ಕೃಷ್ಣನ ಎಚ್ಚರಿಕೆ
ಮೂಲ ಹಿಂದಿ ಕವಿತೆ: ರಾಮಧಾರಿ ಸಿಂಹ್ "ದಿನಕರ್" ಕನ್ನಡ ಭಾಷಾಂತರ: ಸಿ. ಪಿ. ರವಿಕುಮಾರ್ ವರುಷಗಟ್ಟಲೆ ಅಲೆದಲೆ ದು ಕಾಡುಮೇಡುಗಳಲ್ಲಿ ಎಲ್ಲೆಡೆ ಕಾಲ್ತೊಡರುವ ವಿಘ್ನ ಬಾಧೆಗಳ ಬಳ್ಳಿ ಚುಚ್ಚುವ ಕಲ್ಮುಳ್ಳು, ಬಿಸಿಲು ಮಳೆಗಾಳಿಗೆ ಪಾಂಡವರು ಮಾಗಿದರು ವಿಧಿಯ ಈ ದಾಳಿಗೆ ಸೌಭಾಗ್ಯವೆಂಬುದು ಸದಾ ನಿದ್ರಿಸುವುದಿಲ್ಲ ಬನ್ನಿ ನೋಡುವ ಮುಂದಿನ ಕುತೂಹಲ! ತಿಳಿಸಿ ಹೇಳಲು ಸ್ನೇಹಮಾರ್ಗವನ್ನು ಸರಿದಾರಿಗೆ ಕರೆತರಲು ಎಲ್ಲರನ್ನೂ ದುರ್ಯೋಧನನಿಗೆ ಸಮಯಕ್ಕೆ ನೀಡಿ ತಿಳುವಳಿಕೆ ತಪ್ಪಿಸಲು ಭೀಷಣ ವಿಧ್ವಂಸ ಮುಂದಕ್ಕೆ ಭಗವಂತನು ಕಾಲಿಟ್ಟನು ಹಸ್ತಿನಾಪುರಕೆ ಹೊತ್ತು ಪಾಂಡವರ ಸಂದೇಶ, ಹಾರೈಕೆ "ನ್ಯಾಯ ನೀಡುವುದಾದರೆ ನೀಡು ನಮ್ಮರ್ಧ ಅಡ್ಡ ಬಂದರೆ ಅದಕ್ಕೂ ನಿನ್ನ ಕಡುಸ್ವಾರ್ಥ ಕೊಟ್ಟು ತೀರಿಸು ಕೇವಲ ಐದು ಗ್ರಾಮಗಳು ಇಟ್ಟುಕೋ ನಿನ್ನ ಬಳಿ ಬೇರೆಲ್ಲವನ್ನೂ ಅಷ್ಟರಲ್ಲೇ ನಮಗೆ ಸಿಕ್ಕುವುದು ತೃಪ್ತಿ ಬಂಧುಕಲಹದಲ್ಲಿಲ್ಲ ನಮಗೆ ಆಸಕ್ತಿ" ಅದನ್ನೂ ದುರ್ಯೋಧನ ಕೊಡಲಾರದೆ ಹೋದ ಪಡೆಯಲಾರದೆ ಹೋದ ಸಮಾಜದ ಆಶೀರ್ವಾದ ಸಾಲದಕ್ಕೆ ಹರಿಯನ್ನೇ ...