ಪೋಸ್ಟ್‌ಗಳು

Laburnum Top ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹೊಂಗೆಮರದ ತುದಿ

ಇಮೇಜ್
ಮೂಲ ಇಂಗ್ಲಿಷ್ ಪದ್ಯ - ಟೆಡ್ ಹ್ಯೂಸ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್  ಟೆಡ್ ಹ್ಯೂಸ್ ಬ್ರಿಟನ್ನಿನ "ರಾಷ್ಟ್ರಕವಿ" ಪದವಿ ಪಡೆದವನು (ಪೊಯೆಟ್ ಲಾರೇಟ್).   ಈ ಕವಿತೆಯಲ್ಲಿ ಟೆಡ್ ಹ್ಯೂಸ್ ತಾನು ನೋಡಿದ ಒಂದು ದೃಶ್ಯವನ್ನು  ವರ್ಣಿಸಿದ್ದಾನೆ. ಹೊಂಗೆಯ ಮರದ ತುದಿಯಲ್ಲಿ ಗೋಲ್ಡ್ ಫ಼್ಲಿಂಚ್ ಹಕ್ಕಿಯೊಂದು ಗೂಡು ಕಟ್ಟಿ ಮರಿ ಮಾಡಿದೆ. ಅದು ತನ್ನ ಮರಿಗಳಿಗೆ ತುತ್ತು ನೀಡಲು ಬಂದಾಗ ಮರದಲ್ಲಿ ಉಂಟಾಗುವ ಸಂಭ್ರಮವನ್ನು ಕವಿ ವರ್ಣಿಸಿದ್ದಾನೆ. ಹೊಂಗೆಯ ಮರದಲ್ಲಿ ಸ್ತಬ್ಧತೆ  ಇದ್ದರೂ ಅಲ್ಲಿ ತುತ್ತಿಗಾಗಿ ಕಾದ ಎಷ್ಟೋ ಜೀವಗಳಿವೆ.  ಹಕ್ಕಿ ಮೆಲ್ಲನೆ ಬಂದು ಕೊಂಬೆಯ ತುದಿಯಲ್ಲಿ ಕುಳಿತು ತನ್ನ ಆಗಮನವನ್ನು ಸೂಚಿಸುತ್ತದೆ. ತನ್ನ ವಿಶಿಷ್ಟ ಕೂಗಿನಿಂದ ತನ್ನ ಇರವನ್ನು ಸಾರುತ್ತದೆ. ಮೆಲ್ಲಗೆ ತನ್ನ ಗೂಡಿನ ಕಡೆಗೆ ಸಾಗುತ್ತದೆ. ಇದುವರೆಗೂ ನಿಶ್ಶಬ್ದವಾಗಿದ್ದ ಹೊಂಗೆಯ ಮರದಲ್ಲಿ ಜೀವಸಂಚಾರವಾಗುತ್ತದೆ. ಹೋದಷ್ಟೇ ಜಾಗರೂಕತೆಯಿಂದ ತಾಯಿಹಕ್ಕಿ ಕೊಂಬೆಯ ತುದಿಗೆ ಮರಳಿ ಅನಂತದ ಕಡೆಗೆ ಹಾರಿಹೋಗುತ್ತದೆ. ಹೊಂಗೆಯ ಮರದಲ್ಲಿ ಮತ್ತೆ ಸ್ತಬ್ಧತೆ ಆವರಿಸಿಕೊಳ್ಳುತ್ತದೆ.  ಈ ಪದ್ಯಕ್ಕೆ ಅನೇಕ ಅರ್ಥಗಳಿರಬಹುದು. ಅವುಗಳನ್ನು ಕುರಿತು ಯೋಚಿಸಿ.  ಮಧ್ಯಾಹ್ನ ಸೆಪ್ಟೆಂಬರ್ ತಿಂಗಳ ಹಳದಿ ಬೆಳಕಿನಲ್ಲಿ  ಹೊಂಗೆ ಮರದ ತುದಿಯೊಳಗೆ ಮೌನ ಆವರಿಸಿದೆ ಒಂದಿಷ್ಟೂ ಮಿಸುಕಾಡದೆ. ...