ಪೋಸ್ಟ್‌ಗಳು

Gazal ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಸಂತಾಪ ಸಂದೇಶ (ಗಜಲ್)

 ಈಗ ಎಲ್ಲರ ಸಾವಿಗೂ ಎಲ್ಲರೂ ಸಂತಾಪ ಸೂಚಿಸುವುದು ಪದ್ಧತಿ ಎಲ್ಲರೂ ಕಾಮೆಂಟ್ ಮಾಡುವರು ಓಂ ಶಾಂತಿ, ಸದ್ಗತಿ ರಾಣಿಯ ಸಾವಿಗೆ ಓಂ ಶಾಂತಿ ಆರ್ ಐ ಪೀ ರೆಸ್ಟ್ ಇನ್ ಪೀಸ್ ಕೇಳರಿಯದದ್ದಿರೂ ಕಾಣದಿದ್ದರೂ ಕಡಿಮೆಯಿಲ್ಲ ಕಕ್ಕುಲಾತಿ ಕಣ್ಣೀರು ಹಾಕುವರು ತುಂಬಲಾರದ ನಷ್ಟ ಇದೆಂದು ವರ್ಷಗಳಿಂದಲೂ ಏನೂ ಬರೆಯದೇ ಸತ್ತರೂ ಸಾಹಿತಿ ಸತ್ತವರು ಮಾಡದ ಸಾಧನೆ ಮತ್ತು ಆಡದ ಮಾತು ಒಂದೆರಡು ದಿನ ಸುತ್ತುವುವು ಹೀಗೆ ಸೃಷ್ಟಿಸಿದ ಮಾಹಿತಿ ಆನಂತರ ಮರೆತು ಮುನ್ನಡೆಯುವುದು ಜಗತ್ತು ಎಷ್ಟು ದಿನ ಮಾಡಲಾದೀತು ಯಾರನ್ನಾದರೂ ಪ್ರೀತಿ! ಸಿ. ಪಿ. ರವಿಕುಮಾರ್ #ಗಜಲ್

ಇಶ್ರತ್ ಏ ಕತರಾ ಹೈ ದರಿಯಾ ಮೇ ಫನಾ ಹೋ ಜಾನಾ

ಇಮೇಜ್
ಮೂಲ - ಮಿರ್ಜಾ ಗಾಲಿಬ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ('ಇಶ್ರತ್ ಏ ಕತರಾ ಹೈ ದರಿಯಾ ಮೇ ಫನಾ ಹೋ ಜಾನಾ'  - ಗಾಲಿಬ್ ಅವರ ಈ ಗಜಲ್ ಅನೇಕ ಗಾಯಕರಿಂದ ಹಾಡಲ್ಪಟ್ಟಿದೆ. ಕರ್ನಾಟಕ ಗಾಯನ ಶೈಲಿಯಲ್ಲಿ ಎಂ. ಎಸ್. ಸುಬ್ಬುಲಕ್ಷ್ಮಿಯವರೂ ಇದನ್ನು ಹಾಡಿದ್ದಾರೆ!  ತನ್ನ ಪ್ರೇಮಿಕೆಯಿಂದ ಯಾವುದೋ ಕಾರಣದಿಂದ ಬೇರಾದ ಪ್ರೇಮಿಯೊಬ್ಬನ ಅಳಲು ಈ ಕವಿತೆಯಲ್ಲಿದೆ.) ಸಿಂಧುವಿನಲ್ಲಿ ಕೊನೆಗಾಣುವುದರಲ್ಲಿದೆ ಬಿಂದುವಿನ ಆನಂದ ತಿಂದ ನೋವು ಮಿತಿ ಮೀರಿದಾಗ ಅದೇ ಆಗುತ್ತದೆ ದಿವ್ಯೌಷಧ ಬೀಗ ಮತ್ತದರ ಕೀಲಿಯಂತಾಯಿತಲ್ಲ ನನ್ನ ನಿನ್ನ ಸಂಬಂಧ ಎಲ್ಲ ನೇರವಾಯಿತು ಎನ್ನುವಾಗ ಕಳಚಿ ಬಿದ್ದಿತು ಬಂಧ ಕಷ್ಟಗಳಿಗಿಂತಲೂ ಪರಿಹಾರಗಳಿಂದ  ತತ್ತರಿಸಿದೆ  ಎದೆ  ಗಂಟು ಬಿಡಿಸಲು ಹೋಗಿ ಎಲ್ಲಾ  ಗೋಜಲುಗೋಜಲಾಗಿದೆ  ದೈವವೇ! ಹಿಂಸೆಯಿಂದಲೂ ವಂಚಿತವಾಗುತ್ತಿದೆ  ಮನಸ್ಸು ತನ್ನ  ಆರಾಧಕನ  ಮೇಲೆ ಅವಳಿಗೇಕೆ ಇಷ್ಟೊಂದು ಸಿಟ್ಟು? ಬಿಸಿ ನಿಟ್ಟುಸಿರುಗಳು  ಕಂಬನಿಯ ಸ್ಥಳವನ್ನಾಕ್ರಮಿಸಿದಾಗ ನೀರೂ ಆವಿಯಾಗಬಹುದೆಂದು ನಂಬಿಕೆ ಬಂತು ಆವಾಗ ಮದರಂಗಿ ಚಿತ್ತಾರದ ನಿನ್ನ ಮೃದು ಹಸ್ತಗಳ ನೆನಪು ಎದೆಯಿಂದ ಬೇರ್ಪಡಿಸುವುದಿದೆಯಲ್ಲ, ಕಿತ್ತಂತೆ ಉಗುರು ನಿನ್ನ ಮನೆ ಓಣಿಯನು ತಲುಪಲೊಲ್ಲದ  ಕುಸುಮದ ಗಂಧ ಬೀಸುಗಾಳಿಗೆ ಕಾದು ಕುಳಿತಿದೆ ಏತಕೆ  ಧೂಳಿ...

ಉಪವನ

ಇಮೇಜ್
ಮುಳ್ಳಿನಲ್ಲಿ ಎಂದೂ ಸಿಲುಕಿಲ್ಲವೋ ಯಾರ ಸೆರಗು ಉಪವನದ ರಹಸ್ಯವನ್ನು ಅವರೇನು ಬಲ್ಲರು? ಏಕಾಏಕಿ ನೀನು ಬಂದು ಬಿಡಬೇಡ ನನ್ನೆದುರು ನಿಂತು ಹೋದೀತು ಒಮ್ಮೆಲೇ ನನ್ನ ಉಸಿರು ಹೂವು ಹಾಗಿರಲಿ ಮುಳ್ಳುಗಳನ್ನೇ ಆಯ್ದುಕೊಂಡರೂ ತುಂಬಿಲ್ಲ ಇನ್ನೂ ಹೂವಾಡಿಗನ ಸೆರಗು ಹಕ್ಕಿಗೂಡಿಗೆ ಅದೇಕಷ್ಟು ಅಲಂಕಾರ ಬಿದ್ದುಹೋದರೆ ರೆಂಬೆ ತಾಳದೇ ಭಾರ ಉಪವನದ ಚೆಲುವನ್ನು ಬೆಳಗಿತಲ್ಲ ಕೋಲ್ಮಿಂಚು ಬಂಧುವೋ ಶತ್ರುವೋ ಏನು ಹೇಳುವುದು? ಹೂವುಗಳಿಗಿಂತ ಮುಳ್ಳುಗಳೇ ಎಷ್ಟೋ ಮೇಲು ಮುಳ್ಳು ಉಪವನಕ್ಕಿಟ್ಟ ದೃಷ್ಟಿಬೊಟ್ಟು ಮೂಲ: ಫನಾ ನಿಜಾಮಿ ಕಾನ್ಪುರಿ ಅನುವಾದ: ಸಿ. ಪಿ. ರವಿಕುಮಾರ್

ರಕ್ತಸಂಬಂಧ (ಒಂದು ಗಜಲ್)

ಇಮೇಜ್
ಸುರಿದರೂ ನಾನು ನಿನ್ನ ಕಿವಿಯೊಳಗೇ ನಾದಸುಧೆ ಸರಿ ಸರಿ ಎಂದು ಕೈ ಝಾಡಿಸುವೆ ಓ ನಿಷ್ಕರುಣಿ! ನಿನ್ನ ಸಭೆಯೊಳಗೆ ನನಗೆ ಕೊಡದಿದ್ದರೂ ಆಹ್ವಾನ ನನ್ನ ಅಭಿಮಾನ ಮರೆತು ಹಾಡುವೆ ನಾ ತೆರೆದು ದನಿ ಅತಿಥಿಗಳ ಸ್ವಾಗತಕ್ಕೆ ಉರಿಸುವರು ಅಗರುಹೊಗೆ ನಿನ್ನ ಹೊಗೆಯಿಂದೇಕೋ ಸುರಿಯುತ್ತಿದೆ ಕಣ್ಣಲ್ಲಿ ಹನಿ ನೆತ್ತರಿನ ಬಂಧು ನಾನು, ಬೇಡೆನು ನಾ ಬೇರೇನೂ ತಟ್ಟಿ ಕೈಯೊಳು ಹೊಸಕಿ ಹಾಕುವೆಯಾ ಹೃದಯ-ದಣಿ! ಸಿ.ಪಿ. ರವಿಕುಮಾರ್

ಪ್ರೇಮವೇ ನಿನ್ನ ಈ ಪರಿಣಾಮಕೆ ಕಂಬನಿ ಮಿಡಿದೆ

ಇಮೇಜ್
ಮೂಲ - ಶಕೀಲ್ ಬದಾಯೂನಿ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ (ಐ ಮುಹಬ್ಬತ್ ತೇರೇ ಅಂಜಾಮ್ ಪೇ ರೋನಾ ಆಯಾ ಎಂದು ಪ್ರಾರಂಭವಾಗುವ ಈ ಗಜಲ್ ತುಂಬಾ ಪ್ರಸಿದ್ಧ. ಇದನ್ನು ಬೇಗಂ ಅಖ್ತರ್ ಅವರ ಧ್ವನಿಯಲ್ಲಿ ನೀವು ಕೇಳಬಹುದು ) ಪ್ರೇಮವೇ ನಿನ್ನ ಈ ಪರಿಣಾಮಕೆ ಕಂಬನಿ ಮಿಡಿದೆ ಯಾವುದೋ ಮಾತಿಗೆ ನೋವಾಯಿತು, ಕಂಬನಿ ಮಿಡಿದೆ ಹೇಗೋ ಭರವಸೆಯಲ್ಲಿ ಕಳೆಯುತಿತ್ತು ಪ್ರತಿಸಂಜೆ ಇಂದು ಸಂಜೆ ಅದೇನಾಯಿತೋ ಕಂಬನಿ ಮಿಡಿದೆ ಇತ್ತ ಒಲಿಯದ ಭಾಗ್ಯ, ಅತ್ತ ಜನರಿಂದ ಕಡುಟೀಕೆ, ಪ್ರೇಮಪಥದ ಪ್ರತಿ ಹೆಜ್ಜೆಗೂ ಕಂಬನಿ ಮಿಡಿದೆ ಬಂದಿತೇತಕೆ ನನ್ನದೇ ಮಡಿಲಿಗೆ ಪ್ರತಿ ವೇದನೆಯೂ ಹಾ ವಿಧಿಯೇ! ನಿನ್ನ ಅಟ್ಟಹಾಸಕೆ ಕಂಬನಿ ಮಿಡಿದೆ ತೆಗೆಯುವೆ ಏತಕೆ ಪ್ರೀತಿಪ್ರೇಮಗಳ ಮಾತು ನನ್ನೆದೆಯ ಸೋಲನ್ನು ನೆನೆದು ಕಂಬನಿ ಮಿಡಿದೆ

ಸಾಲದಲ್ಲಿ ಸ್ವರ್ಗ

ಇಮೇಜ್
ಮೂಲ .. ನಂದ್ ಸಾರಸ್ವತ್ ಹೇಮಾಸರ್‌ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ನಡೆಯುತ್ತಿದೆ ಅಪ್ಪನ ಹನ್ನೆರಡನೇ ದಿನದ ಕಾರ್ಯ ನಡೆಯುತ್ತಿದೆ ಸ್ವರ್ಗದ ಬಾಗಿಲು ತೆರೆಸುವ ಕಾರ್ಯ ಇನ್ನಷ್ಟು ದಿನ ಬದುಕಿರುತ್ತಿದ್ದನೇನೋ ನಡೆಸಿದ್ದರೆ ಚಿಕಿತ್ಸೆ ಹಿತ್ತಲಲ್ಲಿ ನಡೆಯುತ್ತಿದೆ ವಡೆ ಪಾಯಸ ಕಾರ್ಯ ಚಳಿಗೆ ನಡುಗುತ್ತಿದ್ದ ಅಪ್ಪ ನಿದ್ದೆ ಹತ್ತದೆ ಕಣ್ಣಿಗೆ ಅವನ ನೆನಪಿನಲ್ಲೀಗ ಶಾಲು ವಿತರಿಸುವ ಕಾರ್ಯ ಮಾತಾಡುತ್ತಿರಲಿಲ್ಲ ಅವನ ಮುಖಕ್ಕೆ ಮುಖಕೊಟ್ಟು ಈಗ ಅವನ ಗುಣಗಾನ ಗುಣುಗುಣಿಸುವ ಕಾರ್ಯ ವಿಚಿತ್ರವಾದವು ನೋಡಿ ಈ ಜಗದ ರೀತಿನೀತಿಗಳು ಸಾಲ ಮಾಡಿ ಋಣದ ಭಾರ ಇಳಿಸುವ ಕಾರ್ಯ ಸ್ವರ್ಗ ಪಡೆಯಲು ಅದೆಷ್ಟೋ ವಸ್ತು ವಿಶೇಷಗಳು ಗೋದಾನ ಮಾಡಿ ಗಂಗೆಯನು ದಾಟಿಸುವ ಕಾರ್ಯ

ನಡುಕ ಹುಟ್ಟಿಸುವ ಚಳಿ ಇಂದಿನ ಬೆಳಗು

ಇಮೇಜ್
ಅಬ್ಬಾ ನಡುಕ ಹುಟ್ಟಿಸುವ ಚಳಿ ಇಂದಿನ ಬೆಳಗು ಇಬ್ಬನಿಯು ಮಂಜುಗಲ್ಲಾಗಿದೆ ಈ ಬೆಳಗು ಬಿಸಿಕಾಫಿ ಚಹಾ ನೆನೆದು ಪರಿತಪಿಸುವ ಬೆಳಗು ರಸಿಕರೂ ಬಿಸಿಗಾಗಿ ಕಾಫಿಟೀ ಹೀರುವ ಬೆಳಗು! ಹಳೆಯ ಸಂಗ್ರಹದಿಂದ ಸೈಟರ್‌ ಹುಡುಕುವ ಬೆಳಗು ಬೆಳಕಾಗದಿದ್ದರೂ ಗಡಿಯಾರ ಕೋರುತ್ತಿದೆ ಬೆಳಗು | ಪುಟ್ಟಣ್ಣ ಕಣಗಾಲ್ ಕೊಡಗು ನೆನಪಿಸುವ ಬೆಳಗು ಬಿತ್ತಿ ಕನಸುಗಳನ್ನು ಬೆಳಗಿಸುವ ಬೆಳಗು ಮುಗಿಯಿತು ನವೆಂಬರ್ ರಾಜ್ಯೋತ್ಸವ ಮಾಸ ನಗುನಗುತ ಕನ್ನಡಕ್ಕೆ ಕೈಬೀಸುವ ಬೆಳಗು! ಸಿ.ಪಿ. ರವಿಕುಮಾರ್

ಬೆಂಗಳೂರಿಗೆ ಸಿಕ್ಕಿದೆಯಂತೆ ಮತ್ತೊಂದು ಗರಿ

ಇಮೇಜ್
ಬೆಂಗಳೂರಿಗೆ ಸಿಕ್ಕಿದೆಯಂತೆ ಮತ್ತೊಂದು ಗರಿ ನಮ್ಮ ಬೆಂಗಳೂರು ಈಗ ಅಪರಾಧ ನಗರಿ ಇತ್ತು ನಿವೃತ್ತರ ಸ್ವರ್ಗವೆಂಬ ಬಿರುದು ಹಿಂದೊಮ್ಮೆ ರಸ್ತೆ ದಾಟುವ ನಿವೃತ್ತರಿಗೆ ಸ್ವರ್ಗ ಕಾಣಿಸುವ ನಗರಿ ಬೆಂದಕಾಳೂರೆಂಬ ಕಥೆ ಹೇಳುವರು ಮಂದಿ ಯಾರ ಬೇಳೆ ಕಾಳೂ ಪೂರ್ತಿ ಬೇಯದ ನಗರಿ ನೂರಾರು ಕೆರೆಗಳು ಇದ್ದವಂತೆ ಹಿಂದೊಮ್ಮೆ ಎಕರೆಗಳಾಗಿ ಎಲ್ಲವನ್ನೂ ಪರಿವರ್ತಿಸಿದ ನಗರಿ ಉಪವನಗಳ ನಗರವೆಂಬ ಅಡ್ಡ ಹೆಸರಿತ್ತು. ಅಪವನ, ಕಲುಷಿತ ಪವನಗಳ ನಗರಿ ಅಂದು ಸಿಲಿಕಾನ್ ಸಿಟಿ, ಐಟಿ ಬಿಟಿ ಮುನ್ನಡೆಗಳ ನಗರಿ ಇಂದು ಕಾರ್ಬನ್ ಸಿಟಿ, ಟ್ರಾಫಿಕ್ ತಡೆಗಳ ನಗರಿ ಸಿ.ಪಿ. ರವಿಕುಮಾರ್

ವಿವಾದ ಸೃಷ್ಟಿಸುವ ಕೆಲಸ

ಇಮೇಜ್
ಕೆಲವರಿಗೆ ವಿವಾದ ಸೃಷ್ಟಿಸುವ ಕೆಲಸ ಕೆಲಸವಿಲ್ಲದವರಿಗೆ ಇನ್ನೇನು ಹುಟ್ಟಿಸುವ ಕೆಲಸ ಸೋಮಾರಿ ಕಟ್ಟೆಯ ಮೇಲೆ ಹೂಡಿ ಪಟ್ಟಾಂಗ ಅತ್ತಿತ್ತ ಎಲ್ಲಕಡೆ ದಿಟ್ಟಿಸುವ ಕೆಲಸ ಸ್ವಂತ ಆಲೋಚನೆಯನ್ನು ಕಲಿಯಲೇ ಇಲ್ಲ ಅಲ್ಲಿಯದನ್ನಿಲ್ಲಿ ಮುಟ್ಟಿಸುವ ಕೆಲಸ ನೇರವಾದ ಉತ್ತರಕ್ಕೆ ಬೆಲೆಯಿಲ್ಲವೆಂದು ಕಂಬದಿಂದ ಕಂಬಕ್ಕೆ ಸುತ್ತಿಸುವ ಕೆಲಸ ಯಾರೋ ಹೇಳಿಕೊಟ್ಟರು ಒಂದು ಹಳೆಯ ರಾಗ ಅದನ್ನೇ ಹಾರ್ಮೋನಿಯಂ ಕುಟ್ಟಿಸುವ ಕೆಲಸ ಸಿ.ಪಿ. ರವಿಕುಮಾರ್

ನಡೆಯಿತಂತೆ ಹೀಗೊಂದು ಮದುವೆ

ಇಮೇಜ್
ಬಿಹಾರದಲ್ಲಿ ನಡೆಯಿತಂತೆ ಹೀಗೊಂದು ಮದುವೆ ಹೌಹಾರಿ ಹುಬ್ಬೇರಿಸಿ ತಲೆದೂಗುವ ಮದುವೆ ಮದುವೆ ಏನೂ ಸರಳ ಸಾಮಾನ್ಯರದಲ್ಲ ಪದವಿಯಲ್ಲಿರುವವರ ಸ್ಥಿತಿವಂತರ ಮದುವೆ ಸಾಲು ಸಾಲಾಗಿ ಬಂದರಂತೆ ಅತಿಥಿಗಳು ಲಾಲು ಇತ್ಯಾದಿಗಳೂ ಆಗಮಿಸಿದ ಮದುವೆ ಮಜವೇನೆಂದು ನೀವು ಕೇಳುವುದು ಸಾಧುವೇ ಭೋಜನಕೂಟವೇ ಆಯೋಜಿಸದ ಮದುವೆ ಲಡು ಸಿಕ್ಕಿತು ಎಲ್ಲರಿಗೂ ಒಂದಲ್ಲ ನಾಲ್ಕು ಬಡ್ಡಿ ಸಾಲಗಳನ್ನು ಹೊರದೂಡಿದ ಮದುವೆ ವಧುವರರಿಗೆ ಬೇಕು ಜನರ ಆಶೀರ್ವಾದ ಅದು ಹೀಗೂ ಸಿಕ್ಕದೇ ಎಂದು ಪ್ರಶ್ನಿಸಿದ ಮದುವೆ ಸುದ್ದಿಯಾಗಿದೆ ಮಾರಾಟ ಸಂಸ್ಕೃತಿಯ ನಡುವೆ ಬುದ್ಧನ ನಾಡಿನಲ್ಲೊಂದು ಬುದ್ಧಿವಂತರ ಮದುವೆ ಸಿ.ಪಿ. ರವಿಕುಮಾರ್

ಒರೆಹಚ್ಚಿ ನೋಡಬಾರದೇನು ನನ್ನನ್ನು

ಇಮೇಜ್
ಮೂಲ ... ನಂದ್ ಸಾರಸ್ವತ್ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ಒಮ್ಮೆ ಒರೆಹಚ್ಚಿ ನೋಡಬಾರದೇನು ನನ್ನನ್ನು ನನ್ನವಳಾಗು ಇಲ್ಲ ನಿನ್ನವನಾಗಗೊಡು ನನ್ನನ್ನು ತೋಡಿಕೊಳ್ಳುವೆ ಅಂತರಂಗವನ್ನೆ ನಿನ್ನ ಬಳಿ ಆಡಿ ಮಾತೆರಡು, ಕೇಳಲೊಪ್ಪಿದರೆ ಮಾತನ್ನು ಸೋಲುವೆನು ನನ್ನ ಹೃದಯವನ್ನೆ ನಿನ್ನ ಪ್ರೇಮದೊಳು ಗೆಲ್ಲು ನನ್ನನ್ನು, ಒಮ್ಮೆ ಸೋಲಿಸು ಬಾ ನನ್ನನ್ನು

ನಡೆಯೋಣ ದುಃಖಗಳ ಅಧ್ಯಾಯ ಕೊನೆಗೊಳಿಸಿ

ಇಮೇಜ್
ಮೂಲ ... ನಂದ್ ಸಾರಸ್ವತ್ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ನಡೆಯೋಣ ನಮ್ಮ ಧೋರಣೆಗಳ ಮೇಳವಿಸಿ ನಡೆಯೋಣ ದುಃಖಗಳ ಅಧ್ಯಾಯ ಕೊನೆಗೊಳಿಸಿ ಸಹಿಸಿಕೊಂಡದ್ದು ಸಾಕು ನೋವು ಪರಿತಾಪ ನಡೆ ಮುನ್ನಡೆಯೋಣ ಇವುಗಳನಿಲ್ಲೇ ತ್ಯಜಿಸಿ ಎಷ್ಟು ಸಹಿಸುವುದು ಏಕೆ ಸಹಿಸುವುದು ದುರಾಚಾರ ನಡೆ ಮುಂದೆ ರಕ್ತ ಕಣ್ಣೀರುಗಳನೊರೆಸಿ ನಡುಗುವುದೇಕೆ ಹೇಳು ಜಗದ ಭೀತಿಯಲ್ಲಿನ್ನೂ ಮುನ್ನಡೆಯೋಣ ಜಗದ ಪಂಥವನ್ನು ಸ್ವೀಕರಿಸಿ ಅಲ್ಲಿ ಇಲ್ಲೆಂದು ಎಲ್ಲ ಕಡೆಗೂ ಅಲೆದಾಡಿದೆವು ಬಾ, ನಡೆ, ಗುರಿಸೇರುವ ಮಾರ್ಗವನ್ನು ಅನುಸರಿಸಿ ಸಾಕು ಓದಿದ್ದು ಅಮರಪ್ರೇಮಗಳ ಕಹಿಕಥನ ನಡೆ ಪುಟವನ್ನು ತಿರುವಿ ಹೊಸ ಅಧ್ಯಾಯವನರಸಿ!

ಎಚ್ಚರಕ್ಕೆ ಶರಣು

ಕುಡಿದು ಹುಚ್ಚಾಟ ಮಾಡಿದ ಶಿಕ್ಷಕನ ಹಿಡಿದು ಬಡಿಗೆಯಲಿ ಥಳಿಸಿದ ಗ್ರಾಮಸ್ಥರಿಗೆ ಶರಣು ಇರುಳು ಬಸ್ಸಿನಲ್ಲಿ ಕಿರುಕುಳ ನೀಡುವ ಕಂಡಕ್ಟರಿಗೆ ಎರಡು ಚಪ್ಪಲಿ ಏಟು ಬಿಗಿದ ಮಹಿಳೆಗೆ ಶರಣು ನಡೆಯುವುದನ್ನೆಲ್ಲಾ ನೋಡಿ ಸುಮ್ಮನಿರಲಾರರು ಮಂದಿ ತಡೆದುಕೊಳ್ಳಲೂ ಮಿತಿಯುಂಟೆಂಬ ಉದ್ಘೋಷಕ್ಕೆ ಶರಣು ಬಹಳವಾದಾಗ ಸಾಮದಾನೋಪಾಯಗಳ ಭಾಗ್ಯ ಇಹುದು ದಂಡೋಪಾಯವೆಂಬ ಎಚ್ಚರಕ್ಕೆ ಶರಣು ಸಿ.ಪಿ. ರವಿಕುಮಾರ್

ಮಳೆಯಲ್ಲಿ ಪಯಣ - ಒಂದು ಗಜಲ್

ಇಮೇಜ್
ಸಿ.ಪಿ. ರವಿಕುಮಾರ್  ಮಳೆ ಬಂದರೆ ಕೊಳಕು ಕೆರೆಯಾಗುವ ರಸ್ತೆ ಮತದಾರರಿಗೆ ಹೇಳುತ್ತಿದೆ ತಡೆತಡೆದು ನಮಸ್ತೆ ತಟಸ್ಥವಾಗಿವೆ ಬಸ್ಸು ಮಿಸುಕಾಡವು ಕಾರು ಚಲಿಸುವ ಪ್ರಯಾಸ ದ್ವಿಚಕ್ರ ವಾಹನಗಳದ್ದು ಅಷ್ಟೇ ಅಲ್ಲೊಂದು ಮರ ಉರುಳಿದೆ ಇಲ್ಲೊಂದು ರೆಂಬೆ ಎಲ್ಲೆಡೆಗಿಂತ ಇಂದು ಸ್ವಲ್ಪ ಹೆಚ್ಚಿನ ಅವ್ಯವಸ್ಥೆ ಕುಟ್ಟುತ್ತಾರೆ ಹಾರ್ನ್ ಚಾಲಕರು ಏನೂ ತೋಚದಾದಾಗ ಹೆಚ್ಚು ಮುಲುಗದು ನಗರ (ಅವಳು ನಿತ್ಯಸಂತ್ರಸ್ತೆ) ರೇಡಿಯೋದಲ್ಲಿ ಅದೇ ಮುರುಕು ಸಂಗೀತ ನಿಮ್ಮ ಮತ ಅಮೂಲ್ಯವೆಂದು ಹಾಡಿ ನೆನಪಿಸುತ್ತೆ ಮೊಬೈಲ್ ಹಿಡಿದು ಕೈಯಲ್ಲಿ ಕುಳಿತಿರುವ ರವಿಗೆ ಅತಿಬಳಕೆಯಿಂದ ಕೈ ಹೆಬ್ಬೆರಳು ನೋಯುತ್ತೆ

ಚೈನಾ ಬಿತ್ತುತ್ತಿದೆಯಂತೆ ಚಂದ್ರನ ಮೇಲೆ ಆಲೂ (ಗಜಲ್)

ಇಮೇಜ್
ಸಿ. ಪಿ. ರವಿಕುಮಾರ್  ಚೈನಾ ಬಿತ್ತುತ್ತಿದೆಯಂತೆ ಚಂದ್ರನ ಮೇಲೆ ಆಲೂ ಮುಂದೊಮ್ಮೆ ಕರೆದೀತು ಚಂದ್ರಿಕೆಯು ಹಾಲು ಟ್ರಾಕ್ಟರ್ ಓಡಿಸಿ ಚಂದ್ರವದನದ ಮೇಲೆಲ್ಲಾ ಹದಮಾಡಿ ಬಿತ್ತಬಹುದು ನೆಲಗಡಲೆ ಕಾಳು ಈಗಾಗಲೇ ಅಲ್ಲಿ ನೆಲೆಸಿರುವ ಉಡುಪಿ ಭಟ್ಟರು ವಿಸ್ತರಿಸಬಹುದು ಇನ್ನಷ್ಟು ಇಡ್ಲಿವಡೆ ಹೋಟೆಲು ಬೆಳೆಯಬಹುದು ನಾಳೆ ಇಂದುವಿನ ಮೇಲೆ ಸೂಜಿಮಲ್ಲಿಗೆ ದುಂಡುಮಲ್ಲಿಗೆಯ ಸಾಲು ದ್ರಾಕ್ಷಿಬಳ್ಳಿಯು ಹಬ್ಬಿ ಹಳದಿಚಂದ್ರನ ಮೇಲೆ ತೂಗಬಹುದು ಬಾನಲ್ಲಿ ರಸಭರಿತ ಗೊಂಚಲು ದ್ರಾಕ್ಷಾರಸವನ್ನು ತುಂಬಿತುಂಬಿ ಹೂಜಿಗಳಲ್ಲಿ ಸಾಕೀಗಳು ನಿಂತಾರು ಚಂದಿರನ ಮೇಲೂ ಮಧುಶಾಲೆ, ಸಾಕೀ, ಇತ್ಯಾದಿ ಕನವರಿಸುವ ಶಾಯರರು ಹೋಗಿ ನಿಂತಾರು ಹಿಡಿದು ತಳವಿರದ ಬಟ್ಟಲು ಚಂದ್ರಮುಖಿ ಎಂದೆಲ್ಲಾ ಕವನಿಸುವ ಪ್ರೇಮಕವಿ  ಉಪಮೆಯಿಲ್ಲದೆ ಕಾಣುವನೆ ಪ್ರೇಮದಲಿ ಸೋಲು?

ಅದೃಶ್ಯ ದೇವರಿಗೆ ನಿತ್ಯ ಹುಡುಕಾಟ

ಇಮೇಜ್

ನೀಡುವಿರಿ ಶಿಕ್ಷೆ

ಇಮೇಜ್
ಮೂಲ .. ಸಾಹಿರ್‌ ಲುಧಿಯಾನವಿ ಕನ್ನಡಕ್ಕೆ ... ಸಿಪಿರವಿಕುಮಾರ್ "ಜುರ್ಮ್-ಎ-ಉಲ್ಫತ್ ಕಿ ಹಮೇಂ ಲೋಗ್ ಸಜಾ ದೇತೇ ಹೈನ್" ಎಂದು ಪ್ರಾರಂಭವಾಗುವ ಈ ಗೀತೆಯನ್ನು "ತಾಜ್ ಮಹಲ್" ಹಿಂದಿ ಚಿತ್ರದಲ್ಲಿ ಬಳಸಲಾಗಿದೆ. ಇದನ್ನು ಲತಾ ಮಂಗೇಶ್ಕರ್ ಹಾಡಿದ್ದಾರೆ. "ಜಬ್ ಪ್ಯಾರ್ ಕಿಯಾ ತೋ ಡರ್ನಾ ಕ್ಯಾ?" ಗೀತೆಗೂ ಇದಕ್ಕೂ ಇರುವ ಸಾಮ್ಯವನ್ನು ಗಮನಿಸಬಹುದು. ನೀಡುವಿರಿ ಶಿಕ್ಷೆ ಪ್ರೇಮಾಂಕುರದ ಪಾಪಕ್ಕೆ ಗಾಳಿ ನೀಡುವಿರಿ ಮಂದಾಗ್ನಿಗೆ, ಮುನ್ನೆಚ್ಚರಿಕೆ! ಭ್ರಮಿತಮತಿಯೇ ನಾವು, ತ್ಯಜಿಸುವೆವೆ ಪರಸ್ಪರರ? ನೀಡುವೆವು ಪ್ರಾಣವನ್ನೇ ಮಾಡಿದ ವಾಗ್ದಾನಕ್ಕೆ ಹೃದಯಗಳ ತೂಗುವಿರಾ ಸ್ವರ್ಣದ ತಕ್ಕಡಿಯಲ್ಲಿ! ನಾವು ನೀಡುವೆವು ಪ್ರತಿಪ್ರೇಮವನೇ ಪ್ರೇಮಕ್ಕೆ ಮಹಲು ಸಿಂಹಾಸನವು ಧನಕನಕಗಳೇನು ಮಹಾ! ಪ್ರೇಮಿಗಳು ಸಿದ್ದ ದಿವ್ಯಾಮೃತದ ತ್ಯಾಗಕ್ಕೆ! ಬೆಸೆದುಕೊಂಡಿವೆ ಹೃದಯ, ಒಂದು ನಮ್ಮ ಪ್ರಾಣಗಳು ಸಿದ್ದರಾಗಿಹೆವು, ಶಿಕ್ಷೆ ನೀಡಿರಿ ಮನಸೋ ಇಚ್ಛೆ ಮೂಲ .. ಸಾಹಿರ್‌ ಲುಧಿಯಾನವಿ ಕನ್ನಡಕ್ಕೆ ... ಸಿಪಿರವಿಕುಮಾರ್

ನೋವಿನಲ್ಲಿ ಅರಳಿ ತೋರಿಸು ನೋಡೋಣ

ಇಮೇಜ್

ಧೂಮದಲ್ಲಿ ಮಾಯ

ಇಮೇಜ್

ದೂರದಲಿ ನಿಂತು ಮಾತನಾದದಿರು

ಇಮೇಜ್
ಮೂಲ... ಸಾಹಿರ್‌ ಲುಧಿಯಾನವಿ ಕನ್ನಡಕ್ಕೆ ... ಸಿ. ಪಿ. ರವಿಕುಮಾರ್ (ದೂರ್ ರೆಹ್ ಕರ್ ನ ಕರೋ ಬಾತ್ ... ಎಂಬ ಈ ಚಿತ್ರಗೀತೆಯನ್ನು ನೀವೂ ಕೇಳಬಹುದು . ಪ್ರೇಮಿಯೊಬ್ಬ ತನ್ನ ಪ್ರೇಮಿಕೆ ಯನ್ನು ಒಲಿಸಿಕೊಳ್ಳುವ ಸನ್ನಿವೇಶಕ್ಕಾಗಿ ಸಾಹಿರ್ ಎಷ್ಟು ಮಾದಕವಾದ ಗೀತೆಯನ್ನು ರಚಿಸಿದ್ದಾರೆ!) ದೂರದಲಿ ನಿಂತು ಮಾತನಾಡದಿರು, ಬಾ ಬಳಿಗೆ ಅವಿಸ್ಮರಣೀಯವಿಗೋ ರಾತ್ರಿ ಇದು, ಬಾ ಬಳಿಗೆ! ನಿನ್ನ ಸ್ಪರ್ಶಕೆ ಕಾದು ಕಳೆದಿರುವೆನು ನಾನೊಂದು ಯುಗ ಇನ್ನು ಕೇಳದು ನನ್ನ ಮಾತನು ಮನ, ಬಾ ಬಳಿಗೆ! ಬೀಸುತಿಹ ಚಳಿಗಾಳಿಗೆ ಭುಗಿಲೇಳುವ ಆಸೆಗಳು ಕೊಂದು ತೀರುವುದು ಮಳೆ ಸಿಂಚನವಿದು, ಬಾ ಬಳಿಗೆ! ಹೀಗೆ ನನ್ನೊಳು ಏಕೆ ನಾಚಿಕೆ, ಸಂಕೋಚಗಳು? ಬಾಳಸಂಗಾತಿಗಳು ನಾವು, ಇಗೋ, ಬಾ ಬಳಿಗೆ!