ಪೋಸ್ಟ್‌ಗಳು

MS Sathyu ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಒಂದು ವರ್ಷ ಕಂಡ "ರವಿ ಕಾಣದ್ದು"

ಇಮೇಜ್
ಸಿ ಪಿ ರವಿಕುಮಾರ್  ನನ್ನ ಬ್ಲಾಗ್ ಗೆ ಒಂದು ವರ್ಷ ತುಂಬಿತು. ಮೇ ೮, ೨೦೧೩ ದಿನಾಂಕದಂದು ನಾನು ಪ್ರಾರಂಭಿಸಿದ "ರವಿ ಕಾಣದ್ದು" ಬ್ಲಾಗ್ ಬರಹಗಳ ಸಂಖ್ಯೆ ನೂರು ದಾಟಿವೆ. ಇದುವರೆಗೂ ಸುಮಾರು ೧೧,೦೦೦ ಹಿಟ್ಸ್ ನನ್ನ ಬರಹಗಳಿಗೆ ಬಂದಿವೆ.  ನನ್ನ ಬರಹಗಳನ್ನು ಓದಿ ಪ್ರೋತ್ಸಾಹ ನೀಡುತ್ತಿರುವ ಎಲ್ಲರಿಗೂ ನನ್ನ ಕೃತಜ್ಞತೆಗಳು. ಈ ಸಂದರ್ಭದಲ್ಲಿ ಕೆಲವು ನೆನಪುಗಳನ್ನು ಓದುಗರ ಜೊತೆ ಹಂಚಿಕೊಳ್ಳುತ್ತಿದ್ದೇನೆ. ನ ನ್ನ ಬರವಣಿಗೆಯ ಹವ್ಯಾಸಕ್ಕೆ ಮೊದಲು ಪ್ರೋತ್ಸಾಹ ನೀಡಿದವರು ನನ್ನ ತಂದೆ ದಿ. ಸಿ. ಎಚ್. ಪ್ರಹ್ಲಾದರಾವ್. ಅವರು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಹವ್ಯಾಸಿ ಪತ್ರಕರ್ತರಾಗಿದ್ದವರು. ನಮ್ಮ ಮನೆಯಲ್ಲಿ ಪುಸ್ತಕ್ಗಗಳೇ ಪುಸ್ತಕಗಳು! ನಮ್ಮ ತಂದೆಗೆ ದೆಹಲಿಗೆ ವರ್ಗವಾದಾಗ ನಾವು ಒಂದೇ ಕೋಣೆಯ ಮನೆಯಲ್ಲಿ ಬಾಡಿಗೆಗೆ ಇದ್ದೆವು; ಆಗ ನೂರಾರು ಪುಸ್ತಕಗಳನ್ನು ಅವರು ದೆಹಲಿ ಕನ್ನಡ ಶಾಲೆಯ ಗ್ರಂಥಾಲಯಕ್ಕೆ ದಾನ ಕೊಟ್ಟರು. ಈ ಪುಸ್ತಕಗಳನ್ನು ಇಟ್ಟುಕೊಳ್ಳಲು ನಮ್ಮ ಮನೆಯಲ್ಲಿ ಸ್ಥಳವಿದ್ದರೆ ತಾನೇ! ಮುಂದೆ ನಾವು ಎರಡು ಕೋಣೆಯ ಮನೆಗೆ ಬಡ್ತಿ ಹೊಂದಿದೆವು. ಆಗ ಬೆಂಗಳೂರಿಗೆ ಬೇಸಿಗೆ ರಜೆಗೆಂದು ಬಂದಾಗ ನಮ್ಮ ತಂದೆ ಕನ್ನಡ ಸಾಹಿತ್ಯ ಪರಿಷತ್ತಿನವರು ಆಯೋಜಿಸಿದ ಪುಸ್ತಕ ಪ್ರದರ್ಶನದಲ್ಲಿ  ಚಿಕ್ಕ ಹುಡುಗರಾಗಿದ್ದ ನನಗೆ ಮತ್ತು ನನ್ನ ಅಣ್ಣನಿಗೆ ಏನಿಲ್ಲವೆಂದರೂ ಐವತ್ತು-ಅರವತ್ತು ಪುಸ್ತಕಗಳನ್ನು ಕೊಂಡುತಂದರು! ಒಂದಕ್ಕ...