ಪೋಸ್ಟ್‌ಗಳು

Translation of a Short Story ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಪಂಥ (ಷೆಕಾಫ್ ಅವರ ಸಣ್ಣಕತೆ,)

ಇಮೇಜ್
ಪಂಥ ಮೂಲ ಕಥೆ - ಆಂಟನ್ ಷೆಕಾಫ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ಶರತ್ಕಾಲದ ಕಡುಗಪ್ಪು ರಾತ್ರಿ. ವೃದ್ಧ ಬ್ಯಾಂಕರ್ ತನ್ನ ಬೈಠಕ್ಕಿನಲ್ಲಿ ಶತಪಥ ತಿರುಗುತ್ತಿದ್ದ. ಹದಿನೈದು ವರ್ಷಗಳ ಹಿಂದಕ್ಕೆ ಅವನ ನೆನಪು ಓಡಿತು. ಇಂಥದ್ದೇ ಶರತ್ಕಾಲದ ರಾತ್ರಿಯಂದು ತಾನು ನೀಡಿದ ಔತಣಕೂಟದಲ್ಲಿ ಅದೆಷ್ಟು ಮಂದಿ ಬುದ್ಧಿವಂತರು ಸೇರಿ ಸುರಸ  ಸಂಭಾಷಣೆಗಳಲ್ಲಿ ತೊಡಗಿದ್ದರು! ಕೊನೆಗೆ ಮಾತು ಗಲ್ಲುಶಿಕ್ಷೆಯತ್ತ ಹೊರಳಿತು. ಅಲ್ಲಿ ನೆರೆದಿದ್ದ ಬಹಳ ಜನ ಬುದ್ಧಿಜೀವಿಗಳು ಮತ್ತು ಪತ್ರಕರ್ತರು ಮರಣದಂಡನೆಯನ್ನು ಬಲವಾಗಿ ಟೀಕಿಸಿದರು.   ಅದೊಂದು ಪ್ರಾಚೀನ ರೀತಿಯ ಶಿಕ್ಷೆ, ಅನೀತಿಯುತವಾದದ್ದು, ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುವ ನಾಡುಗಳಲ್ಲಿ ಅಸಮ್ಮತವಾದ ಪದ್ಧತಿ ಎಂದು ಅವರು ವಾದಿಸಿದರು.  ಮರಣದಂಡನೆಗೆ ಬದಲಾಗಿ  ಜೀವಾವಧಿ ಕಾರಾಗೃಹವಾಸ ಶಿಕ್ಷೆಯನ್ನು ಘೋಷಿಸುವುದೇ ಸರಿಯಾದದ್ದು ಎಂದು ಕೆಲವರು ಅಭಿಪ್ರಾಯ ಕೊಟ್ಟರು. "ನಾನು ಒಪ್ಪುವುದಿಲ್ಲ," ಎಂದು ಬ್ಯಾಂಕರ್ ಘೋಷಿಸಿದ. "ನನಗೆ ಎರಡರದ್ದೂ ಅನುಭವವಿಲ್ಲವಾದರೂ ಹೋಲಿಕೆಯಲ್ಲಿ ಮರಣದಂಡನೆಯೇ ಹೆಚ್ಚು ನೀತಿಯುಕ್ತವಾದದ್ದು, ಹೆಚ್ಚು ಮಾನವೀಯವಾದದ್ದು  ಎನ್ನಿಸುತ್ತದೆ. ಮರಣದಂಡನೆ ಮನುಷ್ಯನನ್ನು ಒಂದೇ ಏಟಿಗೆ ಕೊಲ್ಲುತ್ತದೆ. ಆದರೆ ಜೀವಾವಧಿ ಶಿಕ್ಷೆ ಅವನನ್ನು ನಿಧಾನವಾಗಿ ಕೊಲ್ಲುತ್ತದೆ. ನೀವೇ ಹೇಳಿ, ಒಂದೇ ಕ್ಷಣದಲ್ಲಿ ಗಲ್ಲಿಗೇರಿಸಿ ಪ್ರಾಣ ತೆಗೆದುಬಿಡುವವನು ಉತ...

“ಪತ್ರ” (ಸಣ್ಣಕತೆ)

ಇಮೇಜ್
“ಪತ್ರ” ಮೂಲ ಗುಜರಾತಿ ಕಥೆ - ಧೂಮಕೇತು ಕನ್ನಡಕ್ಕೆ – ಸಿ. ಪಿ. ರವಿಕುಮಾರ್ ಆಕಾಶ ಶುಭ್ರವಾಗಿತ್ತು ; ತಾರೆಗಳು ಬೆಳಗುತ್ತಿದ್ದವು. ಇರುಳು ಹಿಂದೆ ಜರುಗುತ್ತಾ ನಸುಕಿಗೆ ಸ್ಥಳ ಮಾಡಿಕೊಡುತ್ತಿತ್ತು.  ಸಾಯುವ ಮುನ್ನ ಒಬ್ಬ ಮನುಷ್ಯ ಹೇಗೆ ತನ್ನ ಸೌಖ್ಯದ ದಿನಗಳನ್ನು ನೆನೆಸಿಕೊಂಡು ಒಂದಷ್ಟು ಸಮಾಧಾನ ತಂದುಕೊಳ್ಳುತ್ತಾನೋ , ಹೇಗೆ ಮರಣೋನ್ಮುಖನಾದ ಮನುಷ್ಯನ ಮುಖದ ಮೇಲೆ ಕಂಡೂ ಕಾಣದಂತೆ ಮುಗುಳ್ನಗುವೊಂದು ಮೂಡಿ ಮಾಯವಾಗುತ್ತದೋ , ಇನ್ನೇನು ಬರಲಿರುವ ಸೂರ್ಯನ ರಶ್ಮಿಗಳ ಆಗಮನದಿಂದ ಮಾಯವಾಗಿಹೋಗುವ ಮುನ್ನ ತಾರೆಗಳು ಅದೇ ರೀತಿಯಲ್ಲಿ ಮುಗುಳ್ನಗು ಸೂಸುತ್ತಿದ್ದವು.  ಅದೊಂದು ಚಳಿಗಾಲದ ನಸುಕು. ಬೀಸುತ್ತಿದ್ದ ಕುಳಿರ್ಗಾಳಿ ನಡುಕ ಹುಟ್ಟಿಸುವಂತಿತ್ತು.  ಕೆಲವು ಮನೆಗಳಲ್ಲಿ ಬೆಳಗಿನ ಕೆಲಸಗಳು ಈಗಾಗಲೇ ಪ್ರಾರಂಭವಾಗಿದ್ದವು. ಹೆಂಗಸರು ಬೀಸುವ ಕಲ್ಲು ತಿರುಗಿಸುತ್ತಾ ಹಾಡಿಕೊಳ್ಳುವ ಸದ್ದು ಕೇಳುತ್ತಿತ್ತು. ವಯಸ್ಸಾದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಒಂಟಿಯಾಗಿ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ನಡೆದುಹೋಗುತ್ತಿದ್ದ.  ಚಳಿಗಾಳಿಯನ್ನು ಎದುರಿಸಲು ಹಳೆಯ ಬಟ್ಟೆಯನ್ನು ಮೈಗೆ ಸುತ್ತಿಕೊಂಡಿದ್ದ.  ಎಲ್ಲೆಲ್ಲೂ ಗಾಢವಾದ ಮೌನ ಮುಸುಕಿಕೊಂಡಿತ್ತು. ನಡುವೆ ಎಲ್ಲೋ ಒಂದು ನಾಯಿ ಬೊಗಳಿದ ಸದ್ದು , ಕೆಲಸಕ್ಕೆ ಹೊರಟ ಹೆಂಗಸರು ಮಾತಾಡಿಕೊಂಡ ಸದ್ದು , ಅಥವಾ ತಮ್ಮ ಗೂಡುಗಳಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಗಳ ಸದ್ದು ಒಮ್ಮೆ...