ಥಟ್ ಅಂತ ಒಂದು ಕ್ವಿಜ್ ಕಾರ್ಯಕ್ರಮ!
- ಸಿ ಪಿ ರವಿಕುಮಾರ್ ಡಾ. ನಾ. ಸೋಮೇಶ್ವರ ಅವರನ್ನು ನಮ್ಮ ಕಚೇರಿಯಲ್ಲಿ ನಡೆಸಿದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದಾಗ ಅವರು ಯಾವ ಶರತ್ತುಗಳೂ ಇಲ್ಲದೆ ಸಂತೋಷವಾಗಿ ಒಪ್ಪಿಗೆ ಕೊಟ್ಟರು. "ಥಟ್ ಅಂತ ಹೇಳಿ" ಕಾರ್ಯಕ್ರಮವನ್ನು 14 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಡಾ. ಸೋಮೇಶ್ವರ ಅವರು ಈಗಾಗಲೇ ಲಿಮ್ಕಾ ದಾಖಲೆಯಲ್ಲಿ ಸ್ಥಾನ ಕಂಡುಕೊಂಡಿದ್ದಾರೆ. ಇದುವರೆಗೂ "ಥಟ್ ಅಂತ ಹೇಳಿ" ಕಾರ್ಯಕ್ರಮದ 2902 ಕಂತುಗಳು ಪ್ರಸಾರವಾಗಿವೆ ಎಂದು ಅವರೇ ನಮಗೆ ತಿಳಿಸಿದರು. ವಿಕಿಪೀಡಿಯಾದಲ್ಲಿರುವ ಮಾಹಿತಿ ಹಳತಾಗಿದೆ! ಈ ಕಾರ್ಯಕ್ರಮ 3000 ಮುಟ್ಟಿದಾಗ ಗಿನ್ನೆಸ್ ದಾಖಲೆಯನ್ನೇ ಮುರಿಯುತ್ತದೆ. ಡಾ. ಸೋಮೇಶ್ವರ ಅವರಿಂದ ನಾವು ಭಾಷಣವನ್ನು ಅಪೇಕ್ಷಿಸಿದ್ದು ತಪ್ಪು! ಅವರು ಪ್ರಶ್ನೆಗಳನ್ನು ಕೇಳಲು ಸಿದ್ಧರಾಗಿ ಬಂದಿದ್ದರು - ತಾವೇ ಸಂಪಾದಿಸಿದ ಪುಸ್ತಕಮಾಲೆಯಿಂದ ಕೆಲವು ಕನ್ನಡ ಪುಸ್ತಕಗಳನ್ನು ಬಹುಮಾನವಾಗಿ ಕೊಡಲು ಕೈಯಲ್ಲಿ ಹಿಡಿದೇ ಬಂದರು. ನಮ್ಮ ಕಚೇರಿಯ ಅಂಗಳದಲ್ಲಿ ಕನ್ನಡ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದ್ದುದನ್ನು ಕಂಡು ಸಂತೋಷ ಪಟ್ಟರು. ಕೆಲವು ಹೊಸ ಪುಸ್ತಕಗಳನ್ನು ತಿರುವಿ ಹಾಕಿ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಅವರು ಅಂದು ಮೈಕ್ ಮುಂದೆ ನಿಂತು ಮಾತಾಡಿದ್ದು ಸುಮಾರು 40 ನಿಮಿಷ. ಅಷ್ಟರಲ್ಲಿಯೇ ಅದೆಷ್ಟು ಹೊಸ ಮಾಹಿತಿಗಳನ್ನು ನಮ್ಮ ಜೊತೆ ಹಂಚಿಕೊಂಡರು! ಬೆಂಗಳೂ...