ಪೋಸ್ಟ್‌ಗಳು

Pu.Ti.Na. ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಆಲಿಸು ಕೃಷ್ಣನ ಕೊಳಲಿನ ಕರೆ!

ಇಮೇಜ್
 ಸಿ ಪಿ ರವಿಕುಮಾರ್ ಕೃಷ್ಣನ ಕೊಳಲಿನ ಕರೆ! ಆಲಿಸು ಕೃಷ್ಣನ ಕೊಳಲಿನ ಕರೆ! ಹಿಂ ದೊಮ್ಮೆ ರೇಡಿಯೋ ಮನರಂಜನೆಯ ಮುಖ್ಯ ಸಾಧನವಾಗಿದ್ದ ಕಾಲದಲ್ಲಿ ಈ ಗೀತೆ ಆಕಾಶವಾಣಿಯಿಂದ ಆಗಾಗ ತೇಲಿಬರುತ್ತಿತ್ತು. ಇಂದು ಈ ಹಾಡು ಅಷ್ಟಾಗಿ ಕೇಳಿಸುವುದಿಲ್ಲ.  ನೀವು ಈ ಹಾಡನ್ನು ಕೇಳಿಲ್ಲದೆ ಇದ್ದರೆ ನನಗೆ ಆಶ್ಚರ್ಯವಾಗುವುದಿಲ್ಲ. ಇಂಟರ್ ನೆಟ್ ಮೇಲೆ ಹುಡುಕಿದಾಗ ಇಲ್ಲಿ ಸಿಕ್ಕಿತು - ನೀವೂ ಕೇಳಿ.  ಇದು "ಸುಬ್ಬಾಶಾಸ್ತ್ರಿ"  ಎಂಬ ಚಲನಚಿತ್ರದಲ್ಲಿ ಬರುವ ಗೀತೆ; ಬಹಳ ದೊಡ್ಡ ಘಟಾನುಘಟಿಗಳು ಈ ಗೀತೆಯ ರಚನೆಯ ಹಿಂದೆ ಇದ್ದಾರೆ! ಕನ್ನಡದ ಕವಿ ಪು. ತಿ. ನರಸಿಂಹಾಚಾರ್ ಅವರ ಕವಿತೆಯನ್ನು ಗೀತೆಗೆ ಅಳವಡಿಸಿಕೊಳ್ಳಲಾಗಿದೆ. ಗೀತೆಗೆ ಸಂಗೀತ ನೀಡಿದವರು ಸ್ವತಃ ವೀಣಾ ದೊರೆಸ್ವಾಮಿ ಅಯ್ಯಂಗಾರ್ ಮತ್ತು ಆಕಾಶವಾಣಿಯ ಡೈರೆಕ್ಟರ್ ಆಗಿದ್ದ ಶ್ರೀ ಎಸ್. ಕೃಷ್ಣಮೂರ್ತಿ.  ಹಾಡಿದವರು ಶ್ರೀರಂಗಂ ಗೋಪಾಲರತ್ನಂ.  ಅತ್ಯಂತ ಸುಶ್ರಾವ್ಯವಾದ ಸಂಗೀತ. ಕೇಳಿದ ನಂತರ ಮತ್ತೆ ಮತ್ತೆ ಕೇಳಬೇಕು ಎನ್ನಿಸುವಂಥ ಹಾಡು. ಪು ತಿ ನರಸಿಂಹಾಚಾರ್ ಕನ್ನಡದ ನವೋದಯ ಕಾವ್ಯಪ್ರಕಾರದಲ್ಲಿ ಬಹಳ ಮುಖ್ಯ ಕವಿ; ಬೇಂದ್ರೆ, ಕುವೆಂಪು ಮತ್ತು ಪು.ತಿ.ನ. ಇವರನ್ನು ನವೋದಯ ಕಾಲದ ದಿಗ್ಗಜರು ಎಂದು ಕರೆಯಲಾಗುತ್ತದೆ. ಪು.ತಿ.ನ. ಅವರ ವಿಶೇಷವೆಂದರೆ ಅವರು ಸಂಗೀತದಲ್ಲಿ ವಿಶೇಷ ಜ್ಞಾನ ಹೊಂದಿದ್ದರಿಂದ ಅನೇಕ ಗೀತೆಗಳನ್ನು ಅವರು ಹಾಡಲೆಂದೇ ಬರೆದಿದ್ದಾರೆ. ...