ಪೋಸ್ಟ್‌ಗಳು

2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಒಂದು ಪತ್ರ

ಇಮೇಜ್
  ಒಂದು ಪತ್ರ ಮೂಲ ಪಂಜಾಬಿ ಕವಿತೆ - ಅಮೃತಾ ಪ್ರೀತಂ ಇಂಗ್ಲಿಷ್ ಭಾಷಾಂತರ - ಡಿ ಎಚ್ ಟ್ರೇಸಿ ಮತ್ತು ಮೋಹನ್ ಟ್ರೇಸಿ ಕನ್ನಡಕ್ಕೆ - ಸಿ.ಪಿ. ರವಿಕುಮಾರ್ ನಾನು ಅಟ್ಟದ ಮೇಲೆ ಬಿದ್ದಿರುವ ಪುಸ್ತಕ. ಸ್ತೋತ್ರಮಂಜರಿಯೋ ಕಾಮಸೂತ್ರವೋ ಗುಪ್ತರೋಗಗಳಿಗೆ ಮನೆಮದ್ದು ದೀಪಿಕೆಯೋ ನಾನಿದಾವುದೂ ಅಲ್ಲ. ಹಾಗೇನಾದರೂ ಇದ್ದಿದ್ದರೆ ಯಾರಾದರೂ ಓದುತ್ತಿದ್ದರು ಆಗಾಗ್ಗೆ ಅಟ್ಟಕ್ಕೇರಿಸುತ್ತಿರಲಿಲ್ಲ ಹೀಗೆ. ಕ್ರಾಂತಿಕಾರಿಗಳ ಯಾವುದೋ ಸಭೆಯಲ್ಲಿ ಕೈಗೊಂಡ ನಿರ್ಣಯದ ಹಸ್ತಪ್ರತಿ ನಾನು. ಪೊಲೀಸರ ಮುದ್ರೆಯೂ ಇದೆ ಮುಖಪುಟದ ಮೇಲೆ. ಬರೆದಿಟ್ಟರೇನು ಜಾರಿಗೆ ಬಂದರಲ್ಲವೇ ಬೆಲೆ? ಔಪಚಾರಿಕ ನಿಮಿತ್ತಕ್ಕಾಗಿ ಮಾತ್ರ ಉಳಿಸಿದ್ದಾರೆ ನನ್ನ ತಲೆ. ಈಗ ನನ್ನನ್ನು ಹುಡುಕಿಕೊಂಡು ಬರುತ್ತವೆ ಗುಬ್ಬಚ್ಚಿಗಳ ಜೋಡಿ ಕಚ್ಚಿಕೊಂಡು ಕೊಕ್ಕಿನಲ್ಲಿ ಹುಲ್ಲುಕಡ್ಡಿ. ನನ್ನ ಮೇಲೆ ಕೂಡುತ್ತವೆ ನೀಡುತ್ತವೆ ಮುಂದಿನ ಪೀಳಿಗೆಯೊಂದು ಬರುವ ಸೂಚನೆ ಎಷ್ಟು ಒಳ್ಳೆಯದು ಮುಂದಿನ ಪೀಳಿಗೆಯ ಆಲೋಚನೆ! ಹಾರಿಹೋಗುತ್ತವೆ ಗುಬ್ಬಿಗಳು, ರೆಕ್ಕೆಗಳಿವೆಯಲ್ಲ ಅವಕ್ಕೆ ಸಭೆಯ ನಿರ್ಣಯಗಳಿಗಿಲ್ಲ ಪುಕ್ಕರೆಕ್ಕೆ ಮುಂದಿನ ಪೀಳಿಗೆಯೂ ಇರದು ನಿರ್ಣಯಕ್ಕೆ. ಒಮ್ಮೊಮ್ಮೆ ನಾನು ಯೋಚಿಸುತ್ತೇನೆ ಭವಿಷ್ಯವನ್ನು ಕುರಿತು. ಚಿಂತೆಯಿಂದ ಕಿತ್ತುಬರುತ್ತದೆ ನನ್ನನ್ನು ಬಂಧಿಸಿದ ಕಟ್ಟು. ದೀರ್ಘ ನಿಟ್ಟುಸಿರಿಟ್ಟು ಉಸಿರೆಳೆದುಕೊಂಡಾಗ ಗುಬ್ಬಿಗಳ ಹಿಕ್ಕೆಯ ಕಡುಘಾಟು. ಓ ಭೂಮಿಯೇ, ನಿನ್ನ ಮುಂದಿನ ಪಾಡು! ನಾನೀಗ ನಿನ್ನ ಸ್ಥಿತಿಯಲ

ಹನುಮಾನ ಚಾಲೀಸಾ

(ಪೀಠಿಕೆ - ತುಲಸೀದಾಸರು ರಚಿಸಿದ ಹನುಮಾನ್ ಚಾಲೀಸಾ ಬಗ್ಗೆ ಗೊತ್ತಿಲ್ಲದವರು ಯಾರು? ಎಂ.ಎಸ್. ಸುಬ್ಬುಲಕ್ಷ್ಮಿ ಮೊದಲಾಗಿ ಅನೇಕ ಗಾಯಕರು ಹಾಡಿದ ಹನುಮಾನ್ ಚಾಲೀಸಾ  ಪ್ರತಿನಿತ್ಯ ರೇಡಿಯೋ/ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಲೇ ಇರುತ್ತದೆ. ಭಾರತದ ಮಂದಿರಗಳಲ್ಲಿ ಹನುಮಾನ್ ಚಾಲೀಸಾ  ಪಠಣ ನಡೆಯುತ್ತಲೇ ಇರುತ್ತದೆ. ಹನುಮಂತನನ್ನು ಸ್ಮರಿಸಿ ತುಲಸೀದಾಸರು ರಚಿಸಿದ ನಲವತ್ತು ಸಾಲುಗಳ ರಚನೆಯೇ ಹನುಮಾನ್ ಚಾಲೀಸಾ. ಪ್ರಾರಂಭದಲ್ಲಿ ಕವಿ ಹನುಮಂತನನ್ನು ತನಗೆ ಬಲ-ಬುದ್ಧಿ-ವಿದ್ಯೆ ನೀಡಲೆಂದು ಪ್ರಾರ್ಥಿಸುತ್ತಾರೆ. ಇದಾದ ನಂತರ ಹನುಮಂತನನ್ನು ಕುರಿತು ಸ್ತುತಿ ಮತ್ತು ಹನುಮಂತನ ಸ್ಮರಣೆಯಿಂದ ಸಿಗುವ ಲಾಭವನ್ನು ತುಲಸೀದಾಸರು ಹೇಳುತ್ತಾರೆ. ಕೊನೆಯಲ್ಲಿ ಹನುಮಂತನನ್ನು ತನ್ನ ಹೃದಯದಲ್ಲಿ ರಾಮ-ಲಕ್ಷ್ಮಣ-ಸೀತೆಯರೊಂದಿಗೆ ಬಂದು ನೆಲೆಸು ಎಂದು ಪ್ರಾರ್ಥಿಸುತ್ತಾರೆ.)  ಶ್ರೀಗುರು ಪದ್ಮಪಾದಗಳ ಧೂಳು ತೊಳೆಯಲೆನ್ನ ಮನದ ಕನ್ನಡಿಯ ನಿಜಮುಖ ವರ್ಣಿಸುವೆ ರಘುವರನ ವಿಮಲಯಶ, ಯಾವುದು ನೀಡುವುದೋ  ನಾಲ್ಕು ಫಲಗಳ ಸುಖ ಬುದ್ಧಿಹೀನ ನಾನೆಂದು ಬಗೆದು ಸ್ಮರಿಸುವೆನಿದೋ ರಕ್ಷಿಸಲಿ ಪವನಕುಮಾರ ಬಲಬುದ್ಧಿವಿದ್ಯೆಗಳ ವರ ನೀಡಿ ಮಾಡಲೆನ್ನ ಸಕಲ ಕ್ಲೇಶವಿಕಾರಗಳ ದೂರ ಜೈ ಹನುಮಂತ, ಜ್ಞಾನಗುಣಸಾಗರ, ಜೈ ಕಪೀಶ, ಮೂರು ಲೋಕೋದ್ಧಾರ ರಾಮದೂತ, ಅತುಲಿತ ಬಲಧಾಮ,  ಅಂಜನಿಪುತ್ರ, ಪವನಸುತ ನಾಮ ಮಹಾವೀರ, ವಿಕ್ರಮ ವಜ್ರಾಂಗಿ, ಕುಮತಿ ನಿವಾರಕ, ಸನ್ಮತಿಗಳ ಸಂಗಿ ಹೊನ್ನ ಮೈಬಣ್ಣ,  ಕ

ಪ್ಲವ

ಪ್ಲವವು ತರಲಿ ನವಪಲ್ಲವ ನಮ್ಮೆಲ್ಲರ ಬಾಳಲಿ ಕವಲು ಒಡೆದ ದಾರಿ ಮತ್ತೆ ಒಂದಾಗಿ ಸೇರಲಿ ತವಕ, ಕ್ಷೋಭೆ, ಅನಿಶ್ಚಿತತೆ, ಭೀತಿ ಹಿಂದೆ ಸರಿಯಲಿ ಕವಿತೆಯಲ್ಲಿ ಮತ್ತೆ ಮಾವು ಮಲ್ಲಿಗೆಗಳು ಬಿರಿಯಲಿ. ಕೆಟ್ಟ ಕನಸಿನಿರುಳಿನಂತೆ ಕಳೆದು ಹೋದ ಶಾರ್ವರೀ ಬಿತ್ತಿಹೋದ ಭೀತಿಭಾವ ಕತ್ತಲಂತೆ ಕರಗಲಿ ದಟ್ಟಗಪ್ಪು ಮೋಡದಂಚಿನಲ್ಲಿ ಬೆಳ್ಳಿ ಮಿಂಚಲಿ ಮತ್ತೆ ಸ್ಥೈರ್ಯ ಹುಟ್ಟಿ ಪ್ಲವದ ಕಣ್ಣಿನಲ್ಲಿ ಹೊಳೆಯಲಿ ಒಡೆದ ವಿಶ್ವದಲ್ಲಿ ಮತ್ತೆ ಒಂದೇ ಬಿಂಬ ಮೂಡಲಿ ಒಡಕಲು ಸ್ವರ ಒಂದಾಗಿ ಒಂದೆ ರಾಗ ಹಾಡಲಿ ಕಡೆದ ಕಡಲಿನಲ್ಲಿ ಸುಧೆಯ ಹೊತ್ತು ತರಲಿ ಪ್ಲವ ತಡೆದು ಗಂಟಲಲ್ಲಿ ನಂಜು ಕಾಯುತಿಹನು ಶಿವ! (c) ಸಿ. ಪಿ. ರವಿಕುಮಾರ್, ಏಪ್ರಿಲ್ ೧೩, ೨೦೨೧

ಸಂಪಾದಕನ ಸ್ವಗತ

ಇಮೇಜ್
ಜಲಿಯಾನ್ ವಾಲಾ ಬಾಗ್ ಹತ್ಯಾಕಾಂಡದ  ವರದಿ ತಲುಪಿದೆ  ಬ್ರಿಟನ್ ಸುದ್ದಿಪತ್ರಿಕೆಯ ಸಂಪಾದಕನಿಗೆ.  ಕನ್ನಡಕದ ಕಣ್ಣು ಓದುತ್ತಿದೆ ವರ್ತಮಾನ.  ಅಮೃತ ಸರೋವರದ ದಡದಲ್ಲಿ ಮೃತ್ಯುವಿಗೆಲ್ಲಿದೆ ಸ್ಥಾನ? ಸತ್ತವರ ಸಂಖ್ಯೆ ನೂರೂ ಚಿಲ್ಲರೆ ಅದಕ್ಕೇಕೆ ದೊಡ್ಡಕ್ಷರದ ಬಿಗುಮಾನ? ಬೇಡ ಇದಕ್ಕೆ ಸಲ್ಲದು ಮೊದಲ ಪುಟದ ಸ್ಥಾನಮಾನ ಒಳಗಿನ ಪುಟದ ಮೂಲೆಯಲ್ಲಿರಲಿ ಸಾಕು ಜಲಿಯಾನ್ ವಾಲಾ ಉದ್ಯಾನ! ಮೊದಲ ಪುಟ ಸುದ್ದಿಯೆಂದರೆ ರಾಣಿಯ ಹೊಸಬೆಕ್ಕು ಜೊಹಾನಾ. ನಗರದಲ್ಲಿದ್ದಾಗ ರೌಲಟ್ ಕಾಯಿದೆ ಅಷ್ಟೊಂದು ಜನ ಸೇರಿದ್ದೇ ಅಪಮಾನ! ಡಯರ್ ಮಾಡಿದ್ದು ಒಳ್ಳೆಯದೇ ಹೆಚ್ಚಿಕೊಳ್ಳುತ್ತಿದ್ದಾರೆ ಕಂದುಜನ ದಿನದಿನಾ! ನೆನ್ನೆ ಖಜಾನೆಗೆ ಲಗ್ಗೆ ಇಡುವಷ್ಟು ಧಾರ್ಷ್ಟ್ಯ! ಒಬ್ಬ ಬ್ರಿಟಿಷ್ ಹೊಂದಿದ್ದಾನೆ ಅವಸಾನ! ಗಾಯಗೊಂಡಿದ್ದಾರೆ ರಾಣಿಯ ಇಬ್ಬರು ಸೇವಕರು! ಈ ಗಾಂಧಿ ಆಗಿಕೂತಿದ್ದಾನೆ ದೊಡ್ಡ ಯಜಮಾನ!! ಲೋ ಯಾರಲ್ಲಿ! ತೊಗೊಳ್ಳಿ ಎಂಟನೇ ಪುಟಕ್ಕೆ ಅಳವಡಿಸಿ ಈ ಜುಜುಬಿ ವರದಿಯನ್ನ (c) ಸಿ. ಪಿ. ರವಿಕುಮಾರ್, ಏಪ್ರಿಲ್ ೨೦೨೧

ಗೋಪಿಹಕ್ಕಿ

ಇಮೇಜ್
ನೀಲಮೇಘನ ಘನನೀಲವರ್ಣ  ತುಂಬಿತ್ತು ಕಣ್ಣುಗಳಲ್ಲಿ  ಗೋಪಾಲನ ಮುರಳೀಗಾನ  ತುಂಬಿತ್ತು ಕಿವಿಗಳಲ್ಲಿ.  ಬಿಕೋ ಎನ್ನುತ್ತಿತ್ತು ಬೃಂದಾವನ  ಕೊಲ್ಲುತ್ತಿತ್ತು ಶ್ಯಾಮನ ಪ್ರಸ್ಥಾನ.  ತಾಳಲಾರದೆ ವಿರಹ, ರಾಧೆ, ನೀಲಬಣ್ಣದ ಗೋಪಿಹಕ್ಕಿಯಾದೆ!  ಎಂದೋ ನೀನು ಸ್ವರವೆತ್ತಿ ಹಾಡಿದಾಗ  ಕೇಳುತ್ತದೆ ಮುರಳೀಧರನ ಮೋಹನರಾಗ. 

ವಿಜ್ಞಾನ ಕವಿತೆಗಳು - ೨

 ಸಮಾನತೆ ಇದನ್ನೋದುವ ನೀನು ಯಾರೇ ಆಗಿದ್ದರೂ  ನಿನ್ನ ವಂಶವಾಹಿಗೂ ನನ್ನ ವಂಶವಾಹಿಗೂ  ಸಮಾನತೆ ಶತಾಂಶ ತೊಂಬತ್ತೊಂಬತ್ತು  ನೀನು ನನ್ನ ತಂದೆಯೋ ಮಗನೋ ಆಗಿದ್ದರೆ  ತೊಂಬತ್ತೊಂಬತ್ತಕ್ಕೆ ಸೇರಿಸಿಕೋ  ಇನ್ನೊಂದು ಅರ್ಧ ಪರ್ಸೆಂಟು.  ಹೇಳಲೇ ನಿನಗೆ ಇನ್ನೊಂದು ಆಶ್ಚರ್ಯಕರ ವಿಷಯ? ಕೇಳಿದರೆ ನೀನು ಹೌಹಾರುವೆ ನಿಶ್ಚಯ! ಚಿಂಪಾಂಜಿಯ ವಂಶವಾಹಿಗೂ ನನ್ನ-ನಿನ್ನ ವಂಶವಾಹಿಗೂ  ಸಮಾನತೆ ಪರ್ಸೆಂಟ್ ತೊಂಬತ್ತೆಂಟು! ಅದಕ್ಕೇ ಇರಬಹುದು ನಾವು ಕೆಲವೊಮ್ಮೆ  ಮರ್ಕಟದಂತೆ ಆಡುವುದುಂಟು! ನಿಶಬ್ದ   ಮಾಧ್ಯಮವಿಲ್ಲದೆ ಆಗದು ಶಬ್ದ ಸಂಚಲನ ಅನಿಲವೋ ದ್ರವವೋ ಅಥವಾ ಘನ ಆಕಾಶಕಾಯಗಳಿಂದ ಭಯಂಕರ ಸದ್ದು ಭೂಮಿಗೆ ಬರದಂತೆ ತಡೆ ಹಿಡಿದದ್ದು ನಡುವಣ ವ್ಯೋಮವೇ! ಪುಣ್ಯಶಾಲಿ ಭುವನ! ವಿದ್ಯುತ್ ಕಣಾ! "ಉಜ್ಜಿದರೆ ಬಾಚಣಿಗೆ ಕೂದಲಿಗೆ ಸ್ಥಿರವಿದ್ಯುತ್ ಕಣ  ನೀಡುವುದು ಹಣಿಗೆಗೆ ಕ್ಷಣಕಾಲ ಆಕರ್ಷಣ ... " "ಸರ್, ಇದನ್ನು ನೀವು ಪರೀಕ್ಷಿಸಿದ್ದೀರಾ?" ಎಂದು ಕೇಳಿದನೊಬ್ಬ ಹಿಂದಿನ ಬೆಂಚ್ ಪೋರ  ನೋಡುತ್ತಾ ಗುರುಗಳ ಮಿಂಚುವ ತಲೆಯನ್ನ! "ಅಂದಹಾಗೆ ಬಾಚಣಿಗೆಯೇ ಬೇಕು ಅಂತಿಲ್ಲ! ದೊಣ್ಣೆಯೂ ಆದೀತು, ಬೇಕಾದರೆ ಉಜ್ಜಿ ತೋರಿಸಲಾ? ಎಲ್ಲೋ, ಯಾರು ಕೇಳಿದ್ದು ಪ್ರಶ್ನೆ! ಬೆಂಚಿನ ಮೇಲೆ ನಿಂತುಕೋ ಸುಮ್ಮನೆ!" ಎಂದು ಪ್ರದರ್ಶಿಸಿದರು ಮೇಷ್ಟ್ರು ಎಲೆಕ್ಟ್ರೋಸ್ಟಾಟಿಕ್ ಲಾ  ಜಿರಾಫ್  ಎತ್ತರದ ಅಕೇಶಿಯಾ ಮರಗಳ ರಸಪೂರ್ಣ  ಎಲೆ  ಹುಡುಕುತ್ತ ನಾಲಗೆಯಿಂದ ಸೆಳೆದುಕ

ವಿಜ್ಞಾನಕವಿತೆಗಳು

ಆಸಿಡ್ ಜೀರ್ಣವಾಗಲು ನೀನು ತಿಂದ ಬರ್ಗರ್ ಪಾಸ್ತಾ ನಿನ್ನ ಹೊಟ್ಟೆಯಲ್ಲಿ ಸ್ರವಿಸುವುದು ಏನು ಗೊತ್ತಾ ಹೈಡ್ರೋಕ್ಲೋರಿಕ್ ಆಸಿಡ್, ಇದೇನು ಸುಮ್ಮನೇ ಆಯ್ತಾ, ಕರಗಿಸಬಲ್ಲದು ಕಬ್ಬಿಣವನ್ನೇ! ಎಂದಾಗ ಪ್ರೊ ಗುಪ್ತಾ ಕೇಳಿದನು ಒಬ್ಬ, ಸರ್ ನನಗೊಂದು ಡೌಟು, ಆಸಿಡ್‌ಗೆ ಹೊಟ್ಟೆಯೇ ಕರಗಿಹೋಗದೆ ಸುಟ್ಟು? "ನೀನು ಕೇಳಿದ್ದು ಸರಿಯಾಗಿದೆ ಚೋಟೂ, ಹೊಟ್ಟೆ ಸ್ರವಿಸುವುದು ಸೋಡಾ ಬೈ ಕಾರ್ಬೊನೇಟು! ರಕ್ಷಿಸಿಕೊಂಡರೂ ಹೀಗೆ ತನ್ನ ಒಳಪದರ ಕರಗುವುದು ತಪ್ಪುವುದಿಲ್ಲ ಮೇಲೆ ಹೇಳಿದ ಥರ ನಾಲ್ಕುದಿನಕ್ಕೊಮ್ಮೆ ಮರುಜೀವ ಪಡೆಯುವುದು ಉದರ! ಶಿವನು ವಿಷಕಂಠ, ಮನುಷ್ಯನೋ! ನುಂಗಿ ವಿಷಧರ! ತಿಂದರೆ ಸುಲಭಜೀರ್ಣವಾಗದ್ದನ್ನು ಪದೇಪದೇ ಆಸಿಡ್ ಹೆಚ್ಚಾಗಿ ಹೊಟ್ಟೆಗೆ ಆಗುವುದು ಬಾಧೆ! ಜೀರ್ಣಿಸಿಕೊಂಡೆಯಾ ನಾನು ಹೇಳಿದ್ದನ್ನೆಲ್ಲಾ?" "ಸರ್ ಯಾಕೋ ಹೊಟ್ಟೆ ನೋಯುತ್ತಿದೆಯಲ್ಲ!" ಖಾಲೀಸ್ಥಳ ಜಿಮ್‌ಗೆ ಹೋಗಿ ಎಷ್ಟೇ ಮಾಡಿದರೂ ಸಾಮು ಎಷ್ಟೇ ಗಟ್ಟಿಯಾದರೂ ಬಾಡಿ ದೇಹದ ಕಣಗಳ ನಡುವೆ ಬರೀ ಖಾಲೀಸ್ಥಾನ ತುಂಬಿಕೊಂಡಿದೆ ಅಷ್ಟೇ, ಮರೆಯಬೇಡಿ ಹಿಡಿದು ತಂದು ಭೂಮಿಯ ಎಲ್ಲ ಮನುಷ್ಯರನ್ನೂ ತೆಗೆದುಬಿಟ್ಟರೆ ನಡುವಣ ಖಾಲೀಸ್ಥಳ ಫುಸ್ ಎಂದು ಕುಗ್ಗಿಸಿಬಿಡಬಹುದು ಸಕ್ಕರೆಯ ಕ್ಯೂಬ್ ಆಳ ಉದ್ದ ಅಗಲ- ದಷ್ಟೇ ಘನ ಅಳತೆಯಲ್ಲಿ! ಆದರೂ ಎಲ್ಲಿಂದ ಬಂತೋ ಮನುಷ್ಯನಿಗೆ ಆಶ್ಚರ್ಯ ಜಗತ್ತನ್ನೇ ಆಳುವೆನೆಂಬ ಪೊಗರು! ಮಂಗಳಗ್ರಹಕ್ಕೂ ಲಗ್ಗೆ ಇಡುವ ಧೈರ್ಯ! ಫೋಟಾನ್ ಬಸ್ ಹೊರಟಿತು ಹೊರಟಿತು ಫೋಟ

ಹಳೇ ಸೈಕಲ್ಲುಗಳ ಗೋರಿ

ಇಮೇಜ್
ಊರಿನ ಅಂಚಿನಲ್ಲಿದೆ ಹಳೇ ಸೈಕಲ್ಲುಗಳ ಗೋರಿ ಅನುಪಯುಕ್ತವೆನ್ನಿಸಿದಾಗ ಅಟ್ಟಿಬಿಡುವಂತೆ ದನ, ಹೋರಿ ಇಲ್ಲಿ ತಂದು ಬಿಟ್ಟಿದ್ದಾರೆ ಚೈನಾದಲ್ಲಿ ಯಾವುದೋ ಊರಿನ ಜನ ಮಾಡದೇ ಯಾವುದೇ ಕ್ರಿಯಾಕರ್ಮ, ಜನಾಜಾ ಪಠಣ. ಶಿವನೊಬ್ಬ ತನ್ನ ಮೂರನೇ ಕಣ್ಣು ತೊಟ್ಟು ಬಿಚ್ಚಿ ಈ ಸೈಕಲ್ಲುಗಳ ಸ್ಕ್ರೂ ಮತ್ತು ನಟ್ಟು ಬೇರೆ ಮಾಡಿ ಬಿಡಿಭಾಗ ಒಂದೊಂದೂ ರೀ ಸೈಕಲ್ ಮಾಡಲು ಬಂದಾನು ಬ್ರಹ್ಮನೊಬ್ಬ ಮುಂದು: ಮರುವುಟ್ಟಿಗೆ ಕಾಯುತ್ತಿವೆ ಮೇಲೆ ಆಗಸದಲ್ಲಿ ಅಲ್ಲೇ ಸೈಕಲ್ಲಿನ ಆತ್ಮಗಳು! ಸಿಕ್ಕೀತು ಅವಕಾಶ ಇಂದಲ್ಲ ನಾಳೆ ಪುಟ್ಟ ಮಗುವಿನ ಹೊಳೆವ ಕೆಂಪು ಟ್ರೈಸಿಕಲ್ಲಾಗಿ ಬೆಲ್ ಬಾರಿಸುತ್ತಾ ಮುನ್ನುಗ್ಗುವ ಕನಸು ಕಾಣುತ್ತ ಅಥವಾ ಎಲ್ಲೋ ಭಾರತದ ಹಳ್ಳಿಯಲ್ಲಿ ಸಂಸಾರವನ್ನೇ ಹೊತ್ತು ತುಳಿಯುವ ರೈತನೊಬ್ಬನ ಸ್ವರ್ಣರಥ. ಸಿ.ಪಿ. ರವಿಕುಮಾರ್ (c) 2021

ಪಾರ್ಕರ್ ಪೆನ್

ಕೊನೆಗೂ ನಾನು ಧೈರ್ಯ ಮಾಡಿ ಮೇಜಿನ ಸೆಳೆಖಾನೆಯನ್ನು ಧೈರ್ಯ ಮಾಡಿ ಎಳೆದೆ. ಪಾರ್ಕರ್ ಪೆನ್ ತೊಟ್ಟಿಲಲ್ಲಿ ಮಲಗಿದ ಮುಗ್ಧ ಮಗು ನನ್ನನ್ನು ಎತ್ತಿಕೋ ಎಂದು ಕೇಳಿಕೊಳ್ಳುವಂತೆ ನಕ್ಕಿತು. ನ ಮ್ಮ ತಂದೆಯ ಹತ್ತಿರ ಒಂದು ಪಾರ್ಕರ್ ಪೆನ್ ಇತ್ತು. ಅದರ ನಿಬ್ ಚಿನ್ನದಿಂದ ಮಾಡಿದ್ದಾರೆಂದು ನಮ್ಮ ತಾಯಿ ನಮಗೆ ಆಗಾಗ ಹೇಳುತ್ತಿದ್ದರು. ಆಗ ನಾನು ಐದನೇ ಕ್ಲಾಸಿನಲ್ಲಿ ಓದುತ್ತಿದ್ದೆ ಎಂದು ನೆನಪು. ಆಗೆಲ್ಲ ಮನೆಯಲ್ಲಿ ಒಬ್ಬರಿಗೆ ಒಂದರಂತೆ ಪೆನ್ ಇರುತ್ತಿತ್ತು. ಬಾಲ್ ಪಾಯಿಂಟ್ ಪೆನ್ ಇನ್ನೂ ಅಷ್ಟೊಂದು ರೂಢಿಗೆ ಬಂದಿರಲಿಲ್ಲ. ಇಂಕ್ ತುಂಬಿಸಿ ಬರೆಯುವ ಪೆನ್. ಅದರಲ್ಲಿ ಶಾಯಿ ತುಂಬಿಸುವುದೊಂದು ಫಜೀತಿ. ಅದಕ್ಕೆ ಇಂಕ್ ಫಿಲ್ಲರ್ ಎಂಬ ಸಲಕರಣೆ ಸಿಕ್ಕುತ್ತಿತ್ತು. ಬಹಳ ಜನ ಇಂಕ್ ಪಿಲ್ಲರ್ ಎನ್ನುತ್ತಿದ್ದರು. ಕೆಲವೊಮ್ಮೆ ಈ ಇಂಕ್ ಫಿಲ್ಲರ್ ಕೂಡಾ ಕೈಕೊಟ್ಟು ಇಂಕ್ ಕೈಗೆಲ್ಲಾ ಮೆತ್ತಿಕೊಳ್ಳುತ್ತಿತ್ತು. ಬೆರಳಲ್ಲಿ ಇಂಕ್ ಕಲೆ ಇಲ್ಲದ ಹುಡುಗರು ಕಂಡರೆ ಅವರು ಓದಿ ಬರೆಯದ ಸೋಮಾರಿಗಳೆಂದು ಹೇಳಬಹುದಾಗಿತ್ತು. ನನ್ನ ತಂದೆಯ ಪಾರ್ಕರ್ ಪೆನ್ ಕೂಡಾ ಇಂಥ ಇಂಕ್ ತುಂಬಿಸಿ ಬರೆಯುವ ಪೆನ್ನೇ ಆಗಿತ್ತು. ಕಪ್ಪು ಬಣ್ಣದ, ಸ್ವಲ್ಪ ಡುಮ್ಮ ಎನ್ನಬಹುದಾದ ಮೈಕಟ್ಟು. ಪೆನ್ ಸಿಕ್ಕಿಸಿಕೊಳ್ಳಲು ಚಿನ್ನದ ಬಣ್ಣದ ಪಿನ್ ಜೋಡಿಸಿದ್ದರು. ಈ ಪೆನ್ನನ್ನು ನಮ್ಮ ತಂದೆ ತಮ್ಮ ಮೇಜಿನ ಡ್ರಾನಲ್ಲಿ ಇಟ್ಟುಕೊಂಡಿರುತ್ತಿದ್ದರು. ಡ್ರಾವರಿಗೆ ಬೀಗ ಇದ್ದರೂ ಅವರು ಅದನ್ನು ಹಾಕುತ್ತಿರಲಿಲ್ಲ. ಬೇಸಿ

ಹರಟೆಗಳು - ನಿಮಗೊಂದು ಟಿಪ್, ಬಿಟ್ ಕಾಯಿನ್, ಸೋಲಾರಕ್ಕೂ ಬೇಕಂತೆ ಕಾರ

  (೧)  ನಿಮಗೊಂದು ಟಿಪ್    ಈರುಳ್ಳಿ ಹೆಚ್ಚುವಾಗ ನಿಮ್ಮ ಕಣ್ಣಲ್ಲಿ ನೀರು ಬರುತ್ತದೆಯೇ? ಹಾಗಾದರೆ ನೀವು ಈ ಟಿಪ್ ನೋಡಲೇ ಬೇಕು. ಕೊನೆಯವರೆಗೂ ಈ ಟಿಪ್ ವೀಕ್ಷಿಸಿದರೆ ಈರುಳ್ಳಿ ಕತ್ತರಿಸುವಾಗ ನಿಮ್ಮ ಕಣ್ಣಲ್ಲಿ ಸ್ವಲ್ಪವೂ ನೀರು ಬರುವುದಿಲ್ಲ. ಹಾಗಾದರೆ ಈಗ ಟಿಪ್ ನೋಡೋಣವೇ? ಅದಕ್ಕಿಂತ ಮುಂಚೆ ಒಂದು ಸಣ್ಣ ವಿರಾಮ. ಎಲ್ಲರಿಗೂ ಮತ್ತೊಮ್ಮೆ ಸ್ವಾಗತ. ವೀಕ್ಷಕರೇ, ಇವತ್ತು ನಾನು ನಿಮಗೆ ಕೊಡುತ್ತಿರುವ ಟಿಪ್ ಬಹಳ ಉಪಯುಕ್ತವಾದದ್ದು. ಅದೆಷ್ಟು ಸಲ ನೀವು ಈರುಳ್ಳಿ ಕತ್ತರಿಸುವಾಗ ಯಾರಾದರೂ ಮನೆಗೆ ಬಂದು ನೀವು ಅಳುತ್ತಿದ್ದೀರೆಂದು ತಿಳಿದು ನಿಮ್ಮನ್ನು ಏನಾಯಿತೆಂದು ಮತ್ತೆ ಮತ್ತೆ ಕೇಳಿ ನಿಜವಾಗಲೂ ಅಳಿಸಿಲ್ಲ, ಹೇಳಿ! ಇವತ್ತು ನಾನು ನೀಡುವ ಟಿಪ್ ಕೊನೆಯವರೆಗೂ ಫಾಲೋ ಮಾಡಿದರೆ ಇಂಥ ಯಾವ ಕಸಿವಿಸಿಯೂ ನಿಮಗೆ ಆಗುವುದಿಲ್ಲ. ಹಾಗಾದರೆ ಟಿಪ್ ನೋಡೋಣವೇ? ಮನೆಗೆ ಅತಿಥಿಗಳು ಬರಲಿದ್ದಾರೆ. ಅವರಿಗಾಗಿ ಈರುಳ್ಳಿ ಪಕೊಡವನ್ನೋ, ಆನಿಯನ್ ರಿಂಗ್ಸ್ ಅಥವಾ ಇನ್ನೇನೋ ಹೊಸರುಚಿ ತಯಾರಿಸಬೇಕಾಗಿದೆ. ಈರುಳ್ಳಿ ಕಟ್ ಮಾಡೋದು ಮಹಾ ಸಂಕಟದ ವಿಷಯ. ಅದರಲ್ಲೂ ಈ ಕೆಂಪು ಈರುಳ್ಳಿಯಂತೂ ಮಹಾ ಕಷ್ಟ. ಒಗಟು ಕೂಡಾ ಇದೆ. ದುಡ್ಡು ಕೊಟ್ಟು ತಂದು ದುಃಖ ಪಟ್ಟರು ಅಂತ. ಅದಕ್ಕೆ ಉತ್ತರ ನೀವು ಈಗಾಗಲೇ ಊಹಿಸಿರಬಹುದು. ಅದು ಏನೆಂದು ಕಾಮೆಂಟ್ ಬಾಕ್ಸಿನಲ್ಲಿ ಖಂಡಿತಾ ಹಾಕಿ. ನಿಮ್ಮ ಕಾಮೆಂಟ್ಸ್ ಓದುವುದು ನನಗೆ ತುಂಬಾ ಇಷ್ಟ. ಸರಿ ಈಗ ಟಿಪ್ ನೋಡೋಣ. ಇದು ನಾನು ಈರುಳ್ಳಿ ಕಟ್ ಮಾಡೋವಾ

ಸಂಕ್ರಾಂತಿಯ ಸವಿ (ಹನಿಗವಿತೆಗಳು)

(೧) ತಿಂದು ಸೆಸಮೀ ಸೀಡ್ ಮತ್ತು ಜ್ಯಾಗರಿ ಹೊಟ್ಟೆಯಲ್ಲಿಲ್ಲವೇ ಇಲ್ಲ ಸ್ವಲ್ಪವೂ ಜಾಗ ರೀ ಆದರೂ ಹೆಂಡತಿ ತಂದಾಗ ಪೊಂಗಲ್ ಬೇಡ ಎನ್ನದೆ ಹೇಗೋ ಕಷ್ಟಪಟ್ಟು ನುಂಗಲ್ ಮಾಡುವನು ಗಂಡ ಪಾಪ ಎಷ್ಟೊಂದು ತ್ಯಾಗ ರೀ (೨) ಬೀರುತ್ತಿದ್ದರು ಹಿಂದೆಲ್ಲ ನಾರಿಯರು ಎಳ್ಳುಬೆಲ್ಲ ಇಂಟರ್ನೆಟ್ ತಂತ್ರಜ್ಞಾನ ತಂದಿದೆ ಡೈವರ್ಸಿಟಿ ನಾರಿಯರಿಗೆ ನರರೂ ನೀಡುತ್ತ ಪೈಪೋಟಿ ಬೀರುತ್ತಿದ್ದಾರೆ ಸೆಸಮೀ ಸೀಡ್-ಜ್ಯಾಗರಿಗಳ ಮೇಳ (೩) ಎಳ್ಳಿನೊಲು ಸ್ನೇಹಮಯವಾಗಿರಲಿ ಈ ಬಾಳು ಬೆಲ್ಲದೊಲು ಸಿಹಿಯಾಗಿರಲಿ! ಎಂದೆಂದಿಗೂ । ನಿಲ್ಲುವುದು ಹೇಗೋ ಎಳ್ಳು-ಬೆಲ್ಲಗಳ ಸವಿಸ್ನೇಹ ಪಲ್ಲವಿಸಲಿ ಹಾಗೆ ಬಾಳ್, ಮಂಕುತಮ್ಮ ।।