ಅರ್ಧ ದಾರಿ ಮೇಲೆ
ಮೆಟ್ಟಿಲನೇರುತ ನಡುವಿನ ಮೆಟ್ಟಿಲ ಮೇಲೆ ಕೂಡುವೆನು ನಾನು ಇದುವೇ ನನ್ನಯ ಮೆಚ್ಚಿನ ಮೆಟ್ಟಿಲು, ಏತಕೆ ಎನ್ನುವಿರೇನು? ಮೇಲೂ ಅಲ್ಲದ ಕೆಳಗೂ ಅಲ್ಲದ ನಡುವಣ ಮೆಟ್ಟಿಲು ಚೆನ್ನ ಕುಳಿತುಕೊಳ್ಳದೇ ಇದ್ದರೆ ಅಲ್ಲಿ, ಕರಗದು ತಿಂದ ಮೊಸರನ್ನ. ಅಂತ್ಯವಲ್ಲ , ಆರಂಭವೂ ಅಲ್ಲ ಎಲ್ಲೋ ಇದೆ ನಡುವಿನಲಿ! ಮುಂದಿನ ಬೆಂಚಿನ ಮೌನಿಯೂ ಅಲ್ಲ, ಅಲ್ಲ ಹಿಂದಿನ ಬೆಂಚ್ ವಾಚಾಳಿ! ಏನೇನೋ ಆಲೋಚನೆ, ಕಲ್ಪನೆ, ಬರುವುವು ಇಲ್ಲಿ ಕುಳಿತಾಗ, ಕೇಳದಿರಿ ಆಲೋಚನೆ ಏತಕೆ ಏಐ ಏರ್ ಪ್ಲೇನ್ ಏರಿರುವಾಗ! ಮೂಲ: ಏ ಏ ಮಿಲ್ನ್ ಭಾವಾನುವಾದ: ಸಿ. ಪಿ. ರವಿಕುಮಾರ್