಾಯಿಗಳು ನೆಲದ ಮೇಲೆ ಬಿದ್ದ ನಿನ್ನಂಥ ಚೂರುಪಾರನ್ನು ಹುಡುಕುವವರು ಹೀಗಾಗಿ ಇದೋ ವಿದಾಯ ಹಳದಿ ಇಟ್ಟಿಗೆ ರಸ್ತೆಗೆ ಎಲ್ಲಿ ಸಮಾಜದ ನಾಯಿಗಳು ಊಳಿಡುತ್ತವೋ ಅಲ್ಲಿಗೆ...

ನಿನ್ನ ಗುರುತು

ಇಮೇಜ್
 ನಿನ್ನ ಗುರುತು ಮೂಲ : ಎರಿನ್ ಹ್ಯಾನ್ಸನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನಿನ್ನ ವ್ಯಾಖ್ಯಾನವಾಗದು ನಿನ್ನ ವಯೋಮಾನ ಅಥವಾ ನೀ ತೊಟ್ಟ ಬಟ್ಟೆಗಳ ಅಳತೆ  ನೀನಲ್ಲ ನಿನ್ನ ತಲೆಗೂದಲಿನ ಬಣ್ಣ  ಅಥವಾ ತೂಕದ ಯಂತ್ರ ತೋರುವ ಸಂಖ್ಯೆ. "ನೀನು" ಎನ್ನಲಾಗದು ನಿನ್ನ ಹೆಸರನ್ನು ನೀನಲ್ಲ ನಿನ್ನ ಕೆನ್ನೆಯಲ್ಲಿ ಬೀಳುವ ಗುಳಿ ನೀನೆಂದರೆ ನೀನು ಓದುವ ಪುಸ್ತಕ ಮತ್ತು ನಿತ್ಯವೂ ನೀನು ಬಳಸುವ ಪದಾವಳಿ. ಬೆಳಗಿನ ನಿನ್ನ ಗೊಗ್ಗರು ಧ್ವನಿ ನಿನ್ನ ಗುರುತು ನಿನ್ನ ಪರಿಚಯ ನೀನು ಮರೆಮಾಚುವ ನಗೆಮುಗುಳು ನೀನು ನಿನ್ನ ನಗೆಯಲ್ಲಿರುವ ಮಧುರ ಧಾತು ನೀನೇ ನೀನು ಸುರಿಸಿದ ಕಣ್ಣೀರ ಹನಿಗಳು ಒಬ್ಬನೇ ಇದ್ದಾಗ ಹಾಡಿಕೊಳ್ಳುವೆಯಲ್ಲ, ಗಟ್ಟಿ ದನಿಯಲ್ಲಿ, ಆ ಹಾಡು ನೀನು. ನೀನಲೆದಾಡಿದ ಗುಡ್ಡಗಾಡುಗಳು ನೀನು ಮನೆಯೆಂಬ ಹೆಸರಿಟ್ಟ ಗೂಡು ನೀನು. ನಿನ್ನ ನಂಬಿಕೆಗಳು ನೀನು ನಿನ್ನ ಆತ್ಮೀಯರು ನೀನು ನಿನ್ನ ಕೋಣೆಯ ತೂಗುಚಿತ್ರಗಳು ನೀನು ನಿನ್ನಾಸೆ, ಕನಸು, ಆಕಾಂಕ್ಷೆ ನೀನು. ನಿನ್ನನ್ನು ನೀನಾಗಿಸಿದೆ ಎಷ್ಟೊಂದು ಚೆಲುವು ಎಂಬುದನ್ನು ನೀನು ಹೋದಂತಿದೆ ಮರೆತು. ನೀನಲ್ಲದ ವಸ್ತುಗಳಲ್ಲಿ ಯಾವಾಗ ನೀನು ಹುಡುಕಿಕೊಳ್ಳತೊಡಗಿದೆಯೋ ನಿನ್ನ ಗುರುತು.

ನಿನ್ನನ್ನು ನೀನೇ ಹುಡುಕಿಕೋ

ಇಮೇಜ್
ಮೂಲ - ಎಮಿಲಿ ಮೆಕ್ ಡೊವೆಲ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ನಿನ್ನನ್ನು ನೀನು ಹುಡುಕಿಕೋ  ಎಂದು ಹೇಳುವರಲ್ಲ ಜನ ನೀನೇನು ಕೋಟಿನ ಜೋಬಿನಲ್ಲಿಟ್ಟು ಮರೆತ  ನೂರು ರೂಪಾಯಿಯ ನೋಟೇ? ನೀನೆಲ್ಲೂ ಕಳೆದುಹೋಗಿಲ್ಲ  ನಿನ್ನ ನಿಜಸ್ವರೂಪ ಅಗೋ ಅಲ್ಲೇ ಇದೆ.  ಹುದುಗಿಹೋಗಿದೆ  ಸಂಸ್ಕಾರಗಳೆಂಬ ತಿದ್ದುಪಡಿ, ಒಪ್ಪಓರಣಗಳ ಕೆಳಗೆ, ಪರರ ಅಭಿಪ್ರಾಯಗಳ ಕೆಳಗೆ, ನೀನಿನ್ನೂ ಮಗುವಾಗಿದ್ದಾಗ  ನೀನು ಯಾರೆಂಬ ಪ್ರಶ್ನೆಗೆ ನೀನು  ಕಂಡುಕೊಂಡ ತಪ್ಪುತ್ತರಗಳಿಂದ  ಬೆಳೆದ ನಂಬಿಕೆಗಳ ಕೆಳಗೆ.  ನಿನ್ನನ್ನು ಹುಡುಕಿಕೊಳ್ಳುವುದೆಂದರೆ  ನಿನ್ನತನಕ್ಕೆ ಮರಳುವುದು, ಅಷ್ಟೇ.  ನಿನ್ನನ್ನು ಹುಡುಕಿಕೊಳ್ಳಬೇಕೇ? ನಿನಗೆ ಬೇಕಾಗಿರುವುದು - ಕಲಿತ ತಪ್ಪು ಪಾಠಗಳನ್ನು ಮರೆಯುವುದು, ಅಗೆಯುವುದು, ಮತ್ತು ಜಗತ್ತು ನಿನ್ನನ್ನು ಹಿಡಿಯುವ ಮೊದಲು  ನೀನು ಏನಾಗಿದ್ದೆ ಎಂದು ನೆನೆಯುವುದು