ಪೋಸ್ಟ್‌ಗಳು

Rain ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಬಿರುಸು ಮಳೆಯಲ್ಲಿ ಬಸ್

ಇಮೇಜ್
ಮೂಲ ಚೈನೀಸ್ ಕವಿತೆ - ಲಿ ಹೆಂಗ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಬರಿದಾದ ನಿಲ್ದಾಣದಲ್ಲಿ  ಶುರುವಾದ ಮಳೆಯಿಂದ ಪಾರಾಗಲು  ನಾನು ಓಡಿಹೋಗಿ ಹತ್ತಿಕೊಳ್ಳುತ್ತೇನೆ  ಯಾವುದೋ ಬಸ್  ಅದು ಎಲ್ಲಿಗೆ ಹೊರಟಿದೆಯೋ ನನಗೆ ಗೊತ್ತಿಲ್ಲ.  ವೇಗ ವರ್ಧಿಸಿಕೊಂಡು  ಸೇತುವೆಯ ತಿರುವಿನಲ್ಲಿ ತಿರುಗುತ್ತದೆ ತನಗೂ ಮಳೆಗೂ ಸಂಬಂಧವಿಲ್ಲ  ಎಂದು ಸಾಬೀತು ಪಡಿಸುವ ಧಾವಂತದಲ್ಲಿ. ಆದರೆ  ಜೋರುಮಳೆಯ ನೆರಳು  ಕುರುಡನ ರೂಪದಲ್ಲಿ  ನುಡಿಸುತ್ತಿದೆ ನೀರಿನಲ್ಲಿ ಚಲಿಸುವ ಬಸ್ ಪಿಯಾನೋ. ಪ್ರಯಾಣಿಕರು ಅದರ ವಿವಿಧಾಕಾರದ  ಕಪ್ಪು-ಬಿಳಿ ಮನೆಗಳು. ಯದ್ವಾ ತದ್ವಾ ಕುಟ್ಟುತ್ತಿದೆ ಅವರನ್ನು ಪಟಪಟ.  ಬಸ್ ನಿಂತಾಗ ಅವುಗಳ (ಅಂದರೆ ನಮ್ಮ) ಶ್ರುತಿ ಮತ್ತು ತಾಳ ಕೆಟ್ಟುಹೋಗಿರುತ್ತದೆ ಖಂಡಿತ.  ಟಿಪ್ಪಣಿ - ಯಾರಿಗಾದರೂ ಇಂಥ ಅನುಭವ ಆಗಿರಬಹುದು. ಸೂರಿಲ್ಲದ ಬಸ್ ನಿಲ್ದಾಣದಲ್ಲಿ ಮಳೆ ಪ್ರಾರಂಭವಾಗಿದೆ. ಮಳೆಯಿಂದ ಪಾರಾಗಲು ಹತ್ತಿರದಲ್ಲಿ ಕಂಡ ಬಸ್ ಒಂದನ್ನು ಕವಿ ಏರಿ ಕುಳಿತಿದ್ದಾನೆ.  ಅದು ಮಳೆಯಿಂದ ಅಪ್ರತಿಭವಾಗದೆ ಮುಂದೆ ಚಲಿಸುತ್ತಿದೆ, ನಿಜ. ಆದರೆ ಒಳಗೆ ಕುಳಿತವರ ಮೇಲೆ ಮಳೆಯ ಪ್ರಭಾವ ಖಂಡಿತಾ ಆಗುತ್ತಿದೆ. ಕೊನೆಗೂ ಬಸ್ ನಿಂತಾಗ ಇವರು ಶ್ರುತಿ ಕೆಟ್ಟ ಪಿಯಾನೋ ಮಣೆಗಳ  (ಮನೆಗಳ) ಹಾಗೆ ಹೊರಬರುವುದು ಖಚಿತ. ಎಷ್...

ನೀರಿನ ಬಣ್ಣ

ಇಮೇಜ್
ಮೂಲ ಹಿಂದಿ ಕವಿತೆ: ಮೋಹನ್ ರಾಣಾ  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ದಿನ ಬೆಳಗಾದರೆ ಸುರಿಯುವ ಮಳೆ   ತೊಳೆಯಲು ಬಂದಂತಿದೆ ನಮ್ಮೆಲ್ಲ ಶಾಶ್ವತ ಕಲೆ  ಆದರೆ ಅದಕ್ಕೆ ಸಾಧ್ಯವಾದದ್ದು   ಈ ಹಳೇ  ಶರ್ಟಿನ ಬಣ್ಣವನ್ನು ಮಾಸಲು ಮಾಡಿದ್ದು ಮತ್ತು ಗೋಡೆಗಳಿಂದ  ಕಳೆದ ಋತುಮಾನಗಳ ನೆನಪುಗಳನ್ನು  ತೊಳೆದು ಹಾಕಿದ್ದು, ಅಷ್ಟೇ.  ಇದು ಬೇಸಗೆಯಲ್ಲ,  ಶರತ್ಕಾಲವಲ್ಲ, ಚಳಿಗಾಲವೂ ಅಲ್ಲ:  ನಾನೇ ಕೆಲವೊಮ್ಮೆ ಗುರುತಿಸಿದರೂ  ಮರೆತುಬಿಡುತ್ತೇನೆ ಬೇಗ.  ಇಷ್ಟೊಂದು ಮಳೆಯ ನಂತರ  ನನ್ನ ಶರ್ಟಿನ ಎಲ್ಲಾ ಬಣ್ಣಗಳೂ ಹೋಗಿ  ಕೊನೆಗೆ ಉಳಿಯುತ್ತದೇನೋ  ನೀರಿನ ಬಣ್ಣ.  ಕವಿತೆಯ ಸ್ವಾರಸ್ಯ:   ಮಳೆ ಬಂದಾಗ ಶರ್ಟಿನ ಬಣ್ಣ ಮಾಸುವುದು ಸಹಜ.  ಮೊದಲು ಈ ಕವಿತೆಯನ್ನು ಅದರ ಸಾಧಾರಣ ಅರ್ಥದಲ್ಲಿ ಓದಿ. ನಂತರ ಮಳೆ ಮತ್ತು ಬಣ್ಣ ಇವುಗಳಿಗೆ ಯಾವುದಾದರೂ ವಿಶೇಷ ಅರ್ಥವಿದೆಯೇ ಎಂದು ಯೋಚಿಸಿ. ಪ್ರತಿನಿತ್ಯ ನಾವು ಅನೇಕ ಬಗೆಯ "ಮಳೆ"ಗಳನ್ನು ಎದುರಿಸುತ್ತೇವೆ - ಉದಾಹರಣೆಗೆ ನಮ್ಮ ಮೇಲೆ ಸುರಿಯುವ ಅಭಿಪ್ರಾಯಗಳ ಮಳೆ. ಇವು ನಮ್ಮಿಂದ ನಮ್ಮತನವನ್ನು ಸ್ವಲ್ಪಸ್ವಲ್ಪವೇ ಅಳಿಸುತ್ತಿವೆ ಎಂದು ನಿಮಗೂ ಅನ್ನಿಸಿರಬಹುದು. ಕವಿತೆಯನ್ನು ಈ ಬೆಳಕಿನಲ್ಲಿ ಹಿಡಿದು ನೋಡಿ. ಕವಿ ತಾನು ಋತುಮಾನಗಳನ್ನು ಮರೆತು ಬಿಡುತ್ತ...

ಮಳೆ ಬರುವ ಮುನ್ನವೇ

ಇಮೇಜ್
ಕವಿತೆ ಓದುವ ಮುನ್ನ ... "ಮಳೆ ಬರುವ ಕಾಲಕ್ಕs ಒಳಗ್ಯಾಕs ಕುಳಿತೇವೋ, ಬಾ ಗೆಣೆಯ ಜಳಕಾs ಮಾಡೋಣs! ನಾವೂನೂ ಮೋಡಗಳ ಆಟ ಆಡೋಣs" ಎಂದರು ನಮ್ಮ ಬೇಂದ್ರೆ.  ಮಳೆಗೆ ಮಲೆನಾಡಿನವರು, ಕರಾವಳಿ ಪ್ರದೇಶದಲ್ಲಿರುವವರು  ಹೆದರುವುದಿಲ್ಲ. ಆದರೆ ನಗರದ ಜನರಿಗೆ ಮಳೆಯೆಂದರೆ ಗಾಬರಿ! ದೇವಲೋಕದ ಜೊತೆಗೆ ಭೂಮಿಯನ್ನು ಒಂದಷ್ಟು ಕಾಲ ಕನೆಕ್ಟ್ ಮಾಡುವ ಮಳೆಗೆ ನಾವು ಯಾಕೆ ಹೆದರುತ್ತೇವೆ? ಈ ಪ್ರಶ್ನೆಯನ್ನು ಗುಲ್ಜಾರ್ ಈ ಕವಿತೆಯಲ್ಲಿ ಕೇಳುತ್ತಾರೆ .... ಮೂಲ ಹಿಂದಿ ಕವಿತೆ: ಗುಲ್ಜಾರ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಮಳೆ ಬರುವ ಮುನ್ನವೇ ನಡೆಯುತ್ತಿದೆ ಮಳೆಯಿಂದ ಪಾರಾಗುವ ತಯಾರಿ ಗೋಡೆಗಳ ಬಿರುಕುಗಳನ್ನು ಮುಚ್ಚಿ ಛಾವಣಿಯ ಮೇಲೆ ಸುಣ್ಣ ಸಾರಿಸಿ ಸಾಲದ್ದಕ್ಕೆ ನಡೆಯುತ್ತಿದೆ ಕೊಡೆಯ ರಿಪೇರಿ ಹೊರಗಡೆ ತೆರೆಯುವ ಕಿಟಕಿಯ ಮೇಲೆ ಚಜ್ಜ ಹಾಕಿಸಿದ್ದಾಯ್ತು ಮರಳು ಮತ್ತಿನ್ನೇನೋ ಕುಟ್ಟಿ ಗಟ್ಟಿ ಮಾಡುತ್ತಿದ್ದಾರೆ ಮೇನ್ ರೋಡಿನಿಂದ ಮನೆವರೆಗೆ ಬರುವ ಕಿರುದಾರಿ ಇಲ್ಲದಿದ್ದರೆ ನೋಡಿ ಹಳ್ಳಗಳಲ್ಲಿ ತುಂಬಿಕೊಂಡು ನೀರು ಉಟ್ಟ ಬಟ್ಟೆ ಬೂಟುಗಳಿಗೆಲ್ಲ ಕೆಂಪು ಕಸರಿನ ರಾಡಿ ಸದ್ಯ ಎಲ್ಲಾದರೂ ತೊಡರೀತು ಸಪ್ತ ವರ್ಣ! ನೆಂದರೇನು ಗತಿ  ಮೋಡದಲ್ಲಿ! ಪಾರಾಗುತ್ತ ಶ್ರಾವಣದಿಂದ ಅಂತೂ ಇಂತೂ ಬದುಕೋಣ ಹೇಗಾದರೂ ಮಾಡಿ ಮಳೆ ಬರುವ ಮುನ್ನವೇ ನಡೆಯುತ್ತಿದೆ ಮಳೆಯಿಂದ ಪಾರಾಗುವ ತಯಾ...