ಪೋಸ್ಟ್‌ಗಳು

Earth ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ವ್ಯೋಮದಲ್ಲೊಂದು ಹಾಡು

ಇಮೇಜ್
 ವ್ಯೋಮದಲ್ಲೊಂದು ಹಾಡು ಮೂಲ:  ಏಡ್ರಿಯನ್ ಮಿಚೆಲ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಮಾನವನು ಹಾರಿ ಆಕಾಶದಾಚೆಗೆ ಹೋದ ಘಳಿಗೆ ಹಿಂತಿರುಗಿ ನೋಡಿದನು ಭೂಮಿಯ ನೀಲ ಕಣ್ಣೊಳಗೆ ನಿನ್ನ ಕಣ್ಣುಗಳೇಕೆ ಕಡುನೀಲಿ ಎಂದು ಕೇಳಲು ಉತ್ತರ ಬಂತು: ಕಣ್ಣೀರು ತುಂಬಿರುವ ಕಡಲು  ಕಡಲಿನಲ್ಲಿ ಏಕಿದೆ ಅಷ್ಟೊಂದು ಕಣ್ಣೀರು? ನಾನು ಅತ್ತಿದ್ದೇನೆ ಸಂವತ್ಸರ ಸಹಸ್ರಾರು. ವ್ಯೋಮದಲ್ಲಿ ಸಾಗುತ್ತಾ ಏಕೆ ಕಣ್ಣೀರು ಹಾಕುವೆ? ಏಕೆಂದರೆ ನಾನು ಮಾನವಕುಲಕ್ಕೆ ತಾಯಾಗಿರುವೆ.

ನಗುತ್ತಿರು

ಇಮೇಜ್
ಮೂಲ: ಜಾನ್ ಮೇಸ್ ಫೀಲ್ಡ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನಗುತ್ತಿರು, ನಲಿಯುತ್ತಿರು, ಜಗವನ್ನು ಇನ್ನಷ್ಟು  ಹಸನಾಗಿಸಲಿ ನಿನ್ನ ಹಾಡು, ತಪ್ಪಿನ ಹಲ್ಲಿನ ಮೇಲೆ ಹಾಕಿ ಒಂದೇಟು ಜಗವನ್ನು ಇನ್ನಷ್ಟು ಹಸನು ಮಾಡು, ನಗುತ್ತಿರು, ಏಕೆಂದರೆ ಸಮಯ ಹೆಚ್ಚಿಲ್ಲ, ಅಳೆದರೆ ಇದ್ದೀತು ಒಂದು ಮಾರು, ಹೊರಟಿದೆ ಮಾನವನ ಹೆಮ್ಮೆಯ  ಜಾತ್ರೆ, ನಗುನಗುತ್ತಾ ಈ ಪುರಾತನ ಜಾತ್ರೆಯನು ಸೇರು. ಕೂದಲು ನೆರೆತಾಗಲೂ ನೆನಪಿಟ್ಟುಕೋ ನಗುನಗುತ್ತಾ ನಲಿಯುತ್ತಿರಲು, ಸ್ವರ್ಗ ಸೃಷ್ಟಿಸಿದವನೇ ಸೃಜಿಸಿದನು ಭೂಮಿಯಲ್ಲದರ ನಕಲು, ತುಂಬಿದನು ಅವುಗಳಲ್ಲಿ ತನ್ನ ಸಂತೋಷದ ಕೆಂಪು ದ್ರಾಕ್ಷಾರಸ, ನಕ್ಷತ್ರಗಳಲ್ಲಿ ನಗೆಮಿನುಗನ್ನು, ಭೂಮಿಯಲ್ಲಿ  ತುಂಬಿದನು ಸಂತಸ. ಹೀಗಿರಲು ತುಂಬಿಕೋ ಬಟ್ಟಲಿಗೆ, ಹೀರು, ನೀಲನಭದಿಂದ ಸುರಿವ ರಸಧಾರೆ, ಸೇರಿ ನೀನೂ ಹಾಡು, ಕೇಳಿಸಿಕೋ! ಸಮೂಹಗೀತೆ ಹಾಡುತ್ತಿವೆ ತಾರೆ, ನಗುತ್ತಾ ಮಾಡು ದುಡಿಮೆಯ ಯುದ್ಧ, ಸುರಿಸು ಬೆವರು ಹೀರು ದೇವನು ಭೂಮಿಯ ಮೇಲೆ ಚೆಲ್ಲಿರುವ ಹಸಿರು  ಎಲ್ಲರೂ ನಿನ್ನ ಸೋದರರು, ಅವರೊಂದಿಗೆ ನಗುತ್ತಾ ಕಳೆದುಬಿಡು ಸಿಕ್ಕ ಪ್ರತಿಕ್ಷಣ, ಕೆಲವೇ ದಿನಗಳ ಅತಿಥಿಗಳು ನಾವು, ಈ ಭೂಮಿ ನಮ್ಮ ತಂಗುದಾಣ, ನರ್ತಿಸುತ್ತಿರು ನಿಲ್ಲುವವರೆಗೂ ವಾದ್ಯಗೋಷ್ಠಿ, ಸಂಗೀತ, ನಗುತಿರು ಗೆಳೆಯಾ, ನಿಲ್ಲುವವರೆಗೂ ನೆಲದ ಆಟ.

ತಾಯಿ

ಇಮೇಜ್
 ತಾಯಿ ಟರ್ಕಿಯ ಭೂಕಂಪದ ನಾಲ್ಕು ದಿವಸಗಳ ತರುವಾಯ ಸಿಕ್ಕಿದ್ದಾರೆ ಜೀವಂತವಾಗಿ ಕಲ್ಲುಮಣ್ಣುಗಳ ತಳದಲ್ಲಿ ಹೊಕ್ಕಳುಬಳ್ಳಿಗೆ ಅಂಟಿಕೊಂಡಿದ್ದ ನವಜಾತ ಶಿಶು ಮತ್ತು ಪಕ್ಕದಲ್ಲಿ ಇನ್ನೂ ಜೀವಕ್ಕೆ ಅಂಟಿಕೊಂಡಿದ್ದ  ಅದರ ತಾಯಿ. ಮೂಳೆ ಕೊರೆವ ಚಳಿಯಲ್ಲಿ ಹೇಗೆ ಕಾಪಾಡಿದಳೊ ಎಳೆಯ ಬಾಳನ್ನು! ಎದೆಗವಚಿಕೊಂಡು, ಕತ್ತಲೆಯ ಕಂಬಳಿಯನ್ನೇ ಸೀಳಿ ಹೊದ್ದಿಸಿಕೊಂಡು! ತನ್ನೆದೆಯ ಹಾಲೇ ಅಮೃತವೆಂದು ಸೋಲನ್ನೊಪ್ಪದೆ ಹಾಡುತ್ತಾ ಕ್ಷೀಣದನಿಯಲ್ಲಿ ಹಳ್ಳುಳ್ಳಾಯಿ. ಎಲ್ಲಿದ್ದಾನೋ ಮಗುವಿನ ತಂದೆ! ಹುಡುಕುತ್ತಿರುವನೋ ಇಲ್ಲ ತತ್ತರಿಸಿಹೋದನೋ ವಿಧಿಯ ವಜ್ರಾಘಾತಕ್ಕೆ? ತಲ್ಲಣಿಸಿ ಅಳಲು ತಾಯಿಗೆ ಪುರುಸೊತ್ತೆಲ್ಲಿ! ಕರುಳಿನ ಬಳ್ಳಿಯನ್ನು ಕಾಪಾಡುವ ಹೊರೆಹೊತ್ತ ಏಕಧ್ಯೇಯಿ. ಕಪ್ಪುತೆರೆ ಆವರಿಸುತ್ತಿದೆ ಕಣ್ಮುಂದೆ, ನಿದ್ರೆಯ ಸುಖದ ಸುಪ್ಪತ್ತಿಗೆಯು ಕರೆಯುತ್ತಿದೆ, ಆದರೆ ಕಣ್ಮುಚ್ಚಲು ಅಳುಕು! ತಪ್ಪಿ ಕಣ್ತೆರೆಯದೇ ಹೋದರೆ ಏನಾದೀತು ಇದರ ಗತಿ! ಅಪ್ಪಿಕೊಂಡು ನನ್ನನ್ನೇ ನಂಬಿಕೊಂಡಿದೆ ಬಡಪಾಯಿ! ದೂರದಲ್ಲೆಲ್ಲೋ ಕುಟ್ಟಿದ ಸದ್ದು ಕೇಳುತ್ತಿದೆ, ಅರೆಮರುಳೇ? ತೂರಿ ಬರುತ್ತಿದೆ ಎಲ್ಲಿಂದಲೋ ಬೆಳಕು, ಸ್ವರ್ಗದ ಬಾಗಿಲೇ? ಯಾರೋ ಮೇಲೆತ್ತಿಕೊಂಡರು, ಅಂತಿಮಯಾತ್ರೆಯೇ? ನೀರು ಕುಡಿಸುತ್ತಿದ್ದಾರೆ! 'ನೋಡಿ ಇಲ್ಲಿದೆ ಮಗುವಿನ ಬಾಯಿ.' ದಪ್ಪ ಕಾಂಕ್ರೀಟ್ ಕೆಳಗೇನು ಸಿಕ್ಕಿತೆಂಬ ಪ್ರಶ್ನೆಗೆ ಸಪ್ಪಗೆ ನಕ್ಕು ಉತ್ತರಿಸಿದ  ರಕ್ಷಣಾ ಸಿಬ್ಬಂದಿ:  ಇಪ್ಪತ್ತುಸಾವಿರಕ್ಕೂ ಸ...

ವೃಕ್ಷ - ಒಂದು ಕವಿತೆ

ಇಮೇಜ್
ಮೂಲ - ಜಾಯ್ಸ್ ಕಿಲ್ಮರ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ನನ್ನ ಕಣ್ಣಿಗಂತೂ ಬಿದ್ದಿಲ್ಲ ಇದುವರೆಗೆ ವೃಕ್ಷದಂತಹ ಒಂದು ಸುಕುಮಾರ ಕವಿತೆ ಹಸಿದ ಬಾಯಿಂದ ಕಚ್ಚಿಕೊಂಡಿಹುದು ವೃಕ್ಷ ಸವಿಯೂಡುವ ಭೂತಾಯಿಯ ಸಮೃದ್ಧ ವಕ್ಷ ದಿನವೆಲ್ಲ ಕಣ್  ಬಾನತ್ತ, ಭಗವಂತನ ವೀಕ್ಷಣೆ ಎಲೆ ತುಂಬಿದ ತೋಳುಗಳ ಮೇಲೆತ್ತಿ ಪ್ರಾರ್ಥನೆ ವೈಶಾಖದಲಿ ತರುವು ತಲೆಯಲ್ಲಿ ಮುಡಿಯುವುದು ಗೊರವಂಕ ಕಾಜಾಣ ಹಕ್ಕಿಗಳ ಗೂಡು ಯಾರ ವಕ್ಷಸ್ಥಳದಲ್ಲಿ ಹೊಳೆಯುವುದೋ ಹಿಮಮಣಿ ಯಾರನ್ನು ರಮಿಸುವಳೋ ವರ್ಷಋತುರಮಣಿ ಕವಿತೆಗಳ ರಚಿಸುವರು ನನ್ನಂಥ ಮೂರ್ಖರು ದೇವನಿಂದ ಮಾತ್ರ ಸಾಧ್ಯ ಸೃಷ್ಟಿಸುವುದು ಈ ತರು!