ಪೋಸ್ಟ್‌ಗಳು

Sumitranandan Pant ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಗಂಟೆ

ಇಮೇಜ್
ಮೂಲ ಹಿಂದಿ ಕವಿತೆ - ಸುಮಿತ್ರಾನಂದನ್ ಪಂತ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ನಭದ ನೀಲ ನೀರವದ ಕೆಳಗೆ ಸುಂದರ ಗಂಟೆಯೊಂದು ತೂಗುತ್ತಿದೆ. ಘಳಿಗೆಘಳಿಗೆಗೂ ಬಾಜಿಸುತ್ತಾ ಮನದಾಳದಲ್ಲಿ ಏನನ್ನೋ ಕೂಗುತ್ತಿದೆ. ಮುದ್ದಾಗಿದೆ ಹಕ್ಕಿಯ ಮರಿಯಂತೆ ಗಂಟೆಯ ಕೋಮಲ ಸ್ವರಗಳ ರೆಕ್ಕೆ ಕಿವಿಗಳಿಂದ ಮನದೊಳಗಿಳಿದು ಕಟ್ಟುತ್ತದೆ ಸ್ವರಪಕ್ಷಿಯು ಗೂಡು! ತುಂಬುತ್ತದೆ ಮನದಂಗಳದೊಳಗೆ ಮಂಗಳಧ್ವನಿ ಹಿನ್ನೆಲೆಯಲಿ ಮೊಳಗೆ ಏಳು ಮೇಲೆ, ಮೂಡಿತು ಮುಂಬೆಳಗು! ಬಂತು ಬಂತು ಚೆಂಬೆಳಕಿನ ಹಡಗು! ಹೊಸದಿನವು ಬಂತು, ಹೊಸ ಮಾತನಾಡು! ನವಲ ಚಿಂತೆ, ಹೊಸ ಕೃತಿಯ ಮಾಡು! ಸ್ವಚ್ಛ ಮನದಿಂದ ಸ್ವಚ್ಛ ಕಾಯಕವ ಮಾಡು! ಬೆಳಕಾಯ್ತು ಕಣ್ತೆರೆದು ನೋಡು!

ಎಷ್ಟೊಂದು ನೀಡುವಳು ಭೂಮಿತಾಯಿ!

ಇಮೇಜ್
ಮೂಲ ಹಿಂದಿ ಕವಿತೆ - ಸುಮಿತ್ರಾನಂದನ್ ಪಂತ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಚಿಕ್ಕಂದಿನಲ್ಲಿ ನಾನು ಮಾಡಿದ ಸಾಹಸ ಹೀಗಿತ್ತು: ನೆಲದಲ್ಲಿ ಒಂದೆರಡು ನಾಣ್ಯಗಳ ಬಿತ್ತು ಪ್ರತಿದಿನವೂ ನೀರೆರೆದು ಮಾಡಿದ್ದೆ ಪ್ರಾರ್ಥನೆ ನಾಣ್ಯಗಳ ಫಸಲನ್ನು ಕಂಡಿತ್ತು ಕಲ್ಪನೆ! ಹೂವಿನಲಿ ಕಾಯಲ್ಲಿ ಹಣ್ಣಲ್ಲಿ ನಾಣ್ಯ! ಝಣಝಣತ್ಕಾರದ ಸದ್ದು ಅಸಾಮಾನ್ಯ! ಆದರೆ ಬಂಜರು ಭೂಮಿ ಏನೂ ಕೊಡಲಿಲ್ಲ! ಕೊಡ ನೀರು ಸುರಿದರೂ ಕುಡಿ ಚಿಗುರಲಿಲ್ಲ! ಮುರಿದುಬಿದ್ದಿತ್ತು ನನ್ನ ಶ್ರೀಮಂತಿಕೆಯ ಕನಸು! ಒಂದೆರಡು ದಿನ ಹತಾಶೆಯಲ್ಲಿ ಬೆಂದಿತ್ತು ಮನಸು! ಸರಿ ಇರಲಿಲ್ಲ ನಾನು ಬಿತ್ತ ಬೀಜಗಳು ಅಷ್ಟೇ! ಮೋಹವನ್ನು ಬಿತ್ತಿದ್ದೆ , ನೀರೆರೆದಿದ್ದೆ ದಾಹಕ್ಕೆ! ಇದಾಗಿ ಕಳೆದುಹೋಯಿತು ಅರ್ಧ ಶತಮಾನ ಕಳೆದುಹೋದವು ಸಿಹಿಕಹಿ ಋತುಮಾನ ಗ್ರೀಷ್ಮಗಳು ಕುದ್ದವು , ವರ್ಷಋತುಗಳು ತೂಗಿದವು , ಶರದೃತುಗಳು ಮುಗುಳ್ನಕ್ಕವು ಗಡಗಡ ನಡುಗಿದವು ಹೇಮಂತಗಳು , ವನಗಳಲ್ಲಿ ಅರಳಿದವು ವಸಂತಗಳು! ಮತ್ತೊಮ್ಮೆ ಗಾಢ ಲಾಲಸೆ ಹೊತ್ತು ಕಡುಗಪ್ಪು ಮೋಡಗಳು ಸುರಿಸಿದಾಗ ಮುತ್ತು ಅಂಗಳದ ಒದ್ದೆ ಭೂಮಿಯಲ್ಲಿ ಹಾಗೇ ಸುಮ್ಮನೇ ಬೆರಳಾಡಿಸಿ ಒಂದಷ್ಟು ಹುರುಳಿಯ ಬೀಜಗಳನ್ನು ಔಕಿದೆನು ಮೆಲ್ಲನೆ. ಮರೆತುಬಿಟ್ಟೆ ಅನಂತರ ಈ ಮಾತನ್ನು ಪೂರಾ ವಿಶೇಷವೇನಿದೆ ನೆನಪಿಟ್ಟುಕೊಳ್ಳಲೂ ಕೂಡಾ! ಆದರೆ ಮುಂದೊಂದು ದಿನ ಅಂಗಳದಲ್ಲಿ ನಾನು ಓಡಾಡುತ್ತಿರುವಾಗ ಕಂಡುದಾದರೂ ಏನು! ಹ...

ಭಾರತಮಾತೆ ಗ್ರಾಮವಾಸಿಣಿ!

ಮೂಲ ಹಿಂದಿ ಕವಿತೆ - ಸುಮಿತ್ರಾನಂದನ್ ಪಂತ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ಭಾರತಮಾತೆ ಗ್ರಾಮವಾಸಿಣಿ ಹೊಲಗಳಲ್ಲಿ ಬಹುದೂರದವರೆಗೂ  ಹರಡಿದೆ ಈಕೆಯ ಮಾಸಿದ ಸೆರಗು  ಕಣ್ಣೊಳು ಗಂಗಾಜಮುನೆಯ ನೀರು  ಮಣ್ಣಿನ ಪ್ರತಿಮೆ! ಏಕೋ ಉದಾಸಿನಿ! ಭಾರತಮಾತೆ, ಗ್ರಾಮವಾಸಿಣಿ! ದೀನ ನೋಟ, ಕೆಳಬಾಗಿದ ವದನ, ತುಟಿಗಳಲ್ಲಿ ಚಿರನೀರವ ರೋದನ,  ಯುಗಗಳ ಕತ್ತಲು, ಬಹುವಿಷಣ್ಣ ಮನ, ತನ್ನ ಮನೆಯೊಳಗೇ ಇವಳು ಪ್ರವಾಸಿನಿ! ಭಾರತಮಾತೆ, ಗ್ರಾಮವಾಸಿಣಿ! ಹಡೆದ ಮೂವತ್ತುಕೋಟಿ ಮಕ್ಕಳೂ  ಅರೆನಗ್ನರು, ಹಸಿದವರು, ಶೋಷಿತರು, ಮೂಢ-ಅಸಭ್ಯ-ಅಶಿಕ್ಷಿತ-ನಿರ್ಗತಿಕರು, ನತಮಸ್ತಕ ಮರ-ಬುಡ ನಿವಾಸಿಣಿ!  ಭಾರತಮಾತೆ, ಗ್ರಾಮವಾಸಿಣಿ! ದರೋಡೆಯಾಗಿದೆ ಚಿನ್ನದ ಗೂಡು, ವಿಶಾಲ ಮನೆ-ಮನ ಎರಡೂ ಬರಡು, ನಡುಗುವ ತುಟಿಗಳು, ನಿಶಬ್ದ ಹಾಡು, ರಾಹುಗ್ರಸ್ತ ಶರದಿಂದುಹಾಸಿಣಿ! ಭಾರತಮಾತೆ, ಗ್ರಾಮವಾಸಿಣಿ! ಚಿಂತೆಯಲ್ಲಿ ಗಂಟಾಗಿವೆ ಹುಬ್ಬು, ಮಂಜಾಗಿವೆ ಹನಿಗೂಡಿದ ಕಣ್ಣು, ಉಪಮಿಸಲೇ ಮುಖಚಂದ್ರಮನನ್ನು? ಜ್ಞಾನ-ಮೂಢ ಗೀತಾಪ್ರಕಾಶಿಣಿ! ಭಾರತಮಾತೆ, ಗ್ರಾಮವಾಸಿಣಿ! ತಪ-ಸಂಯಮ ಫಲ ನೀಡಿತು ಕೊನೆಗೂ  ಊಡಿಸಿ ಅಹಿಂಸೆ ಎಂಬ ಎದೆಹಾಲು  ಜನಮನಭಯ  ಭವತನುಭ್ರಮೆ  ಕಳೆದಳು  ಜಗಜನನೀ ಜೀವನ ವಿಕಾಸಿನಿ! ಭಾರತಮಾತೆ, ಗ್ರಾಮವಾಸಿಣಿ! ...

ಕವಿತೆ

ವಿಯೋಗಿಯೇ ಆಗಿರಬೇಕು  ಮೊದಲ ಕವಿ  ವ್ಯಾಕುಲತೆಯಲ್ಲೇ ಹುಟ್ಟಿರಬಹುದು ಗೀತೆ  ನಯನಗಳಿಂದ ಹೊರಟು ಮೌನವಾಗಿ  ಅರಿವಿಲ್ಲದೇ ಹರಿದ ಧಾರೆಯೇ ಕವಿತೆ  - ಸುಮಿತ್ರಾನಂದನ್ ಪಂತ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 

ಬಾಪೂ ಮತ್ತು ನಯಾ ದೌರ್

ಇಮೇಜ್
ಬಾಪೂ ಮತ್ತು ನಯಾ ದೌರ್  ಸಿ. ಪಿ. ರವಿಕುಮಾರ್  ಇ ತ್ತೀಚೆಗೆ ಕೈಮಗ್ಗದ ಕೆಲಸಗಾರರ ಪರವಾಗಿ ನಾಟಕಕಾರ ಪ್ರಸನ್ನ ಉಪವಾಸ ಸತ್ಯಾಗ್ರಹ ಹೂಡಿದ್ದಾರೆ. ಇದರ ಬಗ್ಗೆ ಓದುವಾಗ ನನಗೆ ಕನ್ನಡ ಕತೆಗಾರರಾದ ಬಾಗಲೋಡಿ ದೇವರಾಯ ಅವರ "ಮಗ್ಗದ ಸಾಹೇಬ" ಕತೆ ನೆನಪಾಗಿ ಅದನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ ನನ್ನ ಬ್ಲಾಗ್ ನಲ್ಲಿ ಪ್ರಕಟಿಸಿದೆ. ಮಹಾತ್ಮಾ ಗಾಂಧಿ ಬೃಹತ್ ಕೈಗಾರಿಕೀಕರಣದ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲದಿಂದ ಅವರ ಕೆಲವು ಲೇಖನಗಳನ್ನು ಓದಿದೆ; ಅವುಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸಿದೆ. ಈ ಹುಡುಕಾಟದಲ್ಲಿ ನನ್ನ ಕಣ್ಣಿಗೆ ಬಿದ್ದ ಕವಿತೆ "ಬಾಪೂ." ಹಿಂದಿಯ ಪ್ರಸಿದ್ಧ ಕವಿ ಸುಮಿತ್ರಾನಂದನ್ ಪಂತ್  ಈ ಕವಿತೆಯನ್ನು ಸ್ವಾತಂತ್ರ್ಯಪೂರ್ವದಲ್ಲಿ (೧೯೩೯) ರಚಿಸಿದರು. ಇಲ್ಲಿ "ಬಾಪೂ" ಎಂದು ಅವರು ಸಂಬೋಧಿಸುವುದು ಮಹಾತ್ಮಾಗಾಂಧಿಯವರನ್ನು; ಆದರೆ "ಬಾಪೂ" ಎಂದರೆ ತಂದೆ ಎಂಬ ಅರ್ಥ ಬರುವುದರಿಂದ ರಬೀಂದ್ರನಾಥ್ ಟ್ಯಾಗೋರ್  ಗೀತಾಂಜಲಿಯಲ್ಲಿ "ತಂದೆ" ಎಂದು ಸಂಬೋಧಿಸಿದ ಭಗವಂತನ ಸ್ವರೂಪವನ್ನು ಉದ್ದೇಶಿಸಿ ಮಾತಾಡುತ್ತಿದ್ದಾರೆ ಎಂದು ಕೂಡಾ ಅರ್ಥೈಸಬಹುದು.  ಈ ಕವಿತೆಯನ್ನು ಬರೆದಾಗ ಕೈಗಾರಿಕಾ ಕ್ರಾಂತಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಇಂಗ್ಲೆಂಡ್ ನಲ್ಲಿ ಮಿಲ್ ಗಳು ಸ್ಥಾಪಿತವಾಗಿದ್ದವು; ಈ ಮಿಲ್ ಬಟ್ಟೆಗಳಿಗೆ ಭಾರತವು ಒಂದು ಮಾರುಕಟ್ಟೆಯಾಯಿತು. ನಮ್ಮ ಖಾದಿ...