ದೊರೆ ನೆಬುಕಡ್ನೆಜ್ಜರ್ ಕಂಡನಂತೆ ಒಂದು ದುಃಸ್ವಪ್ನ
ಮೂಲ: ಜಾನ್ ಕೀಟ್ಸ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಕವಿತೆ ಓದುವ ಮುನ್ನ: ನೆಬೂಕಡ್ನೆಜ್ಜರ್ ಎಂಬ ರಾಜನ ಕಥೆ ಬೈಬಲ್ಲಿನಲ್ಲಿದೆ. ಇವನು ಬ್ಯಾಬಿಲಾನ್ ದೇಶದ ದೊರೆ. ತನ್ನ ಬಗ್ಗೆ ಅವನಿಗೆ ಗರ್ವ ಉಂಟಾದಾಗ ದೇವರು ಅವನಿಗೆ ಪಾಠ ಕಲಿಸಲೆಂದು ಒಂದು ಕನಸು ಕಾಣುವಂತೆ ಮಾಡುತ್ತಾನೆ. ಈ ಕನಸಿನಲ್ಲಿ ಅವನ ಪ್ರತಿಮೆಯೊಂದು ಕಾಣುತ್ತದೆ. ಅದರ ತಲೆ ಬಂಗಾರದ್ದು. ತಲೆಯಿಂದ ಪಾದಗಳ ಕಡೆಗೆ ಇಳಿಯುತ್ತಾ ಬೆಳ್ಳಿ, ಕಂಚು ಇತ್ಯಾದಿ ಕಡಿಮೆ ಮೌಲ್ಯದ ಲೋಹಗಳು. ಈ ಕನಸಿನ ಅರ್ಥವೇನೆಂದು ಅವನಿಗೆ ಹೊಳೆದರೂ ಅವನು ತನ್ನ ಆಸ್ಥಾನದ ಮುತ್ಸದ್ದಿಗಳನ್ನು ಕೇಳುತ್ತಾನೆ. ಮುಂದೆ ಬರುವ ರಾಜರು ಇವನಿಗಿಂತಲೂ ಕಡಿಮೆ ಮಹತ್ವದ ರಾಜರು ಎಂಬುದು ಕನಸಿನ ಗೂಢ. ಯಾರೂ ಕನಸಿನ ಅರ್ಥ ಹೇಳಲಾರದಾದಾಗ ಕೋಪಗೊಂಡ ರಾಜ ಅವರನ್ನು ಕೊಲ್ಲಿಸುತ್ತಾನೆ. ಡೇನಿಯಲ್ ಎಂಬುವನು ಮಾತ್ರ ಅದರ ಅರ್ಥ ಹೇಳುತ್ತಾನೆ. ರಾಜನ ಗರ್ವಭಂಗ ಮಾಡಲು ದೇವರು ಅವನಿಗೆ ಹುಚ್ಚು ಹಿಡಿಯುವ ಹಾಗೆ ಮಾಡುತ್ತಾನೆ. ರಾಜನು ಇಲಿಬಾವಲಿಗಳೊಂದಿಗೆ ಬಾಳುತ್ತಾ ಹುಲ್ಲು ತಿನ್ನುತ್ತಾ ಬದುಕುತ್ತಾನೆ. ಕೆಲವು ವರ್ಷಗಳ ನಂತರ ಅವನ ಮನೋವ್ಯಾಧಿ ಗುಣವಾಗಿ ಅವನು ದೇವರಿಗೆ ತಲೆಬಾಗುತ್ತಾನೆ. ಪ್ರಸ್ತುತ ಸಾನೆಟ್ಟಿನಲ್ಲಿ ಕೀಟ್ಸ್ ಅಂದಿನ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಕುರಿತು ಕೂಡಾ ವಿಶ್ಲೇಷಿಸುತ್ತಿರಬಹುದು. ಕವಿತೆ: ಇಲಿಬಾವಲಿಗಳೊಂದಿಗೆ ವಾಸ ಮಾಡಲು ಹೊರಡುವ ಮುನ್ನ ದೊರೆ ನ...