ಪೋಸ್ಟ್‌ಗಳು

ವಿಜ್ಞಾನ ಕವಿತೆ; ಹಾಸ್ಯ ; ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ವಿಜ್ಞಾನ ಕವಿತೆಗಳು - ೨

 ಸಮಾನತೆ ಇದನ್ನೋದುವ ನೀನು ಯಾರೇ ಆಗಿದ್ದರೂ  ನಿನ್ನ ವಂಶವಾಹಿಗೂ ನನ್ನ ವಂಶವಾಹಿಗೂ  ಸಮಾನತೆ ಶತಾಂಶ ತೊಂಬತ್ತೊಂಬತ್ತು  ನೀನು ನನ್ನ ತಂದೆಯೋ ಮಗನೋ ಆಗಿದ್ದರೆ  ತೊಂಬತ್ತೊಂಬತ್ತಕ್ಕೆ ಸೇರಿಸಿಕೋ  ಇನ್ನೊಂದು ಅರ್ಧ ಪರ್ಸೆಂಟು.  ಹೇಳಲೇ ನಿನಗೆ ಇನ್ನೊಂದು ಆಶ್ಚರ್ಯಕರ ವಿಷಯ? ಕೇಳಿದರೆ ನೀನು ಹೌಹಾರುವೆ ನಿಶ್ಚಯ! ಚಿಂಪಾಂಜಿಯ ವಂಶವಾಹಿಗೂ ನನ್ನ-ನಿನ್ನ ವಂಶವಾಹಿಗೂ  ಸಮಾನತೆ ಪರ್ಸೆಂಟ್ ತೊಂಬತ್ತೆಂಟು! ಅದಕ್ಕೇ ಇರಬಹುದು ನಾವು ಕೆಲವೊಮ್ಮೆ  ಮರ್ಕಟದಂತೆ ಆಡುವುದುಂಟು! ನಿಶಬ್ದ   ಮಾಧ್ಯಮವಿಲ್ಲದೆ ಆಗದು ಶಬ್ದ ಸಂಚಲನ ಅನಿಲವೋ ದ್ರವವೋ ಅಥವಾ ಘನ ಆಕಾಶಕಾಯಗಳಿಂದ ಭಯಂಕರ ಸದ್ದು ಭೂಮಿಗೆ ಬರದಂತೆ ತಡೆ ಹಿಡಿದದ್ದು ನಡುವಣ ವ್ಯೋಮವೇ! ಪುಣ್ಯಶಾಲಿ ಭುವನ! ವಿದ್ಯುತ್ ಕಣಾ! "ಉಜ್ಜಿದರೆ ಬಾಚಣಿಗೆ ಕೂದಲಿಗೆ ಸ್ಥಿರವಿದ್ಯುತ್ ಕಣ  ನೀಡುವುದು ಹಣಿಗೆಗೆ ಕ್ಷಣಕಾಲ ಆಕರ್ಷಣ ... " "ಸರ್, ಇದನ್ನು ನೀವು ಪರೀಕ್ಷಿಸಿದ್ದೀರಾ?" ಎಂದು ಕೇಳಿದನೊಬ್ಬ ಹಿಂದಿನ ಬೆಂಚ್ ಪೋರ  ನೋಡುತ್ತಾ ಗುರುಗಳ ಮಿಂಚುವ ತಲೆಯನ್ನ! "ಅಂದಹಾಗೆ ಬಾಚಣಿಗೆಯೇ ಬೇಕು ಅಂತಿಲ್ಲ! ದೊಣ್ಣೆಯೂ ಆದೀತು, ಬೇಕಾದರೆ ಉಜ್ಜಿ ತೋರಿಸಲಾ? ಎಲ್ಲೋ, ಯಾರು ಕೇಳಿದ್ದು ಪ್ರಶ್ನೆ! ಬೆಂಚಿನ ಮೇಲೆ ನಿಂತುಕೋ ಸುಮ್ಮನೆ!" ಎಂದು ಪ್ರದರ್ಶಿಸಿದರು ಮೇಷ್ಟ್ರು ಎಲೆಕ್ಟ್ರೋಸ್ಟಾಟಿಕ್ ಲಾ  ಜಿರಾಫ್  ಎತ್ತರದ ಅಕೇಶಿ...