ಪೋಸ್ಟ್‌ಗಳು

ಹಾಸ್ಯ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮಳೆನಾಡಮ್ಮನ ಮಡಿಲಿನಲಿ

ಇಮೇಜ್
ಎಲೆಲೆ ರಸ್ತೆ ಏನ್ ಅವ್ಯವಸ್ಥೆ ಅಂತ ಬರೆದ ರಾಜರತ್ನಂ ಬರಿಗಾಲಿನಲ್ಲಿ ಓಡಾಡುತ್ತಿದ್ದವರು. ಒಮ್ಮೆ ಗಾಜು ತುಳಿದು ಗಾಯವಾಗಿ ಅದು ಅತಿರೇಕಕ್ಕೆ ಹೋಗಿ ಇನ್ನೇನು ತಮ್ಮ ಕಾಲನ್ನೇ ಕಳೆದುಕೊಳ್ಳುವ ಸ್ಥಿತಿ ಬಂದು ಸ್ವಲ್ಪದರಲ್ಲೇ ಪಾರಾದರು. ಇವತ್ತಿನ  ಬೆಂಗ್ಳೂರಿನ ರಸ್ತೆಗಳ ಸ್ಥಿತಿ ನೋಡಿದ್ದರೆ ರತ್ನ ಅದೇನೇನು ಹೇಳುತ್ತಿದ್ದನೋ! ಸಿಲಿಕಾನ್ ಸಿಟಿ ತನ್ನ ಹೆಸರನ್ನು ಅನ್ವರ್ಥಗೊಳಿಸಲು ಹೊರಟಿದೆ. ಮೆಟ್ರೋ ಕಾಮಗಾರಿ ನಡೆಸುವ ಸಂಸ್ಥೆ ಮಾಡುತ್ತಿರುವ ತಾತ್ಕಾಲಿಕ ಬದಲಾವಣೆಗಳನ್ನು ನೋಡಿ ನಗಬೇಕೋ ಅಳಬೇಕೋ ಗೊತ್ತಾಗದಂತಾಗಿದೆ. ಕ್ಷಿಪ್ರಗತಿಯಲ್ಲಿ ನಡೆಯುವ ಈ ರಸ್ತಾ ರೋಕೋ ಚಳವಳಿಗಳಿಂದ ಗೂಗಲ್ ಕೂಡಾ ತನ್ನ ಮಾರ್ಗದರ್ಶನ ಸಾಮರ್ಥ್ಯವನ್ನು ಕಳೆದುಕೊಂಡು ಚಾಲಕರನ್ನು ಚಕ್ರವ್ಯೂಹಗಳಿಗೆ ತಳ್ಳುತ್ತಿದೆ.   ಇತ್ತ ಮಳೆಯ ಕಾರಣ ನಗರವು ಹೊಂಡಾಸಿಟಿಯಾಗಿದೆ. ಮೊನ್ನೆ ನನ್ನ ಕಣ್ಣಮುಂದೆಯೇ ಒಂದು ಸ್ಕೂಟರಿನಲ್ಲಿ ಕುಳಿತ ಇಬ್ಬರು ಯುವತಿಯರು ಒಂದು ಹೊಂಡದಲ್ಲಿ ಸಿಕ್ಕಿಹಾಕಿಕೊಂಡರು. ಅದೃಷ್ಟವಶಾತ್ ಏನೂ ದುರ್ಘಟನೆ ನಡೆಯಲಿಲ್ಲ.  ಗಂಡಸರು ಅನೇಕರು ಅವರ ರಕ್ಷಣೆಗೆ ಧಾವಿಸಿದರು. ಪಾಪ ನಿಜಕ್ಕೂ ಕಾಲುಜಾರಿ ಬಿದ್ದಿದ್ದ ಇನ್ನೊಬ್ಬ ವ್ಯಕ್ತಿಯನ್ನು ಯಾರೂ ಕ್ಯಾರೇ ಅನ್ನಲಿಲ್ಲ.  ಇನ್ನು ಜನರು ಎಲ್ಲೆಲ್ಲೂ ಹಾಕುವ ತಿಪ್ಪೆಯ ರಾಶಿ ಮಳೆಯಲ್ಲಿ ಎಲ್ಲಾ ಕಡೆಗೂ ಹರಿಯುತ್ತಿದೆ. ಒಂದು ಐ.ಟಿ. ಸಂಸ್ಥೆಯ ಆಫೀಸ್ ಎದುರಿಗೇ ಒಂದು ತಿಪ್ಪೆಯ ರಾಶಿಯನ್ನು ನೋಡಿ ಇ...

ಮೈಸೂರುಪಾಕ್ ನೆನಪುಗಳು

ಇಮೇಜ್
ಎಸ್. ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನನಗೆ ರಾಂಕ್ ಬರಬಹುದು ಎಂದು ನ್ಯಾಷನಲ್ ಹೈಸ್ಕೂಲಿನ  ಕೆಲವು ಅಧ್ಯಾಪಕರು ಅಪೇಕ್ಷೆ ಇಟ್ಟುಕೊಂಡಿದ್ದರು. ನಾನು ಪ್ರಥಮ ಭಾಷೆ ಕನ್ನಡ ತೆಗೆದುಕೊಂಡ ಕಾರಣ ಇದು ಸುಲಭವಲ್ಲ ಎಂದು ಅವರಿಗೆ ತಿಳಿದಿತ್ತು. ಆಗ ಕನ್ನಡದಲ್ಲಿ ಹೆಚ್ಚು ಮಾರ್ಕ್ಸ್ ಕೊಡುತ್ತಿರಲಿಲ್ಲ.  ಎರಡು ಪರೀಕ್ಷೆಗಳು ಇರುತ್ತಿದ್ದವು. ಮುಖ್ಯ ಪಠ್ಯಪುಸ್ತಕವನ್ನು ಆಧರಿಸಿ ಮೊದಲ ಪರೀಕ್ಷೆ. ನಾನ್ ಡೀಟೇಲ್ಡ್ ಪಠ್ಯವನ್ನು ಆಧರಿಸಿ ಎರಡನೇ ಪರೀಕ್ಷೆ. ಇವು ಬೆಳಗ್ಗೆ ಮತ್ತು ಮಧ್ಯಾಹ್ನ ನಡೆಯುತ್ತಿದ್ದವು. ಎರಡನೇ ಭಾಗದಲ್ಲಿ ಪ್ರಬಂಧ, ಪತ್ರಲೇಖನ, ನಾವು ಹಿಂದೆ ಓದಿರದ ಕವಿತೆಯ ವಿಶ್ಲೇಷಣೆ ಇವೆಲ್ಲ ಇರುತ್ತಿದ್ದವು.   ಕನ್ನಡದಲ್ಲಿ ನನಗೆ ನೂರಾ ಐವತ್ತಕ್ಕೆ ನೂರಾ ಇಪ್ಪತ್ತೈದು ಅಂಕಗಳು ಬಂದವು. ಹೀಗಾಗಿ ಕನ್ನಡದ ಕಾರಣ ರಾಂಕ್ ತಪ್ಪಿತು ಎಂದು ಹೇಳಲು ಸಾಧ್ಯವಿರಲಿಲ್ಲ. ಸೋಷಿಯಲ್ ಸ್ಟಡೀಸ್ ಪರೀಕ್ಷೆಯಲ್ಲಿ ಸ್ವಲ್ಪ ಕಡಿಮೆ ಬಂದು ನನಗೆ ನಲವತ್ತಮೂರನೇ ರಾಂಕ್ ಬಂತು.  ಪ್ರಥಮ ಪಿಯುಸಿ ಪರೀಕ್ಷೆಗಳು ಮುಗಿದ ನಂತರ ನಮ್ಮ ತಾಯಿಗೆ ಬಹಳ ದಿನಗಳಿಂದ ಕಾಡುತ್ತಿದ್ದ ಗೈನಕಾಲಜಿ ಸಂಬಂಧದ ಚಿಕಿತ್ಸೆಗಾಗಿ  ಅವರು  ಮಾರ್ಥಾಸ್ ಆಸ್ಪತ್ರೆ ಸೇರಿದರು. ಅವರನ್ನು ಸೇರಿಸಲು ನಾನು ಮತ್ತು ನನ್ನ ದೊಡ್ಡಮ್ಮ ಇಂದಿರಮ್ಮ ಹೋಗಿದ್ದೆವು.  ನಮ್ಮ ತಾಯಿಗೆ ಶಸ್ತ್ರಚಿಕಿತ್ಸೆ ನಡೆಯಬೇಕಿತ್ತು. ಅದಾದ ನಂತರ ಅವರಿಗೆ ಶುಶ್ರೂಷೆಯ ಅಗತ್ಯ ಇತ್...

ನಾಗಿರೆಡ್ಡಿ ಅವರನ್ನು ಮಾತಾಡಿಸಿದ್ದು

ಇಮೇಜ್
ನಾನು ಇನ್ನೂ ಆರನೇ ಅಥವಾ ಏಳನೇ ಕ್ಲಾಸಿನಲ್ಲಿದ್ದಾಗ ನಡೆದ ಘಟನೆ. ನಮ್ಮ ತಂದೆಗೆ ದೆಹಲಿಗೆ ವರ್ಗವಾಗಿದ್ದರಿಂದ ಐದು ವರ್ಷ ನಾವು ಅಲ್ಲಿ ವಾಸ ಮಾಡಬೇಕಾಯಿತು. ಮೊದಲು ಲೋಧಿ ಕಾಲನಿಯಲ್ಲಿ ಬಾಡಿಗೆ ಮನೆಯಲ್ಲಿದ್ದೆವು. ಒಂದೇ ಕೋಣೆಯಲ್ಲಿ ಒಂದು ವರ್ಷ ವಾಸ ಮಾಡಿದ ನಂತರ ಜೋರ್ ಬಾಗ್ ಎಂಬಲ್ಲಿ ನಮಗೆ ಬಾಡಿಗೆ ಮನೆ ಸಿಕ್ಕಿತು. ನಮ್ಮ ತಂದೆಯವರ ಆಫೀಸಿಗಾಗಿ ಬಾಡಿಗೆ ಪಡೆದ ಕಟ್ಟಡದಲ್ಲಿ ಮೇಲಿನ ಎರಡು ಕೋಣೆಯ ಪುಟ್ಟ ಮನೆಯನ್ನು ನಮಗೆ ಸಬ್-ಲೆಟ್ ಮಾಡಿಕೊಟ್ಟರು. ಹೀಗೆ ಒಂದು ಕೋಣೆಯ ಮನೆಯಿಂದ ಎರಡು ಕೋಣೆಯ ಮನೆಗೆ ಪ್ರಗತಿ ಸಾಧಿಸಿದೆವು. ಇಲ್ಲಿ ಎರಡು ಕೋಣೆ ಎಂದರೆ ನೀವು ಟೂ ಬಿ.ಎಚ್.ಕೆ. ಎಂದೆಲ್ಲ ಕಲ್ಪಿಸಿಕೊಳ್ಳಬೇಡಿ. ಅಲ್ಲಿದ್ದದ್ದು ಎರಡೇ ಕೋಣೆ. ಒಂದು ನಮಗೆ ಲಿವಿಂಗ್ ರೂಮ್, ಬೆಡ್ ರೂಮ್, ಸ್ಟಡಿ ಎಲ್ಲವೂ ಆಗಿತ್ತು. ಇನ್ನೊಂದು ಕಿಚನ್, ಡೈನಿಂಗ್ ಹಾಲ್ ಆಗಿತ್ತು. ಆದರೆ ಮನೆಯ ಸುತ್ತಲೂ ಇದ್ದ ಬಿಸಿಲುಮಚ್ಚು ದೇಶೋವಿಶಾಲವಾಗಿತ್ತು. ಬೇಸಗೆ ದಿನಗಳಲ್ಲಿ ಅಲ್ಲಿ ಚಾರ್ ಪಾಯಿ ಹಾಕಿಕೊಂಡು ನಾವು ಮಲಗಿಕೊಳ್ಳುತ್ತಿದ್ದೆವು.  ಚಳಿಗಾಲದಲ್ಲಿ ಮಾತ್ರ ಒಂದು ಕೋಣೆಯಲ್ಲಿ ರಜಾಯಿಯ ಕೆಳಗೆ ಸೇರಿಕೊಳ್ಳುತ್ತಿದ್ದೆವು. ಇದೆಲ್ಲ ಯಾಕೆ ಹೇಳಲು ಹೊರಟೆ ಎಂದರೆ ನಿಮಗೆ ಮುಂದೆ ಹೇಳಲು ಹೊರಟಿರುವ ಕಥೆಗೆ ಪೀಠಿಕೆ, ಅಷ್ಟೇ. ನಮ್ಮ ತಂದೆಯವರ ಆಫೀಸ್ ಅದೇ ಕಟ್ಟಡದ ಗ್ರೌಂಡ್ ಫ್ಲೋರಿನಲ್ಲಿತ್ತು. ಅಲ್ಲಿ ಒಂದು ಗೆಸ್ಟ್ ರೂಮ್ ಕೂಡಾ ಇತ್ತು. ಬೆಂಗಳೂರಿನಲ್ಲಿ ನಮ್ಮ ತಂದೆಯವರ ಆಫ...

ನಾನೇ ಮಾಡಿದ ಅಡುಗೆ

ಇಮೇಜ್
"ನೋಡಿ, ನಮ್ಮ ಫ್ರೆಂಡ್ ಒಬ್ಬರು ಹಾಕಿರೋ ಪಟ!" ಎಂದು ಮರಿಗೌಡ ಫೋನ್ ಮುಂದೆಮಾಡಿದರು. ಚಪಾತಿ, ಪಲ್ಯ. "ಇದೇನು ಈ ಸ್ತರಕ್ಕೆ ಇಳಿದು ಹೋಗಿದೆ ನಿಮ್ಮ ಸ್ನೇಹವಲಯ! ಬೇರೆ ಏನೂ ಹಂಚಲು ಇಲ್ಲ ಅಂತ ಹಂಚುತ್ತಾರೆ ಚಪಾತಿ ಪಲ್ಯ!" ಎಂದು ನಾನು ವಲಯ, ಪಲ್ಯ ಇವುಗಳನ್ನು ಪ್ರಾಸ ಮಾಡಲು ತ್ರಾಸ ಪಡುತ್ತಾ ಆಶುಕವಿತ್ವ ಮಾಡಿದೆ. ರಾಜಾರಾಂ ಸುಮ್ಮನಿರದೆ "ಅಯ್ಯೋ ದಿಸ್ ಈಸ್ ಬೆಟರ್ ದ್ಯಾನ್ ಜೀ ಎಂ ಅಂಡ್ ಜೀ ಎನ್, ಫ್ರೆಂಡ್ ಶಿಪ್ ರಿಯಲಿ ಬಿಗಿನ್ಸ್ ಟು ಸಿಂಕ್ ದೆನ್!" ಎಂದು ತಮ್ಮ ಇಂಗ್ಲಿಷ್ ಕವಿತ್ವ ಮೆರೆದರು. ಫ್ರೆಂಡ್ ಶಿಪ್ ಎಂಬಲ್ಲಿ ಶಿಪ್ ಮತ್ತು ಸಿಂಕ್ ಎಂಬುದರ ದ್ವಂದ್ವಾರ್ಥ ನನಗೆ ಇಷ್ಟವಾಗಿ ನಾನು ನಕ್ಕೆ. ಮರಿಗೌಡರು ನಗಲಿಲ್ಲ. "ನೋಡಿ, ಇದು ಸೀರಿಯಸ್ ಮ್ಯಾಟರ್. ಅವರು ಹಾಕಿರೋ ಬೇರೆ ಪಟಗಳು ನೋಡಿ" ಎಂದು ಸ್ಕ್ರಾಲ್ ಮಾಡಿದರು. ವೆಜಿಟಬಲ್ ಭಾತ್, ವಾಂಗಿ ಭಾತ್, ಅನ್ನ ಸಾರು, ಇತ್ಯಾದಿ.  "ಯಾಕ್ರೀ ಅವರ ಮನೆಯವರು ಬರ್ಗರ್, ಪಾಸ್ಟಾ, ಕೇಕ್, ಇದನ್ನೆಲ್ಲ ಮಾಡಲ್ವಾ! ಇದೇನು ಮಹಾ ಅನ್ನ ಸಾರು, ತುಂಬಾ ಬೋರು!" "ನೋಡಿ ನಿಮ್ಮಂಥವರು ಹೀಗೆ ಹೇಳೋದರಿಂದಲೇ ಕಣ್ರೀ ನಮ್ಮ ಸನಾತನ ಧರ್ಮಕ್ಕೂ ಈ ಗತಿ ಬಂದಿರೋದು" ಎಂದು ಮರಿಗೌಡ ಮುನಿಸು ತೋರಿಸಿದರು. "ನೋಡಿ ಮರಿಗೌಡ, ಸಿರಿಧಾನ್ಯ ಈಸ್ ಓಕೆ. ನವಣೆ ಉಪ್ಪಿಟ್ಟು, ರಾಗಿ ಮುದ್ದೆ, ಇವೆಲ್ಲ ಸ್ಪೆಷಲ್ ಕ್ಯಾಟಗರಿಯಲ್ಲೇ ಬರುತ್ವೆ. ನಮ್ಮ ಫ್...

ಲಾಕ್ ಡೌನ್ ಚುಟುಕಗಳು

ಲಾಕ್ ಡೌನ್ ಕಾಲದಲ್ಲಿ ಬರೆದ ಚುಟುಕಗಳು  ರಾಜು   ನನ್ನ ಫ್ರೆಂಡ್ ಎಂಎನ್ಎಚ್ ರಾಜು ಅಂತ ಓದಿಕೊಂಡಿಲ್ಲವಾದ್ರೂ ಸಹಜ ಬುದ್ಧಿವಂತ ಹುಟ್ಟಿದ್ದು ಮಾಗಡಿಯ ನಗುವಳ್ಳಿ ಅಂತ ಅವನ ತಂದೆಯ ಹೆಸರು ಹನುಮಂತ ಎಂದೂ ಬರೆದದ್ದು ಕಾಣೆ ಮಾ.ನ.ಹ. ರಾಜು ಅಂತ ಥ್ರೋ ಬ್ಯಾಕ್  ಮ್ಯಾನೇಜರ್ ನೀಡಿದ ಸಮಸ್ಯೆಗೆ ಪರಿಹಾರ ಇಂಜಿನಿಯರ್ ಕೊಡಬಾರದಾಗಿತ್ತು ಗುರುವಾರ ಸೂಕ್ತವಾಗಿದ್ದರೂ ವಾಪಸ್ ಬಂತು ರೀಬೌಂಡು ಯೋಚಿಸಲು ತಿಳಿದುಬಂತು ಯಾಕೆಂದು ಅಂದು ಮ್ಯಾನೇಜರ್‌ಗೆ ಥ್ರೋ ಬ್ಯಾಕ್ ಥರ್ಸ್ಡೇ ಆಚಾರ ಮೂರು   ರುಕ್ಮಿಣಿಗೆ ಎಷ್ಟಿತ್ತು ಗೊತ್ತೇ ಮುತುವರ್ಜಿ ಪತಿದೇವ ಕೃಷ್ಣನ ತೂಕ ಕುರಿತು ಕಾಳಜಿ ತಂದಾಗ ಸುದಾಮ ಖಾರದವಲಕ್ಕಿ ಕೃಷ್ಣ ತಿಂದದ್ದು ಎರಡೇ ಹಿಡಿ ಮುಕ್ಕಿ ಮೂರನೇ ಹಿಡಿಗೇ ಬಸ್ ಕರೋ ಸರ್ ಜೀ. ಲಾಕ್ ಡೌನ್ ಅಲೆಮಾರಿ   ಕೆಲವರು ಅಲೆಮಾರಿ ಜನಾಂಗ ಮನೆಯ ಹೊರಗೇ ಪಟ್ಟಾಂಗ ಈಗ "ಅಲ್ಲಿದೆ ನಮ್ಮ ಮನೆ ಇಲ್ಲಿಗೆ ಬಂದೆವು ಸುಮ್ಮನೆ" ಎಂದು ದಾಸರ ರಾಗ ಹಾಡುತ್ತಿರುವರೀಗ! ಕಳಪೆ ಕಿಟ್ಟು  ಯಾವಾಗ ಹೋದ ಭಾರತ ಬಿಟ್ಟು ನಮ್ಮ ಕಿಟ್ಟು ಚೈನಾಗೆ, ಮಾನಗೆಟ್ಟು! ಇಲ್ಲಿ ಕನಕಪುರದಲ್ಲಿದ್ದಾಗಲೂ ಮಾರುತ್ತಿದ್ದದ್ದು ಕಳಪೆ ಮಾಲು ಈಗಂತೂ ಹೆಡ್ಲೈನ್ ನ್ಯೂಸ್ "ಕಳಪೆ ಚೈನಾ ಕಿಟ್ಟು" ಡೌನ್ ಡೌನ್  ಅದು ಡೌನು ಇದು ಡೌನು ಲಾಕ್ ಡೌನು ಸೀಲ್ ಡೌನು ಬರಲಿದೆಯೋ ಏನೇನು ಚಿಂತಿಸೆನು ನಾನಿನ್ನು ಏನು ಫಲ, ಲೋಕವೇ ಆದಾಗ ಅಪ್ ಸೈಡ್ ...

ಲಾಕ್ ಡೌನ್ ಉದಯ

ಇಮೇಜ್
ಬೆಳ್ಳಂಬೆಳಗ್ಗೆ ಮಳೆ ಬಲು ಜೋರು ಏಳಲು ಯಾತಕ್ಕೋ ಬೇಜಾರು ಮಲಗುವೆನಮ್ಮಾ ಬೆಚ್ಚಗೆ ಹೊದ್ದು ಮಾಡಲಾದರೂ ಏನಿದೆ ಎದ್ದು ಲಾಕ್ ಡೌನ್ ಅಂತ ಮುಚ್ಚಿದೆ ಸ್ಕೂಲು ಈಗ ಯಾವ ಎಕ್ಸಾಮ್ ಇದೆ ಹೇಳು ದೇವರು ವರ ಕೊಟ್ಟರೂ ಪೂಜಾರಿ ಕೊಡದ ಹಾಗೆ ನೀನೇತಕೆ, ವೈರಿ, ಏಳೋ ಏಳೋ ಏಳೋ ಬೇಗ ರಿಕಾರ್ಡು ಹಚ್ಚುವೆ ಒಂದೇ ರಾಗ! ಏನು ಮಾಡಲಿದೆ ನಾ ಮೇಲೆದ್ದು ಹೊರಗಡೆ ಹೋದರೆ ಕೊಡುವರು ಗುದ್ದು ಬೋರಾಗಿದೆ ಮನೆಯೊಳಗೇ ಇದ್ದು ಕೋವಿಡ್ ಕರೋನಾ ಎರಡರದೇ ಸದ್ದು ಸರಿಯೇ ಕಣೋ ಹೇಳುವುದೂ ನೀನು ಬೆಚ್ಚಗೆ ಹೊದ್ದು ಮಲಗುವೆ ನಾನೂ ಅಪ್ಪನೇ ಮಾಡಲಿ ಇಂದಿನ ತಿಂಡಿ ಮಲಗಲು ಸೂಚಿಸುತಿದೆ ಈ ಥಂಡಿ ಅಯ್ಯೋ ಬೇಡಮ್ಮಾ ಇದೋ ಎದ್ದೆ ಅಪ್ಪನ ಉಪ್ಪಿಟ್ ಹಸಿಹಸಿ, ಮುದ್ದೆ ನೀನೇ ಮಾಡು ಪೂರಿಸಾಗು ರೆಡಿಯಾದಾಗ ನನ್ನನು ಕೂಗು ಅಷ್ಟರವರೆಗೂ ಮಲಗುವೆ ನಾನು ಸವಿಯುತ್ತಾ ನಿದ್ದೆಯ ಜಾಮೂನು - ಸಿ ಪಿ ರವಿಕುಮಾರ್, ಏಪ್ರಿಲ್ ೨೪, ೨೦೨೦

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ (ಹಾಸ್ಯಪ್ರಬಂಧ)

ಇಮೇಜ್
ಇನ್ನೂ ನನಗೆ ಒಮ್ಮೊಮ್ಮೆ ಪರೀಕ್ಷೆಯಲ್ಲಿ ಬರೆಯುತ್ತಿರುವ ಕನಸುಗಳು ಬರುತ್ತವೆ! ಕೊರೋನಾ ಭಯದಲ್ಲಿ ನಾವೆಲ್ಲರೂ ನಮ್ಮ ನಮ್ಮ ಬಿಲಗಳೊಳಗೆ ಸೇರಿಕೊಂಡಿರುವ ಈ  ಸಂದರ್ಭದಲ್ಲೂ ನನಗೆ ಇಂಥದೊಂದು ಕನಸಾಯಿತು. ಕನ್ನಡ ಪರೀಕ್ಷೆಯಲ್ಲಿ "ಈ ವಚನವನ್ನು ಕುರಿತು ಟಿಪ್ಪಣಿ ಬರೆಯಿರಿ" ಎಂಬ ಪ್ರಶ್ನೆ ಬಂದಿದೆ. "ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ? ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ? ತನುವಿನಲಿ ಹುಸಿ ತುಂಬಿ ಮನದಲಿ ವಿಷಯ ತುಂಬಿ ಮನೆಯೊಳಗೆ ಮನೆಯೊಡೆಯನಿಲ್ಲ ಕೂಡಲಸಂಗಮದೇವ !" ಇದಕ್ಕೆ ನಾನು ಉತ್ತರಿಸುತ್ತಿದ್ದೇನೆ. ಈ ವಚನದಲ್ಲಿ ಕೋವಿಡ್ ೧೯ ಕಾಲಮಾನದಲ್ಲಿ ಮನೆಯೊಡೆಯರ  ಪಾಡನ್ನು ವಚನಕಾರರು ಮನೋಜ್ಞವಾಗಿ ಚಿತ್ರಿಸಿದ್ದಾರೆ.  ಮನೆಯಲ್ಲೇ ಇರುವ ಮನೆಯೊಡೆಯನಿಗೆ ಒಂದೇ ಎರಡೇ ಕೆಲಸ? ಕಸ ("ರಜ") ಗುಡಿಸಬೇಕು. ಹೊಸ್ತಿಲನ್ನು ಸಾರಿಸಿ ರಂಗವಲ್ಲಿ ಹಾಕಬೇಕು. ಇವೆಲ್ಲವನ್ನೂ ಪಕ್ಕದ ಮನೆಯವರು ನೋಡುವ ಮುನ್ನವೇ ಮಾಡಿ ಮುಗಿಸಬೇಕು. ಅನಂತರ  ಅಡಿಗೆ ಇತ್ಯಾದಿ ಕೆಲಸಗಳೂ ಇಲ್ಲವೇ? ಪ್ರಸ್ತುತ  ವಚನದಲ್ಲಿ "ರಜ" ಎಂಬ ಪದದ ವಿಶೇಷ ಪ್ರಯೋಗವನ್ನು ಗಮನಿಸಿ. ಲಾಕ್ ಡೌನ್ ಕಾಲದಲ್ಲಿ ಕೆಲವರಿಗೆ ಪ್ರತಿದಿನವೂ ರಜದಂತೆ ತೋರುತ್ತಿದೆ! ಮಕ್ಕಳಿಗೆ ರಜಾ ಬಂದರೂ ಏನು ಮಾಡಲೂ ತಿಳಿಯದೆ ಅಪ್ಪ-ಅಮ್ಮಂದಿರನ್ನು ಕಾಡುತ್ತಿದ್ದಾರೆ. ಇನ್ನು ವರ್ಕ್ ಫ್ರಮ್...

ಕೊರೋನಾ ಕೊರೋನಾ - ಭಾಗ ೨ (ಚುಟುಕಗಳು)

ಇಮೇಜ್
ಕನಕಾ  ********* ಪ್ರತಿ ರಾಮನವಮಿಗೆ ಪಾನಕ ತಪ್ಪದೆ ಹಂಚುವಳು ಮಿಸ್ ಕನಕಾ ಈ ಸಲ ಯುಗಾದಿಗೇ ಏನು ಸ್ಫೂರ್ತಿ ಇವಳಿಗೆ ಹಂಚುತಿಹಳು ನೆಟ್ ಮೇಲೆ ಕೊರೋನಾ ಪ್ಯಾನಿಕ ಶಾರ್ವರಿ  ******* ಓ ಸಂವತ್ಸರ ಶಾರ್ವರಿ! ಎಷ್ಟಂತಾ ಮಾಡೋದು ವರಿ? ಕೊರೊನಾ ಕೋವಿಡ್ ಮೂರನೇ ಹಂತ ಮುಗಿಯುವ ಮುನ್ನವೇ ಬಂತೇ ಹಂತಾ ತಿಳಿಸವರಿಗೆ, ವೀ ಆರ್ ಇನ್ ನೋ ಹರಿ! ಬೋರಸ್  ********** ಬಂತು  ಕರೋನಾ ವೈರಸ್ ಮನೇಲಿರಿ ಅಂತ ಕೋರಸ್ ಲಾಕ್ ಡೌನ್ ಅಂತೆ ಕ್ಯಾನ್ಸಲ್ ಸಂತೆ ನ್ಯೂಸ್ ಚಾನೆಲ್ಸ್ ಡೋಂಟ್ ಬೋರಸ್ ಇಳಿಮುಖ  *********** ಎಲ್ಲದರಲ್ಲೂ ಈಗ ಇಳಿಮುಖ ಎಂದು ಬೇಸರಿಸಿದರು ಶ್ರೀಮತಿ ರೇಖಾ ಹಾಕೋದು ಕೇಳಿದ್ದೆ ಲಾಕಪ್ನಲ್ಲಿ ಕೈದಿಗಳ್ನ ಅದಕ್ಕೂ ಸಂಚಕಾರ ತಂತು ಕರೋನಾ ಲಾಕಪ್ ಹೋಗಿ ಲಾಕ್ ಡೌನ್ ಬರಬೇಕಾ? ಮಾರ್ಚ್ ೨೨ - ಸಂಜೆ  *********************** ಸಂಜೆ ಕೇಳಿದೆ  ಇವಳನ್ನು "ಏನು, ತಿಂಡಿ ಮಾಡಿದ್ಯಾ?" ಪಾತ್ರೆ ಕುಕ್ಕುವ ಸದ್ದು! "ಏನೂ ಆಗಲಿಲ್ಲ ತಾನೇ ಸದ್ಯ?" ಮುಂದುವರೆಯಿತು ತಾಲಿ, ಜೊತೆಗೆ ಢಣಢಣಾ ಸದ್ದು ಅಬ್ಬಾ ಏನೋ ವಿಶೇಷವೇ ಇರಬಹುದೆಂದು ಖುದ್ದು ಹೋಗಿ ನೋಡಿದರೆ ಥಾಲೀ ಪೀಟ್ ಎಂಬ ರುಚಿಕರ ಖಾದ್ಯ! ಸಂಕಷ್ಟಿ  ********* ಹೊರಗೆ ಹೋಗಲು ಸಂಕಷ್ಟ ಎದುರಾಗಿ ಮನೆಯಲ್ಲೇ ಗಣಪತಿಯ ಫೋಟೋಗೆ ಎರಗಿ ಅದೂ ಇಲ್ಲದಿದ್ದರೂ ಚಿಂತೆ ಇಲ್ಲ ಎಲ್ಲದಕ್ಕೂ ವಾಟ್ಸಾಪ್ ಇದೆಯಲ್ಲ ಭಜೇಹಂ ಶ್...

ಕರೋನಾ ಕರೋನಾ (ಚುಟುಕಗಳು)

ಇಮೇಜ್
 ಮಜಾ ಕರೋನಾ  ***************** ನಾಳೆಯಿಂದ ಒಂದು ವಾರ ಜರ್ಬೇ ಜರ್ಬು ರಜಾ ಬಂತೆಂದು ಕುಣಿದಾಡಿದನು ಸುಬ್ಬು ಎದುರಾಯ್ತು ಸುಬ್ಬುವಿಗೆ ಮರುದಿವಸ ಪೇಚು ಬಿಟ್ಟುಬಿಟ್ಟಂತಾಯ್ತು ಕೈಗೇ ಬಂದಿದ್ದ ಕ್ಯಾಚು ಬಂದಾಗಿದ್ದವು ಎಲ್ಲಾ ಮಾಲು ಥೇಟರು ಪಬ್ಬು ಥಿಯರಿ ********  ಕೊರೊನಾ ಹೇಗೆ ಬಂತು ರೀ ಎಲ್ಲರಿಗೂ ಇದೆ ಅವರವರ ಥಿಯರಿ ಒಬ್ಬರಿಗೆ ಕಾಣುತ್ತದೆ ಚೈನಾದ ಬಾವಲಿ ಇನ್ನೊಬ್ಬರಿಗೆ ಬಯಲಾಜಿಕಲ್ ವೆಪನರಿ ಮೋದಿ ಅಪ್ಪುಗೆಯಿಂದ ಎಂದು ಕೆಲವರಿಗೆ ಭಯ ರೀ ಟೆರರಿಸ್ಟ್  ********* ಡೋಂಟ್ ಪ್ಯಾನಿಕ್ ಎಂಬ ದೊಡ್ಡ ತಲೆಬರಹ ಕೆಳಗೇಕಿದೆ ಕೊರೊನಾಸುರನ ಚಿತ್ರ ಉಹಹಹಾ? ಕೈತೊಳೆಯಬೇಕೆಂಬ ಸರಳ ಸಂದೇಶ ಎಲ್ಲೋ ಮರೆಯಾಗಿದೆ ಈ ಮುಗ್ಧ ಉದ್ದೇಶ ಹೆದರಿಸುತ್ತಾರೇಕೆ ಜನರು ಈ ತರಹ! ಸೀನಿ  ***** ಸೀನಿ, ಸೀನು, ಸೀನಣ್ಣ ಎಲ್ಲರೂ ಬದಲಾಯಿಸಿಕೊಳ್ಳಿ ಬೇಗನೇ ಹೆಸರು ಯಾರಾದರೂ ಬಂಗಾಳಿ ಪ್ರಭೃತಿ "ಸೀನಿ ದಾ" ಅಂದರೇನು ಗತಿ ಜನರು ಎಷ್ಟು ಹೊತ್ತು ಹಿಡಿದಾರು ಉಸಿರು? ಹೋಮ  ********* ಎಲ್ಲೆಲ್ಲೂ ಕೇಳುತ್ತಿದೆ ಕರೋನಾ ಕರೋನಾ  ಪುರೋಹಿತರನ್ನು ಕರೆದು ಹೋಮ ಮಾಡಿಸೋಣ  ತಾಳ್ಮೆಯಿಂದ ಕೇಳಿದ ಮೇಲೆ ಕಾಲರ್ ಟ್ಯೂನು  "ಸ್ವಾಮೀ ನಿಮ್ಮ ಹಾಗೆಯೇ ನಾನೂ ಕ್ವಾರಂಟೀನು  ಬೇಕಾದರೆ ಮಾಡೋಣ ಹೋಮ ವರ್ಕ್ ಫ್ರಮ್ ಹೋಮ"  ಸರಸ  ****** ಟಿವಿಯಲ್...

ಒಂದು ಡಜನ್ ಲಿಮರಿಕ್ (ಹಾಸ್ಯ)

ಇಮೇಜ್
ಖೇಚರ  ~~~~~  ಆಕಾಶದಲ್ಲಿ ಚಲಿಸುವುದೇ "ಖೇಚರ" ಅರ್ಥಾತ್ ಹಕ್ಕಿ ಎಂದ ಕನ್ನಡ ಟೀಚರ ಮಾತು ಕೇಳಿ ಯೋಚಿಸಿದ ಭಾನು ವಾಟ್ ಅಬೌಟ್ ಪ್ಲೇನು ವಾಟ್ ಅಬೌಟ್ ಡ್ರೋನು ಹೀಗೆ ಕನ್ಫ್ಯೂಸ್ ಆಗೋದೇ ಅವನ ನೇಚರ ಮಾರೀಚ  ~~~~~ ~~  ಬ್ರದರ್ಸ್ ಮಾರೀಚ ಮತ್ತು ಸುಬಾಹು ರಾಮನ ಕೈಯಲ್ಲಿ ಅಪ್ಪಿದರು ಸಾವು ಇನ್ನಿಬ್ಬರು ಇದ್ದರಲ್ಲ ಏನಾದರೋ ಅವರು ಗಣಿತದ ಮೇಷ್ಟ್ರು ಹೇಳ್ತಿದ್ರು ಹೆಸರು ಬ್ರದರ್ಸ್ ಸಮಬಾಹು ಮತ್ತು ವಿಷಮಬಾಹು ದೀರ್ಘ ~~~~~  ಧೂಮ್ರಪಾನದಿಂದ ಆರೋಗ್ಯಹಾನಿ ಎಂದು ನುಡಿದನು ಒಬ್ಬ ದೊಡ್ಡ ವಿಜ್ಞಾನಿ "ಇನ್ನುಮೇಲೆ ಎಲ್ಲರೂ ಸಿಗರೇಟ್ ಬೀಡಿ" ದೊಡ್ಡಕ್ಷರದಲ್ಲಿ ಟೈಪಿಂಗ್ ದೋಷ ನೋಡಿ ಸುದೀರ್ಘವಾಗಿ ಎಳೆದುಕೊಂಡರು ಶ್ವಾಸ ನೆರೆದಿದ್ದ ಮೇಕೆ  ~~~~  ಮೇ ಮೇ ಅಂತಿತ್ತು ಕನ್ನಡ ಮೇಕೆ ಪ್ರಯತ್ನಿಸಿದೆ ಇಂಗ್ಲಿಷ್ ಕಲಿಸೋಕೆ Me Me ಅಂತ ಬರೆದೆ ಪಕ್ ಪಕ್ಕ ನಗೋಕೆ ಶುರು ಮಾಡ್ತು ಮೇಕೆ ಪಕ್ ಪಕಾ ಚೆನ್ನಾಗಿದೆ ನಿನ್ನ MeMe ಅಂತ ಅನ್ಬೇಕಾ, ಪಕ್ಕಾ! ದೇವಕಣ  ~~~~~~  ದೇವಕಣ ಕಂಡು ಹಿಡಿದ ಕೀರ್ತಿ ಕುವೆಂಪು ಅವರಿಗೇ ಸಲ್ಲಬೇಕಿತ್ರೀ ಓದಿದರೆ ಅವರ ಕವಿತೆ ಹೇಳಿ ಸಿಕ್ಕದೇ ಇದ್ದೀತೇ ಮಂತ್ರಕಣಾ ಶಕ್ತಿಕಣಾ ದೇವಕಣಾ ಆಲ್ ತ್ರೀ ಜಲಚರ  ~~~~~~~  "ಜಲದಲ್ಲಿ ಚಲಿಸಿದ್ದು ಜಲಚರ" ಎಂದು ವಿವರಿಸುವಾಗ ಕನ್ನಡ ಟೀಚರ ಭಾನುವಿನ ಕಣ್ಮುಂದೆ ಮೂಡಿತೊಂದು ಚ...