ಪೋಸ್ಟ್‌ಗಳು

T.S. Eliot ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಉನ್ಮಾದ

ಉನ್ಮಾದ (ಹಿಸ್ಟೀರಿಯಾ) ಕವಿತೆ ಓದುವ ಮುನ್ನ  ಟಿ. ಎಸ್. ಈಲಿಯಟ್ ಕನ್ನಡಕ್ಕೆ ಮುಖ್ಯನಾದ ಕವಿ; ಏಕೆಂದರೆ ಕನ್ನಡದ ನವ್ಯ ಕವಿಗಳು ಅವನ ಕಾವ್ಯದಿಂದ ಪ್ರಭಾವಿತರಾದವರು. ಪ್ರಸ್ತುತ ಕವಿತೆ "ಹಿಸ್ಟೀರಿಯಾ" ಎಂಬ ಅವನ ಮೂಲ ಕವಿತೆಯ ಅನುವಾದ.  ಇಲ್ಲಿ ಒಂದು ಸಂದರ್ಭದ ವಿವರಣೆ ಇದೆ. ಅದರ ಹಿನ್ನೆಲೆ ಏನು ಮೊದಲಾದ ವಿವರಗಳನ್ನು ಕವಿ ನಮಗೆ ನೀಡುವುದಿಲ್ಲ. ಒಬ್ಬ ಯುವಕ ಮತ್ತು ಅವನ ಹೆಣ್ಣು ಸಂಗಾತಿ ಇಬ್ಬರೂ ಮಧ್ಯಾಹ್ನದ ಊಟಕ್ಕೆ ಯಾವುದೋ ರೆಸ್ತರಾಂಗೆ ಹೋಗಿದ್ದಾರೆ. ಊಟದ ನಂತರ ಚಹಾ ಬರಲು ಕಾಯುತ್ತಿದ್ದಾರೆ. ಆಗ ಯಾವುದೋ ಕಾರಣಕ್ಕಾಗಿ ಹೆಣ್ಣು ಸಂಗಾತಿ ನಗಲು ಪ್ರಾರಂಭಿಸುತ್ತಾಳೆ. ಅದೊಂದು ಉನ್ಮಾದದ ನಗೆ. ಕವಿತೆಯಲ್ಲಿ ಈ ನಗೆಯಿಂದ ಯುವಕ ಸಂಗಾತಿಯ ಮೇಲೆ ಯಾವ ಪರಿಣಾಮ ಉಂಟಾಯಿತು ಎಂಬ ವಿವರಗಳು ಬರುತ್ತವೆ.  ಆ ಯುವತಿ ಯಾಕೆ ನಕ್ಕಳು? ಅವಳ ನಗೆಯ ಹಿಂದೆ ಏನಾದರೂ ದುಃಖ ಅಡಗಿದೆಯೇ? ಅವರಿಬ್ಬರ ನಡುವೆ ಇದ್ದ ಸಂಬಂಧವೇನು? ಅವರ ನಡುವೆ ನಡೆದ ಸಂಭಾಷಣೆ ಏನು? ಇದ್ದಕ್ಕಿದ್ದ ಹಾಗೆ ಅವಳ ಹಾಗೆ ನಗಲು ಏನು ಕಾರಣ? ಒಂದು ವಿಲಕ್ಷಣವಾದ ರೀತಿಯಿಂದ ಕವಿತೆ ನಮ್ಮನ್ನು ಕಾಡುತ್ತದೆ.  ಇಂಥ ಮುಜುಗರದ ಸಂದರ್ಭಗಳನ್ನು ನಾವೂ ಯಾವಾಗಲಾದರೂ ಅನುಭವಿಸಿರುತ್ತೇವೆ; ಕವಿ ನಮ್ಮನ್ನು ಅಂತಹ ಅನುಭವ ಪ್ರಪಂಚಕ್ಕೆ ಹೇಗೆ ಕರೆದೊಯ್ಯುತ್ತಾನೆ!  ಮೂಲ ಇಂಗ್ಲಿಷ್ ಕವಿತೆ: ಟಿ. ಎಸ್. ಎಲಿಯಟ್   ಕ...