ಪೋಸ್ಟ್‌ಗಳು

ಫೆಬ್ರವರಿ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗಾಂಧೀಜಿಯ ಸಾಬೂನು ಕಲ್ಲು

ಇಮೇಜ್
ಮೂಲ - ರೀಟಾ ರಾಯ್ ಕನ್ನಡ ಅನುವಾದ - ಸಿ ಪಿ ರವಿಕುಮಾರ್ ಸಾಬೂನಿನ ಬದಲು ಮೈ ಉಜ್ಜಿ ತೊಳೆಯಲು ಗಾಂಧೀಜಿ ಒಂದು ಕಲ್ಲನ್ನು ಬಳಸುತ್ತಿದ್ದರು. ಗಾಂಧೀಜಿಗೆ ಮೀರಾ ಬೆನ್ ಒಂದು ನುಣುಪಾದ ಕಲ್ಲು ಕೊಟ್ಟಿದ್ದರು.  ಇದನ್ನು ತಾವು ಹೋದ ಕಡೆಗೆಲ್ಲಾ ಗಾಂಧೀಜಿ ಕೊಂಡೊಯ್ಯುತ್ತಿದ್ದರು. ನೌಖಾಲಿಯಲ್ಲಿ ಗಾಂಧೀಜಿ ಪಾದಯಾತ್ರೆ ಮಾಡಲು ಹೊರಟ ದಿನಗಳು. ನಾರಾಯಣಪುರ ಎಂಬ ಗ್ರಾಮದಲ್ಲಿ ಗಾಂಧೀಜಿ ಮತ್ತು ಜೊತೆಗಾರರು ರಾತ್ರಿ ತಂಗಿದರು.  ಗಾಂಧೀಜಿಯ ವಸ್ತುಗಳನ್ನು ಜೋಪಾನ ಮಾಡುವ ಹೊಣೆ ಹೊತ್ತಿದ್ದ ಮನು ಬೆನ್ ಅವರ ಸಾಬೂನು ಕಲ್ಲನ್ನು ಹಿಂದೆ ತಂಗಿದ ಸ್ಥಳದಲ್ಲೇ ಮರೆತುಬಂದಿದ್ದರು. "ನೀನು ಈಗ ವಾಪಸು ಹೋಗಿ ಕಲ್ಲನ್ನು ಹುಡುಕಿ ತರಬೇಕು. ಆಗ ನೀನು ಮತ್ತೊಮ್ಮೆ ಮರೆಯುವುದಿಲ್ಲ," ಎಂದು ಗಾಂಧೀಜಿ ನುಡಿದುಬಿಟ್ಟರು. "ನನ್ನ ಜೊತೆ ಒಬ್ಬ ಸ್ವಯಂಸೇವಕನನ್ನು ಕರೆದುಕೊಂಡು ಹೋಗಲೇ?" "ಯಾಕೆ?" ಪಾಪ, ಮನು ಬೆನ್! ತಾವು ಬಂದ ದಾರಿಯುದ್ದಕ್ಕೂ ಅಡಕೆ ಮತ್ತು ತೆಂಗಿನ ಮರಗಳ ದಟ್ಟವಾದ ಕಾಡುಗಳಿದ್ದದ್ದನ್ನು ನೆನೆದು ಅವರಿಗೆ ದಿಗಿಲಾಯಿತು. ಅಲ್ಲಿ ಅಪರಿಚಿತರು ದಾರಿ ಕಳೆದುಕೊಂಡರೆ! ಆಗ ದಂಗೆಗಳು ನಡೆಯುತ್ತಿದ್ದ ದಿನಗಳು ಬೇರೆ! ಅಂತೂ ಮನು ಬೆನ್ ಬೆಳಗ್ಗೆ ಒಂಬತ್ತೂವರೆಗೆ ಕಲ್ಲನ್ನು ಹುಡುಕಿಕೊಂಡು ನಾರಾಯಣಪುರದಿಂದ ಒಬ್ಬರೇ  ಹೊರಟರು.  ಬಾಯಲ್ಲಿ ರಾಮನ ಹೆಸರು ಹೇಳುತ್ತಾ ಕಾಡಿನ ರಸ್ತೆಯಲ್ಲಿ ನಡೆದು ಹೋದರು.  ತಾವು ತಂಗಿದ

ಮೇರಿಯ ಮೇಕೆಮರಿ (ಶಿಶುಪ್ರಾಸ)

ಇಮೇಜ್
(ಇಂಗ್ಲಿಷ್ ಶಿಶುಪ್ರಾಸದ ಅನುವಾದ) ಮೇರಿ ಹತ್ರ ಇತ್ತಂತೆ ಇತ್ತಂತೆ, ಇತ್ತಂತೆ ಮೇರಿ ಹತ್ರ ಇತ್ತಂತೆ ಮುದ್ದು ಮೇಕೆಮರಿ! ಎಲ್ಲೀಗ್ ಹೋದ್ರೂ ಮೇಕೆ ಮರಿ ಮೇಕೆ ಮರಿ, ಮೇಕೆ ಮರಿ  ಅವಳೆಲ್ಲಿಗ್ ಹೋದ್ರೂ ಮೇಕೆ ಮರಿ ಬಂತು ಸವಾರಿ! ಸ್ಕೂಲಿಗೆ ಹೋದಾಗ್ ಒಂದ್ ದಿನ ಒಂದ್ ದಿನ , ಒಂದ್ ದಿನ ಸ್ಕೂಲಿಗೆ ಹೋದಾಗ್ ಒಂದ್ ದಿನ ಮೇಕೇನೂ ಹೋಯ್ತು ರೀ! ಕೋಪ ಬಂತು ಟೀಚರ್ಗೆ ಟೀಚರ್ಗೆ, ಟೀಚರ್ಗೆ ಕೋಪ ಬಂತು ಟೀಚರ್ಗೆ ಮ್ಯಾ ಮ್ಯಾ ಮ್ಯಾಮ್ ಸಾರಿ! - ಸಿ. ಪಿ. ರವಿಕುಮಾರ್

ರಂಜಕ (ಕವಿತೆ)

ರಂಜಕ ಸಿ.ಪಿ. ರವಿಕುಮಾರ್ ಆ ಸಿನಿಮಾದಲ್ಲಿ ಹುಡುಗ ಹುಡುಗಿಯನ್ನು ಪ್ರೇಮಿಸಿದ ಹುಡುಗಿ ಅದೇ ಹುಡುಗನನ್ನು ಪ್ರೇಮಿಸಿದಳು ಅವರು ಮದುವೆಯಾಗಲು ಯಾರದ್ದೇ ತಕರಾರಿರಲಿಲ್ಲ ಯಾವ ಖಳನಾಯಕನೂ ಇರಲಿಲ್ಲ ಸಿನಿಮಾ ಸಪ್ಪೆಯಾಗಿತ್ತು ಅವನಿಗೆ ಸೇರಲಿಲ್ಲ ಆ ಪತ್ರಿಕೆಯಲ್ಲಿ ಕೇವಲ ವರ್ತಮಾನ ಪ್ರಕಟವಾಗುತ್ತಿತ್ತು ಚರಿತ್ರೆಯ ಪುನರಾವಲೋಕನವಿಲ್ಲ ಭವಿಷ್ಯದ ಕಾಳಜಿಗಳಿಲ್ಲ ಇದ್ದದ್ದನ್ನು ಇದ್ದಹಾಗೇ ಬರೆಯುತ್ತಿದ್ದರು ಅವನು ಪತ್ರಿಕೆಯನ್ನು ಓದಲಿಲ್ಲ ಟಿವಿ ಹಚ್ಚಿದರೆ  ಯಾವ ವಾಗ್ವಾದಗಳೂ ಇಲ್ಲ ಶಾಸ್ತ್ರೀಯ ಸಂಗೀತ, ಭರತನಾಟ್ಯ ಕೃಷಿಕರಿಗೆ ಸಲಹೆ ಏನೋ ಗಹನ ಚರ್ಚೆ ಅವನಿಗೆ ಭಾರವೆನ್ನಿಸಿ ಆರಿಸಿದ. ಹೊರಗೆ ಬಂದು ಸೆಲ್ಫೀ  ಸೆರೆ ಹಿಡಿಯಲು ಪ್ರಯತ್ನಿಸಿದ ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಫಿಲ್ಟರ್ ಯಾವುದೂ ಇರಲಿಲ್ಲ ಕಂಡದ್ದನ್ನು ಕಂಡಹಾಗೆ ಸೆರೆಹಿಡಿಯುವ ಕ್ಯಾಮೆರಾ ಅವನಿಗೆ ಇಷ್ಟವಾಗದೆ ಮುನ್ನಡೆದ ಪಾರ್ಕಿನಲ್ಲಿ ಕವಿಗೋಷ್ಠಿಯಲ್ಲಿ ಯಾರೂ  ರಾಜಕೀಯ ಕವಿತೆಗಳನ್ನು ಓದಲಿಲ್ಲ  ಘೋಷಣೆ ಕೂಗಲಿಲ್ಲ ಎಲ್ಲರೂ ಹೂವು, ಬೆಟ್ಟ, ಮರ  ಮತ್ತು ಪ್ರೇಮದ ಕವಿತೆಗಳನ್ನು ಓದುತ್ತಿದ್ದರು ಚಪ್ಪಾಳೆಗಳು ಜೋರಾಗಿರಲಿಲ್ಲ ವರದಿಗಾರರೂ ಇರಲಿಲ್ಲ ಅವನು ನಡುವೆಯೇ ಎದ್ದು ಮನೆಗೆ ಬಂದ ತಾಯಿ ಬಡಿಸಿದ ಊಟದಲ್ಲಿ ಇದ್ದದ್ದು ಅತಿರಂಜಿತವಲ್ಲದ  ಮನೆಯ ಹಿತಮಿತ ಅಡುಗೆ. ಎದೆಯ ತುದಿಯಲ್ಲಿದ್ದ 

ಇನ್ನೂ ಹತ್ತು ಲಿಮರಿಕ್

ಇನ್ನೂ ಹತ್ತು ಲಿಮರಿಕ್  ಸಿ. ಪಿ. ರವಿಕುಮಾರ್  ೧. ಡಬ್! ಹಾಲಿವುಡ್ ಸಿನಿಮಾದಲ್ಲಿ ಹಾರರ್ ದೃಶ್ಯ ಕನ್ನಡಕ್ಕೆ ಅನುವಾದಿಸಿದ ಸ್ಕ್ರೀನ್ ರೈಟರ್ ಶಿಷ್ಯ ಕಟ್ ಎಂದು ಕೂಗಿದರು ನಿರ್ದೇಶಕರು ಒಮ್ಮೆಲೇ "ಎದೆ ಡಬ್ ಡಬ್ ಅಂತಿದೆ ಅಂತ ಬರೀಬಹುದೇನಲೇ? ಡಬ್ಬಿಂಗ್ ಇದೆಯೋ ಇಲ್ವೋ ಮೊದ್ಲು ತಿಳ್ಕೋ ವಿಷ್ಯಾ" ೨. ಅನುವಾದ  ಇದ್ದಳೊಬ್ಬಳು ಅನುರೂಪಾ ಅಂತ ಅಟೆಂಡ್ ಮಾಡಿದಳು ಅನುವಾದ ಕಮ್ಮಟ ಈಗ ಗಂಡನ ಜೊತೆಗೆ ಬರಿಯ ವಾಗ್ವಾದ ಅವನು "ಮಸಾಲೆ" ಎಂದರೆ ಇವಳು "ಬೇಡ, ಸಾದಾ" ಇದು ಅನು-ವಾದ ಕಮ್ಮಟದ ಪುಟ್ಟ ಅಪಘಾತ ೩. ಡಬ್ಬಿ  ಸಾಹಿತ್ಯ ಸಮ್ಮೇಳನದಲ್ಲಿ ಊಟಕ್ಕೆ ಲೈನು ನಿಂತಿದ್ದನು ಕವಿಯೊಬ್ಬ ಕ್ಯೂನಲ್ಲಿ ತಾನೂ ಸರದಿ ಬಂದಾಗ ತಟ್ಟೆಯಲ್ಲಲ್ಲದೇ ಡಬ್ಬಿಯಲ್ಲೂ ಕೊಂಡೊಯ್ದ ನಾಲಕ್ಕು ಫೇಡೆ "ಡಬ್ಬಿಂಗಿಗೆ ಈಗ ಪರವಾಗಿದೆ ಕಾನೂನು" ೪. ಜಾಹೀರಾತು  ಕುಡಿತದ ಸಮಸ್ಯೆಯೇ? ಚಿಂತಿಸದಿರಿ! ನಮ್ಮಲ್ಲಿ ಪರಿಹಾರವಿದೆ, ಡೋಂಟ್ ವರಿ! ಕೆಳಗೆ ಕೊಟ್ಟಿದೆ ನೋಡಿ ಮೊಬೈಲ್ ಸಂಖ್ಯೆ ವಾರಕ್ಕೆ ಏಳು ದಿನ ಇಪ್ಪತ್ನಾಲಕ್ಕು ಗಂಟೆ ಕಾಲ್ ಮಾಡಿದರೆ ಮನೆಗೇ ಮಾಡುವೆವು ಡೆಲಿವರಿ" ೫. ಸಂತಾ  ಸಂತಾಸಿಂಗ್ ಮನೆಗೆ ಬಂದಾಗ ಬಂತಾ ತನ್ನ ಇಂಗ್ಲಿಷ್ ಸ್ವಲ್ಪ ತೋರಿಸೋಣ ಅಂತಾ "ಐ ಆಮ್ ಸರ್ದಾರ್ ಅಂಡ್ ಶೀ ಈಸ್ ಸರದಾರ್ನೀ ಹೀ ಈಸ್ ಮೈ ಕಿಡ್ ಅಂಡ್ ಶೀ ಈಸ್ ಮೈ ಕಿಡ್ನೀ" ಎಂದು ಹೆಂಡತಿ ಮಕ್ಕಳ ಜೊತೆಗೆ ಹಲ್