ಪೋಸ್ಟ್‌ಗಳು

Legna Rodriguez Iglesias ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಸಂಪೂರ್ಣ ಆಹಾರ

ಇಮೇಜ್
ಈ ಕವಿತೆಯನ್ನು ಬರೆದವಳು ಲೆಗ್ನಾ ರಾಡ್ರಿಗ್ಸ್ ಎಂಬ ಕ್ಯೂಬನ್ ಕವಯಿತ್ರಿ (೧೯೮೪-). ಅಮೆರಿಕಾ ದೇಶಕ್ಕೆ ಹೋದಾಗ ತನ್ನ ಅನುಭವಗಳನ್ನು ದಾಖಲಿಸಿ ಈಕೆ ಕವಿತೆಗಳನ್ನು ರಚಿಸಿದ್ದಾಳೆ. ಅಮೆರಿಕಾದಲ್ಲಿ ಸಾವಯವ ಆಹಾರ, ಸಂಪೂರ್ಣ ಆಹಾರ ಇವೆಲ್ಲಾ ಜನಪ್ರಿಯವಾಗಿವೆ. ಇಂಥದೊಂದು ಸಂಪೂರ್ಣ ಆಹಾರ ಮಳಿಗೆಗೆ ಹೋದಾಗ ಕವಯಿತ್ರಿಗೆ ಅವೆಲ್ಲಾ  ಎಷ್ಟು "ಸಹಜ" ಅಥವಾ ನೈಸರ್ಗಿಕವೋ ಅಷ್ಟೇ ಕೃತಕವೂ ಎಂಬಂತೆ ತೋರುತ್ತವೆ. ಹೂಕೋಸಿನಲ್ಲಿ  ಹುಳುಗಳು ಇರುವುದು ಸಹಜ ತಾನೇ! "ನೈಸರ್ಗಿಕ' ಜೋಳದ ಕಾಳು ತಿಂದಾಗ ಮುಖದ ಮೇಲೆ ಕಾಂತಿ ಬರುವುದೆಂಬ ಜಾಹೀರಾತು ನೋಡಿದಾಗ ಕವಯಿತ್ರಿಯ ಮುಖದಲ್ಲಿ ವ್ಯಂಗ್ಯದ ನಗುವೊಂದು ಬೆಳಗುತ್ತದೆ. ಹಸಿವನ್ನು ನೀಗುವ ಆಹಾರವನ್ನು ಇಷ್ಟೊಂದು ಗಂಭೀರವಾಗಿ ಇಷ್ಟೊಂದು ಗೋಜಲು ಮಾಡುವುದು ಕವಯಿತ್ರಿಗೆ ಸೋಜಿಗವೆನ್ನಿಸುತ್ತದೆ.  ಮೂಲ ಸ್ಪಾನಿಷ್ ಕವಿತೆ: ಲೆಗ್ನಾ ರಾಡ್ರಿಗ್ಸ್ ಇಗ್ಲೇಸಿಯಾಸ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಸರಿಯಪ್ಪ. ಬೀಜವೆಂದರೆ ಬೀಜ.  ನಡುವೆ  ಅಣಬೆ, ಕಡಲಜೊಂಡು, ಕ್ರಿಸ್ಟಿಯಾನ್ ಡಿಯೋರ್ ಅತ್ತರು.   ಸಾವಿವೆ ಎಣ್ಣೆಯೂ ಇದೆ ಸ್ವಾಮೀ  ತವಾ ಮೇಲೆ ಮೀನು ಹುರಿಯಲು.   ಇಲ್ಲಿ ಸಿಕ್ಕದೆ ಇರುವುದೇ ಇಲ್ಲ. ಕೀನ್ವಾ ರೊಟ್ಟಿ, ಹಣ್ಣು, ಗಿಣ್ಣು. ಹೂಕೋಸಿನಲ್ಲಿ ವಿಲವಿಲ ಹುಳು.  ಎಲ್ಲವೂ ಸ್ವಾದದಲ್ಲಿ ಪರಿಶುದ್ಧ;...