ಪೋಸ್ಟ್‌ಗಳು

Makhanlal Chaturvedi ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹೂವಿನ ಬಯಕೆ

ಇಮೇಜ್
ಮೂಲ ಹಿಂದಿ ಪದ್ಯ : ಮಾಖನ್ ಲಾಲ್ ಚತುರ್ವೇದಿ   ಕನ್ನಡಕ್ಕೆ : ಸಿ . ಪಿ . ರವಿಕುಮಾರ್  ಮುಡಿಯುವ ಆಭರಣವಾಗಲೇ ದೇವಕನ್ಯೆಯ   ಜಡೆಯಲ್ಲಿ ? ಇಲ್ಲ ,   ಆ ಬಯಕೆ ನನಗಿಲ್ಲ .  ಮದುಮಗನು ನಲ್ಲೆಗರ್ಪಿಸುವ ಹಾರಕ್ಕೆ   ಪದಕವಾಗುವ ತವಕ ನನ್ನೊಳಗಿಲ್ಲ .  ಕೊಂಡೊಯ್ದು ಇರಿಸದಿರು ಗೋರಿಕಲ್ಲಿನ ಮೇಲೆ   ಹಿಂದೆ ಎಂದೋ ಆಳಿ ಅಳಿದ ರಾಜನಿಗೆ ! ಮಂದಿರದ ಮೂರ್ತಿಶಿಲೆ ಮೇಲಿಡದಿರು , ನನಗಿಲ್ಲ   ಒಂದೆರಡು ಕ್ಷಣದ ಧನ್ಯತೆಯ ಬಯಕೆ ! ಕೊಂಡೊಯ್ದು ನನ್ನನ್ನು ಓ ವನಮಾಲಿ ! ಎಸೆದುಬಿಡು   ಬಂಧು ಸೈನಿಕರು ಮುನ್ನುಗ್ಗುವ    ಹಾದಿಯಲ್ಲಿ   ಇಂದು ತಾಯ್ ಭೂಮಿ ರಕ್ಷಣೆಗೆ ಹೊರಟವರ   ಪದತಲದಲೆನ್ನ  ಬಾಳಿನ ಅರ್ಥ ಹೊಮ್ಮಿ ಬರಲಿ ! Translation by C.P. Ravikumar of a Hindi Poem by Makhanlal Chaturvedi [ಚಿತ್ರ: ಶ್ರೀನಿವಾಸನ್ ಮಾರ್ಗಸಹಾಯಂ]