ಪೋಸ್ಟ್‌ಗಳು

Love Poem ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನನ್ನ ಬದುಕಿದೆಯಲ್ಲ

ಇಮೇಜ್
ನನ್ನ ಬದುಕಿದೆಯಲ್ಲ ಮೂಲ.: ಲಿಯೋ ಮಾರ್ಕ್ಸ್ ಅನುವಾದ: ಸಿ ಪಿ ರವಿಕುಮಾರ್ ನನ್ನ ಈ ಬದುಕಿದೆಯಲ್ಲ ಅದೊಂದೇ ನನ್ನದೆಂಬುದು, ಮತ್ತು ಆ ಬದುಕು ನಿನ್ನದು. ಈ ಬದುಕಿನ ಬಗ್ಗೆ ನನಗಿರುವ ಆಸೆ ನಿನ್ನದು, ನಿನ್ನದು ನಿನ್ನದು! ನಾನು ನಿದ್ರಿಸಬಹುದು ನಾನು ವಿರಮಿಸಬಹುದು ಸಾವು ಕೂಡಾ ಒಂದು ಮಧ್ಯಂತರ ವಿರಾಮ. ಏಕೆಂದರೆ ಹಸಿರು ಉದ್ದ ಹುಲ್ಲಿನೊಳಗೆ  ಬೆರೆತ ನನ್ನ ಮನಃಶಾಂತಿ ನಿನ್ನದು, ನಿನ್ನದು, ನಿನ್ನದು!

ನನಗೆ ನೀನು ಬೇಕು

ಇಮೇಜ್
 ಮೂಲ: ರಯಾನ್ ಮೆಕೆನ್ಜಿ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನನಗೆ ನೀನು ಬೇಕು. ಆದರೆ ಆಟಿಕೆ ಬೇಕೆನ್ನಿಸಿದಂತಲ್ಲ ಮಗುವಿಗೆ, ಮೂಳೆ ಬೇಕೆನ್ನಿಸಿದಂತಲ್ಲ ನಾಯಿಗೆ, ಫೋನ್ ಬೇಕೆನ್ನಿಸಿದಂತಲ್ಲ ಜನರಿಗೆ. ನನಗೆ ನೀನು ಬೇಕಾಗಿರುವುದು ಸಮುದ್ರಕ್ಕೆ ಉಪ್ಪು ಬೇಕಾದಂತೆ, ಹೂವಿಗೆ ಬೇಕಾದಂತೆ ನೀರು, ಹೃದಯಕ್ಕೆ ಬೇಕಾದಂತೆ ನೆತ್ತರು. ನನಗೆ ನೀನು ಬೇಕಾದದ್ದು ನನ್ನ ಉಳಿವಿಗೆ.

ನನ್ನನ್ನಗಲಿ ಹೋಗದಿರು

ಇಮೇಜ್
 ಮೂಲ: ಪಾಬ್ಲೋ ನೆರುಡಾ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ದೂರವೆಲ್ಲೂ ಹೋಗದಿರು ಒಂದೇ ದಿನವಾದರೂ ಏಕೆಂದರೆ ಹೇಗೆ ಹೇಳಲಿ ನಾನು ದಿನವೊಂದು ಸುದೀರ್ಘ ಕಾಲಮಾನ ನಾನು ಕಾಯುತ್ತಿರುವೆ ನಿನಗಾಗಿ, ಬೋಗಿಗಳು ಎಲ್ಲೋ ದೂರದಲ್ಲಿ ಮಲಗಿರುವ ಜನರಹಿತ ರೇಲ್ವೆ ನಿಲ್ದಾಣದಲ್ಲಿ  ಕಾದಂತೆ ದೂರವೆಲ್ಲೂ ಹೋಗದಿರು ಒಂದೇ ತಾಸಾದರೂ ಏಕೆಂದರೆ ಆತಂಕದ ಸಣ್ಣ.ಹನಿಗಳು ಒಗ್ಗೂಡಿ ಬಿಡುವುವು ಆಗ ಇರಲೊಂದು ಮನೆಗಾಗಿ ಅರಸುತ್ತಾ ಅಲೆಯುವ ಹೊಗೆ ಹೊಕ್ಕು ನನ್ನೊಳಗೆ, ಕಳೆದುಹೋದ ಹೃದಯ ಉಸಿರುಗಟ್ಟುವುದು ನಿನ್ನ ನೆರಳು ಎಂದೂ ಮರೆಯಾಗದಿ ರಲಿ ಕಡಲ ಕಿನಾರೆಯಲ್ಲಿ ಮೀಟದಿರಲಿ ನಿನ್ನ ಕಣ್ಣೆವೆ  ದೂರದ ಶೂನ್ಯದೊಳಗೆಂದೂ. ನನ್ನ ಪ್ರಿಯತಮೆಯೇ ಒಂದು ಕ್ಷಣವೂ ನನ್ನನ್ನು ಅಗಲದಿರು ಏಕೆಂದರೆ ಆ ಕ್ಷಣ ನೀನು ದಾಟಿಬಿಡುವೆ ಅದೆಷ್ಟು ದೂರ ಗೊತ್ತೇ, ನಾನು ನಿನ್ನನ್ನು ಅರಸುತ್ತಾ ಭೂಮಿಯ ಚಕ್ರವ್ಯೂಹದಲ್ಲಿ ಅಡ್ಡಾಡುತ್ತೇನೆ, ನೀನು ಮರಳಿ ಬರುವೆಯೋ ಇಲ್ಲ ನನ್ನನ್ನು ಸಾಯಲು ಬಿಟ್ಟು ಹೋದೆಯೋ ಎಂದು ಪ್ರಶ್ನಿಸಿಕೊಳ್ಳುತ್ತಾ.

ನಿನ್ನ ಕೈಗಳು ಇರಲಿ ನನ್ನ ಕಂಗಳ ಮೇಲೆ (ಪಾಬ್ಲೋ ನೆರುಡಾ)

ಇಮೇಜ್
 ಮೂಲ ಕವಿತೆ: ಪಾಬ್ಲೋ ನೆರುಡಾ ಅನುವಾದ: ಸಿ. ಪಿ. ರವಿಕುಮಾರ್ ನಿನ್ನ ಕೈಗಳು ಇರಲಿ ನನ್ನ ಕಂಗಳ ಮೇಲೆ ನನ್ನ ಮೃತ್ಯುವಿನ ಸಮಯದಲ್ಲಿ.   ನಿನ್ನ ಕೈಗಳ ಬೆಳಕು, ಗೋಧಿ ತೆನೆಯ ನವೋಲ್ಲಾಸ  ಇನ್ನೊಮ್ಮೆ ಹರಿದು ಬರಲಿ ನನ್ನತ್ತ.  ಮತ್ತೊಮ್ಮೆ ಅನುಭವಿಸುವೆನು ನನ್ನ ವಿಧಿಯನ್ನು ಬದಲಿಸಿದ ಅವುಗಳ ಮೃದುತ್ವ. ನಾನು ನಿದ್ರಿಸುವಾಗ ನಿನ್ನ ನಿರೀಕ್ಷೆಯಲ್ಲಿ  ನೀನು ಬದುಕಬೇಕೆಂದು ನನ್ನಾಸೆ.  ನಿನ್ನ ಕಿವಿಗಳಲ್ಲಿ ಮೊರೆಯುತ್ತಿರಲಿ ಸಮುದ್ರದ ಗಾಳಿ, ತೀಡುತ್ತಿರಲಿ ನಿನ್ನ ಬಳಿ ನಮಗಿಬ್ಬರಿಗೂ ಆಪ್ಯಾಯವಾಗಿದ್ದ ಕಡಲಿನ ಗಂಧ ನಾವಿಬ್ಬರೂ ನಡೆಯುತ್ತಿದ್ದ ಕಡಲತೀರದಲ್ಲಿ ಅಡ್ಡಾಡು ಎಂದಿನಂತೆ ಅನಂತಕಾಲವೂ ಜೀವಿಸಲಿ ನಾನು ಪ್ರೀತಿಸಿದ್ದೆಲ್ಲವೂ ಇನ್ನು ನೀನೋ ನನಗೆ ಪ್ರಿಯತಮ ನಿನ್ನನ್ನು ಪ್ರೀತಿಸಿದೆ ಎಲ್ಲಕ್ಕಿಂತಲೂ ಉತ್ಕಟವಾಗಿ ನಿನ್ನನ್ನು ಹಾಡಿದೆ ಅತ್ಯುಚ್ಚ ಕಂಠದಲ್ಲಿ ಹೀಗಾಗಿ ಸದಾ ಕುಸುಮಿಸುತ್ತಿರು ಓ ನನ್ನ ಕುಸುಮ! ನನ್ನ ಪ್ರೀತಿಯು ಆದೇಶಿಸಿದ್ದೆಲ್ಲವೂ ದೊರಕಲಿ ನಿನಗೆ ನನ್ನ ನೆರಳು ಹಾಯುತ್ತಿರಲಿ ನಿನ್ನ ಕುರುಳೊಳಗೆ ನನ್ನ ಹಾಡಿಗೆ ಕಾರಣ ತಿಳಿಯಲಿ ಅವರಿಗೆ ಹೀಗೆ.

ಮರೆಯದಿರು ನನ್ನನ್ನು (ಪಾಬ್ಲೋ ನೆರುಡಾ)

ಇಮೇಜ್
ಮರೆಯದಿರು ನನ್ನನ್ನು ಮೂಲ: ಪಾಬ್ಲೋ ನೆರುಡಾ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ನನ್ನದೊಂದು ಅರಿಕೆ ಇದೆ ನಿನ್ನೊಳಗೆ. ನಿನಗೆ ಗೊತ್ತೇ ಇದೆ: ನಾನು  ದಿಟ್ಟಿಸಿದಾಗ ಸ್ಫಟಿಕಚಂದ್ರನನ್ನು ಅಥವಾ ನನ್ನ ಕಿಟಕಿಯ ಸರಕುಗಳ ಹೊರಗೆ ತೆವಳುವ ಶಿಶಿರದ ಕೆಂಪು ಟೊಂಗೆಯನ್ನು, ಮುಟ್ಟಿದಾಗ ಬೆಂಕಿಯ ಬಳಿ ಉದುರಿ  ಬೆರಳಿಗೆ ಸಿಕ್ಕಿದರೂ ಸಿಕ್ಕದ ಬೂದಿಯನ್ನು  ಅಥವಾ ನೇವರಿಸಿದಾಗ ಸುಕ್ಕುಗಟ್ಟಿದ ಮರದ ಕಾಂಡ, ಇವೆಲ್ಲವೂ  ಕರೆದೊಯ್ಯುವುದು ನನ್ನನ್ನು ನಿನ್ನ ಬಳಿಗೇ. ಸೃಷ್ಟಿಯ ಎಲ್ಲ ವಾಸನೆಗಳು, ಬೆಳಕು, ಲೋಹಗಳು,  ಎಲ್ಲವೂ ಪುಟ್ಟ ದೋಣಿಗಳಾಗಿ ಚಲಿಸುತ್ತವೆ  ನನಗಾಗಿ ಕಾದಿರುವ ನಿನ್ನ ದ್ವೀಪಗಳ ಕಡೆಗೆ.  ಆದರೆ  ಬತ್ತಿಹೋದರೆ ನನ್ನ ಕುರಿತಾದ  ನಿನ್ನ ಪ್ರೀತಿಯ ಒರತೆ ನಿಧಾನವಾಗಿ ಬತ್ತಿ ಹೋಗುವುದು ನನ್ನ ಪ್ರೀತಿಯ ಸೆಲೆ. ಮರೆತೆಯಾದರೆ ನನ್ನನ್ನು ಅರಸದಿರು ನನ್ನನ್ನು  ಮರೆತರೆ ನನ್ನನ್ನು ಅರಸಲು ಹೋಗದಿರು ಏಕೆಂದರೆ  ನಾನು ಆಗಲೇ ಮರೆತುಬಿಟ್ಟಿರುತ್ತೇನೆ ನಿನ್ನನ್ನು.  ನೀನು ದೀರ್ಘವಾಗಿ ಯೋಚಿಸಿ ನೋಡು : ಬಾವುಟಗಳನ್ನು ಹಾದು ಬಂದು ನನ್ನ ಬಾಳಲ್ಲಿ ಬೀಸುವ ಗಾಳಿಯೇ ತ್ಯಜಿಸುವೆಯಾದರೆ ನನ್ನನ್ನು  ನನ್ನ ಬೇರುಗಳಿರುವ ಹೃದಯದ ತೀರದಲ್ಲಿ ನೆನಪಿರಲಿ, ಅಂದೇ ಅದೇ ಘಳಿಗೆ ನಾನು ಮೇಲೆತ್ತುವೆನು ನನ್ನ ತೋಳುಗಳನ್ನು ಮತ್ತು ನನ್ನ ಬೇರುಗಳು ವಲಸೆ ಹೊರಡುತ್ತವೆ  ಬೇರೊಂದು ನಾಡನ್ನು...

ಪ್ರೀತಿ (ಪಾಬ್ಲೊ ನೆರೂಡಾ)

ಇಮೇಜ್
 ಪ್ರೀತಿ ಪಾಬ್ಲೋ ನೆರೂಡಾ ಅನುವಾದ: ಸಿ. ಪಿ. ರವಿಕುಮಾರ್ ನೀನೊಂದು ಉಪ್ಪಿನ ಗುಲಾಬಿಯೋ, ನೀಲಮಣಿಯೋ  ಬೆಂಕಿ ಪ್ರವಹಿಸುವ ಕಾರ್ನೇಷನ್ ಹೂಗಳ ಬಾಣವೋ ಎಂಬಂತೆ ನಿನ್ನನ್ನು ಪ್ರೀತಿಸುವುದಿಲ್ಲ ನಾನು.  ಹೇಗೆಂದರೆ ನಿನ್ನ ಕುರಿತಾದ ನನ್ನ ಪ್ರೀತಿ ನೆರಳು ಮತ್ತು ಆತ್ಮಗಳಂತೆ ಅಮೂರ್ತವಾದದ್ದನ್ನು ನಾವು ಗುಪ್ತವಾಗಿ ಪ್ರೀತಿಸುವುದಿಲ್ಲವೇ ಹಾಗೆ. ತಾನೇ ಅರಳದಿದ್ದರೂ ಗಿಡವು ಹೊರುವುದಿಲ್ಲವೇ ತನ್ನಲ್ಲಿ ಬಚ್ಚಿಟ್ಟುಕೊಂಡ ಹೂವುಗಳ ಬೆಳಕನ್ನು ಹಾಗಿದೆ ನಿನ್ನನ್ನು ಕುರಿತಾದ ನನ್ನ ಪ್ರೀತಿ. ಮಣ್ಣಿನಿಂದ ಎದ್ದ ಗಾಢ ಸುಗಂಧ ನನ್ನೊಳಗೆ ಎಲ್ಲೋ ಮಂಕಾಗಿ ಮನೆಮಾಡಿರಲು ಕಾರಣವೇ ನಿನ್ನ ಪ್ರೀತಿ. ನಿನ್ನನ್ನು ಕುರಿತಾದ ನನ್ನ ಪ್ರೀತಿ ಅರಿಯದು  ಹೇಗೆ ಯಾವಾಗ ಎಲ್ಲಿಂದ ಎಂಬ ಪ್ರಶ್ನೆಗಳ ಉತ್ತರ. ಗರ್ವವಿಲ್ಲ ಅದರಲ್ಲಿ ,ತೊಡಕಿಲ್ಲ, ಏನಿದ್ದರೂ ನೇರ ಪ್ರೀತಿ ಮಾತ್ರ. ಹೀಗೇಕೆ ಪ್ರೀತಿಸುವೆ ನಾನೆಂದು ಕೇಳಿದರೆ ಅರಿಯೆ ನಾನು ಬೇರಾವ ರೀತಿ. ಪ್ರೇಮದ ಈ ರೂಪದಲ್ಲಿ ಮಾತ್ರವೇ ನಾನು ಮತ್ತು ನೀನೂ ಕೂಡಾ ಇರಬಲ್ಲೆವು ತೀರಾ ಸನಿಹಕ್ಕೆ ಬಾರದಂತೆ ಎಷ್ಟು ಸನಿಹವೆಂದರೆ ನಿನ್ನ ಕೈಯಿದೆ ನನ್ನೆದೆಯ ಮೇಲೆ ಮತ್ತು ನನ್ನ ಕನಸುಗಳನ್ನು ಹೊತ್ತು ಮುಚ್ಚುವುವು ನಿನ್ನ ಕಣ್ಣೆವೆ.

ನಿನಗೆ ನಾನೇನನ್ನು ಕೊಡಲಿ ಪ್ರತಿಯಾಗಿ?

ಇಮೇಜ್
ಸಾನೆಟ್ಸ್ ಫ್ರಂ ದ ಪೋರ್ಚುಗೀಸ್  ಸಾನೆಟ್ 8  ಮೂಲ : ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ: ಇದು ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್ ಅವರ  "ಸಾನೆಟ್ಸ್ ಫ್ರಂ ದ ಪೋರ್ಚುಗೀಸ್" ಸಂಗ್ರಹದ ಎಂಟನೇ ಸಾನೆಟ್.  ಇದಕ್ಕೆ ಹಿಂದಿನ ಸಾನೆಟ್ಟುಗಳ ಅನುವಾದವನ್ನು ಇದೇ ಬ್ಲಾಗಿನಲ್ಲಿ ಓದಬಹುದು.  ಪ್ರಸ್ತುತ ಕವಿತೆಯಲ್ಲಿ ಕವಯಿತ್ರಿ ತನಗೆ ಸಿಕ್ಕ ಪ್ರೇಮಕಾಣಿಕೆಯನ್ನು ಸ್ವೀಕರಿಸುತ್ತಾ ಅದಕ್ಕೆ ಪ್ರತಿಯಾಗಿ ತಾನೇನನ್ನು ಕೊಡಲೆಂದು ಚಿಂತಿಸುತ್ತಾಳೆ.  ನಿನಗೆ ನಾನೇನನ್ನು ಕೊಡಲಿ ನೀನಿತ್ತ ರಾಜೋಚಿತ  ಉಡುಗೊರೆಗಳ ಪ್ರತಿಯಾಗಿ? ತೆರೆದು ಹೃದಯದ ಕಪಾಟು  ಹಾಸಿರುವೆ ಹೊಳೆವ ಬಂಗಾರದ ತಾಟು, ಹರಡಿರುವೆ ಅದರೊಳಗೆ ನಿಷ್ಕಳಂಕ ರತ್ನಖಚಿತ  ಪ್ರೇಮಾಭರಣಗಳನ್ನು ನನ್ನಂತಹವಳಿಗಾಗಿ, ಬಿಗಿದು ಕೊರಳು   ಸ್ವೀಕರಿಸುವೆಯಾ ಎಂದು ಕೇಳುತ್ತಿರುವೆ! ಕಠಿಣ ಹೃದಯವೇ ನನ್ನದು? ಕೃತಘ್ನಳೇ ನಾನು? ಕೃಪಣ ಮನದವಳೇ ಪ್ರತಿಯಾಗಿ ಮರಳಿ ಏನನ್ನೂ ನೀಡದಿರಲು?   ಕೃಪಣತನವಲ್ಲ, ದಟ್ಟದಾರಿದ್ರ್ಯವೆನ್ನುವುದು ಮೇಲು, ಕೇಳು ಎಲ್ಲವನ್ನೂ ಬಲ್ಲ ದೈವವನ್ನು. ಆ ದೇವರಿಗೆ ಗೊತ್ತು, ನಿರಂತರ ಸುರಿಸಿ ಕಳೆದುಕೊಂಡಿರುವೆ ಹೃದಯದೆಲ್ಲ ಮುತ್ತು, ಮಾಸಿಹೋಗಿವೆ ಕಂಬನಿಯಲ್ಲಿ ಜೀವನದ ಬಣ್ಣಗಳು! ...

ಎಷ್ಟು ಮೋಹಕವಾಗಿದೆ ಹೊಸಪಲ್ಲವಿ!

ಇಮೇಜ್
ಮೂಲ ಸಾನೆಟ್ : ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ: ಇದು ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ ಸಂಗ್ರಹದ ಏಳನೇ ಸಾನೆಟ್.  ಇದಕ್ಕೆ ಹಿಂದಿನ ಸಾನೆಟ್ಟುಗಳ  ಅನುವಾದವನ್ನು ನೀವು ಇದೇ ಬ್ಲಾಗಿನಲ್ಲಿ ಓದಬಹುದು. ಪ್ರಸ್ತುತ ಕವಿತೆಯಲ್ಲಿ  ಕವಯಿತ್ರಿಯು  ತನ್ನಲ್ಲಿ ಅಂಕುರಿತವಾದ ಪ್ರೇಮವು ತನ್ನನ್ನು ಸಾವಿನ ಅಂಚಿನಿಂದ ಹೇಗೆ ಕಾಪಾಡಿತು ಎಂಬ ಕೃತಜ್ಞತಾ ಭಾವನೆಯನ್ನು ವ್ಯಕ್ತಗೊಳಿಸುತ್ತಿದ್ದಾಳೆ.  ಇಡಿಯ ವಿಶ್ವದ ರೂಪವೇ ಬದಲಾದಂತೆ ನನಗೆ ತೋರುತ್ತದೆ, ಕೇಳಿದಾಗಿನಿಂದಲೂ ನಿನ್ನಾತ್ಮದ  ಹೆಜ್ಜೆಸಪ್ಪಳ! ಹಗುರ, ಓ ಬಹು ಹಗುರ ನಡೆಯಲ್ಲಿ  ಬಂದು ನಿಂತಿಹುದು ಹತ್ತಿರ, ನನಗೂ ಮತ್ತು ಆ ಭಯಾನಕ ಅಂಚಿಗೂ ನಡುವೆ.  ನಿಸ್ಸಂದೇಹವೂ ಅದು ಸಾವಿನಂಚು, ಮುಳುಗುತ್ತಿದ್ದೆನೇನೋ ನಾನು, ಪ್ರೇಮದ ಸುಳಿಯಲ್ಲಿ ಸಿಲುಕದಿದ್ದರೆ, ನನ್ನ ಜೀವನಕ್ಕೆ  ಪ್ರಾಪ್ತವಾಗದಿದ್ದರೆ ಹೀಗೆ ಹೊಸ ನರ್ತನದ ಹೆಜ್ಜೆ! ಸ್ವೀಕರಿಸುವೆ ದೈವ ನನಗಿತ್ತ ಪ್ರಸಾದರೂಪದ ಜೇನು, ನಿನ್ನ ಸಾನ್ನಿಧ್ಯವು ಅದಕ್ಕೆ ನೀಡುತ್ತಿದೆ ಅಪೂರ್ವ ಸವಿ! ಸ್ವರ್ಗವೆಂಬುದು ನನ್ನ ಹೊಸ ವಿಳಾಸದ ಹೆಸರು, ನೀನಿರುವ ಸ್ಥಾನಕ್ಕೆ ಬೇರೇನೆಂದು ಕರೆಯಬಹುದು? ಕೊಳಲ ದನಿಯಲ್ಲಿ ಎಷ್ಟು ಮೋಹಕವಾಗಿದೆ ಹೊಸಪಲ್ಲವಿ! ಹಾಗೇಕೆಂದು ಹಾಡುವ ಗಂಧರ್ವರಿಗೂ ಗೊತ...

ದೂರವಾಗಿರು ನನ್ನಿಂದ ಎಂದು ನಿನ್ನಲ್ಲಿ ಪ್ರಾರ್ಥಿಸಿದರೂ

ಇಮೇಜ್
ಸಾನೆಟ್ಸ್ ಫ್ರಂ ದ ಪೋರ್ಚುಗೀಸ್  ಸಾನೆಟ್ - 6 ಮೂಲ ಇಂಗ್ಲಿಷ್ ಕವಿತೆ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ: ಇದು ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ ಸಂಗ್ರಹದಲ್ಲಿ ಆರನೇ ಸಾನೆಟ್. ಹಿಂದಿನ ಸಾನೆಟ್ಟುಗಳ ಅನುವಾದವನ್ನು ಇದೇ ಬ್ಲಾಗಿನಲ್ಲಿ ಓದಬಹುದು. ಪ್ರಸ್ತುತ ಕವಿತೆಯಲ್ಲಿ ಕವಯಿತ್ರಿ ತನ್ನಲ್ಲಿ ಉಂಟಾದ ಬದಲಾವಣೆಯನ್ನು ತೋಡಿಕೊಳ್ಳುತ್ತಾಳೆ. ಅವಳಲ್ಲಿ ರಾಬರ್ಟ್ ಬ್ರೌನಿಂಗ್ ಅನುರಕ್ತನಾದಾಗ ಅವಳಿಗೆ ಮೊದಲು ಭಯವುಂಟಾಗುತ್ತದೆ. ತನ್ನ ಖಿನ್ನ ಜಗತ್ತಿನಲ್ಲಿ ಅವನಿಗೂ ಹಾನಿಯಾದರೆ ಎಂಬ ಭೀತಿ ಅವಳನ್ನು ಕಾಡುತ್ತದೆ. "ನನ್ನಿಂದ ದೂರವಿರು" ಎಂದು ಅವನಿಗೆ ಹೇಳಿದರೂ ತಾನು ಅವನಿಂದ ದೂರವಿರಬಲ್ಲೆನೇ ಎಂಬ ಅನುಮಾನ ಅವಳನ್ನು ಈಗ ಕಾಡುತ್ತಿದೆ. ತನ್ನ ಸರ್ವಸ್ವವೂ ಈಗ ಅವನಿಂದಲೇ ಎಂಬ ಸಮರ್ಪಣ ಭಾವವನ್ನು ಈ ಕವಿತೆಯಲ್ಲಿ ನೋಡಬಹುದು.  ದೂರವಾಗಿರು ನನ್ನಿಂದ   ಎಂದು ನಿನ್ನಲ್ಲಿ ಪ್ರಾರ್ಥಿಸಿದರೂ  ಇರಬೇಕಾಗಬಹುದೇನೋ ಮುಂದೆ ನಿನ್ನ ನೆರಳಿನಲ್ಲೇ.  ನನ್ನ ಆತ್ಮಕ್ಕೀಗ ನನ್ನ ಬಳಿ ಕೆಲಸವಿಲ್ಲ ಯಾವುದೇ, ಸ್ವಂತ  ಬಾಳೆಂಬುದು ನನಗಿನ್ನು ಮುಚ್ಚಿದ ಬಾಗಿಲು.  ಶಾಂತಿ ಎಂಬುದು ಇನ್ನು ಸಿಕ್ಕಲಾರದು ನೀನಿಲ್ಲದೆ, ಎತ್ತಲಾರೆನೇನೋ ನನ್ನ ಇಚ್ಛೆಯಿಂದ ನನ್ನ ಕಿರುಬೆರಳು, ನಿನ್ನ ಕೈಬೆರಳಿನ ಸ್ಪರ್ಶಕ್ಕೆ ...

ಗುಡಿಸಿಲಿನಲ್ಲಿ ಒಪ್ಪುವುದೇ ನಿನ್ನಪೂರ್ವ ಗಾನಧನ?

ಇಮೇಜ್
ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ - 4  ಮೂಲ ಇಂಗ್ಲಿಷ್ ಕವಿತೆ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ:    ಇದು  ಸಾನೆಟ್ಸ್ ಫ್ರಂ ದ ಪೋರ್ಚುಗೀಸ್  ಎಂಬ ಸಂಗ್ರಹದ ನಾಲ್ಕನೇ ಸಾನೆಟ್.  ಹಿಂದಿನ ಸಾನೆಟ್ಟುಗಳ ಅನುವಾದ ಇದೇ ಬ್ಲಾಗಿನಲ್ಲಿ  ಓದಬಹುದು.  ತನ್ನ ಪ್ರೇಮವನ್ನು ಬಯಸಿ ಬಂದ ಪ್ರಿಯಕರನ ನಡೆ ಕವಯಿತ್ರಿಯನ್ನು ಚಕಿತಗೊಳಿಸುತ್ತದೆ. ರಾಬರ್ಟ್ ಬ್ರೌನಿಂಗ್ ವಿಕ್ಟೋರಿಯಾ ಮಹಾರಾಣಿಯ ಕಾಲದ ಒಬ್ಬ ಅಗ್ರಮಾನ್ಯ ಕವಿ ಮತ್ತು ನಾಟಕಕಾರ. ಅವನ ಸ್ಥಾನಮಾನವೇನು, ತನ್ನ ಸ್ಥಾನಮಾನವೇನು ಎಂಬ ಚಿಂತೆ ಕವಯಿತ್ರಿಯನ್ನು ಆವರಿಸಿದೆ.  ತನ್ನ ಮನಸ್ಸಿನಲ್ಲಿರುವ ಖಿನ್ನತೆಯನ್ನು ಕುರಿತು ಕೂಡಾ ಅವಳಿಗೆ ಅರಿವಿದೆ. ತನ್ನನ್ನು ಬಯಸಿಬಂದ ಪ್ರಿಯಕರನಿಗೆ ನಿಜಸ್ಥಿತಿಯ ಅರಿವು ಮಾಡಿಕೊಡುವುದು ಕವಯಿತ್ರಿಯ ಆಶಯ.  ಅರಮನೆಯ ಭವ್ಯ ಸಭಾಗೃಹಗಳು ನಿನಗೆ ಉಚಿತ ಸ್ಥಾನ! ಎಲ್ಲಿ ಹರಿಯುವುದೋ ನಿನ್ನ ಉತ್ಕೃಷ್ಟ ಕಾವ್ಯವಾಚನದ ಹೊಳೆ  ನರ್ತಿಸುವ ಜೋಡಿಗಳು  ನಿಲ್ಲಿಸಿ ತಮ್ಮ ನರ್ತನ ಅರ್ಧದಲ್ಲೇ ಆಸ್ವಾದಿಸುತ್ತವಲ್ಲ ನಿನ್ನ ತುಟಿಗಳಿಂದ ಹೊಮ್ಮುವ ದಿವ್ಯಗಾನ!  ನಾಚುತ್ತಿದೆ ನೀನೀಗ ತಟ್ಟುತ್ತಿರುವ ನನ್ನ ಮನೆಬಾಗಿಲಿನ ಚಿಲಕ   ನಿನ್ನ ಕೈಸ್ಪರ್ಶಕ್ಕೆ ಅನರ್ಹವೆಂದು ತಾನು! ಯೋಚಿಸು ಒಂದು ಕ್ಷಣ...

ಭಿನ್ನರು ನಾವಿಬ್ಬರೂ ಎಂಬುದರಲ್ಲಿ ಇನ್ನೂ ಸಂದೇಹವೇ

ಇಮೇಜ್
ಸಾನೆಟ್ಸ್ ಫ್ರಮ್ ದ ಪೋರ್ಚುಗೀಸ್ - 3  ಮೂಲ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ:   ಇದು  ಸಾನೆಟ್ಸ್ ಫ್ರಂ ದ ಪೋರ್ಚುಗೀಸ್  ಎಂಬ ಸಂಗ್ರಹದ ಮೂರನೇ  ಸಾನೆಟ್.  ಹಿಂದಿನ ಸಾನೆಟ್ಟುಗಳ ಅನುವಾದ ಇದೇ ಬ್ಲಾಗಿನಲ್ಲಿ  ಓದಬಹುದು.  ಪ್ರಿಯಕರನು ಪ್ರೇಮ ನಿವೇದನೆ ಮಾಡಿದಾಗ ಕವಿತೆಯ ನಾಯಕಿಗಯ ಮನದಲ್ಲಿ ತನ್ನ ಮತ್ತು ತನ್ನ ಪ್ರಿಯಕರನ ನಡುವೆ ತಾಳೆಯಾಗುವುದೇ ಎಂಬ ಆಲೋಚನೆ ಮೂಡುತ್ತದೆ. ತಮ್ಮ ಜೀವನ ಎಷ್ಟು ವಿಭಿನ್ನ  ಎಂದು ಅವಳು ಚಿಂತಿಸುತ್ತಾಳೆ. ತಮ್ಮ ನಕ್ಷತ್ರದೇವತೆಗಳು ಕೂಡಾ ವಿರುದ್ಧ ದಿಕ್ಕುಗಳಲ್ಲಿ ಹಾರಾಡುತ್ತಿದ್ದವು! ಒಂದರ ರೆಕ್ಕೆ ಇನ್ನೊಂದಕ್ಕೆ ಅಕಸ್ಮಾತ್ ಬಡಿದಾಗ ಅವುಗಳೂ ಆಶ್ಚರ್ಯಚಕಿತವಾಗಿವೆ! ಈ ಮಿಲನ ಸಾಧ್ಯ ಎಂಬುದು ದೇವತೆಗಳಿಗೂ ಊಹಿಸಲು ಸಾಧ್ಯವಾಗಿರಲಿಲ್ಲ! ತನ್ನ ಪ್ರಿಯಕರನೋ ಒಬ್ಬ ರಸಿಕ. ಅವನ ಒಡನಾಟ ಐಶ್ವರ್ಯವಂತರೊಂದಿಗೆ. ಅಲ್ಲಿಯ ಜಗಮಗ ಬೆಳಕಿನಲ್ಲಿ ಅವನನ್ನು ದಿಟ್ಟಿಸಿನೋಡುವ ಅದೆಷ್ಟು ತೇಜಃಪೂರ್ಣ ಕಣ್ಣುಗಳಿವೆ! ಇವರೆಲ್ಲರನ್ನೂ ಬಿಟ್ಟು ಅವನೇಕೆ ತನ್ನಲ್ಲಿ ಅನುರಕ್ತನಾಗಿದ್ದಾನೆ? ಸಾವಿನಲ್ಲಿ ಮಾತ್ರ ತಮ್ಮ ಮಿಲನ ಸಾಧ್ಯವೆಂಬ ಆಲೋಚನೆ ಅವಳನ್ನು ಅಧೀರಳನ್ನಾಗಿ ಮಾಡುತ್ತದೆ. ಭಿನ್ನರು ನಾವಿಬ್ಬರೂ ಎಂಬುದರಲ್ಲಿ ಇನ್ನೂ ಸಂದೇಹವೇ ನಿನ್ನ  ರಾಜಸೀ ಹೃದಯಕ್ಕೆ? ನಮ್ಮ ಧ್ಯೇಯೋ...

ನೀನೀಗ ನನಗೆ ಹೇಳಿದ ಮಾತು ಕೇಳಿಸಿಕೊಂಡವರು

ಇಮೇಜ್
ಸಾಣೆಟ್ಸ್ ಫ್ರಂ ದ ಪೋರ್ಚುಗೀಸ್ - 2 ಮೂಲ ಇಂಗ್ಲಿಷ್ ಕವಿತೆ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  Add caption ಕವಿತಾಸ್ವಾದನೆ:  ಇದು  ಸಾನೆಟ್ಸ್ ಫ್ರಂ ದ ಪೋರ್ಚುಗೀಸ್  ಎಂಬ ಸಂಗ್ರಹದ ಎರಡನೇ ಸಾನೆಟ್.  ಮೊದಲ ಸಾನೆಟ್ಟಿನ ಅನುವಾದವನ್ನು ಇದೇ ಬ್ಲಾಗಿನಲ್ಲಿ  ಓದಬಹುದು.  ಮೊದಲ ಸಾನೆಟ್ಟಿನಲ್ಲಿ ಕವಯಿತ್ರಿಗೆ ಅವಳ ಪ್ರೇಮಿಯು ತನ್ನ ಪ್ರೇಮವನ್ನು ನಿವೇದಿಸಿಕೊಂಡಿದ್ದಾನೆ. ಇದನ್ನು ಕೇಳಿದಾಗ ಕವಯಿತ್ರಿಯ ಮನಸ್ಸಿನಲ್ಲಿ  ಮೂಡುವ ಭಾವನೆಗಳು ಈ ಸಾನೆಟ್ಟಿನಲ್ಲಿ ಚಿತ್ರಿತವಾಗಿವೆ.  ಪ್ರಿಯಕರನ ಪ್ರೇಮನಿವೇದನೆಯಿಂದ ಅವಳಿಗೆ ಜೀವನದಲ್ಲಿ ಮತ್ತೊಮ್ಮೆ ಉತ್ಸಾಹ ಮೂಡಿದೆ. ಅವಳಿಗೆ ದೇವರೇ ಬಂದು (ಜೀವನ)ಪ್ರೇಮವನ್ನು ಬೋಧಿಸಿದಂತೆ ತೋರುತ್ತದೆ.  ದೈಹಿಕ ನೋವುಗಳನ್ನು ಕುರಿತು ಅವಳಿಗೆ ನೆನಪಾಗುತ್ತದೆ. ಅದು ಅವಳಿಗೆ ತಗುಲಿದ್ದ ಶಾಪವೆಂದು ಕವಯಿತ್ರಿಗೆ ಅನ್ನಿಸುತ್ತದೆ. ಇದೇ ಕಾರಣ ತನ್ನ ಪ್ರಿಯಕರನನ್ನು ನೋಡಲು ಕೂಡಾ ಆವಳಿಗೆ ಸಾಧ್ಯವಾಗಿರಲಿಲ್ಲ. ಈ ದೈಹಿಕ ಬಾಧೆಗಳ ಕಾರಣ ತನ್ನ ಪ್ರಾಣವೇ ಹೋಗಿದ್ದರೂ ಪ್ರಿಯಕರನನ್ನು ನೋಡದ ಬಾಧೆಗಿಂತ ಅದು ಹೆಚ್ಚಲ್ಲ ಎಂದು ಕವಯಿತ್ರಿಗೆ ಅನ್ನಿಸುತ್ತದೆ. ಇದುವರೆಗೆ ದೈವವೇ ತನಗೆ ಪ್ರೇಮವನ್ನು ನಿರಾಕರಿಸಿತ್ತೇ? ಈಗ ತನಗೆ ಅದು ಸಿಕ್ಕಿದ ಮೇಲೆ ಯಾವುದೇ ಶಕ್ತಿಯೂ ಪ್ರಿಯಕರನಿಂದ ತನ್ನನ್ನು ಬೇರ...

ಆಲ್ಬಂ

ಇಮೇಜ್
ಕಂಡಹಾರ್ ನಗರದಲ್ಲಿ ಹುಟ್ಟಿದ ಕವಿ ರೆಜಾ ಮೊಹಮ್ಮದಿ (1979-) ಇಂದಿನ ಪರ್ಷಿಯನ್ ಯುವಕವಿಗಳಲ್ಲಿ ಒಂದು ಪ್ರಮುಖ ಹೆಸರು. ಇರಾನ್ ಮತ್ತು ಲಂಡನ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಪಡೆದ ಮೊಹಮ್ಮದಿ ಪ್ರಸ್ತುತ ಕಾಬೂಲ್ ನಗರದಲ್ಲಿ ನೆಲೆಸಿದ್ದಾರೆ.  ಬಿಬಿಸಿ, ದ ಗಾರ್ಡಿಯನ್ ಮೊದಲಾದ ಮಾಧ್ಯಮಗಳಿಗೆ ಅವರು ಹವ್ಯಾಸಿ ವರದಿಗಾರರಾಗಿ ಬರೆಯುತ್ತಾರೆ.  ಈ ಕವಿತೆ ಮೊದಲ ನೋಟಕ್ಕೆ ಒಂದು ಪ್ರೇಮಕವಿತೆಯಂತೆ ತೋರುತ್ತದೆ. ಕವಿತೆಯನ್ನು ಹಾಗೂ ಅರ್ಥೈಸಿಕೊಳ್ಳಬಹುದು. ಆದರೆ ಇಲ್ಲಿ ಬರುವ ಸಖ ಮತ್ತು ಸಖಿ ಅಫ್ಘಾನಿಸ್ತಾನ್ ದೇಶವಾಸಿ ಮತ್ತು ಅಫ್ಘಾನಿಸ್ತಾನ್ ದೇಶ ಕೂಡಾ ಆಗಿರಬಹುದು. ಅಫ್ಘಾನಿಸ್ಥಾನವು ಮೊದಲು ರಷ್ಯಾ ಆನಂತರ ತನ್ನದೇ ದೇಶದ ಉಗ್ರರ ಕೈಯಲ್ಲಿ ಸಿಲುಕಿ ನಲುಗಿದ ದೇಶ.  ಇಂದು ಸ್ವತಂತ್ರ ದೇಶವೆಂಬ ಮೊಹರು ಹೊಂದಿದ್ದರೂ ಅಲ್ಲಿ ಉಗ್ರರ ಕೈವಾಡ ಇಂದಿಗೂ ಗಾಢವಾಗಿದೆ.   ಅನೇಕ ಲೇಖಕರು ಅಫ್ಘಾನಿಸ್ತಾನದ ದುರದೃಷ್ಟದ ಕಥೆಯನ್ನು ಕುರಿತು ಬರೆದಿದ್ದಾರೆ.  ಆಲ್ಬಂ ಮೂಲ:  ರೆಜಾ ಮೊಹಮ್ಮದಿ  (ಅಫ್ಘಾನಿಸ್ತಾನ್)  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಚಿತ್ರದಲ್ಲಿ ನಿನ್ನ ಕೈ ನಿನ್ನ ಕೇಶಗಳಲ್ಲಿ ಆಡುತ್ತಿದೆ  ನಿನ್ನ ಕೇಶಗಳು ನಿನ್ನ ಮುಖದ ಮೇಲೆ ಆಡುತ್ತಿವೆ  ಮಧು ತುಂಬಿದ ಎರಡು ಬಟ್ಟಲುಗಳು ನಿನ್ನ ಕಣ್ಣುಗಳು  ಮಧುಪಾನ ಮಾಡಲು ನನ್ನೆದೆ ಹಾತೊರೆಯುತ್ತದ...