ಪೋಸ್ಟ್‌ಗಳು

Edgar Allan Poe ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಒಬ್ಬಂಟಿ

ಇಮೇಜ್
 ಒಬ್ಬಂಟಿ ಮೂಲ: ಎಡ್ಗರ್ ಆಲನ್ ಪೋ  ಕನ್ನಡಕ್ಕೆ: ಸಿ ಪಿ ರವಿಕುಮಾರ್ ಬಾಲ್ಯದಿಂದಲೂ ನಾನು ಇತರಿರಿಗಿಂತ ಭಿನ್ನ ನನ್ನ ಕಣ್ಣು ಕಾಣಲಿಲ್ಲ ಅವರು ಕಂಡದ್ದನ್ನ ತರಲಿಲ್ಲ ನಾನು ನನ್ನ ಭಾವಬಂಧ ಸಾರ್ವಜನಿಕ ಸರೋವರದಿಂದ  ನನ್ನ ದುಃಖಗಳ ಮೂಲ ಹುಡುಕಿದರೆ ಅದು ಸಾಮಾನ್ಯ ಸ್ರೋತಕ್ಕಿಂತ ಬೇರೆ ಎಲ್ಲರ ಮನಕ್ಕೂ ಮುದ ತರುವ ಇಂಚರ ನನ್ನೆದೆಯಲ್ಲಿ ತರದು ಯಾವುದೇ ಸಂಚಾರ ಮತ್ತು ಯಾವುದಕ್ಕೆ ಒಲಿಯಿತೋ ನನ್ನ ಮನ ಅಲ್ಲಿ ನನ್ನನ್ನುಳಿದು ಇರಲಿಲ್ಲ ಬೇರೆ ಜನ. ಎಂದೋ ಒಂದು ದಿನ ನನ್ನ ಬಾಲ್ಯದಲ್ಲಿ ಗುಡುಗುಮಳೆ ಜೀವನದ ಮುಂಬೆಳಗಿನಲ್ಲಿ ಒಳಿತು ಕೆಡಕುಗಳ ಆಳಗಳಿಂದೆದ್ದು ಬಂದ ರಹಸ್ಯಮಯ ಬಳ್ಳಿಯದೇ ಇಂದಿಗೂ ಬಂಧ: ಹಿಂಬಾಲಿಸುತ್ತದೆ ನನ್ನನ್ನು ಹೋದಲ್ಲೆಲ್ಲ ಇಣುಕುತ್ತದೆ ಮಳೆಯಲ್ಲಿ, ಇಣುಕುತ್ತದೆ ಹೊಳೆಯಲ್ಲಿ, ಕೆಂಪಾದ ಬೆಟ್ಟಗಳ ತುತ್ತತುದಿಯಲ್ಲಿ ಶಿಶಿರದ ಹೊಂಬೆಳಕಿನಲ್ಲಿ ಮಿಂದೆದ್ದ ಸೂರ್ಯ ಪೂರೈಸಿದಾಗ ನನ್ನನ್ನು ಸುತ್ತುವ ಕಾರ್ಯ ಮಳೆಯ ರಾತ್ರಿ ನನ್ನ ಮೇಲೆ ಕಪ್ಪು ಆಗಸದಲ್ಲಿ ಮಿಂಚಾಗಿ ಹೊಳೆಯುವುದು ಹಿನ್ನೆಲೆಯಲ್ಲಿ ಅಲ್ಲೊಂದು ಕಾರ್ಮೋಡ  ಉರುಳುತ್ತ ಬಂದು ನಿಂತಲ್ಲಿ ಕೋರೆ ದಾಡೆಗಳ ಬಾಯ್ತೆರೆದು ಸ್ವರ್ಗದಲ್ಲಿ ಬೇರೆಲ್ಲವೂ ನೀಲಿಯಾಗಿದ್ದರೂ ಕೂಡಾ ರಾಕ್ಷಸನಂತೆ ನನಗೆ ತೋರುತ್ತದೆ ಮೋಡ.

ಕನಸಿನೊಳಗಿನ್ನೊಂದು ಕನಸು

ಇಮೇಜ್
­­­ ಕನಸಿನೊಳಗಿನ್ನೊಂದು  ಕನಸು  ಮೂಲ  ಇಂಗ್ಲಿಷ್ ಕವಿತೆ: ಎಡ್ಗರ್ ಆಲನ್ ಪೋ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಎಡ್ಗರ್ ಆಲೆನ್ ಪೋ (ಹತ್ತೊಂಬತ್ತನೇ ಶತಮಾನ) ಅಮೆರಿಕನ್ ಸಾಹಿತ್ಯಕಾರರಲ್ಲಿ ಅಗ್ರಮಾನ್ಯ ಹೆಸರು. ಜೀವನದಲ್ಲಿ ತುಂಬಾ ಯಾತನೆ ಅನುಭವಿಸಿದ ವ್ಯಕ್ತಿ. ನಲವತ್ತನೆಯ ವಯಸ್ಸಿಗೇ ತೀರಿಕೊಂಡ.  ಈತನ “ದ ರೇವೆನ್” ಕವಿತೆಯನ್ನು ಪ್ರಥಮ ಹಾರರ್ ಸಾಹಿತ್ಯ ಎಂದೂ ಕೆಲವರು ಪರಿಗಣಿಸುತ್ತಾರೆ.  ತನ್ನ 28ನೇ ವಯಸ್ಸಿನಲ್ಲಿ ತನ್ನ ಹದಿಮೂರು ವರ್ಷದ ಸಂಬಂಧಿಯೊಂದಿಗೆ ಮದುವೆಯಾದ. ಈಕೆಯ ಸಾವು ಅವನನ್ನು ದುಃಖಕ್ಕೆ ದೂಡಿತು. ಈ ಕವಿತೆಯನ್ನು ಅವನು ಬರೆದದ್ದು ಅದೇ ಸಂದರ್ಭದಲ್ಲಿರಬಹುದು.    ಇ ಗೋ ಬಂದಾಗಿದೆ ಬೀಳ್ಕೊಡುವ ಹೊತ್ತು ನಿನ್ನ ಹಣೆ ಮೇಲೊಂದು ಹೂಮುತ್ತನಿತ್ತು ಯೋಚಿಸುತ್ತೇನೆ ನೀನು ನನ್ನನ್ನು ಕುರಿತು ಆಗಲೇ ಹೇಳಿದೆಯಲ್ಲ ಒಂದು ಮಾತು: ಕನಸೆಂದೆಯಲ್ಲ ನನ್ನ ಇಡೀ ಬದುಕು ನಿಜವೆನ್ನಿಸುತ್ತಿದೆ ಆ ಮಾತು ನನಗೂ ಬಾಡಿಹೋದರೇನಾಯ್ತು ಒಂದೇ ದಿನದಲ್ಲಿ ನಿಜವಲ್ಲವೇ ಬಾಡಿದ್ದು ಭರವಸೆಯ ಬಳ್ಳಿ? ನಾವು ನೋಡಿದ್ದು, ನಾವು ಅನುಭವಿಸುವ ಎಲ್ಲವೂ ಮಾತ್ರವೇ ಒಂದು ಕನಸಿನೊಳಗಿನ್ನೊಂದು ಕನಸು!  ನಿಂ ತಿದ್ದೇನೆ ಕಡಲತೀರದಲ್ಲಿ ಒಬ್ಬನೇ ಭೋರ್ಗರೆಯುತ್ತಾ ಬಂದು ಅಪ್ಪಳಿಸುವ ಹೆದ್ದೆರೆ ನನ್ನ ಕೈಯಲ್ಲಿರುವ ಹಿಡಿ ಹೊನ್ನು ಮರಳು ಹಿಡಿಯಲಾಗದೆ ಯಾಕೋ ಸೋಲುತ್ತಿವೆ ಬೆರಳು...

ಅಮೋಂತಿಜಾದೋ ಮದ್ಯದ ಪೀಪಾಯಿ - 3

ಇಮೇಜ್
ಮೂಲ ಇಂಗ್ಲಿಷ್ ಕಥೆ - ಎಡ್ಗರ್ ಆಲೆನ್ ಪೋ ಕನ್ನಡ ಅನುವಾದ - ಸಿ ಪಿ ರವಿಕುಮಾರ್  ಭಾಗ - ೩ (ದ್ವಿತೀಯ   ಭಾಗವನ್ನು ಇಲ್ಲಿ ಓದಿ ) ಮದಿರೆ ಅವನ ಕಣ್ಣಿನಲ್ಲಿ ಹೊಳೆಯುತ್ತಿತ್ತು. ಅವನ ಟೋಪಿಯ ಗಂಟೆಗಳು ಕುಣಿಯುತ್ತಿದ್ದವು.  ಮೆಡೋಕ್ ನನ್ನ ಹೊಟ್ಟೆಗೆ ಇಳಿಯುತ್ತಲೇ ನನ್ನ ಖಯಾಲಿಗೂ ಕಾವು ಕೊಟ್ಟಂತಾಯಿತು.  ನಾವು ನಡೆದುಕೊಂಡು ಹೋಗುವಾಗ ಗೋಡೆಗಳ ಮುಂದೆ ಪೇರಿಸಿಟ್ಟ ಪುರಾತನರ ಅಸ್ಥಿಪಂಜರಗಳು ಗೋಚರಿಸಿದವು. ಸಣ್ಣ-ದೊಡ್ಡ ಮದ್ಯದ ಪೀಪಾಯಿಗಳು ಎಲ್ಲಾ ಕಡೆ ಕಂಡವು.  ನೆಲಮಾಳಿಗೆಯ ಗರ್ಭಕ್ಕೆ ಬಂದು ತಲುಪಿದಾಗ ನನಗೆ ಕೊನೆಗೂ ಅವನ ತೋಳನ್ನು ಹಿಡಿದುಕೊಳ್ಳುವಷ್ಟು ಧೈರ್ಯ ಬಂತು.  "ಯವಕ್ಷಾರ! ನೋಡು, ಎಲ್ಲಾ ಕಡೆ ಹೇಗೆ ಪಾಚಿಯ ಹಾಗೆ ಗೋಡೆಯ ಮೇಲೆಲ್ಲಾ ಹಬ್ಬಿದೆ. ನಾವೀಗ ನೇರವಾಗಿ ನದೀಪಾತ್ರದ ಕೆಳಗೆ ನಿಂತಿದ್ದೇವೆ. ಮೇಲಿಂದ ಜಿನುಗುವ ನೀರು ಇಲ್ಲಿರುವ ಮೂಳೆಗಳ ಜೊತೆ ಬೆರೆತು ಹೀಗಾಗಿದೆ. ನಡಿ, ವಾಪಸು ಹೋಗೋಣ. ಸದ್ಯ ಇನ್ನೇನಾದರೂ ಆದೀತು. ನಿನ್ನ ಕೆಮ್ಮು ... "   ಅವನು ನನ್ನ ಮಾತನ್ನು ಅರ್ಧದಲ್ಲೇ ತುಂಡರಿಸಿದ. "ಅಯ್ಯೋ, ನಡಿ, ಏನೂ ಆಗೋದಿಲ್ಲ! ಎಲ್ಲಿ, ಇನ್ನೊಂದು ಗುಟುಕು ಮೆಡೋಕ್ ಕೊಡು, ನೋಡೋಣ." ನಾನು ಅಲ್ಲೇ ಇದ್ದ ಡಿ ಗ್ರೇವ್ ಮದ್ಯದ ಹೂಜಿಯನ್ನು ಅವನ ಮುಂದೆ ಹಿಡಿದೆ. ಅದರಿಂದ ಅವನು ಗಟಗಟ ಕುಡಿದು ನಗುತ್ತಾ ಪಾತ್ರೆಯನ್ನು ಮೇಲೆಸೆದ.  ಅ ವನ ಕಣ್ಣುಗಳಲ್ಲಿ ಕ್ರ...

ಅಮೋಂತಿಜಾದೋ ಮದ್ಯದ ಪೀಪಾಯಿ - 2

ಇಮೇಜ್
ಮೂಲ ಇಂಗ್ಲಿಷ್ ಕಥೆ - ಎಡ್ಗರ್ ಆಲೆನ್ ಪೋ ಕನ್ನಡ ಅನುವಾದ - ಸಿ ಪಿ ರವಿಕುಮಾರ್  ಭಾಗ - ೨ ( ಮೊದಲ ಭಾಗವನ್ನು ಇಲ್ಲಿ ಓದಿ ) ನನ್ನ ಬಂಗಲೆಯಲ್ಲಿ  ಒಬ್ಬ ನರಪಿಳ್ಳೆಯೂ ಇರಲಿಲ್ಲ. ಅವರೆಲ್ಲರೂ ಕಾರ್ನಿವಾಲ್ (ಉತ್ಸವ) ನೋಡಲು ತೆರಳಿದ್ದರು.  ಮನೆಯಿಂದ ಹೊರಡುವಾಗ "ನಾನು ಬರುವುದು ನಾಳೆ ಬೆಳಗ್ಗೆಯೇ,  ಜೋಪಾನ, ಯಾರೂ ಮನೆ ಬಿಟ್ಟು ಕದಲಬೇಡಿ" ಎಂದು ಹೇಳಿ ಹೊರಟಿದ್ದೆ.  ಹಾಗೆ ಹೇಳಿದರೆ ಇವರು ನಾನು ಬಾಗಿಲು ದಾಟಿದ ಕ್ಷಣವೇ ಮಂಗಮಾಯವಾಗುತ್ತಾರೆ ಎಂದು ನನಗೆ ಖಚಿತವಾಗಿ ಗೊತ್ತಿತ್ತು.   ನೌಕರರು ಬಳಸುತ್ತಿದ್ದ ದೀವಟಿಗೆಗಳಲ್ಲಿ ಎರಡನ್ನು ಕೈಗೆತ್ತಿಕೊಂಡು ಒಂದನ್ನು ಫಾರ್ಚುನಾತೋಗೆ ಕೊಟ್ಟೆ. ಹಲವಾರು ಕೋಣೆಗಳ ಮೂಲಕ ಹಾಯುತ್ತಾ ತಗ್ಗಿದ ಬಾಗಿಲುಗಳ ಮುಂದೆ ಬಗ್ಗಿ ನಡೆಯುತ್ತಾ ನಾವು ಮದ್ಯಾಗಾರಕ್ಕೆ ಹೋಗಿ ಸೇರುವ ಮೇಲುಚಾವಣಿಯುಳ್ಳ ಓಣಿಗೆ ಬಂದೆವು.  ಕೆಳಗೆ ಹೋಗಲು ಹಾವಿನಂತೆ ಸುತ್ತಿಕೊಂಡಿರುವ ಮೆಟ್ಟಿಲುಗಳನ್ನು ಇಳಿಯುವಾಗ ಅವನಿಗೆ ಜಾಗರೂಕನಾಗಿರುವಂತೆ  ಪದೇ ಪದೇ ಎಚ್ಚರಿಸಿದೆ.  ಕೊನೆಗೂ ನಾವು ಮಾಂಟ್ರೆಸಾರ್ ಭವನದ ನೆಲಮಾಳಿಗೆಯನ್ನು ತಲುಪಿದೆವು.  ನಮ್ಮ ವಂಶದ  ಹಿರಿಯರನ್ನು  ಮಣ್ಣು ಮಾಡಿದ ನೆಲಮಾಳಿಗೆ ಅದು.  ಅಲ್ಲಿಯ ನೆಲದಲ್ಲಿ ತೇವವಿತ್ತು. ನನ್ನ ಮಿತ್ರ ನಡೆದಾಗ ತೂರಾಡುತ್ತಿದ್ದ. ಅವನು...

ಅಮೋಂತಿಜಾದೋ ಮದ್ಯದ ಪೀಪಾಯಿ - 1

ಇಮೇಜ್
ಮೂಲ ಇಂಗ್ಲಿಷ್ ಕಥೆ - ಎಡ್ಗರ್ ಆಲೆನ್ ಪೋ ಕನ್ನಡ ಅನುವಾದ - ಸಿ ಪಿ ರವಿಕುಮಾರ್ ಫಾರ್ಚುನಾತೋ ನನ್ನ ಮೇಲೆ ಮಾಡಿದ ಸಾವಿರ ಜುಲುಮೆಗಳನ್ನು ನಾನು ಸಹಿಸಿಕೊಂಡೆ; ಆದರೆ ಯಾವಾಗ ಅವನು ನನಗೆ ಅಪಮಾನ ಮಾಡಿದನೋ ಪ್ರತೀಕಾರದ ಭಾವನೆ ನನ್ನಲ್ಲಿ ಹೊತ್ತಿಕೊಂಡಿತು. ಹಾಗೆಂದು ಅವನೊಂದಿಗೆ ಜಗಳವಾಡಿ ಅವನಿಗೆ ಮುನ್ನೆಚ್ಚರಿಕೆ ನೀಡುವುದು ನನ್ನ ಸ್ವಭಾವದ ವಿರುದ್ಧ. ನನ್ನ ಪ್ರತೀಕಾರ ಒಂದಲ್ಲ ಒಂದು ದಿನ ಪೂರ್ಣಗೊಳ್ಳುವುದು, ಅದರಲ್ಲಿ ಸಂಶಯವಿಲ್ಲ. ಆದರೆ ಅವನಿಗೆ ಶಾಸ್ತಿ ಮಾಡಲು ಹೋಗಿ ನಾನು ಸಿಕ್ಕಿಹಾಕಿಕೊಳ್ಳಬಾರದು. ಪ್ರತೀಕಾರ ಮಾಡಲು ಹೋದವನು ತಾನೇ ಅದರಲ್ಲಿ ಸಿಕ್ಕಿ ಹಾಕಿಕೊಂಡರೆ ಪ್ರತೀಕಾರವು ಅಪೂರ್ಣವಾಗುತ್ತದೆ. ಹಾಗೇ ಪ್ರತೀಕಾರ ಮಾಡಿದವರು ಯಾರೆಂದು ಪಾಪಿಗೆ ತಿಳಿಯದೆ ಹೋದರೂ ಪ್ರತೀಕಾರವು ಅಪೂರ್ಣವಾಗೇ ಉಳಿಯುತ್ತದೆ. ನನ್ನ ನಡವಳಿಕೆಯಲ್ಲಿ ಎಳ್ಳಷ್ಟೂ ಅವನಿಗೆ ಸಂದೇಹ ಬಾರದಂತೆ ನಾನು ಅವನ ಜೊತೆ ಚೆನ್ನಾಗಿಯೇ ನಡೆದುಕೊಂಡು ಸಾಗಿದೆ. ಎಂದಿನಂತೆ ಅವನನ್ನು ಕಂಡಾಗೆಲ್ಲ ಮುಗುಳ್ನಗುತ್ತಿದ್ದೆ. ಅವನ ಅಂತ್ಯವನ್ನು ಕಲ್ಪಿಸಿಕೊಂಡು ನಾನು ಮುಗುಳ್ನಗುತ್ತಿದ್ದೆ ಎಂದು ಅವನಿಗೆ ತಿಳಿಯಲಿಲ್ಲ. ಫಾರ್ಚುನಾತೋ ಕಂಡರೆ ಎಲ್ಲರಿಗೂ ಭಯಭಕ್ತಿ. ಆದರೆ ಅವನಿಗೂ ಒಂದು ದೌರ್ಬಲ್ಯವಿತ್ತು. ವೈನ್ ಮದ್ಯದ ಬಗ್ಗೆ ತಾನೊಬ್ಬ ಮಹಾಜ್ಞಾನಿ ಎಂಬ ಜಂಬ. ಇಟಾಲಿಯನ್ ಜನರಲ್ಲಿ ಇದೊಂದು ಬಗೆ. ತಾವು ಅಂತ ಜ್ಞಾನಿಗಳು ಅಲ್ಲದಿದ್ದರೂ ಬ್ರಿಟಿಷ್ ಅಥವಾ ಆಸ್ಟ್ರಿಯನ್ ಶ...